ಜೋಗಿಯವರ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಜೋಗಿ ಪ್ರಾರಂಭಿಸಿದ ಚರ್ಚೆ ದಿಕ್ಕು ತಪ್ಪುತ್ತಿದೆ ಎಂದು ತೋರುತ್ತದೆ. ಇದರ ಮೂಲ ಸ್ವಲ್ಪ ಮಟ್ಟಿಗೆ ಜೋಗಿಯವರ ಲೇಖನದಲ್ಲಿಯೇ ಇದೆ — ಅವರು ಸಾಹಿತಿಗಳ ಬಗ್ಗೆ (ಮುಖ್ಯವಾಗಿ ಬರಗೂರರ ಬಗ್ಗೆ) ಉಪಯೋಗಿಸಿರುವ ಕುಚೋದ್ಯದ ಧಾಟಿ; ಈಗ ಅದು ಮುಂದೆ ಹೋಗಿ ’ಬರಗೂರರು ಯಾರು? ನಾರಾಯಣ ಮೂರ್ತಿ ಕನ್ನಡಿಗರೆ?’ ಎಂಬಂತಹ, ಚರ್ಚೆಗೆ ಸಂಬಂಧಪಡದ ವೈಯಕ್ತಿಕ ನಿಂದೆಗೆ ತಲಪಿದೆ. ಇದು ದುರದೃಷ್ಟಕರ. ವ್ಯಕ್ತಿಗಳನ್ನು ಮರೆತು, ನಮಗೆ ವೈಚಾರಿಕ ಚರ್ಚೆ ಮಾಡಲು ಸಾಧ್ಯವೆ ಇಲ್ಲವೆ? (ಕ. ಸಾ. ಅ.ಯ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಲೇಖಕ-ಚಿತ್ರ ತಯಾರಕ-ಬಂಡಾಯ ಸಂಘಟಕರಾಗಿ ಬರಗೂರು ರಾಮಚಂದ್ರಪ್ಪನವರು ಮಾಡಿರುವ ಕೆಲಸ ಗೊತ್ತಿಲ್ಲದಿದ್ದರೆ ಅದು ಶೋಚನೀಯ ಎಂದಷ್ಟೇ ಹೇಳಬಹುದು.)
ನನ್ನ ದೃಷ್ಟಿಯಲ್ಲಿ, ಎಲ್ಲರೂ ಚರ್ಚಿಸಬೇಕಾದದ್ದು ಒಂದೇ ವಿಷಯ: ವಿಶ್ವ ಕನ್ನಡ ಸಮ್ಮೇಳನವನ್ನು (ಅಥವಾ ಅಂತಹ ಇತರ ಸಮ್ಮೇಳನಗಳನ್ನು) ಸಾಹಿತಿಗಳೇ ಉದ್ಘಾಟಿಸಬೇಕೆ ಅಥವಾ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಅಸಾಧಾರಣ ಕೆಲಸ ಮಾಡಿರುವ ಕನ್ನಡಿಗರೂ ಉದ್ಘಾಟಿಸಬಹುದೆ? ಒಂದು ಭಾಷೆ-ಸಾಹಿತ್ಯ-ಸಂಸ್ಕೃತಿಗಳಿಗಾಗಿ ಸಾಹಿತಿಗಳೂ ದುಡಿಯುತ್ತಾರೆ –ಹಾಗೆಯೇ ಆಡಳಿತಗಾರರು, ಸಂಗೀತ-ನೃತ್ಯ-ಚಿತ್ರಕಲೆ ಇತ್ಯಾದಿ ಕ್ಷೇತ್ರಗಳ ಕಲಾವಿದರು, ಉದ್ಯಮಪತಿಗಳು, ರಾಜಕಾರಣಿಗಳು, ವಿಜ್ಞಾನಿಗಳು, ಸಂಶೋಧಕರು, ಇತ್ಯಾದಿ ಅನೇಕ ಪ್ರತಿಭಾವಂತರೂ ದುಡಿಯುತ್ತಾರೆ; ಒಂದು ಸಮಾಜದ ಪ್ರಗತಿಯಾಗಲು ಇವರೆಲ್ಲರ ಕೊಡುಗೆಯೂ ಬೇಕು. (ಈಗ, ಡಾ. ನರಸಿಂಹಯ್ಯನವರು / ಡಾ. ಗಂಗೂಬಾಯಿ ಹಾನಗಲ್ / ಶ್ರೀ ನಿಜಲಿಂಗಪ್ಪನವರು / ಚಿತ್ರಕಾರ ವೆಂಕಟಪ್ಪನವರು / … ಇತ್ಯಾದಿ ಮಹನೀಯರು ಬದುಕಿದ್ದರೆ, ಅವರಲ್ಲಿ ಯಾರು ಬೇಕಾದರೂ ಸಮ್ಮೇಳನವನ್ನು ಉದ್ಘಾಟಿಸಬಹುದಿತ್ತಲ್ಲವೆ?)
ಎಂದರೆ, ವಿ. ಕ. ಸಮ್ಮೇಳನದ ಉದ್ಘಾಟನೆ ಯಾವುದೇ ಕ್ಷೇತ್ರದ ಪ್ರತಿಭಾವಂತ ವ್ಯಕ್ತಿಯಿಂದ ಆಗಬಹುದು. ಇಷ್ಟೇ ನನ್ನ ವಾದ. ಇದಕ್ಕಾಗಿ ’ಅವರ ಕೊಡುಗೆ ಎಷ್ಟೂ?’ ’ಅವರು ಯಾರು?’ ಎಂಬಂತಹ ಭರ್ತ್ಸನೆ ಅನವಶ್ಯಕ.








ಶ್ರೀ. ಬರಗೂರು ರಾಮಚಂದ್ರಪ್ಪನವರ ವಾದ ಅಥವಾ ಅವರ ವೈಯಕ್ತಿಕ ಅನಿಸಿಕೆಯಾದ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ ಶ್ರೀನಾರಾಯಣ ಮೂರ್ತಿಯವರನ್ನು ಸರ್ಕಾರ ಆಹ್ವಾನಿಸಿದ ಬಗ್ಗೆ ಕೊನೆಯ ಹಂತದಲ್ಲಿನ ಆಕ್ಷೇಪಣೆ ಸರಿಯಲ್ಲ. ಅಷ್ಟಕ್ಕೂ ಶ್ರೀನಾರಾಯಣ ಮೂರ್ತಿಯವರು ಅವರೇ ದಂಬಾಲು ಬಿದ್ದು ಆಹ್ವಾನ ಕೋರಿಲ್ಲ. ಸರ್ಕಾರದ ಆಹ್ವಾನವನ್ನು ಒಪ್ಪಿರುವುದು ನಮ್ಮ ದೊಡ್ಡತನವೇ ವಿನಃ ಇದರಲ್ಲಿ ಅವರ ತಪ್ಪೇನು ಇಲ್ಲ. ಇಂತಹ ವೈಯಕ್ತಿಕವಾದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸುವುದು ಎಷ್ಟು ಸರಿ? ಶ್ರೀ. ಬರಗೂರು ರಾಮಚಂದ್ರಪ್ಪನವರು ವಿಶ್ವ ಕನ್ನಡ ಸಮ್ಮೇಳನದ ದಿನಾಂಕ ನಿಗದಿಯಾದ ದಿನವೇ ಸರ್ಕಾರಕ್ಕೆ ಬಹಿರಂಗವಾಗಿ ಯಾರು ಉದ್ಘಾಟನೆಗೆ ಅರ್ಹರು ಎಂದು ಮೊದಲೇ ಸೂಚಿಸಿದ್ದರೆ ಸರಿ ಇತ್ತು. ಈಗ ಕೊನೆಯ ಹಂತದಲ್ಲಿ ಕ್ಯಾತೆ ತೆಗೆದು ಅನಾವಶ್ಯಕವಾಗಿ ಶ್ರೀನಾರಾಯಣ ಮೂರ್ತಿಯವರಿಗೆ ನೋವು ಉಂಟು ಮಾಡುವುದು ಎಷ್ಟು ಸರಿ?
ಸಿ.ಎನ್. ರಾಮಚಂದ್ರನ್ ಅವರ ಅಭಿಪ್ರಾಯ ಸಮ್ಮತವಾಗಿದೆ. ಧನ್ಯವಾದಗಳು ಸರ್. ಬರಗೂರರು ಎತ್ತಿದ ತಾತ್ವಿಕ ವಿಷಯಗಳನ್ನು ಬದಿಗಿಟ್ಟು, ವೈಯಕ್ತಿಕ ನೆಲೆಗೆ ಚರ್ಚೆ ತಿರುಗಿದ್ದು ಬೇಸರ ತಂದಿತ್ತು. ನೀವು ಗುರುತಿಸಿರುವಂತೆ ಚರ್ಚೆ ದಿಕ್ಕು ತಪ್ಪಲು ಜೋಗಿಯವರ ಲೇಖನದಲ್ಲೇ ಬೀಜ ಬಿತ್ತಲಾಗಿದೆ! ಸಾಹಿತಿಗಳಿಂದಲೇ ಉದ್ಘಾಟಿಸಬೇಕೆಂದು ಬರಗೂರರು ಎಲ್ಲೂ ಹೇಳಿಲ್ಲ. ಸಾಂಸ್ಕೃತಿಕ ಆಯಾಮವಿರುವ ವ್ಯಕ್ತಿಯಿಂದ ಉದ್ಘಾಟನೆಯಾಗಬೇಕು ಎಂದು ಹೇಳಿದ್ದಾರೆ. ಆದರೆ ಈ ವಿಷಯವನ್ನು ಲೇಖಕರು ಕತ್ತಲೆಗೆ ತಳ್ಳಿಬಿಟ್ಟಿದ್ದಾರೆ!
ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬರ್ಥದಲ್ಲಿ ಮಾತನಾಡಿದ್ದ ಹಾಗೂ ಈಗ 400 ಕೋಟಿ ತೆರಿಗೆ ವಂಚನೆಯಲ್ಲಿ ಹೆಸರು ಕೇಳಿಬರುತ್ತಿರುವ ಇನ್ಫೋಸಿಸ್ ಸಂಸ್ಥೆಗೆ ಸಂಬಂಧಪಟ್ಟವರು, ಸಮ್ಮೇಳನ ಉದ್ಘಾಟನೆ ಮಾಡುವುದು ಸರಿಯೆ? ಎಂಬುದರ ಬಗ್ಗೆ ಚರ್ಚೆ ಸಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಈಗ ಅದರ ಲೋಪವನ್ನು ನೀವು ಎತ್ತಿ ತೋರಿಸಿದ್ದೀರಿ. ಧನ್ಯವಾದಗಳು.
ವಿಶ್ವ ಸಾಫ್ಟವೇರ್ ಉದ್ಯಮದಲ್ಲಿ ದೈತ್ಯ ಶಕ್ತಿಯಾಗಿ ಬೆಂಗಳೂರಿನ ಹೆಸರನ್ನು ಖ್ಯಾತಿಯನ್ನು ಹೆಚ್ಚಿಸಿದ ನಾರಾಯಣಮೂರ್ತಿಯವರು, ತಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಅತ್ಯಗತ್ಯವಾಗಿರುವ ಒಂದು ಕನ್ನಡ ತಂತ್ರಾಂಶವನ್ನು ಅವರ ಇನ್ಫೋಸಿಸ್ಸಿನಿಂದ ತಯಾರಿಸಲು ಮನಸ್ಸು ಮಾಡಬಹುದಿತ್ತು. ಈಗಲಾದರೂ, ಕನ್ನಡಿಗರಿದಂದ ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸುವ ಗೌರವವನ್ನು ಪಡೆಯುತ್ತಿರುವ ನಾರಾಯಣಮೂರ್ತಿಯವರು ಕನ್ನಡ ಭಾಷೆಯ ಜಾಯಮಾನಕ್ಕೆ ಹೊಂದುವಂತಹ ಒಂದು ಸಮಗ್ರ ತಂತ್ರಾಂಶವನ್ನು ರೂಪಿಸಲು ಅಗತ್ಯ ಕ್ರಮ ಕೈಗೊಂಡರೆ ಸಂತೋಷ. ಕನ್ನಡಿಗರ ಅಭಿಮಾನಕ್ಕೂ ಒಂದು ಬೆಲೆ ಬರುತ್ತದೆ.
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು
ಒಟ್ಟೆಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿ೦ಡಿಮವ..
priya geleyare,
avadhiyallina hagoo eedivasada kannadaprabhadallina lekhanagalannu odi besaravayitu,
hiriya chintakaraada pro.cnr abhipraaya savra sammatha. apakva jagalagantaru okkoralininda vyakthi nindanege todagiruvudu arogyakara belavanigeyalla. intha sammelegalinda sarvajanikara hana kharchagabahude hrotu kannadakkagali, sahityakkagali kinchittu labhavagalaradu. baragooru ettida kela prashnegala bagge yarobbaru sariyada reetiyalli spandisadiruvudu khedada sangathi. baragooru varthamana sandarbhada pramuka kannadapara, samajapara chintakaru, avaru kadime barediddaru moulika barahagararebudannu kadeganisabaradu.
chinthaka baragooru prastapisidda prasnegalu kevala viswa kannada sammelana, muthi avara udghatanegaste sambandhisiddiralilla, itticcina dinagalalli ibbagagondiruva prapancha kuritante, adhikarishahi sannatana kuritnte avaru charcheyannu aarambhisidaru. veeranna madivalaravara matugalu moulikavagive, vagvada munduvareyali,