ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಳಿಯನಿಗೆ ಬುಗರಿ ಆಡಲು ಕಲಿಸಿದ್ದು

ಬುಗುರಿ ತಿರುಗಿತು

ರವಿ ಹೃದಯ

“ಮಾಮ ಬುಗುರಿ ಆಡೋಣ” ಅಂದನು ನನ್ನ ಅಕ್ಕನ ಮಗ. ಹೆಸರು ರುಚಿತ್.ಈ ಇವನ ಹೆಸರು,ಅದರ ಅರ್ಥ,ಇದುವರೆಗೂ ನಾನು ತಿಳಿದುಕೊಳ್ಳಲು ಹೋಗಿಲ್ಲ.ಹೋಗಬೇಕು ಎಂದೆಣಿಸಲು… ಇಲ್ಲವೋ?ಅಥವಾ ತಿಳಿಯುವ ಕುತೂಹಲ ಆ ಹೆಸರಲಿಲ್ಲವೊ?ಹ್ಮ್..ಹ್ಮ್..ಗೊತ್ತಿಲ್ಲ.
ನಾವು ಬುಗುರಿ ಆಡುತಿದ್ದೆವು.”ಮಾಮಾ ನಂಗೆ ಬುಗುರಿ ಆಡಿಸೋಕೆ ಬರೊಲ್ಲ,ಕಲಿಸಿಕೊಡ್ತೀಯ”
ಬಹಳ ನಾಜೂಕಲ್ಲಿ ಕೇಳಿದ.”ಅಯ್ಯೋ ಬುಗ್ರಿನಾ..ತಂಬಾರೊ ಇಲ್ಲಿ..ಗಿರ ಗಿರ ತಿರ್ಗಿಸ್ಬಿಡ್ತೀನಿ ನೋಡು”ಎಂದು ಅವನ ಕೈಯಲಿದ್ದ ಬುಗುರಿ,ಚಾಟಿಯನ್ನು,ಅವನು ಕೊಡುವ ಮುಂಚೆಯೆ ಕಸಿದು ಕೊಂಡೆ.
ಬುಗುರಿ ತಿರುಗಲಿಲ್ಲ.ಮತ್ತೆ ಬುಗುರಿ ತಿರುಗಲಿಲ್ಲ.!.ಹಿ…ಹಿ…ಹಿ..ನಕ್ಕ ನನ್ನ ಅಳಿಯ.ಬುಗುರಿಯ ಆಡದೆ ಅದೆಷ್ಟೋ ವರುಷಗಳು ಸವೆದಿರಬಹುದು.ಹೀಗೆ ನನ್ನ ಆ ಬಾಲ್ಯದ ದಿನಗಳ ನೆನಪು,ನನ್ನ ಅಲ್ಲಿಂದಲೆ ಕೂಗಿ ಕರೆಯಿತು.ತಿರುಗಿದೆ,ಮತ್ತೆ ತಿರುಗಿದೆ..ಬಾಲ್ಯದಲಿ ತಿರುಗಿಸಿದ ಬುಗುರಿಯ ಕಡೆ.

ಬುಗುರಿ ತಿರುಗುತಿತ್ತು.ನಾನು ನನ್ನ ಚಡ್ಡಿ,ಅಲ್ಲಲ್ಲಿ ತೂತು ಬಿದ್ದ ಅಂಗಿ.ಜೊತೆಗೆ ನನ್ನ ಗೆಳೆಯರು.ಬುಗುರಿ ಆಡುತಿದ್ದೆವು.ಆಟದ ಪರಿಚಯವನ್ನು ನನ್ನೊಬ್ಬ ಚಾಲಾಕಿ ಗೆಳೆಯ ನನಗೆ ಪರಿಚಯಿಸಿದ.ಅಲ್ಲಿಯ ವರೆಗೂ ಬುಗುರಿ ಆಟದ ನಿಯಮಗಳು ನನಗೆ ತಿಳಿದಿರಲಿಲ್ಲ.
ನೋಡು ಬುಗುರಿ ಆಟ ಅಂದ್ರೆ ಸುಮ್ನೆ ಅಲ್ಲ. ನೀನು ಬುಗುರಿ ಏನೋ.. ತಿರುಗ್ಸೋದು ಕಲ್ತಿದ್ದಿಯ.ಆದರೆ..
“ಏನು ಆದರೆ”?ಅವನ ಮಾತಿಗೆ ಅಡ್ಡ ಹಾಕಿ ನುಡಿದೆ.ಸ್ವಲ್ಪ ತಡ್ಕೊ ಹೇಳ್ತೀನಿ,ಹೇಳೋವಾಗ ಕೇಳ್ಬೇಕು,ಮಾತಾಡಬಾರ್ದು. ತಾಂತ್ರಿಕವಾಗಿ ಪಳಗಿದವನಂತೆ ಅಂದ.ಅವ್ನು ನೋಡೋಕೆ ಸನ್ಣಿಗ.ನಸುಕಪ್ಪು ಬಣ್ಣದವ.ಮೋಟು ಚಡ್ಡಿ.ದೊಗಲ, ಅವರಣ್ಣನ ಶರ್ಟು. ಹಾಕಿಕೊಂಡು ಎಲ್ಲವನು ತಿಳಿದು ಕೊಂಡವನಂತೆ,ನಮ್ಮ ಆಟದ ಉಸ್ತುವಾರಿ ವಹಿಸುತಿದ್ದ.
ನೋಡು ಈ ಆಟದ ಹೆಸರು ಗುನ್ನ.ಆಟದ ಮೊದಲಿಗೆ ಎಲ್ಲರೂ ಬುಗುರಿಗಳನ್ನು ತಿರುಗಿಸಬೇಕು.ತಿರುಗುತ್ತಿರುವ ಬುಗುರಿಯನ್ನು ಚಾಟಿಯಲ್ಲಿ ತಂದು ಅಂಗೈಯಲ್ಲಿ ತಿರುಗುವಂತೆ ಮಾಡಬೇಕು.ಅಂಗೈಯಲ್ಲಿ ತಿರುಗುತ್ತಿರುವ ಯಾರಾ ಬುಗುರಿ ಬೇಗ ನೆಲ್ಲಕ್ಕೆ ಬೀಳುತ್ತದೋ ಅವರು ಗುನ್ನಕ್ಕೆ ರೆಡಿಯಾಗಬೇಕು.ಇದು ಗುನ್ನದ ಆಟದ ಅರ್ಹತೆಗೆ ಬೇಕಾದ ಮೊದಲ ಎಂಟ್ರೀ.ಎಂದು ಆಟದ ತಾಂತ್ರಿಕ ನಿಯಮವನ್ನು ಬಹಳ ಕುತೂಹಲವಾಗಿ ಹೇಳುತ್ತಿದ್ದ.ಹಾಗಾಗೆ ಅವನಿಗೆ ನಮ್ಮ ಆಟದ ಉಸ್ತುವಾರಿ ದೊರೆಯುತಿತ್ತು.
“ಮಾಮ ಬುಗುರಿ ತಿರುಗ್ತು” ನನ್ನ ಅಳಿಯ ನನ್ನ ಜಗ್ಗಿ ಹೇಳಿದ.ಬುಗುರಿಯನ್ನು ಅವನೆ ಆಡಿಸಿದ್ದ. ನನ್ನನ್ನು ಮತ್ತೆ ಅವನ ಬಾಲ್ಯಕ್ಕೆ ಕರೆದ.ಬಾಲ್ಯದಲಿ ನಾವು ತಿಳಿದುಕೊಂಡ,ಆಡಿದ,ಬಿದ್ದು ಬುಗುಟು ಬರಿಸಿಕೊಂಡ,ಸೈಕಲ್ ಹಾಫ್ ಪೆಡಲ್ ಹೊಡೆಯಲು ಬಾರದೆ ಮೋರಿಗೆ ಬಿದ್ದ.ಮತ್ತಲವು ನೆನಪುಗಳು ಆ ಕ್ಷಣ ಕಣ್ಣ ಪರದೆಯ ಮುಂದೆ ಹಾಗೆ ಹಾದು ಹೋದವು.ನನ್ನ ಏಳು ವರ್ಷದ ಅಳಿಯ ಆಡಿಸಿದ ಬುಗುರಿ ತಿರುಗುತ್ತಲೆ ಇತ್ತು.ಗುನ್ನ ಆಡಿದಾಗ ನನ್ನ ವಯಸ್ಸು ಎಂಟು.
 

‍ಲೇಖಕರು G

6 October, 2014

3 Comments

  1. Prabhakar M. Nimbargi

    We can’t repeat, as elders, whatever we did in childhood, the reason being the present lack of purity of mind & innocence. A good attempt at revisiting childhood!

  2. Shivu K

    ನವೀನ್ ಪವಾರ್: ನಿಮ್ಮ ಬುಗರಿ ಲೇಖನ ಓದಿದ ಮೇಲೆ ನಿಮ್ಮ ಪ್ರಯತ್ನಕ್ಕೆ ಮೊದಲಿಗೆ ಅಭಿನಂದನೆಗಳು. ಓದಿಸಿಕೊಂಡು ಹೋಗುತ್ತದೆ ಹಾಗೆ ಬೇಗ ಮುಗಿಯುತ್ತದೆ. ಬುಗರಿ ಆಡುವ ಬಗ್ಗೆ ಅದರ ಆಟದ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ವಿಭಿನ್ನ ಅನುಭವವಿರುತ್ತದೆ. ಹಾಗೆ ನಿಮ್ಮ ಅನುಭವವನ್ನು ಇನ್ನಷ್ಟು ವಿಸ್ತಾರವಾಗಿ ಬರೆಯಬಹುದಿತ್ತು ಎನಿಸಿತು. ಗುರಿಯಿಟ್ಟು ಗುನ್ನ ಹೊಡೆಯುವ ಬಗೆ, ಗುನ್ನ ಹೊಡದ ಮೇಲೆ ಎಷ್ಟು ಆಳಕ್ಕೆ ಗುನ್ನ ಹೋಗಿದೆ ಎನ್ನುವ ಅಳೆತೆಯ ಲೆಕ್ಕದಲ್ಲಿ ಹೊಡದವನ ಸಾಧನೆ ಬಗ್ಗೆ, ಬುಗರಿಗೆ ದಾರವನ್ನು ಯಾವ ವಿಧಾನ ಸುತ್ತಬೇಕು, ಎಷ್ಟು ಸುತ್ತಬೇಕು, ಕೈಯಲ್ಲಿ ಹೇಗೆ ಸರಿಯಾದ ಹಿಡಿತದಲ್ಲಿ ಹಿಡಿಯಬೇಕು. ಜೊತೆಗೆ ಆಟದ ಬಗೆಗೆ ಇನ್ನಷ್ಟು ರೂಲ್ಸುಗಳು, ಹೀಗೆ ಬೇಕಾದಷ್ಟು ಬರೆಯಬಹುದು ಅನಿಸಿತು…ಮುಂದಿನ ಬರವಣಿಗೆಯಲ್ಲಿ ಇಂಥ ಸೂಕ್ಷ್ಮತೆಗಳಿದ್ದರೆ ಓದುಗನಾಗಿ ನಾನು ಇಷ್ಟಪಡುತ್ತೇನೆ…keep it up…

  3. naveen pawar

    ಶಿವು ಸರ್ ನಿಮ್ಮ ಸಲಹೆಗೆ ಧನ್ಯವಾದಗಳು.ನಿಮ್ಮ ಸಲಹೆ ನಿಜಕ್ಕೂ ತರ್ಕಬದ್ದವಾಗಿದೆ. ನನ್ನ ಮುಂದಿನ ಬರವಣಿಗೆಯಲ್ಲಿ ಆ ರೀತಿಯಾಗಿ ಅಳವಡಿಸಿಕೊಳ್ಳಲು ಒಳ್ಳೆಯ ಮಾರ್ಗದರ್ಶನ ದೊರೆತಂತಾಯಿತು.ಇದೆ ರೀತಿಯ ಟಿಪ್ಸ್‌ಗಳನ್ನು ನಿಮ್ಮಿಂದ ನಿರೀಕ್ಷಿಸುತಿದ್ದೇನೆ.ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading