ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲೇ ಸಿಕ್ಕರು ಅಡಿಗರು..

ಅಲ್ಲೇ ಸಿಕ್ಕಿದ್ದು ಅಡಿಗರ ಅನೇಕ ಪದ್ಯಗಳ ಕುರುಹು

 

ಸಂದೀಪ್ ಈಶಾನ್ಯ

ಗೋಪಾಲಕೃಷ್ಣ ಅಡಿಗರ “ಹಿಮಗಿರಿಯ ಕಂದರ” ಪದ್ಯವನ್ನು ನಾಟಕವಾಗಿ ಅಭಿನಯಿಸಿ ನಾಲ್ಕೈದು ವರ್ಷಗಳೇ ಕಳೆದುಹೋಯಿತು.

ನಗರ ಜೀವನ, ಆಫೀಸು, ಮಣಭಾರದ ಫೈಲುಗಳು, ಟ್ರಾಫಿಕ್ಕು ಸೇರಿದಂತೆ ಅಸಂಖ್ಯ ಆಧುನಿಕ ತಲೆನೋವುಗಳಿಂದ ಬಳಲಿ ಹೊಸ ಲೋಕದ ಕನಸು ಕಾಣುವ ಹಿಮಗಿರಿಯ ಕಂದರದ ನಾಯಕ ಇಂದಿಗೂ ನನ್ನೊಳಗೆ ಬೆಚ್ಚಗೆ ಅದೇ ಧಾಟಿಯಲ್ಲಿ ಕುಳಿತ್ತಿದ್ದಾನೆ.

ಅವನ ಪ್ರಭಾವವೋ ಅಥವಾ ಅಡಿಗರ ಮೇಲಿನ ಅಭಿಮಾನವೊ ಹೀಗೆ ಕೆಲ ದಿನಗಳ ಹಿಂದೆ ಬ್ಯಾಗಿಗೆರಡು ಬಟ್ಟೆ ತೂರಿಸಿಕೊಂಡು ಸೀದಾ ಅಡಿಗರನ್ನೇ ಹುಡುಕಿ ಅವರ ಮನೆಗೆ ಹೊರಟು ಹೋಗಿದ್ದೆವು ನಾವು ಮೂವರು ಗೆಳೆಯರು… ಅಲ್ಲೇ ಸಿಕ್ಕಿದ್ದು ಅಡಿಗರ ಅನೇಕ ಪದ್ಯಗಳ ಕುರುಹು.

ಅವರ ಶಾಲಾ ದಿನಗಳಲ್ಲಿಯೇ ಬರೆದ ಅವರ ಕೈಬರವಣಿಗೆಯಲ್ಲಿರುವ ಶ್ರೇಷ್ಠ ಪದ್ಯಗಳು ಹಾಗೂ ಅವರ ನೆಚ್ಚಿನ ಈ ವ್ಯಾಸಪೀಠ

 

13631676_911054435670028_1893637445444075236_n

‍ಲೇಖಕರು admin

8 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading