ಉತ್ತರಪ್ರದೇಶದ ಮುಖ್ಯಮಂತ್ರಿಗಳೇ, ನಾವು ಟಿಪ್ಪೂವನ್ನೂ ಪ್ರೀತಿಸುತ್ತೇವೆ, ಸಂತರನ್ನೂ ಗೌರವಿಸುತ್ತೇವೆ. ನಮಗೆ ಹನುಮನೂ ಬೇಕು, ಆಲಿ ಭೂತವೂ ಬೇಕು.

ಉತ್ತರಪ್ರದೇಶದ ಮುಖ್ಯಮಂತ್ರಿಗಳೇ,

ನಾವು ಟಿಪ್ಪೂವನ್ನೂ ಪ್ರೀತಿಸುತ್ತೇವೆ, ಸಂತರನ್ನೂ ಗೌರವಿಸುತ್ತೇವೆ.

ನಮಗೆ ಹನುಮನೂ ಬೇಕು, ಆಲಿ ಭೂತವೂ ಬೇಕು.

ಇನ್ನೇನು ಕೆಲವು ದಿನಗಳಲ್ಲಿ ಸಾಂತಾಕ್ಲಾಸ್ ನಮ್ಮ ಮಕ್ಕಳನ್ನು ರಂಜಿಸಲು ಮನೆ ಮನೆಗೆ ಬರಲಿದ್ದಾನೆ.

ನಿಮ್ಮ ಗೋರಕನಾಥ ಪರಂಪರೆಗೆ ನಾವು ಕದ್ರಿಯಲ್ಲಿ ಜಾಗ ಕೊಟ್ಟು ಅದನ್ನು ರಕ್ಷಿಸಿಕೊಂಡು ಬಂದಿದ್ದೇವೆ. ಹಾಗೆಯೇ ಇಲ್ಲಿ ಕಾಪಾಲಿಕರು, ಲಕುಲೀಶರು, ಸಿದ್ಧರೆಲ್ಲ ಬದುಕಿದ್ದಾರೆ.

ಬೌದ್ಧರ ಶಾಸನಗಳನ್ನು ಸನ್ನತಿಯಿಂದ ಚಿತ್ರದುರ್ಗದ ವರೆಗೆ ಉಳಿಸಿದ್ದೇವೆ.

ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳಗಳಲ್ಲಿ ಗೊಮ್ಮಟನನ್ನು ಸ್ಥಾಪಿಸಿ ಜೈನ ಧರ್ಮವನ್ನು ಪ್ರೋತ್ಸಾಹಿಸಿದ್ದೇವೆ.

ಕ್ರಿಶ್ಚಿಯನ್ ಶಾಲೆಗಳು ನಮಗೆಲ್ಲ ವಿದ್ಯೆ ನೀಡಿವೆ.

ಸಾವಿರಾರು ಮೈಲು ದೂರದ ಅರೇಬಿಯಾದಲ್ಲಿ  ಸತ್ತ ಪುಟ್ಟ ಮಗು ಅಸಗರನ ಸಾವಿಗೆ ಕನ್ನಡ ಕಣ್ಣೀರಿಟ್ಟಿದೆ.

ಎಲ್ಲರೂ ಬದುಕಲಿ ಅಂದವರು ಕನ್ನಡಿಗರು.

ನಿಮ್ಮ ರಾಜ್ಯದಿಂದಲೇ ವಲಸೆ ಬಂದ ಸಾವಿರಾರು ಜನರಿಗೆ ಬೆಂಗಳೂರು-ಮೈಸೂರು ಆಶ್ರಯ ನೀಡಿಲ್ಲವೇ.

ಈ ಸೌಹಾರ್ದ ಸಂಸ್ಕೃತಿಯನ್ನು ನಾಶಮಾಡಲು ನೀವು ಮಾಡುವ ಪ್ರಯತ್ನಕ್ಕೆ ಜಯಸಿಗದು.

‍ಲೇಖಕರು avadhi

December 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: