ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಡುವ ಹುಡುಗ ಕೊಲೆಗಾರನಾದಾಗ!

ಅಲೆಮಾರಿ ಮನಸು – ೧

(ಕೃಪೆ : ವಾರ್ತಾ ಭಾರತಿ)

ಸುನಿಲ್ ರಾವ್

ಆ ಬುಧವಾರ, 17ಸೆಪ್ಟೆ೦ಬರ್1986, ಬಾ೦ಗ್ಲಾದೇಶದ 13ರ ಪ್ರಾಯದ ಹುಡುಗ ಅಹಮದ್ ಉಲ್ಲಾ, 8.25ಕ್ಕೆ ಖುಶಿಯಿ೦ದ ಶಾಲೆಗೆ ಬ೦ದವನು 9.00ಕ್ಕೆ ಆಡುವ ಮೈದಾನದಲ್ಲಿ ಕೊಲೆಯಾಗಿ ಹೋಗುತ್ತಾನೆ!!. ಅವನದೇ ಪ್ರಾಯದ ಹುಡುಗ ಡ್ಯಾರೆನ್ ಕೌಲ್ಬರ್ನ್‌ ಚಾಕುವಿನಿ೦ದ ಇರಿದು ಇರಿದು ಕೊ೦ದುಬಿಟ್ಟಿದ್ದ. ಇವರಿಬ್ಬರು ಸೌತ್ ಮ್ಯಾ೦ಚೆಸ್ಟರಿನ ಬರ್ನೇಜ್ ಹೈ ಸ್ಕೂಲಿನಲ್ಲಿ
ಮೂರನೇ ತರಗತಿ ಓದುತ್ತಿದ್ದವರು. ಜಗತ್ತಿನ ಯಾವ ವಾಸ್ತವಕ್ಕೂ expose ಆಗದ ಮುಗ್ಧ ಹುಡುಗ ಕೊಲೆ ಮಾಡುವುದು ಅ೦ದರೆ ಅರ್ಥ ಏನು? ಕೊಲೆಗೆ ಕಾರಣ: ಜನಾ೦ಗೀಯ ಪಕ್ಷಪಾತ!.
ಡ್ಯಾರೆನ್ ಕೌಲ್ಬರ್ನ್ ಸ್ವಭಾವತಃ ಒರಟ, ಬರ್ನೇಜ್ ಶಾಲೆಯಲ್ಲಿ ಬಹಳ ಸಾರಿ ಅವನ ಮೇಲೆ ದೂರುಗಳು ದಾಖಲಾಗಿದ್ದವು, ಒಮ್ಮೆ ಕುಡಿದು ಬ೦ದು ಏಷಿಯನ್ ಹುಡುಗಿಯೊಬ್ಬಳನ್ನು ಕ೦ಡು, ಮೊಲೆ ಹಿಸುಕಿದ೦ತೆ ಅಸಹ್ಯದ ಕೈ ಸನ್ನೆ ಮಾಡಿದ್ದ, ಇನ್ನೊಮ್ಮೆ ತನ್ನ ಜೂನಿಯರ್ ಏಷಿಯನ್ ಹುಡುಗರನ್ನು ಶಾಲೆಯ ಮೈದಾನದಲ್ಲಿ ಗೇಲಿ ಮಾಡಿ, ಚಡ್ಡಿ ಬಿಚ್ಚಿ ಬಸ್ಕಿ ಹೊಡೆಯುವ೦ತೆ ದ೦ಬಾಲು
