ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಫ್ರಿಕಾದ ನಿತ್ಯ ನರಕಯಾತನೆ ತೆರೆದಿಡುವ ‘ಸೂರ್ಯನ ನೆರಳು’

ಪೋಲೆಂಡ್‌ ಪತ್ರಕರ್ತ ರೈಷಾರ್ಡ್ ಕಪ್ಪುಶಿನ್‌ ಸ್ಕಿ ರಚಿಸಿದ ‘ಶಾಡೋ ಆಫ್ ದ ಸನ್’  ಕೃತಿಯನ್ನು ಲೇಖಕಿ ಸಹನಾ ಹೆಗಡೆ ‘ಸೂರ್ಯನ ನೆರಳು’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ.

ದಿವಾಕರ್ ನಾರಾಯಣ್ ರಾವ್ ಅವರು ಈ ಕೃತಿಯ ಬಗ್ಗೆ ವಿಮರ್ಶಿಸಿದ್ದಾರೆ..

ದಿವಾಕರ್.ಎನ್.

ಪುಸ್ತಕಗಳನ್ನು ಓದುವಾಗ ಸಾಮಾನ್ಯವಾಗಿ ನಾನು ಮೂರು ನಾಲ್ಕು ಕೃತಿಗಳನ್ನು ಒಂದನ್ನು ಮಡಚಿಟ್ಟು ಮತ್ತೊಂದನ್ನು ಓದುವುದು ರೂಢಿ. ನಾಲ್ಕೂ ಪುಸ್ತಕಗಳ ಓದು ಮುಗಿಯಲು ಸಮಯ ಹಿಡಿಯುತ್ತದೆ. ಇತ್ತೀಚೆಗೆ ಸಹನ ಹೆಗಡೆ ಅನುವಾದಿಸಿರುವ ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪುಶಿನ್ ಸ್ಕಿ ಅವರ ‘ಸೂರ್ಯನ ನೆರಳು’ ಓದಲು ಕೈಗೆತ್ತಿಕೊಂಡೆ.

ವಾರ್ ಅಂಡ್ ಪೀಸ್ ಪಕ್ಕದಲ್ಲೇ ಇದ್ದರೂ ಅದೇಕೋ ಈ ಪುಸ್ತಕವನ್ನು ಪಕ್ಕಕ್ಕಿಡಲು ಮನಸ್ಸಾಗಲೇ ಇಲ್ಲ. ಒಂದೇ ಸಮನೆ ಓದಿ ಮುಗಿಸಿಬಿಟ್ಟೆ. ಎಂತಹ ಅದ್ಭುತ ಕೃತಿ. ಅಬ್ಬಾ! ಆಫ್ರಿಕಾದಲ್ಲಿ ನಿಜಕ್ಕೂ ಪಯಣ ಮಾಡಿದಂತಹ ಅನುಭವ ನೀಡುವ ಪುಸ್ತಕ. ಇತ್ತೀಚೆಗಷ್ಟೇ ಅಲೆಕ್ಸ್ ಹೀಲಿಯ ರೂಟ್ಸ್ ಓದಿ ಮುಗಿಸಿದ್ದೆ. ಅದರ ಮತ್ತೊಂದು ಆಯಾಮ, ಸಮಕಾಲೀನ ಇತಿಹಾಸದ ಕಂಗಳಲ್ಲಿ. ಮೂಲ ಲೇಖಕರ ಆಶಯಗಳಿಗೆ ಧಕ್ಕೆ ಉಂಟು ಮಾಡದೆ ಅತ್ಯುತ್ತಮವಾಗಿ ಅನುವಾದಿಸಿರುವ ಸಹನಾ ಹೆಗಡೆ ನಿಜಕ್ಕೂ ಅಭಿನಂದನಾರ್ಹರು. ಹಲವು ಪುಸ್ತಕಗಳ ಅನುವಾದ ಮಾಡಿರುವ ನನಗೆ ಈಕೆಯ ಅನುವಾದ ಓದಿದ ನಂತರ ಇನ್ನೂ ಕಲಿಯುವುದು ಬಹಳಷ್ಟಿದೆ ಎನಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

ಆಫ್ರಿಕಾ ಖಂಡದಲ್ಲಿನ ದಾರಿದ್ರ್ಯ, ಬಡತನ, ಸಂಕಷ್ಟಗಳು, ಯುದ್ಧದ ಪರಿಣಾಮಗಳು, ಅಲ್ಲಿನ ಜನ ಜೀವನ, ನಿತ್ಯ ನರಕ ಯಾತನೆ ಎಷ್ಟೆಲ್ಲಾ ಅಡಗಿದೆ ಈ 340 ಪುಟಗಳಲ್ಲಿ. ಜಗತ್ತು ಸುಂದರವಾಗಿದೆ ಎಂದು ಭಾವಿಸಲು ಸುತ್ತಲಿನ ಪ್ರಪಂಚವನ್ನು ಮಾತ್ರ ನೋಡಿದರೆ ಸಾಲದು. ಮತ್ತೊಂದು ಜಗತ್ತನ್ನೂ ಒಳಹೊಕ್ಕು ನೋಡಬೇಕು ಎನಿಸುತ್ತದೆ. ಎಲ್ಲರೂ ಓದಲೇಬೇಕಾದ ಅದ್ಭುತ ಕೃತಿ. ಅದ್ಭುತ ಅನುವಾದ. ಸಹನಾ ಹೆಗಡೆಯವರಿಗೆ ಅಭಿನಂದನೆಗಳು. ಪ್ರಕಾಶಕರಿಗೂ.

‍ಲೇಖಕರು avadhi

19 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading