ಕ್ರೌರ್ಯದ ಅನಾವರಣ ಮಾಡಿ ಗೆದ್ದ ಕಾಸರವಳ್ಳಿ
ಬೆಂಗಳೂರಿನಲ್ಲಿ 5ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಯಶಸ್ವಿಯಾಗಿ ಮುಕ್ತಾ ಯಗೊಂಡಿತು. ಈ ಉತ್ಸವದಲ್ಲಿ ಕೆಲವು ಚಿತ್ರಗಳನ್ನು ನೋಡುವುದಕ್ಕಷ್ಟೇ ನನ್ನಿಂದ ಸಾಧ್ಯವಾಯಿತು. ನಾನು ನೋಡಿದ ಚಿತ್ರಗಳಲ್ಲಿ ನನಗೆ ಗಾಡವಾಗಿ ಮನ ಕಲಕಿದ ಚಿತ್ರ ಗಿರಿಶ್ ಕಾಸರವಳ್ಳಿ ನಿರ್ದೇಶನದ ‘ಕ್ರೌರ್ಯ’.
ಕ್ರೌರ್ಯ ಚಿತ್ರವು ಹಳ್ಳಿಯ ಜೀವನವನ್ನು ಸೂಕ್ಷ್ಮವಾಗಿ ಎಣೆದಿದ್ದಾರೆ. ಹಳ್ಳಿಯ ಪ್ರತಿಹೆಜ್ಜೆಯು ನಿಧಾನವಾದರೂ ಅದರಲ್ಲಿ ಶ್ರಮ, ಸ್ವಾಭಿಮಾನ, ಸಂತೋಷ ಇನ್ನೂ ಬಹಳಷ್ಟು ಅಡಗಿರುವುದನ್ನು ನಿರ್ದೇಶಕರು ಮನೋಜ್ಞವಾಗಿ ನಿರೂಪಿಸಿದ್ದಾರೆ.
ಇದರಲ್ಲಿ ಬರುವ ಒಂದು ಸಂಭಾಷಣೆ ಈಗಿದೆ. `ಶ್ರಮ ಮಾಡದೆ ಏನು ಸಿಗಬಾರದು’ ಎಂಬ ಮಾತನ್ನು ನಟ ದತ್ತಣ್ಣರಿಂದ ಹೇಳಿಸುತ್ತಾರೆ.

ಅಜ್ಜಿ ತನ್ನ ಮೊಮ್ಮಗನಿಗೆ 10 ಸಾವಿರದಷ್ಟು ಹಣವನ್ನು ಸ್ವಂತ ವ್ಯಾಪಾರ ನಡೆಸುವುದಕ್ಕಾಗಿ ಕೊಡುತ್ತಾಳೆ. ಇದನ್ನು ಗಮನಿಸಿದ ದತ್ತಣ್ಣ ತನ್ನ ಹೆಂಡ್ತಿಗೆ ಈ ಮಾತನ್ನು ಹೇಳುತ್ತಾನೆ. ಈ ಮಾತು ಹಳ್ಳಿ ಜೀವನದ ಸಾರ. ಹಳ್ಳಿ ಜೀವನವು ನಿಧಾನವಾದರೂ ಸದಾ ಚಲಿಸುತ್ತಿರುತ್ತದೆ. ಅದು ಎಲ್ಲಿಯೂ ನಿಲ್ಲುವುದಿಲ್ಲ. ಅದು ಚಲನೆ ಅಷ್ಟೇ ಆಗಿರುವುದಿಲ್ಲ, ಅದರಲ್ಲಿ ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳು ಹಳ್ಳಿ ಜನರ ಬದುಕಿನಲ್ಲಿ ಜೊತೆಗಾರರಾಗಿರುತ್ತಾರೆ.
ಈ ಚಿತ್ರದಲ್ಲಿ ಅಜ್ಜಿ ತನ್ನ ಊರಿನ ಮಕ್ಕಳಿಗೆ ಚಂದ್ರನ ಊರಿಗೆ ಹೋಗಿಬಂದ ಕಥೆಯನ್ನು ಹೇಳುತ್ತಾಳೆ. ಈ ಕಥೆ ಕೇಳಿದ ಮಕ್ಕಳು ನಗುವುದನ್ನು ನಿರ್ದೇಶಕರು ಚಿತ್ರಿಸಿರುವುದು ಬಾಲ್ಯವನ್ನು ನೆನೆಪಿಸುವಂತೆ ಮಾಡುತ್ತದೆ. ಅಜ್ಜಿಯ ಮೊಮ್ಮಗ ಮೊಲವನ್ನು ಮುದ್ದಾಡುವ, ಜೋಪಾನಮಾಡುವ, ಆ ಮೊಲದಿಂದ ಶಾಲೆಯಲ್ಲಿ ಹೊಡೆಸಿಕೊಳ್ಳುವುದು ಇವೆಲ್ಲವೂ ನಿರ್ದೇಶಕರು ಮನಸ್ಸಿಗೆ ಹತ್ತಿರವಾಗುವಂತೆ, ಒಮ್ಮೆ ಆ ಹುಡುಗನ ಬದಲು ನಾವೇ ಮೊಲದ ಜೊತೆ ಇರಬೇಕಾಗಿತ್ತು ಅನ್ನಿಸದೆ ಇರದು ನೋಡುಗನಿಗೆ.

ಒಮ್ಮೆ ಅಜ್ಜಿ ಮತ್ತು ಮೊಮ್ಮಗ, ಬೆಂಗಳೂರು ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಮತ್ತೊಬ್ಬ ಮೊಮ್ಮಗನನ್ನು ನೋಡಲು ಹೋಗುತ್ತಾರೆ. ಇವರನ್ನು ನೋಡಿದ ಬೆಂಗಳೂರಿನ ಮೊಮ್ಮಗ ಮುಖವನ್ನು ಚಿಕ್ಕದು ಮಾಡಿಕೊಂಡು ತಮ್ಮನನ್ನು ಮೂಲೆಗೆ ಕರೆದು `ಅಜ್ಜಿಯನ್ನೇಕೊ ಕರೆದುಕೊಂಡು ಬಂದೆ. ಒಂದೆರಡು ದಿವಸ ಬೆಂಗಳೂರನ್ನು ಸುತ್ತಾಡಿಸಿ ವಪ್ಪಾಸ್ ಕರೆದುಕೊಂಡು ಹೋಗು ಎನ್ನುತ್ತಾನೆ’ ಅಣ್ಣನ ಈ ಮಾತನ್ನು ಕೇಳಿದ ಆ ಹುಡುಗ ಕಕ್ಕಾಬಿಕ್ಕಿ ಆಗುತ್ತಾನೆ.
ಇವನು ವ್ಯಾಪಾರ ಮಾಡುವುದಕ್ಕೆ ಅಜ್ಜಿಯೇ ದುಡ್ಡು ಕೊಟ್ಟಿದ್ದರೂ ಸಹ ಅಜ್ಜಿಯ ಬಗೆಗೆ ಅವನಿಗೇಕೆ ಈ ರೀತಿಯ ತಿರಸ್ಕಾರ ಎನ್ನುವುದನ್ನು ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಚಿಂತಿಸುವಂತ್ತಿದೆ.
ಅಜ್ಜಿ ಮತ್ತು ಮೊಮ್ಮಗ ದೂರದ ಸಂಬಂಧಿ ಒಬ್ಬರನ್ನು ಹುಡುಕುತ್ತಾ `ವಾಚ್’ ಅಂಗಡಿಗೆ ಹೋಗುತ್ತಾರೆ. ಆ ಅಂಗಡಿಯವರಿಗೆ ಅಜ್ಜಿ ಫೊಟೋವನ್ನು ತೋರಿಸುತ್ತಾರೆ. ಅದನ್ನು ಗಮನಿಸಿದ ಅಂಗಡಿವನು `ಇವರು ಸತ್ತು ತುಂಬಾ ವರ್ಷಗಳು ಆಯ್ತು ಅಜ್ಜಿ’ ಎನ್ನುತ್ತಾನೆ. ಈ ಮಾತನ್ನು ಕೇಳುತ್ತಿದ್ದಂತ್ತೆ ಅಜ್ಜಿ ತಡಬಡಿಸುತ್ತಾಳೆ. ಅವನಿಗೆ ಸಾಯೋವಯಸ್ಸು ಇಲ್ಲ ಬಿಡು ಇವರು ಸುಳ್ಳು ಹೇಳುತ್ತಿದ್ದಾಳೆ ಎಂದು ಚಡಪಡಿಸುತ್ತಾ ಹೊರ ಹೋಗುತ್ತಿರುವಾಗ ಅಂಗಡಿಯವನು ಅಜ್ಜಿಯನ್ನು ಕರೆದು `ಅಜ್ಜಿ ನಿನ್ನ ಮುಖವನ್ನು ನೋಡಿಕೋ ಕನ್ನಡಿಯಲ್ಲಿ ನಿನಗೆ ಎಷ್ಟು ವಯಸ್ಸಾಗಿದೆ, ಇನ್ನೂ ನಿನ್ನ ಗಂಡನ ವಯಸ್ಸಿನ ಅವರಿಗೆ ವಯಸ್ಸಾಗಿರುವುದಿಲ್ಲವೇ’ ಎಂದು ಹೇಳುತ್ತಾನೆ. ಅಜ್ಜಿ ಕನ್ನಡಿಯನ್ನು ನೋಡುತ್ತಿದ್ದಂತೆ ಗಾಬರಿ ಆಗುತ್ತಾಳೆ. ಅಲ್ಲಿಂದ ಅಜ್ಜಿ ಸಾವಿನತ್ತಾ ಪಯಣಿಸುತ್ತಾಳೆ.
ತನಗೆ ಸಾವೇ ಬರುವುದಿಲ್ಲ ಎಂಬಂತೆ ಜೀವಿಸುತ್ತಿದ್ದ ಅಜ್ಜಿ ಖಿನ್ನಳಾದಳು. ಇಲ್ಲ, ನಗರದ ಜೀವನದ ನೋಟವೇ ಅಜ್ಜಿಯನ್ನು ಸಾಯಿಸುವ ದಾರೆಗೆ ನೂಕಿತು ಎನ್ನುವುದೇ ಸರಿ. ನಿರ್ದೇಶಕರು ನಗರ ಯೋಚನೆಯ ಒಟ್ಟು ಸಾರವನ್ನು `ಅಜ್ಜಿಗೆ ಕನ್ನಡಿ ತೋರಿಸಿ ಸಾಯುವುದಕ್ಕೆ ಸರಿಯಾದ ವಯಸ್ಸಾಗಿದೆ’ ಎನ್ನುವ ವಾಕ್ಯದಲ್ಲಿ ಅಡಗಿಸಿದ್ದಾರೆ.
ನಗರ ಜೀವನವೂ ಪ್ರತಿಕ್ಷಣ ಸಾವಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಬೆಂಗಳೂರಿನಲ್ಲಿ ಪ್ರತಿದಿನ ರಸ್ತೆ ಅಪಘಾತದಲ್ಲಿ ಹತ್ತಾರು ಜನರು ಸಾವನ್ನಪ್ಪುತ್ತಾರೆ. ಕೊಲೆಗೆ ಒಂದಷ್ಟು, ಆತ್ಮಾಹತ್ಯೆ ಮಗದಷ್ಟು ಮಂದಿ ಹಸುನೀಗುತ್ತಾರೆ. ಹಾಗಾಗಿಯೇ ನಗರದಲ್ಲಿ ಜೀವಿಸುವವರು ಒಂದು ಮಾತನ್ನು ಸಾಮಾನ್ಯವಾಗಿ ಹೇಳುತ್ತಿರುತ್ತಾರೆ `ಮುಂಜಾನೆ ಮನೆಯಿಂದ ಹೊರಬಿದ್ದರೆ ಮತ್ತೆ ಮನೆಗೆ ಮರಳುವುದು ಖಚಿತ ಇಲ್ಲ’ ವೆಂದು. ಪ್ರತಿದಿನ ಆಕಾಶದಲ್ಲಿ ಚಿರ ಯೌವ್ವನರಂತೆ ಹೊಳೆಯುವ ಸೂರ್ಯ, ಚಂದ್ರರನ್ನು ನೋಡುತ್ತಾ ಜೀವನ ದೂಡುತ್ತಾರೆ. ಹಾಗಾಗಿ ಅಜ್ಜಿಗೆ ವಾಚ್ ಅಂಗಡಿಯವನು ಹೇಳಿರುವುದು ನಗರದ ವಾಸ್ತವದ ಸ್ಥಿತಿಯನ್ನು ನಿರ್ದೇಶಕರು ಹೇಳಿಸಿದ್ದಾರೆ.





City of sadness
manasanna thumba bega kaduva cinema . . .manasugalha krowrya galige chithra rupa thorisiruva bage nijakku vasthava enisadhiradhu . . . .nimma baravanige chithravannu kanna mundhe kanisuvanthe maduthadhe
ನಿಜ ಮಂಜು ಹಳ್ಳಿಯನ್ನು ಬಿಟ್ಟು ಬಂದ ಮೇಲೆ ನಮ್ಮ ಬಗ್ಗೆಯೇ ನಮಗೆ ಒಂದು ರೀತಿಯಲ್ಲಿ ಕ್ರೌಯ ಎಂಬುದು ಕಾಡಲು ಶುರುವಾಗುತ್ತದದೆ. ಈ ಸಿನಿಮಾದ ಕಥೆಯನ್ನು ನಾನು ಕೇಳಿದ್ದೆ ಈಗ ನೋಡಬೇಕೆನಿಸುತ್ತಿದೆ.
hai manju nice
channagide manju very good
ನಗರ ಜೀವನವೂ ಪ್ರತಿಕ್ಷಣ ಸಾವಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಬೆಂಗಳೂರಿನಲ್ಲಿ ಪ್ರತಿದಿನ ರಸ್ತೆ ಅಪಘಾತದಲ್ಲಿ ಹತ್ತಾರು ಜನರು ಸಾವನ್ನಪ್ಪುತ್ತಾರೆ. ಕೊಲೆಗೆ ಒಂದಷ್ಟು, ಆತ್ಮಾಹತ್ಯೆ ಮಗದಷ್ಟು ಮಂದಿ ಹಸುನೀಗುತ್ತಾರೆ. ಹಾಗಾಗಿಯೇ ನಗರದಲ್ಲಿ ಜೀವಿಸುವವರು ಒಂದು ಮಾತನ್ನು ಸಾಮಾನ್ಯವಾಗಿ ಹೇಳುತ್ತಿರುತ್ತಾರೆ `ಮುಂಜಾನೆ ಮನೆಯಿಂದ ಹೊರಬಿದ್ದರೆ ಮತ್ತೆ ಮನೆಗೆ ಮರಳುವುದು ಖಚಿತ ಇಲ್ಲ’ ವೆಂದು. ಪ್ರತಿದಿನ ಆಕಾಶದಲ್ಲಿ ಚಿರ ಯೌವ್ವನರಂತೆ ಹೊಳೆಯುವ ಸೂರ್ಯ, ಚಂದ್ರರನ್ನು ನೋಡುತ್ತಾ ಜೀವನ ದೂಡುತ್ತಾರೆ. ಹಾಗಾಗಿ ಅಜ್ಜಿಗೆ ವಾಚ್ ಅಂಗಡಿಯವನು ಹೇಳಿರುವುದು ನಗರದ ವಾಸ್ತವದ ಸ್ಥಿತಿಯನ್ನು ನಿರ್ದೇಶಕರು ಹೇಳಿಸಿದ್ದಾರೆ.
excellent…nanage kaasavalli avara alochane,saralate tumbaa istaa…
ಮಂಜಣ್ಣ ನಗರದ ಕೌರ್ಯ ಮುಖವಾಡವನ್ನು ಗೀರಿಶ ಕಾಸರವಳ್ಳಿ ತಮ್ಮ ಚಿತ್ರದಲದಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗೆ ನೀವು ಕೂಡ ನಿಮ್ಮ ಬರವಣಿಗೆ ಮೂಲಕ ಕಟ್ಟಿಕೊಟ್ಟಿದ್ದಿರಾ……….