ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆದಿಮ’ ಕಾಲದ ಕ್ಯಾಲೆಂಡರ್ ನ ವಿಜ್ಞಾನ..

ಇವತ್ತು ವಿಜ್ಞಾನ ದಿನ. ‘ಆದಿಮ’ ದಲ್ಲಿ ಕಂಡದ್ದು ಏನು ?

ಜಿ ಎನ್ ನಾಗರಾಜ್

ವಿಜ್ಞಾನ ದಿನದಂದು ವಿಭೂತಿ ಹಳ್ಳಿಯ ಆದಿಮ ಕ್ಯಾಲೆಂಡರ್ ನೆನಪು. ಕಲ್ಲುಬಂಡೆಗಳಿಂದ ಮಾಡಿದ್ದು.

ಶಹಾಪುರದ ಬಳಿ ವಿಭೂತಿಹಳ್ಳಿಯಲ್ಲಿ ಒಂದು ಕಲ್ಲು ಬಂಡೆಗಳ ಸಾಲು ಸಾಲು. ಆ ಕಡೆಯಿಂದ ಈ ಕಡೆಯಿಂದ ಯಾವ ಕಡೆಯಿಂದ ನೋಡಿದರೂ ಸಾಲಾಗಿ ಕುಳಿತ ಸಾವಿರಾರು ಕಲ್ಲು ಬಂಡೆಗಳು. ಅಲ್ಲೇ ಭೂಮಿಯೊಳಗಿಂದ ಎದ್ದವುಗಳಲ್ಲ. ಯಾರೋ ಬಲು ಕಷ್ಟ ಪಟ್ಟು ತಂದಿಟ್ಟವುಗಳು. ಇವು ಆದಿಮ ಕಾಲದಲ್ಲಿ ಋತುಗಳನ್ನು, ಮಳೆಗಾಲವನ್ನು ಗುರುತಿಸಲು ಆದಿಮ ಬುಡಕಟ್ಟುಗಳು ಕಂಡುಕೊಂಡ ವಿಧಾನ.

ಸೂರ್ಯ ಬೆಳಗ್ಗೆ ಬೆಳಗ್ಗೆ ಯಾವ ಕಲ್ಲುಬಂಡೆಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದರ ಆಧಾರದ ಮೇಲೆ ಮಳೆಗಾಲ ಹತ್ತಿರ ಬರುತ್ತಿದೆಯೋ ಇಲ್ಲವೋ, ಚಳಿಗಾಲ ಇನ್ನೂ ಎಷ್ಟು ದಿನ ಎಂಬುದನ್ನು ಅಳೆಯುವ ಸಾಧನವಂತೆ. ಆಂಧ್ರ ಕರ್ನಾಟಕ ಗಡಿ ಭಾಗದಲ್ಲಿ ಕೃಷ್ಣಾ, ಭೀಮಾ, ತುಂಗಭದ್ರಾ ನದೀ ಬಯಲುಗಳಲ್ಲಿ ಈ ರೀತಿಯ ಬಂಡೆಗಳ, ಇಲ್ಲವೆ ಕಲ್ಲು ಚಪ್ಪಡಿಗಳ ಸಾಲುಗಳಿವೆ. ಬ್ರಿಟನ್ ಮೊದಲಾದ ಪ್ರದೇಶಗಳಲ್ಲೂ Stone henge’s ಎನ್ನುವ ಈ ರೀತಿ ಸಾಲುಗಳಿವೆಯಂತೆ.

ಎಂತಾ ವಿಶೇಷ ಅನ್ವೇಷಣೆ! ಎಂತಹಾ ಬುದ್ಧಿ ಮತ್ತೆ !!

‍ಲೇಖಕರು avadhi

28 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading