ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಿರತ’, ’ನಾನು ಅವನಲ್ಲ ಅವಳು’ ಮತ್ತು ಸಂವಾದ

ಅದು ನಾವರಿಯದ ಲೋಕ, ಅಲ್ಲಿನ ರೀತಿ ನೀತಿಗಳು ನಮಗೆ ಅಪರಿಚಿತ. ಅಂತಹ ಒಂದು ಲೋಕವನ್ನು ನಮ್ಮೆದಿರು ತೆರೆದಿಟ್ಟ ಚಿತ್ರ ’ನಾನು ಅವನಲ್ಲ ಅವಳು’. ಚಿತ್ರ ತಯಾರಾಗಿ, ಚಿತ್ರದಲ್ಲಿನ ತನ್ನ ನಟನೆಗಾಗಿ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದ ನಂತರವೂ ಚಿತ್ರ ಇನ್ನೂ ಜನರ ಮುಂದೆ ಬಂದಿರಲಿಲ್ಲ. ಈ ಚಿತ್ರ ಒಂದು ಭಿನ್ನ ಪ್ರಯತ್ನ, ಇಂತಹ ಚಿತ್ರ ಪ್ರೇಕ್ಷಕರ ಮುಂದೆ ಬರಬೇಕು. ಸಾಧ್ಯವಾದಷ್ಟೂ ಜನ ಇಂತಹ ಚಿತ್ರ ನೋಡಬೇಕು ಎನ್ನುವ ಉದ್ದೇಶದಿಂದ ಒಂದು ಪ್ರದರ್ಶನದ ಹೊಣೆ ಹೊತ್ತು, ಚಿತ್ರ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದ ಏರ್ಪಡಿಸಿದ್ದು ’ಅವಿರತ’ ತಂಡ.
ಗಂಡಿನ ದೇಹದಲ್ಲಿ ಬಂಧಿಯಾದ ಹೆಣ್ಣೊಬ್ಬಳು ಬಿಡುಗಡೆಗಾಗಿ ಚಡಪಡಿಸುವ, ಹೋರಾಡುವ ಹೋರಾಟದ ಕಥೆ ’ನಾನು ಅವನಲ್ಲ ಅವಳು’. ಚಿತ್ರದ ಹೊಸತನ ಮತ್ತು ಇಡೀ ಚಿತ್ರವನ್ನು ಆವರಿಸಿಕೊಂಡಿರುವ ’ಸಂಚಾರಿ ವಿಜಯ್’ ನಟನೆ ಚಿತ್ರದ ಹೈ ಲೈಟ್.
1212
ಚಿತ್ರಪ್ರದರ್ಶನ ಮತ್ತು ಸಂವಾದದ ಚಿತ್ರಗಳು ’ಅವಧಿ’ ಓದುಗರಿಗಾಗಿ :
ಚಿತ್ರಗಳು : ಅವಿರತ

‍ಲೇಖಕರು G

29 September, 2015

1 Comment

  1. Anantha Ramesh

    ಸಂವೇದನಾಶೀಲ ಚಿತ್ರ. ಉತ್ತಮ ನಿರ್ದೇಶನ, ಕೇಳುವಂಥ ಹಾಡುಗಳು,ಸಂಗೀತ ಮತ್ತು ಸಂ.ವಿಜಯ್, ಸುಂದರ್, ಸಹ ಕಲಾವಿದರ ಸಹಜ ಅಭಿನಯ. ಕನ್ನಡ ಚಿತ್ರಗಳ ಸಾಲಿನಲ್ಲಿ ಒಂದು ಮೈಲಿಗಲ್ಲು. ಜನ ನೋಡಲಿ ಅನ್ನುವುದು ಆಸೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading