ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವನು ಕೊಟ್ಟ ದುಪ್ಪಟಾ…' – ರೂಪಾ ಹಾಸನ್ ಬರೀತಾರೆ

ರೂಪ ಹಾಸನ


ನಮ್ಮ ಪ್ರೇರಣಾ ವಿಕಾಸ ವೇದಿಕೆಯ ಉಚಿತ ಬೇಸಿಗೆ ಶಿಬಿರದ ಒಂದು ನಿಯಮವೆಂದರೆ ಯಾವ ಮಕ್ಕಳೂ ನಮಗೆ ಯಾವ ಕಾಣಿಕೆಯನ್ನೂ ಕೊಡುವಂತಿಲ್ಲ! ಹಣದ ರೂಪದ್ದೂ ವಸ್ತುವಿನ ರೂಪದ್ದೂ ಯಾವುದೂ! ಎಲ್ಲ ಸ್ತರದ ಮಕ್ಕಳೂ ಇಲ್ಲಿಗೆ ಬರುವುದರಿಂದ ಉಳ್ಳ ಮಕ್ಕಳು ಕೊಟ್ಟರೆ, ಏನನ್ನೂ ಕೊಡಲಾಗದ ಮಕ್ಕಳಿಗೆ ಅದನ್ನು ನೋಡಿ ಇರುಸುಮುರುಸಾಗಬಾರದೆಂಬುದು ನಮ್ಮ ಉದ್ದೇಶ.
ಐದು ವರ್ಷಗಳಿಂದ ನಿರಂತರವಾಗಿ ನಮ್ಮ ಬೇಸಿಗೆ ಶಿಬಿರಕ್ಕೆ ಬರುತ್ತಿದ್ದ ನನ್ನ ಮೆಚ್ಚಿನ ಹುಡುಗನೊಬ್ಬ ಶಿಬಿರದ ಕೊನೆಯ ದಿನ ಎಲ್ಲರೂ ಹೊರಗೆ ಹೋಗುವುದನ್ನು ಕಾಯುತ್ತಾ ನಿಂತಿದ್ದ. ಹತ್ತನೇ ತರಗತಿಯ ನಂತರ ನಮ್ಮ ಶಿಬಿರದಲ್ಲಿ ಭಾಗವಹಿಸುವಂತಿಲ್ಲವಾದ್ದರಿಂದ ಬಹುಶಃ ಹೇಳಿ ಹೋಗಲು ನಿಂತಿರಬಹುದೆಂದು ಊಹಿಸಿದೆ. ಎಲ್ಲರೂ ಹೋದ ನಂತರ ಸಂಕೋಚಿಸುತ್ತಲೇ ಬಳಿ ಬಂದವನು ಪ್ಯಾಕೆಟ್ ಒಂದನ್ನು ಕೈಗಿತ್ತು ‘ಇದನ್ನ ನಿಮಗಾಗಿ ತಂದಿದೀನಿ, ತೊಗೊಳಿ ಆಂಟಿ’ ಎಂದ. ‘ನಾನು ಯಾವುದೇ ಗಿಫ್ಟ್ ತೊಗೊಳ್ಳೋದಿಲ್ಲ ಅಂತ ಗೊತ್ತಿಲ್ಲವಾ ಪ್ರದ್ಯುಮ್ನ? ಬೇಡಪ್ಪ ತೊಗೊಂಡು ಹೋಗು’ ಎಂದೆ. ಅಷ್ಟರಲ್ಲಿ ಒಳಗೆ ಬಂದ ಅವನ ತಾಯಿ ಅನುನಯದಿಂದ ‘ಬೇಡ ಅನ್ಬೇಡಿ ಪ್ಲೀಸ್ ತೊಗೋಳಿ ಮೇಡಂ. ಇದಕ್ಕಾಗಿ ನನ್ನನ್ನೂ ಕರೆದುಕೊಂಡು ಬಟ್ಟೆ ಅಂಗಡಿಯೆಲ್ಲಾ ಹುಡುಕಾಡಿ ತಂದಿದ್ದಾನೆ’ ಅಂದರು. ಅವನೂ ದೈನ್ಯದಿಂದ ನನ್ನನ್ನೇ ನೋಡುತ್ತಿದ್ದ.
ಅವರನ್ನು ನೋಯಿಸುವ ಮನಸ್ಸಾಗದೇ ಮೆಲ್ಲಗೆ ಪ್ಯಾಕೆಟ್ ಒಡೆದೆ. ಒಂದು ಅಚ್ಚ ಬಿಳಿಯ ಕಾಟನ್ ದುಪ್ಪಟಾ! ಅವನ ಅಮ್ಮ… ‘ನೀವು ಹುಡುಗೀರ ಹತ್ತಿರ ನನಗೊಂದು ಚೆನ್ನಾಗಿರೋ ಬಿಳೀ ಕಾಟನ್ ದುಪ್ಪಟಾ ಬೇಕು ಎಲ್ಲಿ ಸಿಗುತ್ತೆ ಅಂತ ಕೇಳ್ತಿದ್ದಿರಂತೆ, ಇವನು ಕೇಳಿಸಿಕೊಂಡು ಊರಿನಲ್ಲಿನ ಅಂಗಡಿಯೆಲ್ಲಾ ಹುಡುಕಿ ತಂದಿದ್ದಾನೆ’ ಎಂದರು. ಹುಡುಗಿಯರ ಹತ್ತಿರ ಕೇಳಿದ್ದು ನಿಜ. ಆದರೆ…… ಅದೆಷ್ಟು ಸೂಕ್ಷ್ಮ ಮಗು ಇದು! ನನಗಾಗಿ ಅಂಗಡಿಗಳನ್ನೆಲ್ಲಾ ಹುಡುಕಿ, ನನಗಿಷ್ಟವಾಗುವಂತಹ ಮೆತ್ತನೆ ಕಾಟನ್ ದುಪ್ಪಟಾ ಹುಡುಕಿ ತಂದಿದ್ದಾನಲ್ಲ! ಕಣ್ಣು ತುಂಬಿ ಬಂತು. ಮೂಕಳಾಗಿ ಅವನ ಕೆನ್ನೆ ತಟ್ಟಿದೆ. ಪ್ರೀತಿಯ ಋಣ ತೀರಿಸಲಾದೀತೆ?
ಇಂದಿಗೂ ಬಟ್ಟೆಯ ಬೀರು ತೆಗೆದೊಡನೆ ಆ ದುಪ್ಪಟಾ ಕಣ್ಣಿಗೆ ಬೀಳುತ್ತದೆ. ಅವನ ಪ್ರೀತಿಯಷ್ಟೇ ಅಚ್ಚ ಬಿಳಿಯದಾದ ದುಪ್ಪಟಾವನ್ನು ಮೃದುವಾಗಿ ನೇವರಿಸುತ್ತೇನೆ!
 
 

‍ಲೇಖಕರು G

23 September, 2013

5 Comments

  1. Anonymous

    odi kannu haniguuditu. intaha preethi padeda neevu adrushtavantaru!

  2. Chalam

    ನಾವು ಅದೇ ಹಾಸನದಲ್ಲಿದ್ದೀವಿ……ಯಾವ ಪುರುಷಾರ್ಥಕ್ಕೆ.ಅನ್ನುವಷ್ಟು ಆಕ್ಟೀವ್‌ ಆಗಿದ್ದೀರಿ..ಧನ್ಯವಾಧಗಳು.

    • Anonymous

      ರೂಪ ಮೇಡಂ ಇರುವ ಹಾಸನದಲ್ಲಿ ನಾನಿದ್ದಿದ್ದರೆ ಅವರ ಜೊತೆಗೇ ಕೆಲಸದಲ್ಲಿ ಸೇರಿಕೊಳ್ತಿದ್ದೆ… ನಿಜಕ್ಕೂ ಅವರು great! ಒಂದು ಭೇಟಿಯಲ್ಲೇ ಅವರ ಫ್ಯಾನ್ ಆಗಿಬಿಟ್ಟೆ!
      ಮಧುರ.ಕೆ

  3. ಜೆ.ವಿ.ಕಾರ್ಲೊ, ಹಾಸನ

    ಗಿಫ್ಟ್ ಅನ್ನೋದೊಂದು ಫಾರ್ಮಾಲಿಟಿಯಾದರೆ, ಇದು..

  4. Anonymous

    wonderful!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading