ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗ ಎಂಟ್ರಿ ಕೊಡುತ್ತಾರೆ ಸತೀಶ್ ಆಚಾರ್ಯ..

satish acharya with daughter

ಒಂದು ಕನ್ನಡಿ ಇರಬೇಕು ಎನ್ನುತ್ತಾರೆ ನಮ್ಮನ್ನು ನಾವು ನೋಡಿಕೊಳ್ಳಲು. ಹಾಗೆ ಕನ್ನಡಿ ನೋಡುವುದಿಲ್ಲ ಎಂದು ಪಟ್ಟು ಹಿಡಿದವರ ಸಂಖ್ಯೆಯೂ ಗಾಬರಿ ಹುಟ್ಟಿಸುವಷ್ಟಿದೆ.

ಆಗ ಎಂಟ್ರಿ ಕೊಡುತ್ತಾರೆ ಸತೀಶ್ ಆಚಾರ್ಯ.

ಸತೀಶ್ ಆಚಾರ್ಯ ಎಂಬ ಕನ್ನಡಿ ತನ್ನ ಅಂಕು ಡೊಂಕು ರೇಖೆಯ ಮೂಲಕವೇ ಸಮಾಜವನ್ನು ನೇರ ಮಾಡಲು ಹೊರಟಿದೆ.

ಸತೀಶ್ ಇಂದು ದೇಶದ ಅನೇಕ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಮಾತನಾಡುವ, ಚಾಟಿ ಏಟು ನೀಡುವ, ಲಗಾಮು ಎಳೆಯುವ ವ್ಯಂಗ್ಯ ಚಿತ್ರಕಾರ.

ಅದು ಶಕ್ತಿಮಾನ್ ಕುದುರೆ ಇರಬಹುದು, ಮೇಡಂ ತುಸ್ಸಾಡ್ಸ್ ಮೇಣದ ಗೊಂಬೆ ಇರಬಹುದು, ಗುರು ಗ್ರಾಮವಾಗಬಹುದು, ಭಾರತ ಮಾತಾ ಕಿ ಜೈ ಇರಬಹುದು, ಆರ್ ಬಿ ಐ ರಂಗರಾಜನ್- ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್- ರಾಷ್ಟ್ರಪತಿ ಪ್ರಣಬ್ ದಾ-  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ- ಕೊನೆಗೆ ಐ ಪಿ ಎಲ್-  ಬಿ ಪಿ ಎಲ್..  ಹೀಗೆ ಯಾರನ್ನು ಬೇಕಾದರೂ ತಮ್ಮ ಪೆನ್ನ ತುದಿಗೆ ನಿಲೆ ಹಾಕಿಕೊಳ್ಳಬಲ್ಲ ತಾಖತ್ತು ಹಾಗೂ ಪ್ರತಿಭೆ ಎರಡೂ ಇವರಿಗಿದೆ.

ನಮ್ಮದೇ ಕುಂದಾಪುರದ ಸತೀಶ್ ಆಚಾರ್ಯ ಅವರು ಕಾರ್ಟೂನ್ ಲೋಕಕ್ಕೆ ಎಂಟ್ರಿ ಕೊಟ್ಟ ಬಗೆಯನ್ನು ಓದಿ ಹಾಗೂ ಅವರು ಇತ್ತೀಚಿನ ಘಟನೆಗಳಿಗೆ ಕೊಟ್ಟಿರುವ ವ್ಯಾಖ್ಯಾನವನ್ನು ನೋಡಿ..  

satish acharya in kannada prabha

satish acharya1 satish acharya2 satish acharya3 satish acharya4 satish acharya6 satish acharya7 satish acharya8 satish acharya9 satish acharya10 satish acharya11 satisha acharya5

‍ಲೇಖಕರು admin

23 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading