ಅವಧಿ recommends ಅಭಿಜ್ಞಾನ..


ಅಭಿಜ್ಞಾನ – ರಂಗ ಅನ್ವೇಷಣಾ ತಂಡ

ಅಭಿಜ್ಞಾನ – ರಂಗ ಅನ್ವೇಷಣಾ ತಂಡವು ಭಾರತೀಯ ರಂಗಭೂಮಿಯ ಸಾಂಪ್ರದಾಯಿಕ ಮತ್ತು ಆಧುನಿಕ ಅಭಿವ್ಯಕ್ತಿ ಕ್ರಮಗಳ ಸೃಷ್ಟಿಶೀಲ ಅನ್ವೇಷಣೆಯತ್ತ ಹೊರಟಿದೆ. ಭಾರತೀಯ ಸಾಹಿತ್ಯ ಮತ್ತು ರಂಗಕೃತಿಗಳ ಪುನರಧ್ಯಯನ, ಪ್ರಾಚೀನ ಶಾಬ್ದಿಕ ರಚನೆಗಳನ್ನು ದೃಶ್ಯ ಪರಿಕಲ್ಪನೆಗೆ ಒಳಪಡಿಸುವುದು, ವಿಶಿಷ್ಟ ರಂಗಪ್ರಯೋಗಗಳ ಹಾಗೂ ರಂಗಶೈಲಿಗಳ ಸಂಶೋಧನಾತ್ಮಕ ಅಧ್ಯಯನ ಮತ್ತು ಅಭಿನಯ, ಭಾರತೀಯ ರಂಗವಿಮರ್ಶೆಯ ಮಾನದಂಡಗಳ ಪುನರ್ಪರಿಶೀಲನೆ ಇವು ಅಭಿಜ್ಞಾನದ ಪ್ರಮುಖ ಗುರಿಗಳು.
ಸಿದ್ಧ ಮಾದರಿಗಳನ್ನು ಅನುಸರಿಸದೆ ಹೊಸ ಅಭಿನಯದ ರೀತಿಗಳನ್ನೂ ಮತ್ತು ಹೊಸ ರಂಗ ಪಾಠ್ಯಗಳನ್ನೂ ಹುಡುಕುತ್ತಾ ಹೊರಟಿದ್ದೇವೆ. ವೇದದಲ್ಲಿಯೇ ಭಾರತೀಯ ರಂಗಭೂಮಿಯ ಮೂಲಗಳನ್ನು ಹಲವು ದೃಷ್ಟಿಕೋನಗಳಿಂದ ಗುರುತಿಸಲಾಗಿದೆ. ನಾವು ವೇದದ ಸೂಕ್ತಗಳನ್ನೇ ರಂಗಕ್ಕೆ ಅಳವಡಿಸುವ ಹಾಗೂ ರಂಗದ ಮುಖಾಂತರಅರ್ಥೈಸುವ ಹೊಳಹುಗಳನ್ನು ಹೊತ್ತಿದ್ದೇವೆ. ಈ ದಿಸೆಯಲ್ಲಿ ಅಭಿಜ್ಞಾನವು ಕೈಗೆತ್ತಿಕೊಂಡ ಮೊದಲ ಅನ್ವೇಷಣೆ – ‘ಪುರುಷಸೂಕ್ತ’
ಪುರುಷಸೂಕ್ತ: ಪುರುಷಸೂಕ್ತವು ಎಲ್ಲ ವೇದಗಳಲ್ಲಿಯೂ ಕಂಡುಬರುವ, ಎಲ್ಲ ಕರ್ಮಗಳಲ್ಲಿಯೂ ಬಳಸುವ ಪ್ರಸಿದ್ಧ ಸೂಕ್ತ. ಎಲ್ಲದರೊಳಗಿದ್ದೂ ಎಲ್ಲವನ್ನೂ ಮೀರಿದ್ದು ಪರಮವಸ್ತು. ಅದರೊಂದು ಭಾಗದಿಂದ ಕಾಣುವ ಈ ಜಗತ್ತು ಹಲವು ಹಂತದಲ್ಲಿ ಸೃಷ್ಟಿಗೊಳ್ಳುತ್ತಲೇ ಇದೆ. ಆದಿಸೃಷ್ಟಿಯಿಂದ ಹಿಡಿದು ಇಗೋ ಇವತ್ತಿನ ಈ ಸೃಷ್ಟಿಯವರೆಗಿನ ನಿರಂತರವಾದ, ಜೀವ, ಜಗತ್ತು, ರೂಪ, ನಾಮ, ಜ್ಞಾನಗಳ ಸೃಷ್ಟಿಯ ಸುಂದರವಾದ ಅಭಿವ್ಯಕ್ತಿಯೇ ಪುರುಷಸೂಕ್ತ.
ಕ್ರಮ : ಕಲರಿಪಯಟ್ಟಿನಿಂದ ಛಾವ್ ವರೆಗಿನ ಪಾರಂಪರಿಕ ಕಲೆಗಳನ್ನು ಆಂಗಿಕದಲ್ಲಿಯೂ, ಸಹಜ ಮತ್ತು ಕೃತಕ ಶಬ್ಧ ವಿನ್ಯಾಸ, ಘನಪಾಠಾದಿ ಮಂತ್ರೋಚ್ಚಾರಣ ವಿಧಾನಗಳನ್ನು ವಾಚಿಕದಲ್ಲಿಯೂ, ಕೂಡಿಯಾಟ್ಟಂನಂತಹ ಪರಂಪರೆಯನ್ನು ಸಾತ್ವಿಕದಲ್ಲಿಯೂ, ಮುಖವಾಡ, ಮಲ್ಲಕಂಬದಂತಹ ಪರಿಕರಗಳನ್ನು ಆಹಾರ್ಯದಲ್ಲಿಯೂ ಆಧುನಿಕ ಲಯವಿನ್ಯಾಸಗಳ ಯೋಗದಲ್ಲಿ ತಂದಿರುವ ಸೂಕ್ತ ಅನ್ವೇಷಣೆ ಇದು.
ವಿನ್ಯಾಸ ಮತ್ತು ನಿರ್ದೇಶನ ಜೋಸೆಫ್ ಜಾನ್:
ಕೇರಳದ ಸಾಂಪ್ರದಾಯಿಕ ಜಾನಪದ ಕಲೆಗಳ ಸಮೃದ್ಧಿಯ ಅಲಪಿ ಜಿಲ್ಲೆಯ ಕುಟ್ಟನಾಡು ಇವರ ಹುಟ್ಟುನಾಡು. ತಂದೆಯವರ ವೃತ್ತಿರಂಗಭೂಮಿಯ ನೆರಳಿನಲ್ಲಿ ಬಾಲ್ಯದಲ್ಲಿಯೇ ರಂಗಭೂಮಿಗೆ ಪಾದರ್ಪಣೆ. ತಿರುವನಂತಪುರದ ಅಭಿನಯ ರಂಗ ಸಂಶೋಧನಾ ಕೇಮದ್ರದಲ್ಲಿ, ಹೆಗ್ಗೋಡಿನ ನೀನಾಸಂನಲ್ಲಿ ತ್ರಿಶ್ಶೂರಿನ ಕೇರಳ ಕಲಾ ಮಂಡಲದಲ್ಲಿ, ಡೆಹರಾಡೂನಿನ ಸಂಚಾರ್ ಬೊಂಬೆಯಾಟದ ಘಟಕದಲ್ಲಿ ಅಧ್ಯಯನ ಮತ್ತು ಅಭ್ಯಾಸ. ಸಮಕಾಲೀನ ಅಭಿನಯ ಅನ್ವೇಷಕರಲ್ಲಿ ರಂಗಭೂಮಿ, ಕಿರುತೆರೆ, ಕಿರುಚಿತ್ರಗಳ ಅಭಿನಯದಲ್ಲಿ ನಿರ್ದೇಶನ ವಿನ್ಯಾಸಗಳಲಿ ವಿಶಿಷ್ಟ ಛಾಪು ಮೂಡಿಸಿರುವವರು.

ಪರಿಕಲ್ಪನೆ ಡಾ. ಜೆ. ಶ್ರೀನಿವಾಸ ಮೂರ್ತಿ :

ಸಾಂಪ್ರದಾಯಿಕ ಮತ್ತು ಆಧುನಿಕ ರೀತಿಗಳಲ್ಲಿ ಸಂಸ್ಕೃತದ ಶಾಸ್ತ್ರ ಮತ್ತು ಕಾವ್ಯಗಳನ್ನು ಅಭ್ಯಾಸ ಮಾಡಿ ಕನ್ನಡ ಸಾಹಿತ್ಯದಲ್ಲಿ ಉತ್ಕಟ ಆಸಕ್ತಿಯನ್ನು ಹೊಂದಿದವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ಶ್ರೇಷ್ಟ ರಂಗ ಗುರುಗಳಲ್ಲಿ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದವರು. ಭಾರತೀಯ ರಂಗಮೀಮಾಂಸೆ ಮತ್ತು ರಂಗವಿಮರ್ಶೆಗಳನ್ನು ಸತತವಾಗಿ ಅಭ್ಯಾಸ ಮಾಡುತ್ತಿರುವ ಇವರು ಭಾರತೀಯ ಧರ್ಮ ಮತ್ತು ದರ್ಶನಗಳ ಮುಖಾಂತರ ಅಭಿನಯ ಸಿದ್ಧಾಂತದ ಅನ್ವೇಷಣೆಯಲ್ಲಿದ್ದಾರೆ. ಹಾಗೂ ತಮ್ಮ ಹೊಳಹುಗಳನ್ನು ಜಗತ್ತಿನ ಹಲವೆಡೆ ಪ್ರಬಂಧ ಮಂಡನೆ, ಭಾಷಣ, ಸಂವಾದಗಳ ಮೂಲಕ ಹಂಚಿಕೊಂಡಿದ್ದಾರೆ. ಇದುವರೆಗೂ ಶಾಬ್ಧಿಕ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿದ್ದ ಪುರುಷಸೂಕ್ತಕ್ಕೆ ದೃಶ್ಯ ಮಾಧ್ಯಮದ ಆಯಾಮವೊಂದನ್ನು ಸೃಷ್ಟಿಸುವ ಪರಿಕಲ್ಪನೆ ಮಾಡಿದವರು ಜೆ ಶ್ರೀನಿವಾಸ ಮೂರ್ತಿಯವರು. ಇದನ್ನು ಸಾಕಾರಗೊಳಿಸುವ ಪ್ರಯತ್ನ ಅಭಿಜ್ಞಾನದ್ದು

Abhijnana – Theatre Research Group
Abhijnana – Theatre Research Group was started to make a move towards a creative exploration of traditional and contemporary  acting methods of Indian Theatre. One of its objective is to re-look into the ancient Indian texts with a new perspective  in order to explore the visual dimensions of strictly verbal texts. Without clinging to the set patterns, we wish to proceed in search of new acting methods and new theatre texts.
Another important task is to come up with unique theatrical ideas and also study the theatre styles of outstanding directors and their theatrical productions.   Abhijnana feels the dire need for re examining the yardsticks/measures/standards of Indian theories of dramatic criticism. These are a few objectives identified to be achieved by Abhijnana.
The origin of drama has been identified through different perspectives. One among them is Vedic origin.We wish to take a step further and explore the theatrical  dimensions of Vedic Suktas by adding a visual impact to them. The first experimentation in this direction is the theatrical Presentation of ‘Purushasukta’.
Purushasukta :
It is the most popular hymn found in all Vedas and used in all (vedic) performances. The supreme being is all pervasive and exists beyond that. This world which is seen as a part of it and is constantly under creative mode at different levels.  Purusha sukta is a beautiful expression of this  continuous process  starting from the first level of creation till the present moment, describing the creation of this world along with its life, form, identity and knowledge.
Method:
The present enactment tries to bring the ‘Angika’ through the use of traditional art forms starting from Kalaripayyat to Chaav ; ‘Vacika; through different natural and creative sounds and use of traditional vedic chanting methods like Ghanapata and others;  ‘Satvika’ through traditional Kudiyattam style, ‘Aharya ‘ through the use of masks and Mallakamba to make a  suitable into the contemporary style and rhythm.
Conception – Dr J Sreenivasa Murthy :
A unique personality with a blend of traditional learning and modern learning is an academician with serious interest for literature in general and Sanskrit, Kannada in particular. His has the rich experience of learning under different stalwarts in the field of theatre for more than four decades. His areas of Research include Indian aesthetics and Theatre criticism At present he is contemplating on understanding the theory of acting through the routes of Indian Philosophy and Dharma. He has shared  his Research findings with people from varied backgrounds in India and abbroad.
Design and Direction – Joseph John :
Kuttanaadu , the glorious land of folk traditional art is the birth land of Joseph John.  He stepped into the theatre in his childhood under the influence of his father who was active in professional theatre. Joseph’s theatre  skills  are enriched by his schools at Abhinaya Theatre Research Centre at Trivandrum, Ninasam at Heggodu, Kerala Kala Mandalam at Trishur and  Sanchar Puppet Theatre group at Dehradun. He has been consistently engaged in Theatre Research. He has been working on contemporary acting  methods through his theatrical productions, short films, Tele films and created his own imprint in these areas.
Choreography :
This piece of Art is choreographed by Charan.C.S, a creative stage artist learnt movement arts from ‘Attakalari centre for movement arts’, theatre arts from ‘NInasam’, Heggodu and  trained in ‘Hata Yoga’ at ‘A 1000 Yoga’ at Bangalore.  A Choreographer and performer at many National and international  dance and theatre festivals. Performing in the play ‘Mid summer night’s dream directed by Tim Sippel, gave shows in  as many as 48 cities in U S A and Canada,   He had the opportunity to be a Choreographer for drama productions of distinguished Directors and the present performance holds a mirror to his calibre.

‍ಲೇಖಕರು G

May 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: