-ಬಸವಣ್ಣೆಪ್ಪ ಕಂಬಾರ
ಹಳವಂಡಳ
ಅವನ ನಿಟ್ಟುಸಿರೆ ಹಾಗೇ
ಬರ ಬಂದು ಬಡೆದೆಬ್ಬಿಸಿದಂತೆ
ಎಳೆಗೂಸಿನ ಅಂಗಾಲಿಗೆ ಕೆಂಡ ತಾಕಿಸಿದಂತೆ
ಸುನಾಮಿ ಹೊಕ್ಕುಳಿದ ಮೇಲಿನ ಸಂಕಟದAತೆ
ಸಿಕ್ಕಿಬಿದ್ದಿವೆ ಅರ್ಧಹುಗಿದ ರಾತ್ರಿಗಳು
ಬಣ್ಣಗೆಟ್ಟ ಗೊಂಬೆಗಳು,ಮದ್ದು ಮುಗಿದ ಕಾಡತೋಸಗಳು
ಅಸಲಿ ಪಂಚಾ೦ಗ,ಹಳೇ ದಿನದರ್ಶಿಕೆ,
ಚಿಗುರ ಒಣಗಿಸಿ ಹಣ್ಣೆಲೆ ಚಿಗುರಿಸುವ ಗಿಡಗಳು
ಕೆದರಿದ ಕೂದಲು ಅರೆಬರೆ ನಿದ್ದೆಗೆಟ್ಟು ವಿಕಲಾಂಗ ಕನಸುಗಳು
ಪೋಲಿ ಹುಡುಗನನ್ನು ಗೇಲಿ ಮಾಡಲು ಹೋಗಿ
ಫೂಲ್ ಆದ ನಿರುತ್ತರಗಳು
ಸದ್ದಿಲ್ಲದೆ ತುಟಿಯಂಚಿಗೆ ಬಂದು ಗಸ್ತು ತಿರುಗುತ್ತಿವೆ
ಚಹಾ, ಪಾಯಸ ತಿಂಡಿ ತಿನ್ನುವಾಗ ಮಧುಮೇಹಿ
ಸಂಗತಿಗಳು ಕಂಗೆಟ್ಟದ್ದು ಲೆಕ್ಕವಿಲ್ಲ
ಸನ್ನ ಹುಡುಗಿಯ ದೊಡ್ಡ ಪ್ರಾಯಕ್ಕೆ
ನೀಲಿ ಅಂಗಿ ಕಾಣಿಕೆ
ಕಿವಿಯ ಮೇಲಿನ ಕೂದಲಿನಲಿ ಬತ್ತಿಸ ರಾಗಗಳು
ಸಾಲಾಗಿ ನಿಂತು ಶಿರ ಶಿಖರವೇರುತ್ತಿವೆ ಶಿವಾ..
ಅಯ್ಯೋ ಸೈಕಲ್ ಏರಿ ವ್ಯೋಮ್ ಸಂಚರಿಸುವ
ಹರಕು ಬರಕು ಹಂಗಾಮಿ ಕನಸುಗಳನ್ನು ಕೊಲ್ಲಬಾರದಲ್ಲವೇ..?
ಮೊಲೆ ತೊಟ್ಟಿಗೆ ವಿದೇಶಿ ಮದ್ಯದ ನವಿರು ಹಾಕಿಸುವ ಟೆಂಡರಿಗೆ
ಮ೦ತ್ರಿಗಳು ಸಹಿ ಹಾಕಿದ್ದಾರೆ ಸನ್ನಿ ಲಿಯೊನಳ ಜೊತೆ ಸೇರಿ
ಹೀಗೆ ಅಪಾದ ಮಸ್ತಕ ನೋಟದ ನಡುವೆ
ಹೊರಬಿದ್ದ ನಿಟ್ಟುಸಿರಿಗೆ ರಾತ್ರಿಯೊಂದರಿ೦ದ
ತುಳಿಸಿಕೊಂದ ಚಂದಿರನ ಮೇಲಿನ ಸಿಟ್ಟನ್ನು
ಯಾರ ಮುಂದೆ ಹೇಳಬೇಕು. ಹೇಳಿ..?






0 Comments