-ಜಯಲಕ್ಷ್ಮಿ ಪಾಟೀಲ್
ಅಂತರಾಳ
ಅವಳೊಬ್ಬಳಿದ್ದಳು…
ತನ್ನವನ ದೃಷ್ಟಿಯನ್ನು ಸಂಧಿಸಲು ಹರ ಸಾಹಸ ಮಾಡಿ ಸೋಲುತ್ತಿದ್ದ ಹುಡುಗಿ. ಅವನಿದಿರು ಅವಳ ರೆಪ್ಪೆಗಳು ಯಾವ ಪರಿಯಾಗಿ ಲಜ್ಜೆಯಿಂದ ಭಾರಗೊಳ್ಳುತಿದ್ದವೆಂದರೆ ಆ ಭಾರಕ್ಕೆ ಅವಳ ಶಿರ ಬಾಗುತ್ತಿತ್ತು !
ಇನ್ನೊಬ್ಬಳು…
ತನ್ನವನ ಕಣ್ಣುಗಳಲ್ಲಿ ತಮ್ಮ ಪ್ರೀತಿಯ ಪಳುವಳಿಕೆಗಳನ್ನು ಹುಡುಕಿ ಸೋತಾಕೆಯ ಶಿರ ಬಾಗುವುದು ಬಿಡಿ, ಕಣ್ರೆಪ್ಪೆ ಒಂದಾಗುವುದು ಸಹ ಮರೆತಂತಿದ್ದವು..
ಮತ್ತೊಬ್ಬಳಿದ್ದಳು...
ತನ್ನವನು ಮತ್ತೊಬ್ಬನಾಗಿ ಮಾತಾಡುತ್ತಾ ಕುಳಿತ ಸಮಯ ಕಣ್ಣಲ್ಲಿ ನಿರ್ಲಿಪ್ತತೆಯ ನಟಿಸಿ, ಮನದಲ್ಲಿ ರೋಧಿಸುತ್ತ ತುಟಿಯಲ್ಲಿ ನಗುವರಳಿಸಿ ಕುಳಿತಾಕೆ…
ಮಗದೊಬ್ಬಳು...
`ಹೋಗುತ್ತೇನೆ’ ಎಂದವನನ್ನು ತಡೆಯದೆ `ಸರಿ’ ಎಂದು ಕಳಿಸಿ ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು, ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ…]]>
ಅವಳೊಬ್ಬಳಿದ್ದಳು
ನಿಮಗೆ ಇವೂ ಇಷ್ಟವಾಗಬಹುದು…





ಇಲ್ಲೊಬ್ಬರು..
ಚೆನ್ನಾಗಿದೆ ಅಂತ ಹೇಳ್ತಾರೆ..
😉
Nice !!!!!!!! That is Indian Woman
chennagide
Poem is very nice. Every woman likes it to read to look into herself.
PALUVALIKE ALLA- ADU PALEYALIKE IDARA ARTHA AVASHESHA.
JADEDHALU ALLA- JADIDALU :IDARA ARTHA BHADRAPADISU