
ರೇಣುಕಾ ರಮಾನಂದ
ಅಂಕೋಲಾ
ನಮ್ಮೂರಲ್ಲಿ ಹೋಳಿ ಅಂದರೆ ಕರಡಿ ವೇಷದವರು ಹೋಗಿಬರೋರನ್ನೆಲ್ಲ ಪ್ರೀತಿಯಿಂದ ಅಟಕಾಯಿಸಿಕೊಂಡು ದುಡ್ಡು ಕೇಳುವುದು.. ಮನೆಗಂಡಸರೆಲ್ಲ ವಷ೯ದ ಮುನ್ನೂರು ಮೂವತ್ತು ದಿನ ಪೇಟೆಬದಿಗೆ ಕೈಕಾಲಾಡಿಸಿಕೊಂಡು ಬರುವವವರು ಈ ಕರಡಿ ಕಾಟಕ್ಕೆ ಅಂಜಿ ಎರಡು ದಿನ ಪೇಟೆ ಕಡೆ ಹೋಗಲು ಹಿಂದೆಮುಂದೆ ನೋಡ್ತಾರೆ.
ಆದರೆ ಕರಡಿ ಬಿಡಬೇಕಲ್ಲ..

ಒಡೆದೀರ ಮೇಲೆ ಹಕ್ಕು ಅವರಿಗೆ.. ಮನೆತಂಕ ಬಂದು ಸಣ್ಣಮಕ್ಕಳಂತೆ ಹಕ್ಕು ಮಾಡಿ ತಮಗೆ ಸಲ್ಲತಕ್ಕ ಹಣ ಪಡೆದು ಹೋಗ್ತಾ ಇರೋದೇ….
ಕೇಳಿದಕ್ಕಿಂತ ಕಡಿಮೆ ಹಣ ಕೊಡಲು ಮುಂದಾದರೆ ಕರಡಿ ಹಟ ಮಾಡುವುದು ನೋಡಬೇಕು ನೀವು, ಕಟ್ಟಿಕೊಂಡ ಗಂಟೆ ಅಲ್ಲಾಡಿಸುವುದು, ಮುಖತೋರಿಸೋ ಮಾರಾಯ ಎಂದರೂ ತೋರಿಸದೇ ಹಿಂದೆಮುಂದೆ ಕುಣಿಯುವುದು, ಕಾರು, ಬೈಕನ್ನು ತಡೆಹಿಡಿದು ಜುಲುಮೆ ಮಾಡುವುದು ಇತ್ಯಾದಿ.
ಆದರೂ ಈ ಕರಡಿ ವೇಷಕ್ಕೆ ಯಾರೂ ಬೇಸರಿಸುವದಿಲ್ಲ.
ವಾರ ಮೊದಲೇ ಕರಡಿಗಾಗಿ ಹತ್ತು ಇಪ್ಪತ್ತರ ಚಿಲ್ಲರೆ ಕೂಡಿಸಿಡೋ ಕೆಲಸ ಇಲ್ಲಿನ ಎಲ್ಲ ಮನೆಗಳಲ್ಲಿ ನಡೆಯುತ್ತದೆ… ಗೇಟಿನ ಸದ್ದಾದ ಕೂಡಲೇ ಕರಡಿಯ ಸ್ವಾಗತಕ್ಕೆ ಅಮ್ಮೋರು ಬಾಗಿಲು ತೆರೆದರೆ “ಒಡೆದೀರು ಎಲ್ಲಿ”ಎಂಬ ಸೊಲ್ಲು ಕರಡಿಯಿಂದ ಬರಲು ಕಾರಣ ನಾವು ಕಡಿಮೆ ದುಡ್ಡುಕೊಟ್ಟು ಸಾಗಾಹಾಕ್ತೇವೆ ಎಂಬ ಕಾರಣಕ್ಕೆ…
“ವಷ೯ಕ್ಕೊಂದು ಹಬ್ಬ,ದಿನಾ ಹಟ ಮಾಡಿದ್ರೆ ಕೊಡ್ತೀರೇನು” ಅಂತವೆ ಕರಡಿಗಳು.
ಹೌದಲ್ವಾ
#ನಮ್ಮಕರಡಿನಮ್ಮಖುಷಿ










0 Comments