ಎಚ್ ಎಸ್ ವಿ ಅವರ ಬಗ್ಗೆ ಒಂದು ನೋಟ್ ಬರೆಯಲು ಹೋಗಿ ಲೇಖನವೇ ಆಗಿ ಹೋಯ್ತು. ಎಚ್ ಎಸ್ ವಿ ಬಗ್ಗೆ ಬರೆಯಲು ಹೊರಟದ್ದು ಯಾಕೆಂದರೆ ಅವರು ನಾಳೆಯಿಂದ ತಮ್ಮ ಲೋಕವನ್ನು ‘ಅವಧಿ’ಯಲ್ಲಿ ಬಿಚ್ಚಿಡಲಿದ್ದಾರೆ
ಅವರು ಮೂರು ಸಮಗ್ರ ಕೃತಿಗಳನ್ನು ಹೊರತರುವ ವೇಳೆ ಅವರ ಬ್ಲಾಗ್ ‘ಪರಸ್ಪರ’ದಲ್ಲಿ ಎಲ್ಲರನ್ನೂ ಆಹ್ವಾನಿಸಲು ಒಂದು ಟಿಪ್ಪಣಿ ಪ್ರಕಟಿಸಿದ್ದರು. ಅದು ಅವರಿಗೆ ಟಿಪ್ಪಣಿಯೇ. ಆದರೆ ಓದಿದ ನಮಗಂತೂ ಅಲ್ಲಿ ಒಂದು ದೊಡ್ಡ ಆಲದಮರದ ಬೀಜವಿದೆ ಎನಿಸಿತು. ಹಾಗಾಗಿ ಆ ಟಿಪ್ಪಣಿಯ ತಲೆ ಬಾಲ ಕತ್ತರಿಸಿ ಅವರು ತಮ್ಮ ಬರವಣಿಗೆಯ ಬಗ್ಗೆ ನೀಡಿದ ಒಂದು ಝಾಲಕ್ ಅನ್ನು ‘101 ನೇ ನಂಬರಿನ ಆ ಮನೆಯಲ್ಲಿ ಇಡೀ ‘ಋತುವಿಲಾಸ’ ವಾಗಿ ಪ್ರಕಟಿಸಿದೆವು. ಅದನ್ನು ಓದಿದವರ ಸಂಖ್ಯೆಯೇ ಎಚ್ ಎಸ್ ವಿ ಬಗ್ಗೆ, ಅವರ ಬರಹಗಳ ಬಗ್ಗೆ ಇರುವ ಅಪಾರ ಓದುಗ ಸಮೂಹವನ್ನು ನಮಗೆ ಪರಿಚಯ ಮಾಡಿಕೊಟ್ಟಿತು.
ಈ ಮಧ್ಯೆ ವಸುಧೇಂದ್ರ, ಸೂರಿ, ವಿವೇಕ ಶಾನಭಾಗ್ ಇನ್ನೂ ಬರೆಯಿರಿ, ಎಲ್ಲವನ್ನೂ ಬರೆಯಿರಿ ಎಂಬ ದನಿ ಹೊರಡಿಸಿದ್ದರು. ಎಚ್ ಎಸ್ ವಿ ಅವರಿಗೆ ಫೋನಾಯಿಸಿ ಯಾಕಾಗಬಾರಡೂ ಸಾರ್ ಅಂದೆವು. ಹಾಗೆ ಒಂದು ಆನ್ಲೈನ್ ಆತ್ಮ ಚರಿತ್ರೆ ನಿಮ್ಮ ಮುಂದೆ ಬಿಚ್ಚಿಕೊಳ್ಳಲಿದೆ. ಎಚ್ ಎಸ್ ವಿ ಬರವಣಿಗೆಯ ಸೊಬಗೆ ಬೇರೆ. ಓದಿ..
ಆನ್ ಲೈನ್ ಆತ್ಮಕಥೆ –
ನಿಮಗೆ ಇವೂ ಇಷ್ಟವಾಗಬಹುದು…





ನಮಸ್ತೆ. ಇದಕ್ಕಿಂತ ಹೆಚ್ಚಿಗೆ ಖುಷಿಯುಂಟೆ. ಕಾಯುತ್ತೇನೆ.
nimma gadya oduttiddare ellavu kanna munde kanutte. higagi odu santhosh kodutte. briri sir briri.
ಆನ್ ಲೈನ್ ಆತ್ಮ …ಕಥೆ ಒಳ್ಳೆ ಯೋಚನೆ,
ಕುತೂಹಲಕ್ಕೆ ರೆಕ್ಕೆಗಳಾಗುವ ಚಂದದ ಯೋಜನೆ..
ಕಾಯುವವರಿಗೆ ಸಂಬಂಧ ಬೆಸೆಯುವ ಸಂಯೋಜನೆ