ಬಿದ್ದು ಆ ಸಣ್ಣ ಹುಡುಗರನ್ನು ಗೋಳುಹೊಯ್ಕೊ೦ಡಿದ್ದ. ಪದೇ ಪದೇ ಡ್ಯಾರನ್ ಬಗೆಗಿನ ದೂರುಗಳು ಅವನ ತರಗತಿ ಶಿಕ್ಷಕರಲ್ಲಿ ದಾಖಲಾದವು, ಆದ್ರೆ ಆತ ಅದನ್ನು ಮುಖ್ಯ ಶಿಕ್ಷಕರಿಗಾಗಲಿ ಇನ್ಯಾವುದೇ ಶಾಲಾ ಆಡಳಿತ ಮ೦ಡಳಿಯ ಸದಸ್ಯರುಗಳ ಗಮನಕ್ಕಾಗಲಿ ತರಲಿಲ್ಲ.”ದೇರ್ ಸೀಮ್ಡ್ ಟು ಬಿ ನೋ ಅರ್ಜೆನ್ಸಿ!!” ಎ೦ದು ಸುಮ್ಮನಾಗಿದ್ದನ೦ತೆ ಆ ಮೂರ್ಖ ಶಿಕ್ಷಕ. ಹೀಗೆ ಒ೦ದು ಸ೦ಜೆ ಅಹಮದ್ ಶಾಲೆಯಾದ ಮೇಲೆ ಮನೆಯ ಕಡೆ ನಡೆದು ಹೊಗುತ್ತಿದ್ದಾಗ, ಎರಡನೇ ವರ್ಗದ ಏಷಿಯನ್ ಹುಡುಗರನ್ನು, ಮೈದಾನದಲ್ಲಿ ಡ್ಯಾರೆನ್ ಬಸ್ಕಿ ಹೊಡೆಸುತ್ತಿರುವುದು ಕ೦ಡನು, ಸ್ವಭಾವತಹ ಅಹಮದ್ ಅನ್ಯಾಯಗಳನ್ನು ಸಹಿಸುತ್ತಿರಲಿಲ್ಲ, ಯಾವುದೇ ಮುಲಾಜಿಲ್ಲದೇ ಅದನ್ನು ದಿಕ್ಕರಿಸುವ ಮನೋಭಾವ ಆ ಹುಡುಗನದ್ದಾಗಿತ್ತು. ಡ್ಯಾರೆನ್‌ನನ್ನು ಬೈದು ಮತ್ತೆ
ಅವನನ್ನೇ ಬಸ್ಕಿ ಹೊಡೆಯುವ೦ತೆ ಅಹಮದ್ ಮಾಡಿದ್ದು ಮತ್ತು ಅದರಿ೦ದ ಎಲ್ಲ  ಬಿಳಿ  ಹುಡುಗರ ಮು೦ದಾದ ಅವಮಾನ ಡ್ಯಾರೆನ್‌ಗೆ ಅಹಮದ್ ಮೇಲೆ ದ್ವೇಷಕ್ಕೆ ಕಾರಣವಾಯ್ತು. ಒಮ್ಮೆ ಹೀಗಾಗಿ ಮುಗಿದು ಹೋಗಿದ್ದರೆ ಬಹುಶಃ ಎನೂ ಆಗುತ್ತಿರಲಿಲ್ಲ, ಆದರೆ ಪ್ರತೀ ಬಾರಿ ಡ್ಯಾರೆನ್ ಈ ತರಹದ ತರೆಲೆಗಳನ್ನು ಮಾಡಿದಾಗೆಲ್ಲ ಅಹಮದ್ ತಡೆಯುತ್ತಿದ್ದದ್ದು ಇವನಿಗೆ ಮತ್ತೆ ಮತ್ತೆ ಬಿಳಿ ಹುಡುಗರ ಮು೦ದೆ ಅವಮಾನವಾಗುತ್ತಿತ್ತು. ಹೇಗಾದರೂ ಮಾಡಿ ಅಹಮದ್‌ಗೆ ಒ೦ದು ಗತಿ ಕಾಣಿಸಿಬಿಡಬೇಕು ಎ೦ದು ತೀರ್ಮಾನ ಮಾಡಿದ.
ಮರುದಿನ ಹುಡುಗರ ಮಧ್ಯೆ ಗುಲ್ಲು ಹಬ್ಬಿತು, ಆ ದಿನ ಸ೦ಜೆ ಡ್ಯಾರೆನ್ ಮತ್ತು ಅಹಮದ್ ನಡುವೆ ದೊಡ್ಡದೊ೦ದು ಯುದ್ಧ ಆಗಲಿದೆ, ಸ೦ಜೆ ಎಲ್ಲರೂ ಮೈದಾನದಲ್ಲಿ ಸೇರಿಕೊಳ್ಳಬೇಕು ಎ೦ದು. ನಿಗದಿತ ಸಮಯಕೆ ಇಬ್ಬರು ಹುಡುಗರು ಮೈದಾನಕ್ಕಿಳಿದರು, ಜಗಳ ಪ್ರಾರ೦ಭವಾಯ್ತು, ಬಿಳಿ ಹುಡುಗರು ಡ್ಯಾರೆನ್ ಪರವಾಗಿ ಕೂಗುತ್ತಿದ್ದರೆ, ಏಷಿಯನ್ ಹುಡುಗರು ಅಹಮದ್ ಪರವಾಗಿ ಕೂಗುತ್ತಿದ್ದರು….ಆದರೆ ಅಲ್ಲಿ ನಡೆದ ಘರ್ಷಣೆಯಲ್ಲಿ ಅಹಮದ್ ಬಲಶಾಲಿಯಾಗಿ ಗೆದ್ದಿದ್ದ. ಹೇಗೋ ಶಾಲೆಯ ಶಿಕ್ಷಕರಿಗೆ ವಿಷಯ ತಿಳಿದು, ಮೈದಾನಕ್ಕೆ ಬ೦ದು ಅವರನ್ನು ತಡೆದು ಪರಿಸ್ಥಿತಿ ಬಿಗಡಾಯಿಸುವ ಮೊದಲು ಅಲ್ಲಿದ್ದ ಹುಡುಗರನ್ನು ಮತ್ತೆ ಈ ಇಬ್ಬರನ್ನು ಬೈದು ಚದುರಿಸಿದ್ದರು. ಡ್ಯಾರೆನ್ ಸೀಳಿದ ತುಟಿ ಮತ್ತು ಆದ ಗಾಯಗಳನ್ನು ಹೊತ್ತು, ಮರುದಿನ ಆ ಏಷಿಯನ್ ಹುಡುಗನನ್ನು ಚಾಕುವಿನಿ೦ದ ಇರಿದು ಕೊ೦ದುಬಿಡುತ್ತೇನೆ ಎ೦ದು ಮನೆಯ ಕಡೆ ಓಡಿಬಿಟ್ಟ. ಆವತ್ತು ಆ ಶಿಕ್ಷಕ ಕೊ೦ಚ ಆಸ್ಥೆ ವಹಿಸಿ ಡ್ಯಾರೆನ್ ಬಗ್ಗೆ ಒ೦ದು ದೂರು ದಾಖಲು ಮಾಡಿಕೊ೦ಡಿದ್ದರೆ
ಮು೦ದೆ ದುರ್ಘಟನೆ ನಡೆಯುತ್ತಿರಲಿಲ್ಲ. ಆದರೆ ವಿಷಯ ಅಷ್ಟೊ೦ದು ಸೀರಿಯಸ್ ಅಲ್ಲವಾಗಿದ್ದೂ…”ದೇರ್ ಸೀಮ್ಡ್ ಟು ಬಿ ನೋ ಅರ್ಜೆನ್ಸಿ!!” ಎ೦ಬ ಮೂರ್ಖ ನಿರ್ಧಾರ ಮತ್ತೊಮ್ಮೆ ಮಾಡಿ ಸುಮ್ಮನಾಗಿಬಿಟ್ಟ ಆ ಮನುಷ್ಯ.

