ಬಿ ಎಂ ಬಶೀರ್
ಆಫ್ಘನ್ ದೇಶ ಯಾಕೆ ಹೀಗೆ ? ಆಫ್ಗಾನ್ ದೇಶದ ಮೇಲೆ ಆಗಿರುವ ಭೀಕರ ಗಾಯಗಳನ್ನು ತಿಳಿಯದೆ ಈ ಪ್ರಶ್ನೆಗೆ ಉತ್ತರ ದೊರಕೋದು ಕಷ್ಟ….ಆಫ್ಘಾನ್ನ ಕಾಬುಲ್ ನ್ನು ನಾನು ಮೊದಲು ಪರಿಚಯ ಮಾಡಿಕೊಂಡದ್ದು ಟಾಗೋರರ ಕಾಬೂಲಿವಾಲ ಕತೆಯ ಮೂಲಕ. ಕಾಬೂಲಿವಾಲನ ಹೃದಯವಂತಿಕೆ ನನಗೆ ಕಾಬುಳನ್ನು ಇಷ್ಟವಾಗುವಂತೆ ಮಾಡಿತ್ತು. ಅಂತಹ ಕಾಬೂಲನ್ನು ದೊಚಿದವರು ಒಂದಿಬ್ಬರೇ? ರಷ್ಯನ್ನರು, ಬ್ರಿಟಿಷರು, ಅಮೇರಿಕ…ತನ್ನ ಸ್ವಾತಂತ್ರ್ಯಕ್ಕಾಗಿ ಬದುಕಿನುದ್ಧಕ್ಕೂ ಯುದ್ಧವನ್ನು ನೆಚ್ಚಿಕೊಂಡ ದೇಶ ಹೇಗಿರಬೇಕೋ ಹಾಗೆ ಇದೆ ಆ ದೇಶ….

ಎಲ್ಲಿ ಯುದ್ಧ ನಡೆಯುತ್ತಿರುತ್ತದೋ ಅಲ್ಲಿಯ ಮಕ್ಕಳಿಗೆ ಶಸ್ತ್ರ ಬಳಸೋದನ್ನು ಕಳಿಸಬೇಕೆ ಹೊರತು ಅ, ಆ, ಇ, ಈ ಅಲ್ಲ. ಅಲ್ಲಿಯ ಮಕ್ಕಳು ಶಾಸ್ತ್ರದ ಬದಲು ಶಸ್ತ್ರದ ಕುರಿತಂತೆ ಆಸಕ್ತಿ ತೋರಿಸುತ್ತಿದ್ದರೆ ಅದಕ್ಕೆ ಕಾರಣ ಆ ನಾಡನ್ನು ದೋಚಿದ, ದೋಚುತ್ತಿರುವ ಶತ್ರು ದೇಶಗಳೇ ಹೊರತು…ಆಫ್ಗಾನ್ ಅಲ್ಲ….೩೦ರ ದಶಕದಲ್ಲಿ ಫೆಲೆಸ್ತಿನ್ ಕುರಿತಂತೆ ಗಾಂಧೀ ಒಂದು ಮಾತನ್ನು ಹೇಳಿದ್ದರು…”ಯುರೋಪಿಯನ್ನರು ಏಷ್ಯಾದ ಎದೆಯ ಮೇಲೆ ನೆಟ್ಟ ಚೂರಿ ಇಸ್ರೇಲ್… ”
ಆಫ್ಘಾನ್ ಸ್ಥಿತಿ ಇದಕ್ಕಿಂತ ಭಿನ್ನವೇನು ಅಲ್ಲ….







0 Comments