ನಮ್ಮೂರಿನಿಂದ ಬೆಟ್ಟವೇರಿ ಬೆಟ್ಟ ಇಳಿದರೆ ಬಾಳೆಹೊಳೆ. ಅಲ್ಲಿಂದ ಎಡಕ್ಕೆ ತಿರುಗಿ ಸಾಗಿದರೆ ಬಜಗೋಳಿ ಕಡೆಗೆ ಹೋಗುವ ರಸ್ತೆ. ಅದು ಕುದುರೆಮುಖವನ್ನು ಬಳಸಿಕೊಂಡು ಹೋಗುತ್ತದೆ. ಇವತ್ತು ಕುದುರೆಮುಖ ಮೌನನಗರಿ.
ಅದೇ ಹಾದಿಯಲ್ಲಿ ಹೋದರೆ ಹನುಮಾನ್ ಗುಂಡಿ, ಗಂಗಾಮೂಲ ಸಿಗುತ್ತದೆ.
ಹನುಮಾನ್ ಗುಂಡಿಗೆ ಇಳಿದರೆ ಅಲ್ಲೊಂದು ಪುಟ್ಟ ಜಲಪಾತ. ಅಲ್ಲಿಗೆ ಕರೆದೊಯ್ದ ಅವಳು ನನಗೆ ಗೊತ್ತೇ ಆಗದ ಹಾಗೆ ಮುತ್ತಿಟ್ಟಾಗ ನನಗಿನ್ನೂ ಹದಿನೆಂಟು. ಅವಳಿಗೆ ಇಪ್ಪತ್ತು.
ಇವತ್ತು ಅವಳ ಸುದ್ದಿ ಬಂತು. ಶ್ರೀಲಂಕಾದಲ್ಲಿದ್ದಾಳೆ. ಸಮುದ್ರದ ಪಕ್ಕ ಅವನೊಂದಿಗೆ ಸಾಗುತ್ತಿದ್ದೇನೆ. ಸಮುದ್ರ ಸಣ್ಣದು ಅನ್ನಿಸುತ್ತದೆ ಅವನ ಪ್ರೀತಿಯ ಮುಂದೆ ಅಂದಳು.
ಮನಸ್ಸಿಗೆ ಯಾಕೋ ಕಿರಿಕಿರಿ.
ಅವಳನ್ನು ಮರೆಯಬೇಕು ಅಂದುಕೊಂಡು ಒಂದೂವರೆ ಗಂಟೆ ಈಜುಹೊಡೆದೆ.
ಹಳೆಯ ಪ್ರೇಮ ಕೊಬ್ಬಿನ ಹಾಗೆ ಹೊಟ್ಟೆಯ ಸುತ್ತ ಬೆಳೆಯುವ ಬೊಜ್ಜಿನ ಹಾಗೆ ಮನಸ್ಸಿನ ಸುತ್ತ ಬೆಳೆಯುತ್ತವಂತೆ. ಅದನ್ನು ಆಗಾಗ ಕರಗಿಸದೇ ಹೋದರೆ ಅಪಾಯ.
ಮನಸು ಮೀನಿನಂತೆ. ನೀರು ಪ್ರೀತಿಯಂತೆ.
ಅವಳ ಕಣ್ಣು ಗಾಳವಲ್ಲ, ಬಲೆಯಲ್ಲ. ಮತ್ತೇನು ಅಂತ ಹೇಳಲಾರೆ.

ಅಳಿದು ಹೋದ ಸಂಬಂಧಗಳೇ ಹಾಗೆ.. ಕೂದಲಿನಂತೆ … ಬಿಡಿಸಿಕೊಳ್ಳಲು ಹೋದಷ್ಟೂ ಜಾಸ್ತಿ ಸುಕ್ಕಾಗುತ್ತ ಸಾಗುತ್ತದೆ.