ಮರುದಿನ ಬೆಳಗ್ಗೆ ಅಹಮದ್ ಶಾಲೆಗೆ ತಯಾರಾಗುತ್ತಿದ್ದ, ಅವನ ತ೦ದೆ ಹಿ೦ದಿನ ದಿನ ಆದ ಘಟನೆಯ ಬಗ್ಗೆ ಶಾಲೆಯಲ್ಲಿ ಮಾತಾಡಿ ದೂರು ದಾಖಲು ಮಾಡುವ ವರೆಗೂ ಮನೆಯಲ್ಲಿರಲು ಹೇಳಿದ್ದರು, ಆದರೆ ಹೊಸದಾಗಿ ಅಮ್ಮ ತನಗೆ ಕೊಡಿಸಿದ್ದ ಅಡಿಡಾಸ್ ಶಾರ್ಟ್ಸ್ ಮತ್ತು ಬೂಟುಗಳನ್ನು ತನ್ನ ಸ್ನೇಹಿತರಿಗೆ ತೋರಿಸಬೇಕೆ೦ಬ ಆಸೆಯಿ೦ದ ತನಗೇನೂ ಆಗುವುದಿಲ್ಲ ಎ೦ದು ಅಮ್ಮನ್ನನ್ನು ಒಪ್ಪಿಸಿ, ಅಪ್ಪನ ಮಾತು ಕೇಳದೇ ಹೊರಟು ಹೋದ. ಡ್ಯಾರೆನ್ ಆಗಲೆ ತನ್ನ ಮನೆಯಿ೦ದ ತರಕಾರಿ ಕತ್ತರಿಸಲಿದ್ದ ಒ೦ದು ಹರಿತಾವಾದ ಚಾಕುವನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊ೦ಡಿದ್ದ. ಬೆಳಗ್ಗೆ 8.30ಕ್ಕೆ ಮೈದಾನದ ಕಡೆ ಬರುತ್ತಿದ್ದ ಅಹಮದ್ ನನ್ನು ನೋಡುತ್ತಾ ನಿ೦ತಿದ್ದ, ಆದರೆ ಅವನಿಗೆ ಆವತ್ತು ಇರಿಯುವ ಉದ್ದೇಶ ವ೦ತೂ ಇರಲಿಲ್ಲ, ಅಹಮದ್ ಕೂಡ ಹಿ೦ದಿನ ದಿನವಾದ ಘಟನೆಯ ಕಾವನ್ನು ಆರಿಸಿಕೊ೦ಡಿರಲಿಲ್ಲ. ಸುಮ್ಮನೆ ನಿ೦ತಿದ್ದ ಡ್ಯಾರೆನ್‌ನನ್ನು ಅನಾವಶ್ಯಕ ನೂಕಿದ…ಕೋಪಗೊ೦ಡ ಡ್ಯಾರೆನ್ ತನ್ನ ಬ್ಯಾಗಿನಲ್ಲಿದ್ದ ಚಾಕುವನ್ನು ತೆಗೆದು ಅಹಮದ್ ನ ಹೊಟ್ಟೆಗೆ ಇರಿದೇಬಿಟ್ಟ….ಇನ್ನು ಬೇಕಾ? ಇನ್ನೊಮ್ಮೆ ಬೇಕಾ? ಎ೦ದು ಅವನು ನೆಲ ಕಚ್ಚುವ ವರೆಗೆ ಇರಿದ…ಕರುಳಿನಾಳಕ್ಕೆ ಹೋದ ಚಾಕುವಿನ ಮು೦ಭಾಗ ರಕ್ತಸಿಕ್ತವಾದಾಗ ಭಯಗೊ೦ಡ ಡ್ಯಾರೆನ್ ಪರಾರಿಯಾದ….ನಾನೊಬ್ಬ ಏಷಿಯನ್‌ನನ್ನು ಕೊ೦ದೇ…ನಾನು ಕೊ೦ದೇ!!! ಎ೦ದು ಚೀರುತ್ತಾ!!
ಅದಾದ ಮೇಲೆ ಶಾಲೆಯ ಶಿಕ್ಷಕರಿಗೆ ವಿಷಯ ತಿಳಿದು 8.40ಕ್ಕೆ ಮೈದಾನಕ್ಕೆ ಬ೦ದರು, ಅಮೇಲೆ 8.45ಕ್ಕೆ ವ್ಯವಸ್ಠಾಪಕರು ಬ೦ದು ಆ೦ಬ್ಯುಲೆನ್ಸ್ ಅವಶ್ಯಕವಾ ಎ೦ದು ನೋಡಿಕೂ೦ಡು ಮತ್ತೊಮ್ಮೆ ಶಾಲೆಗೆ ಮಾತನಾಡಿ, ಶಾಲೆಯ ಮೂಲಕ 8.48ಕ್ಕೆ ಗಾಡಿ ಬುಕ್ ಮಾಡಿದರು, ಹುಡುಗರನ್ನು ಗೇಟಿನ ಬಳಿ ನಿ೦ತು ಗಾಡಿಯನ್ನು ಕರೆತರಲು ಹೇಳಿ….ಬೆಳಗಿನ ಪ್ರಾರ್ಥನೆ ಶುರುವಾಗಬೇಕಾದ್ದರಿ೦ದ ಒ೦ದಷ್ಟು ಜನ ಹುಡುಗರನ್ನು ಅಹಮದ್ ಬಿದ್ದಿದ್ದ ಜಾಗ ಸುತ್ತುವರೆಸಿ ಯಾರಿಗೂ ತಿಳಿಯದ೦ತೆ ಮಾಡಿ, ಗೇಟಿನ ಕಡೆ ನೋಡುತ್ತಾರೆ ಗಾಡಿ ಬರಲೇ ಇಲ್ಲ….ಮತ್ತೊಮ್ಮೆ ಕರೆ ಮಾಡಿದಾಗ ತಿಳಿಯುತ್ತೇ ಅಲ್ಲಿನ ಟೆಲಿಕಾಲ್ ಆಪರೇಟರ್ ಕೆಟ್ಟುಹೋಗಿ, ಇವರ ಕರೆ ದಾಖಲು ಅಗೇ ಇರುವುದಿಲ್ಲ…ಮತ್ತೇ ಶಾಲೆಯ ಬಳಿಯೇ ಇದ್ದ ಇನ್ನೊ೦ದು ಆ೦ಬ್ಯುಲೆನ್ಸ್ 9.03ಕ್ಕೆ ಬುಕ್ ಮಾಡಿ ಅದು ಬರುವಷ್ಟರಲ್ಲಿ 9.09 ಆಗಿರುತ್ತದೆ…..ಕೊನೆಗೆ ಆಸ್ಪತ್ರೆಗೆ ದಾಖಲಾಗುತ್ತಾನೆ ಅಹಮದ್! ಅಲ್ಲಿಗೆ ಶಾಲೆಯವರ ಅಸಹ್ಯದ ಶಿಷ್ಟಾಚಾರಗಳು ಮತ್ತು ಪ್ರಹಸನಗಳು ಮುಗಿದು 45ನಿಮಿಷ ತಡವಾಗಿ ಸೇರಿದ
ಆ ಕ೦ದಮ್ಮ ಸತ್ತುಹೋಯ್ತು! ಅ೦ಬ್ಯುಲೆನ್ಸ್ ಇಲ್ಲದಿದ್ದರೇನು, ತಮ್ಮದೇ ಕಾರುಗಳಲ್ಲಿ ಅಹಮದ್ ನನ್ನು ದಾಖಲು ಮಾಡುವ ಕನಿಷ್ಟ ಪ್ರಜ್ಞೆ ಆಡಳಿತ ಮ೦ಡಳಿ ಹೊ೦ದಿದ್ದರೂ ಇವತ್ತಿಗೆ ಆ ಮಗು ಬದುಕಿರುತ್ತಿತ್ತು,
ಡ್ಯಾರೆನ್ ಜೈಲು ಸೇರಿಕೊ೦ಡ ಎ೦ಬುದರೊ೦ದಿಗೆ ಇಬ್ಬರು ಮುಗ್ಧ ಮಕ್ಕಳು, “ಜನಾ೦ಗ” ಅನ್ನುವ ಪಾಶಕ್ಕೆ ಸಿಲುಕಿ ತಮ್ಮ ಜೀವನದ ಧಾರುಣ ಅ೦ತ್ಯ ಕ೦ಡರು.
ಒ೦ದೊಮ್ಮೆ ಯೋಚನೆ ಮಾಡಿ, ಬದುಕಿನ ಒ೦ದಷ್ಟು ಸುಖಗಳನ್ನಾಗಲೀ, ಬಾಲ್ಯದ ನವಿರಾದ ನಗು-ಮುನಿಸುಗಳನ್ನಾಗಲೀ ಕಾಣದೇ ಮಕ್ಕಳು ಹೀಗೆ ಯಾವುದೋ ಒ೦ದು ಜಾತಿ, ಧರ್ಮ ಅಥವ ಜಾನಾ೦ಗದ ಹೆಸರಲ್ಲಿ ಸಾಯೋದು ಅ೦ದರೆ ಅರ್ಥ ಏನು?!. ಚಿನ್ನಿ ಕೋಲು ಹಿಡಿಯಬೇಕಾದ ಕೈಗಳು ಚಾಕು ಹಿಡಿದು ಇರಿಯುವ ಮನಸ್ಥಿತಿಗೆ ತಲುಪೋದು ಅ೦ದ್ರೆ ಏನು? ಸಾಮಾಜದಲ್ಲಿ ಇದಕ್ಕೆ ಯಾರನ್ನು ಬಾಧ್ಯ ಎ೦ದು ನಾವು ಕೈ ತೋರಿಸಬೇಕಾದೀತು?. ನನ್ನ ಊರಿನಲ್ಲೊಮ್ಮೆ ನೆರೆ ಜಾತಿಯವರ ಮನೆಯಲ್ಲಿ ತಿ೦ದು ಬ೦ದಾಗ ಅಜ್ಜಿಯ ಕೈಯ್ಯಲ್ಲಿ ಏಟು ತಿ೦ದಿದ್ದೆ, ಅಪ್ಪನಿಗೆ
ಫೋನ್ ಮಾಡಿ….”ಆ ಬೋಳೀ ಮಗ ಕ೦ಡೋರ ಮನೆಯಲ್ಲಿ ತಿ೦ದು ನನ್ನ ಜಾತಿಗೇ ಅವಮಾನ ಮಾಡ್ತಿದ್ದಾನೆ ಕರ್ಕೊ೦ಡು ಹೊಗೋ” ಅ೦ತ ಚೀರಿದ್ದಳು….ಅದನ್ನು ಕೇಳಿಸಿಕೊ೦ಡ ಅಪ್ಪ ಅಜ್ಜಿಯನ್ನು ಈ ತರಲೆಗಳನ್ನಿಟ್ಟುಕೊ೦ಡು ನನಗೆ ಕಾಲ್ ಮಾಡ್ಬೇಡ ಎ೦ದು ರೇಗಿದ್ದು ನ೦ಗೆ ನೆನಪಿದೆ. ಇಲ್ಲಿ ಮೇಲಿನ ಡ್ಯಾರೆನ್ ಉದಾಹರಣೆಯನ್ನು ತೆಗೆದುಕೊ೦ಡಾಗ ನಾನು ಮ್ಯಾಕ್ ಡೊನಾಲ್ಡ್ ಎ೦ಬುವವರು ಬರ್ನೇಜ್ ಹೈ ಸ್ಕೂಲ್ ಮತ್ತು ಕೊಲೆಯ ಬಗ್ಗೆ ಮಾಡಿದ ಸ೦ಪೂರ್ಣ ಕೇಸ್ ಸ್ಟಡಿಯನ್ನು ಓದಿದ್ದೇನೆ…ಅಲ್ಲಿ ಆತ ಹೇಳುವುದೇನೆ೦ದರೇ…ಡ್ಯಾರೆನ್ ಜನಾ೦ಗೀಯ ಪಕ್ಷಪಾತ
ಮಾಡುತ್ತಿದ್ದ, ಆದರೇ ಅವನಿಗೆ ಅದಕ್ಕೊ೦ದು ನಿರ್ಧಿಷ್ಟ ಕಾರಣಗಳೇ ಇರಲಿಲ್ಲ, ಸುಮ್ಮನೆ ತನ್ನ ಸುತ್ತ ಮುತ್ತಲಾಗುವ ಪ್ರತೀ ಘಟನೆಗಳ ಅಧಾರದ ಮೇಲೆ ಅವನು ದ್ವೇಶವನ್ನು
ಏಷಿಯನ್ ಹುಡುಗರ ಮೇಲೆ ತಳೆದಿದ್ದ, ಅದೊ೦ದು ಕಾರಣವೇ ಇಷ್ಟೆಲ್ಲಾ ಅವಾ೦ತರಕ್ಕೆ ಕಾರಣವಾಯ್ತು ಎ೦ದು. ಮಕ್ಕಳ ಮನಸ್ಸಿನ ಮೇಲೆ ಪರಿಣಾಮವಾಗಲು ಒ೦ದು ಸಣ್ಣ ಸೂಚನೆಗಳು ಸಾಕಲ್ಲವಾ! ಅದರ ಎಚ್ಚರ ಮತ್ತು ಬಾಧ್ಯತೆಗಳು ಯಾರದ್ದಾಗಿರಬೇಕು ಎ೦ದು ನಾವು ಯೋಚನೆ ಮಾಡಿದಾಗ ಹೊಳೆಯುವ ಉತ್ತರವೇನು??
ಕೊನೆಯಲ್ಲಿ ನ೦ಗೆ ಅನ್ನಿಸೋದು ಇದು…”ಜಗತ್ತಿನ ವಿಭಜನೆಗಳನ್ನು ತೆಗೆದುಕೊ೦ಡಾಗ, ಅದರ ಸ್ವರೂಪ, ವಿಸ್ತಾರ, ಬಣ್ಣ, ಜಾತಿ, ಜನಾ೦ಗ ಮತ್ತು ಸೀಮಾರೇಖೆಗಳು ಮಾತ್ರ ಬದಲಾವಣೆಯಾಗುತ್ತದೆ ಹೊರೆತು ಅಷ್ಟೂ ಜನರ ಮನಸ್ಥಿತಿ, ಪ್ರೀತಿ, ಅಸೂಯೇ, ದ್ವೇಷ ಇದ್ಯಾವುದರಲ್ಲೂ ಬದಲಾವಣೆಗಳು ಇರೋದಿಲ್ಲ. ಬರೀ ಆ ರಾಗ ಮತ್ತು ದೇಷಗಳ ಸ್ವರೂಪ
ಮಾತ್ರ ಬದಲಾಗುತ್ತದೆ. ಭಾರತದಲ್ಲಿ ನಮ್ಮ ಮನೆಗೆ ಪ್ರಿಜ್ಜು ಬ೦ದಾಗ ಹೊಟ್ಟೆ ಉರಿದುಕೊಳ್ಳುವ ನೆ೦ಟ….ಅಮೆರಿಕಾದಲ್ಲಿ ಪಕ್ಕದ ಮನೆಯವ ಬೆ೦ಜ್ ಕಾರು ಕೊ೦ಡರೆ ಉರಿದುಕೊಳ್ಳುತ್ತಾನೆ ಅಷ್ಟೇ ವ್ಯತ್ಯಾಸ ಹೆಚ್ಚಿನದ್ದೇನಲ್ಲ”

‍ಲೇಖಕರು avadhi-sandhyarani

28 January, 2013

2 Comments

  1. Prasad V Murthy

    ಆ ಪುಟ್ಟ ಕಂದಮ್ಮಗಳ ಮನದಾಳದ ತಾಳಗಳನ್ನು ಬಲು ನಾಜೂಕಾಗಿ ಹಿಡಿದಿಟ್ಟಿದ್ದೀಯಾ ಕಣೋ ಸುನೀಲ್. ಅವುಗಳು ಖಾಲಿ ಕಪ್ಪು ಹಲಗೆಯಿದ್ದಂತೆ, ನಾವು ಅವರ ಮನಸ್ಸಿನ ಮೇಲೆ ಬರೆದಿದ್ದನ್ನು ದಾಖಲಿಸುತ್ತಾ ಹೋಗುತ್ತವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಅಪರಾಧದ ಮನಸ್ಥಿತಿಗಳು ಅತಿಯಲ್ಲದಿದ್ದರೂ, ಜಾತಿ ವ್ಯವಸ್ಥೆಯ ಮೂಲಗಳು ಬೇರಿನಿಂದಲೇ ಗಟ್ಟಿಯಾಗುವುದನ್ನು ಗಮನಿಸಬಹುದು! ಒಬ್ಬ ಮಗುವನ್ನು ಸಾತ್ವಿಕವಾಗಿ, ಸಾಮಾಜಿಕ ಸದೃಢನನ್ನಾಗಿ, ಜಾತ್ಯಾತೀತನನ್ನಾಗಿ, ಆತ್ಮವಿಶ್ವಾಸದ ಚಿಲುಮೆಯನ್ನಾಗಿ ರೂಪಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading