ಅವತ್ತು ಇನ್ನಿಲ್ಲದಂತೆ ಕಣ್ಣೀರಿಟ್ಟ ಆ ಹುಡುಗಿಗೆ..

question markಅವತ್ತು  ಪುಸ್ತಕ ಬಿಡುಗಡೆ ದಿನ
ಎಲ್ಲರೂ ತುಟಿ ಕಚ್ಚಿ ಅಳು ತಡೆದಿದ್ದರು. ಆದರೆ ಆ ಹುಡುಗಿ ಒಬ್ಬಳಿದ್ದಳು. ಸಭಾಂಗಣದ ಕೊನೆಯ ಸಾಲಿನಲ್ಲಿ. ಇಡೀ ಕಾರ್ಯಕ್ರಮದುದ್ದಕ್ಕೂ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು.
ಆ ದಿನ ಅವಧಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ದಿನ. ಎಲ್ಲರಂತಲ್ಲದ ಪುಸ್ತಕ ಅದು -ಹೇಳತೇವ ಕೇಳ. ಅದರ ಪ್ರತೀ ಪುಟದಲ್ಲೂ ನೋವಿದೆ, ತಳಮಳವಿದೆ, ಉಕ್ಕುವ ಆಕ್ರೋಶವಿದೆ, ಸಂಕಟವಿದೆ, ಕಣ್ಣೀರಿದೆ, ಎದ್ದು ನಿಲ್ಲಬೇಕೆಂಬ ಆತ್ಮ ವಿಶ್ವಾಸವಿದೆ.1467186_593833287357171_1207427488_n
ದೆಹಲಿಯಲ್ಲಿ ನಿರ್ಭಯಾ ಮೇಲಿನ ಅತ್ಯಾಚಾರಕ್ಕೆ ಪ್ರತಿಭಟನೆಯಾಗಿ ಅವಧಿಗೆ ಬಂದ ಸಾಲು ಸಾಲು ಲೇಖನಗಳನ್ನು ಹೆಕ್ಕಿ ರೂಪಿಸಿದ ಪುಸ್ತಕ ಅದು. ಅಂತಹ ಪುಸ್ತಕದ ಬಿಡುಗಡೆ ಕಣ್ಣೀರಿಗೆ ಕಾರಣವಾಗಿ ಹೋಯಿತು.
ಹೌದು, ಆ ದಿನ ಇನ್ನಿಲ್ಲದಂತೆ ಬಿಕ್ಕಿದ ಹುಡುಗಿಗೆ ಕಾರ್ಯಕ್ರಮದ ಕೊನೆಯಲ್ಲಿ ಹೇಳತೇವ ಪುಸ್ತಕ ನೀಡಲಾಯಿತು. ಆದರೆ ಆ ಪುಸ್ತಕಕ್ಕಿಂತ ಹೆಚ್ಚಿನದನ್ನು ಆಕೆಯ ಕಣ್ಣೀರು ಆ ವೇಳೆಗೆ ಹೇಳಿಯಾಗಿತ್ತು.
ಆ ದಿನ ಇನ್ನಿಲ್ಲದಂತೆ ಅತ್ತ ಆ ಹುಡುಗಿಗೆ ಈ ಫೋಟೋ ಆಲ್ಬಮ್- ಬೇಂದ್ರೆಯವರ ಈ ಸಾಲುಗಳೊಂದಿಗೆ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?

ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

cry1
cry2
cry3
cry5
cry6
cry7
cry9
cry10
cry11
cry4
cry8

‍ಲೇಖಕರು Avadhi

November 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vihiwdgi

    Eegantu dinaalu aarooa pratyaropagale agiddu hennina kannina koneya haniya bagge yarigu aasthe illavagide Bendre Ajja ivattina ee hennumakkalige helalendu baredantide ee kavana nanagu bartide bikku sakinnu hecchige helalare helaten kelu ennalare

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    ಅಬ್ಬಾ…ಕಣ್ಣೀರೇ, ಶರಣು..!
    ಹ್ಯಾಟ್ಸಾಫ್ ಅವಧಿ..ಈ ಕಣ್ಣೀರಿಗೆ, ಅದರ ರೀತಿಗೆ,
    ರುದ್ರವೀಣೆಯ ನಾದದಂಥಾ ಅದರ ಪ್ರೀತಿಗೆ..!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: