ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಖಾನಾವಳಿ ನಡೆಸಿ ಕವಿತೆ ಬರೆದರು..

 

 

 

 

 

ಸನತ್ ಕುಮಾರ್ ಬೆಳಗಲಿ 

 

ಜಮಖಂಡಿಯ ಲೇಖಕ , ಸಾಹಿತ್ಯ ಪರಿಚಾರಕ ಮಿತ್ರ ಅರ್ಜುನ ಕೊರಟಕರ ಅವರು ನಿಧನರಾದ ಆಘಾತಕಾರಿ ಸುದ್ದಿ ಬಂದಿದೆ.

ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದ ಕೊರಟಕರ ಯಾವುದೇ ವಿಶ್ವವಿದ್ಯಾಲಯದ ಪದವೀಧರರಲ್ಲ. ಆದರೆ ಎಲ್ಲರಿಗಿಂತ ಮಿಗಿಲಾದ ಸಾಹಿತ್ಯಾಸಕ್ತಿ ಅವರಿಗಿತ್ತು.

ಅವರನ್ನು ನಾನು ಮೊದಲು ನೋಡಿದ್ದು ಎಪ್ಪತ್ತರ ದಶಕದ ಆರಂಭದಲ್ಲಿ. ಜಮಖಂಡಿಯ ಖಾನಾವಳಿಯೊಂದಕ್ಕೆ ಊಟಕ್ಕೆ ಹೋದಾಗ ಪರಿಚಯವಾಗಿತ್ತು. ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರು ಬರೆದ ಪದ್ಯಗಳನ್ನು ತೋರಿಸುತ್ತಿದ್ದರು,

ಎಂಬತ್ತರ ನಂತರ ತಾವೇ ಖಾನಾವಳಿ ಮಾಡಿ ನಡೆಸುತ್ತಿದ್ದರು. ಅವರ ಆತಿಥ್ಯವನ್ನು ಸ್ವೀಕರಿಸದ ಸಾಹಿತಿಗಳೇ ಇಲ್ಲ, ಅನಂತಮೂರ್ತಿ, ಭೈರಪ್ಪ, ಜಯಂತ ಕಾಯ್ಕಿಣಿ, ಸರಜೂ ಹೀಗೆ ಜಮಖಂಡಿಗೆ ಬಂದವರೆಲ್ಲ ಅವರನ್ನು ಕಾಣದೇ ಹೋಗುತ್ತಿರಲಿಲ್ಲ,

ಕೊರಟಕರ ಒಬ್ಬ ಸಾಹಿತಿ ಮಾತ್ರವಲ್ಲ, ಎಲ್ಲರನ್ನೂ ಪ್ರೀತಿಸುವ ಹೃದಯವಂತ ಮನುಷ್ಯ, ಅವರ ಅಗಲಿಕೆಗೆ ನನ್ನಂಥ ಅನೇಕರಿಗೆ ತುಂಬ ನೋವನ್ನುಂಟು ಮಾಡಿದೆ

‍ಲೇಖಕರು avadhi

21 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading