ಕರ್ನಾಟಕ ನಾಟಕ ಅಕಾಡೆಮಿಯ : ರಂಗಸಂವಾದ

ರಂಗಭೂಮಿಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ರೀತಿಯ ಒಂದು ಗಂಭೀರ ರಂಗಸಂವಾದ ಕರ್ನಾಟಕ ನಾಟಕ ಅಕಾಡೆಮಿ ಹಾವೇರಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿಸಿತು.
ಹಿರಿಯ ಸಾಹಿತಿ, ನಾಟಕಕಾರ ಹಾಗೂ ರಂಗಕರ್ಮಿ ಸತೀಶ ಕುಲಕರ್ಣಿ ಅವರೊಂದಿಗೆ ಎರಡು ಗಂಟೆಗಳ ಕಾಲದ ಸಂವಾದ, ರಂಗ ಚಿಂತನೆ ಮತ್ತು ಪರಾಮರ್ಶೆಗೆ ಕಾರಣವಾಯಿತು. ತುಂಬಿದ ಕಲಾಪ್ರೇಮಿಗಳ ನಡುವೆ ಸುಮಾರು ಒಂದು ಗಂಟೆಗಳ ಕಾಲ ತಮ್ಮ ರಂಗಾನುಭವ ಮತ್ತು ಚಿಂತನೆಗಳನ್ನು ಹಂಚಿಕೊಂಡರು.
ರಂಭೂಮಿಯ ಮೂಲ ನೆಲೆಯಾವುದು ? ಅಂದು ಇಂದು ಹಾಗೂ ಮುಂದೆಯೂ ಇದರ ಮೂಲ ಸವಾಲೇನು ? ಒಂದು ಹೆಣ್ಣು ಹೊಸಿಲು ದಾಟಿ ರಂಗಭೂಮಿಗೆ ಬಂದಾಗ ಅವಮಾನಗಳೇ ಹಚ್ಚು. ಇದಕ್ಕ ಪರಿಹಾರವೇನು ? – ಇಚಿತಹ ಗಂಭೀರ ಪ್ರಶ್ನೆಗಳ ನಡುವೆ ‘ಚಟಗಳಿದ್ದರೆ ಮಾತ್ರ ಕಲಾವಿದನಾಗುತ್ತಾನೊ, ಕಲಾವಿದನಾದ ಮೇಲೆ ಚಟಗಳು ಬರುತ್ತವೆಯೋ ? ಎಂಬ ವಾಸ್ತವದ ಪ್ರಶ್ನೆಗಳು ಸತೀಶರಿಗೆ ಸಭೆಯಿಂದ ತೂರಿ ಬಂದವು.
ತುಂಬ ಆಪ್ತವಾಗಿ, ಸಮಾಧಾನವಾಗಿ ಒಮ್ಮೊಮ್ಮೆ ಹಾಸ್ಯದ ಮೂಲಕ ಉತ್ತರಿಸಿದ ಅವರು – ‘ ಆಕಸ್ಮಿಕಗಳೆ ನನ್ನನ್ನು ರಂಭೂಮಿಗೆ ಕರೆ ತಂದವು, ಅವಕಾಶಗಳು ಬಾಗಿಲು ಬಡಿದಾಗ ಬಾಗಿಲು ತೆರೆಯ ಬೇಕು. ರಂಗಭೂಮಿ ನನಗೆ ಮಾತು ಆಡುವುದನ್ನು, ಮಾತು ಕೇಳುವುದನ್ನು ಕಲಿಸಿಕೊಟ್ಟಿದೆ. ಜನರೊಂದಿಗೆ ಬೆರೆಯುವುದು, ಅವರಿಗೆ ಆತ್ಮ ವಿಶ್ವಾಸವನ್ನು ತುಂಬುವುದನ್ನೂ ಕಲಿಸಿದೆ.
ಹಳೆಯ ನೆನಪುಗಳಿಗೆ ಹೊಸ ಹೊಳುಪು ಕೊಡುವ ಕೆಲಸವೇ ಇಂತಹ ಸಂವಾದದಿಂದ ಸಾಧ್ಯ. ಸಾಹೇಬರ ನಾಯಿ ನಾಟಕದ ಬಿಕಾರಿ ಪಾತ್ರ, ಪರಸಪ್ಪನ ಕಥೆಯ ಕುಡುಕ ಕಾರ್ಮಿಕನ ಪಾತ್ರ, ಬಂಗಾರ ಕೊಡದ ಭಿಮ್ಯಾ ಎಂಬ ಮುಖ್ಯ ಪಾತ್ರ ಹಾಗೂ ಮರ ಮಾತಾಡಿತು ದಲ್ಲಿನ ಗಿಡದ ಪಾತ್ರ ನನಗೆ ತೃಪ್ತಿ ಕೊಟ್ಟಿವೆ.

ನಾಟಕ ರಚನೆಯ ಶಕ್ತಿ ಇದ್ದುದರಿಂದಲೇ ನಾಲ್ಕು ಸಿನೇಮಾಗಳಿಗೆ ಸಾಹಿತ್ಯ ಬರೆಯಲು ಸಾಧ್ಯವಾಯಿತು. ಅವುಗಳ ಪೈಕಿ ಮೂರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಂದಿವೆ. ಏನೇಯಾದರು ರಂಗಭೂಮಿ ಜೀವಂತ ಕಲೆ. ಕೆ.ಇ.ಬಿ. ಕಲಾ ಬಳಗ, ಶೇಷಗಿರಿ ಕಲಾತಂಡ, ಜಿಲ್ಲ ಕಲಾ ಬಳಗ ಹಾಗೂ ಗೆಳೆಯರ ಬಳಗ ನನ್ನನ್ನು ಉಳಿಸಿವೆ, ಬೆಳೆಸಿವೆ. ರಂಗಭೂಮಿ ನನ್ನ ವೈಚಾರಿಕ ಚೀಮತನೆಗಳ ಮೂಲಕ ಸಮಾಜವನ್ನು ಎದುರಿಸುವ ಅಸ್ತ್ರವಾಗಿದೆಂದೂ ಸತೀಶ ಹೇಳಿದರು.
ಸಮಯಪ್ರಜ್ಞೆ, ನಿರಂತರ ಶ್ರಮ ಹಾಗೂ ಹೊಸತನ ಇದ್ದರೆ ಮಾತ್ರ ರಂಗಭೂಮಿಯಲ್ಲಿ ಬೆಳೆಯಲು ಸಾಧ್ಯ. ಪ್ರದರ್ಶನಾ ವ್ಯಕ್ತಿತ್ವದಕ್ಕಿಂತ ವೈಚಾರಿಕ ವ್ಯಕ್ತಿತ್ವವೇ ಮುಖ್ಯ. ರಂಗಭೂಮಿ ಬಿಡುಗಣ್ಣಿನಿಣದ ಸಮಾಜ ಜೀವನವನ್ನು ನೋಡಲು ಕಲಿಸಿದೆ ಎಂದರು.
ಹೆಣ್ಣು ಮಕ್ಕಳ ಚಾರಿತ್ರö್ಯವಧೆ ಮಾಡುವುದು ಪುರುಷ ಪಧಾನ ವ್ಯವಸ್ಥೆಯ ಹುನ್ನಾರವಾಗಿದೆ. ಹೆಣ್ಣು ಅದನ್ನು ಮೆಟ್ಟಿ ನಿಂತು ‘ಯಾಕೆ’ ಎಂದು ಒಂದು ಸಲ ಕೇಳಿದಾಗ ಮಾತಾಡುವ ಕುಹಕ ಬಾಯಿಗಳು ಬಂದಾಗುತ್ತವೆ. ಹಸಿವೆ ಬಡಕಲಾವಿದನ ಅಂದು ಇಂದು ಮುಂದಿನ ಮೂಲಭೂತ ಸಮಸ್ಯೆಯಾಗಿದೆ. ಕೈಯೊಡ್ಡಿ ಬೇಡಬೇಡಿ, ನಿಮ್ಮ ಪ್ರತಿಭೆಯೇ ದುಡ್ನು ತಂದು ಸುರಿಯುತ್ತದೆ – ಹೀಗೆ ಓತಪ್ರೋತವಾಗಿ ಒಂದು ತಾಸು ಗಂಭೀರವಾಗಿ ಸತೀಶ ಕುಲಕರ್ಣಿ ಪ್ರತಿಪಾದಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕ ಶಿವಪ್ಪ ಭರಮಪ್ಪ ಅದರಗುಂಚಿ ಮಾತನಾಡಿ ರಂಗಭೂಮಿ ನಿಂತ ನೀರಾಗಬಾರದು. ಹೊಸ ಹೊಸ ಪ್ರಯತ್ನಗಳಿಂದಲೇ ಅದು ಬೆಳೆಯಲು ಸಾಧ್ಯ. ಆಕಾರಣಕ್ಕಾಗಿಯೇ ನಾಟಕ ಅಕಾಡೆಮಿ ಇಂತಹ ಚಿಂತನ ಮಂಥನಗಳ ರಂಗ ಸಂವಾದಗಳನ್ನು ಏರ್ಪಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಈ ಬಾರಿಯ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಕಾಪುರದ ಸಿದ್ಧಲಿಂಗಪ್ಪ ನರೇಗಲ್ಲ ಅವರನ್ನು ಗೆಳೆಯರ ಬಳಗದ ಕಾರ್ಯದರ್ಶಿ ಡಾ. ಶ್ರವಣ ಪಂಡಿತ ಸನ್ಮಾನಿಸಿದರು.
ಸಂವಾದದಲ್ಲಿ ರಂಗಕರ್ಮಿಗಳಾದ ಸರ್ವಶ್ರೀ ಕೆ.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ಆರ್. ಸಿ ನಂದಿಹಳ್ಳಿ, ಬಸವರಾಜ ದೊಡ್ಡಮನಿ, ಕರಿಯಪ್ಪ ಹಂಚಿನಮನಿ, ಶಂಕರ ತುಮ್ಮಣ್ಣನವರ, ಶ್ರೀಮತಿ ಶಶಿಕಲಾ ಅಕ್ಕಿ, ಚಂದ್ರಶೇಖರ ಎಂ. ನಡಿಗೇರಿ ಭಾಗವಹಿಸಿದ್ದರು.
ಆರಂಭದಲ್ಲಿ ಕಲಾವಿದರಾದ ಮಹಾಂತೇಶ ಮರಿಗೂಳಪ್ಪನವರ, ಮಂಜುನಾಥ ವಾಲ್ಮಿಕಿ, ಎ.ಬಿ. ಗುಡ್ಡಳ್ಳಿ ತಂಡದವರು ರಂಗ ಗೀತೆಗಳನ್ನು ಹಾಡಿದರು. ಕಲಾವಿದ ವಸಂತ ಕಡತಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ಪ್ರಾಸ್ತಾವಿಕ ಮುಡಿಗಳನ್ನಾಡಿದರೆ, ಸಂವಾದವನ್ನು ಎಸ.ಆರ್. ಹಿರೇಮಠ ಮತ್ತು ಜಿ.ಎಂ. ಓಂಕಾರಣ್ಣನವರ ನಡೆಸಿಕೊಟ್ಟರು. ಕೊನೆಯಲ್ಲಿ ಎಂ. ಎಸ್. ಮರಿಗೂಳಪ್ಪನವರ ವಂದಿಸಿದರು.













0 Comments