ಅಲ್ಲಿಯವರೆಗೂ, ‘ಜೈ ಕನ್ನಡ ಭುವನೇಶ್ವರಿ!’

boluvar

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಥೆ, ಕಾದಂಬರಿಕಾರ ಬೊಳುವಾರು ಮಹತ್ವದ ವಿಷಯವೊಂದರ ಮೇಲೆ ಇಲ್ಲಿ ಬೆಳಕು ಬೀರಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಲ್ಲ ಎನ್ನುವ ಸಂಗತಿಯ ಮೇಲೆ ಚರ್ಚೆ ನಡೆಯಬೇಕಿದೆ

 

ಮತ್ತದೇ ‘ಮಾತೃಭಾಷೆ’ ಯ ಭಾವುಕ ಮಾತು!

‘ಮಕ್ಕಳು ಮಾತೃಭಾಷೆಯಲ್ಲಿ ಕಲಿತರೆ ಮಾತ್ರ ಉದ್ಧಾರವಾಗುತ್ತಾರೆ’
– ಎಲ್ಲ ಶಿಕ್ಷಣ ತಜ್ಹರು ಹೇಳುವುದೂ ಇದನ್ನೇ!

peacock paintಭಾಷಾವಾರು ಪ್ರಾಂತ್ರ್ಯವಾಗುವುದಕ್ಕಿಂತ ಹಿಂದಿನಿಂದಲೂ ಕರ್ನಾಟಕದಲ್ಲಿ ಬದುಕುತ್ತಿರುವ ಶೇ. ೩೦ರಷ್ಟು ಇರುವ ಇಂಗ್ಲಿಷ್, ಹಿಂದಿ, ಗುಜರಾಥಿ, ಮರಾಟಿ, ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಬ್ಯಾರಿ, ಕೊಡವ ಇತ್ಯಾದಿ ಮಾತೃಭಾಷಿಕರೂ ಹೇಳುವುದು ಇದನ್ನೇ!!

ತಮಾಷೆಯೆಂದರೆ,
ಕನ್ನಡೇತರ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವವರು, ಇದುವರೆಗೆ
ಎಲ್ಲ ನ್ಯಾಯಾಲಯಗಳಲ್ಲೂ ಕನ್ನಡವನ್ನು ಸೋಲಿಸಲು
ಬಳಸುತ್ತಿರುವುದೂ ಇದನ್ನೇ!!!

ಯಾವ ರೀತಿಯಲ್ಲಿ ಹಿಂದಿ ಭಾಷೆಯು ನಮ್ಮ ರಾಷ್ಟ್ರದ ಮಾತೃ/ರಾಷ್ಟ್ರಭಾಷೆಯಲ್ಲವೋ
ಅಂತೆಯೇ ಕನ್ನಡ ಭಾಷೆಯು ಕರ್ನಾಟಕ ರಾಜ್ಯದ ಮಾತೃಭಾಷೆಯಲ್ಲ.

ಕನ್ನಡ ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ’ಮಾತೃಬಾಷೆ’ಯನ್ನಾಗಿ
ಕರ್ನಾಟಕ ರಾಜ್ಯಪತ್ರದಲ್ಲಿ [ಗಜೆಟ್] ಇದುವರೆಗೆ ದಾಖಲಿಸಿಲ್ಲ.
ಹಾಗೆ ದಾಖಲಿಸಲು ಸಂವಿಧಾನದಲ್ಲಿ ಅವಕಾಶವೂ ಇಲ್ಲ.
ಕನ್ನಡ ಭಾಷೆಯು ಕರ್ನಾಟಕದ ’ಆಡಳಿತ ಭಾಷೆ’ಯೆಂದು ಅಧಿಕೃತವಾಗಿ ದಾಖಲಾದದ್ದೇ 1963 ರಲ್ಲಿ.

ಎಲ್ಲಿಯವರೆಗೆ ಕರ್ನಾಟಕ ಸರಕಾರವು, ಸುಪ್ರೀಮ್ ಕೋರ್ಟಿನಲ್ಲಿರುವ
ತನ್ನೆಲ್ಲಾ ಕನ್ನಡ ಮಾಧ್ಯಮಪರ ದಾವಾ ಪತ್ರಗಳಲ್ಲಿ ಈಗಾಗಲೇ ಬಳಸಲಾಗಿರುವ ’ಮಾತೃ’ ಎಂಬ ಪದವನ್ನು, ’ಆಡಳಿತ’ ಎಂಬ ಪದಕ್ಕೆ ಬದಲಾಯಿಸಿಕೊಳ್ಳುವುದಿಲ್ಲವೋ,
ಅಲ್ಲಿಯವರೆಗೆ ಅಂದರೆ ಮುಂದಿನ ನೂರಾರು ಕನ್ನಡ ರಾಜ್ಯೋತ್ಸವದಲ್ಲೂ,
ನಾವು ಇದೇ ಬಗೆಯ ಮಾತೃಭಾಷೆಯ ಭಾವುಕ ಬಾಷಣಗಳನ್ನು ಮಾಡುತ್ತಾ,
ಹಾಡುತ್ತಾ, ಕುಣಿಯುತ್ತಾ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೇವೆ.

ಅಲ್ಲಿಯವರೆಗೂ, ‘ಜೈ ಕನ್ನಡ ಭುವನೇಶ್ವರಿ!’

‍ಲೇಖಕರು admin

November 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಸತ್ಯವಾದ ಮಾತುಗಳು.

    ಪ್ರತಿಕ್ರಿಯೆ
  2. ಮುದಗಲ್ ವೆಂಕಟೇಶ

    ಲೇಖನ ಸಮಯೋಚಿತವಾಗಿದ್ದು ಉಪಯುಕ್ತ ಮಾಹಿಯನ್ನೊಳಗೊಂಡಿದೆ,,,,,ಅಭಿನಂದನೆಗಳು

    ಪ್ರತಿಕ್ರಿಯೆ
  3. ಮುದಗಲ್ ವೆಂಕಟೇಶ

    ಲೇಖನ ಸಮಯೋಚಿತವಾಗಿದ್ದು ಉಪಯುಕ್ತ ಮಾಹಿತಿಯಿಂದ ಕೂಡಿದೆ,,,,,ಅಭಿನಂದನೆಗಳು,,,,

    ಪ್ರತಿಕ್ರಿಯೆ
  4. Hanumanth Ananth Patil

    ಬೋಳುವಾರು ರವರಿಗೆ ವಂದನೆಗಳು
    ತಮ್ಮ ಅಭಿಪ್ರಾಯ ಸರಿಯಿದೆ ಇದು ನಮ್ಮ ಅಡಳಿತಶಾಹಿಗೆ ಅರ್ಥವಾಗುತ್ತಿಲ್ಲ ಅದೇ ಸಮಸ್ಯೆ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: