ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಟೋದವನ ಪುಂಡಾಟಕ್ಕೆ ಬುದ್ದಿ ಕಲಿಸಿದೆ..

ಇಷ್ಟೆಲ್ಲಾ ನಡೆಯುವಾಗ ಚಿತ್ರಾ ಸಂತೋಷ್ ಬರೆದ ಈ ಅನುಭವ ನೆನಪಾಯಿತು

ಇಂದು ಮಧ್ಯಾಹ್ನ 12.30 ಗಂಟೆ. ಅರಮನೆ ರಸ್ತೆಯಲ್ಲಿ ರಸ್ತೆ ದಾಟಕೆ ನಿಂತಿದ್ದೆ. ಹತ್ತು ನಿಮಿಷ ನಿಂತು ಇನ್ನೇನೂ ರಸ್ತೆ ದಾಟ್ಥೀನಿ ಎಂದಾಗ ಒಬ್ಬ ಆಟೋದವನು ಬಂದು “ಬಾರೇ ದಾಟಿಸ್ತೀನಿ’ ಎಂದು ಹಲ್ಲು ಕಿಸಿಯುತ್ತಾ ಕರೆದ. ಇವನಿಗೆ ಬುದ್ದಿ ಕಲಿಸಲೇಬೇಕೆಂದು ನಿಲ್ಸಪ್ಪಾ ಅಂತ ನಗುತ್ತಾ ಹೇಳಿದಾಗ ನಿಲ್ಲಿಸಿಬಿಟ್ಟ. ಮೊದಲು ಅವನ ಕಾಲರ್ ಹಿಡಿದು ಎಳೆದೆ. ಅಷ್ಟೊತ್ತಿಗೆ ಭಯಪಟ್ಟ ಅವನು ಅಟೋ ಸ್ಟಾರ್ಟ್ ಮಾಡಿದ. ನಾನು ಹತ್ತುಕೊಂಡು ಕುಳಿತುಕೊಂಡು ಬಿಟ್ಟು ಹಿಂದಿನಿಂದ ತಲೆಕೂದಲು ಹಿಡಿದುಕೊಂಡುಬಿಟ್ಟೆ. ಎಷ್ಟು ಸ್ಪೀಡು ಆಗುತ್ತೋ ಅಷ್ಟು ಸ್ಟೀಡಾಗಿ ಅಡ್ಡಾದಿಡ್ಡಿಯಾಗಿ ಓಡಿಸಿದ. ಇನ್ನು ಅವನು ನಿಲ್ಲಿಸಲ್ಲ ಅನ್ನೋದು ಗೊತ್ತಾಗಿಬಿಟ್ಟಿತ್ತು. ಹಿಂದಿನ ಸೀಟಿನಿಂದ ಬಾಗಿ ಕೈ ಎಳೆದುಬಿಟ್ಟೆ. ಕೊನೆಗೆ ನಿಲ್ಲಿಸಿಬಿಟ್ಟ. ಮೊದಲು ಕೆನ್ನೆಗೊಂದು ಬಾರಿಸಿಬಿಟ್ಟು ಕೇಳಿದೆ “ಏನಂತ ಕರೆದೆ?’ “ಮೇಡಂ’ ಅಂದೆ ಅಂದುಬಿಟ್ಟ. ಅಷ್ಟೊತ್ತಿಗೆ ಸುತ್ತಲಿನವರೆಲ್ಲಾ ಸೇರಿಬಿಟ್ಟರು. ಕೈ ಮುಗಿದು, ಕಾಲು ಹಿಡ್ಕೊಂಡು ಕ್ಷಮೆ ಕೇಳಿದ. ನನಗೆ ಮಕ್ಕಳಿದ್ದಾರೆ, ದಯವಿಟ್ಟು ಕಂಪ್ಲೇಂಟು ಕೊಡಬೇಡಿ ಅನ್ತಾನೆ. ಹೆಣ್ಣು ಮಕ್ಜಳಾ ಅಂದಾಗ ಹೌದು ಅಂತಾನೆ. ಎಂಥ ಕಚಡಾ? ಥೂ! ..ಅಷ್ಟಕ್ಕೂ ಅವನ ವಯಸ್ಸೆಷ್ಟು ಗೊತ್ತಾ? ಹತ್ರ ಹತ್ರ 50 ಆಗಿರಬಹುದು!!

 

ಆಟೋದವರು ಈ ತರ ರೇಗಿಸುವುದು ಮೊದಲಲ್ಲ. ಹಲವಾರು ಸಲ ನನ್ನ ಗಮನಕ್ಕೆ ಬಂದಿದೆ. ನನ್ನ ಗೆಳತಿಯರು ಕೂಡ ತುಂಬಾ ಜನ ಆಟೋದವರು ಸುಮ್ಮನೆ ರೇಗಿಸ್ತಾರೆ. ನಡೆದುಕೊಂಡು ಬರುತ್ತಿರುವಾಗಲೇ ಸುಮ್ಗನೆ ನಿಲ್ಸಿ ಬರ್ತೀರಾ ಅಂತಾರೆ ಎಂದು ಹೇಳುವುದನ್ನು ಕೇಳಿದ್ದೀನಿ. ಕೆಲವರು ಒಳ್ಲೆಯವರು ಇರಬಹುದು, ಬಹಳಷ್ಟು ಆಟೋದವರಿಗೆ ಇಂಥ ಕೆಟ್ಟ ಬುದ್ದಿ ಇದೆ. ಅವನ ಅಡ್ರೆಸ್ ಎಲ್ಲಾ ಬರ್ಕೊಂಡು ಕಂಪ್ಲೇಟು ಕೊಟ್ಟಿದ್ದೀನಿ. ಆದರೆ. ಎಷ್ಟರಮಟ್ಟಿಗೆ ಅದು ಪರಿಣಾಮಕಾರಿಯಾಗುತ್ತೆ ಗೊತ್ತಿಲ್ಲ. ಇದಕ್ಕಿಂತ ಮುಖ್ಯವಾಗಿ ಈ ತರ ರೇಗಿಸುವವರು ಆಟೋದಲ್ಲಾಗಲಿ ಅಥವಾ ಬಸ್ ನಲ್ಲಾಗಲೀ ಎಲ್ಲೇ ಸಿಕ್ರೂ ಮೊದಲು ನಾವೇ ಬುದ್ದಿ ಕಲಿಸೋದು ಒಳ್ಳೆಯದು.

 

‍ಲೇಖಕರು G

20 December, 2012

5 Comments

  1. Pramod

    ಹೌದು. ವೆಲ್ ಟಾಟ್ ಲೆಸ್ಸನ್.
    90% ಕೆಟ್ಟ ಆಟೋ ಡ್ರೈವರ್ ಗಳು 10% ಒಳ್ಳೆಯವರಿಗೆ ಕೆಟ್ಟ ಹೆಸರು ತರುತ್ತಾರೆ.

  2. Dr. Azad Ismail Saheb

    ಒಂದಂತೂ ನಿಜ…ಧೈರ್ಯ ತೋರಿದ್ರೆ ಹೆಣ್ಣು ಮಕ್ಕಳು..ಹೆದರೋ ಬಾರಿ ಗಂಡಸಿನದು ಯಾಕಂದ್ರೆ ಎಷ್ಟೇ ಪಾಪಿ ಆದರೂ ಪಾತಕಕ್ಕೆ ಕೈಹಾಕುವಾಗ ಅಳುಕು ಅವನಲ್ಲಿರುತ್ತೆ..ಅವನ ಆ ಅಳುಕನ್ನೇ ಹೆಚ್ಚು ಮಾಡುತ್ತೆ ಹೆಣ್ಣುಮಕ್ಕಳ ಧೈರ್ಯ. ಆದರೆ ಜೊತೆಗೆ ಸ್ವಲ್ಪ ಚಾಲಕಿತನವನ್ನೂ ಉಪಯೋಗಿಸಬೇಕು… ಚಿತ್ರಾ ತರಹ.
    ಮೆಚ್ಚಿದೆ ಚಿತ್ರಾ..ಇದು ಆಗಾಗ್ಗೆ ಅಗ್ತಿದ್ರೆ ಪುಂಡರಿಗೆ ಧೈರ್ಯ ಆಗೊಲ್ಲ…

  3. hi

    Well done chitra

  4. Sindhu

    My thumbs up for you chitra..
    Well done

    regards, sindhu

  5. Vikas Hegde

    well done

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading