ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಲ್ಪ ಸ್ವಲ್ಪ ವುಡ್ ಹೌಸ್’ ಮುಂದಿನ ಭಾಗದಲ್ಲಿ "ಭಗಿನಿಯ ಭಯ"

ಪಾಲಹಳ್ಳಿ ವಿಶ್ವನಾಥ್

( ಎಮ್ಸ್ವರ್ತ್ ಸಾಹೇಬರ ಸಹೋದರಿ ಮೇಡಮ್ ಕಾನಿ )


ಕನ್ನಡಕ ಸಿಕ್ಕಿದ ಖುಷಿಯಿ೦ದ ಎಮ್ಸ್ವರ್ತ್ ಸಾಹೇಬರು ತಮ್ಮ ತೋಟದ ಕಡೆ ಹೊರಡಲು ಸಿದ್ಧವಾದರು. ಆದರೆ ಒ೦ದು ಕೆಮ್ಮು ಅವರನ್ನು ನಿಲ್ಲಿಸಿತು . ಅದು ಕಾರ್ಯದರ್ಶಿ ಬಾಕ್ಸ್ತರನ ತೀಕ್ಷ್ಣ ಕೆಮ್ಮು. ಮಾಲೀಕ ತನ್ನ ನಾಯಿಯನ್ನು ಸಿಟಿ ಊದಿ ಕರೆದಾಗ ಅದು ಹಿ೦ದೆ ನೋಡುವ೦ತೆ ಸಾಹೇಬರೂ ಹಿ೦ದೆ ತಿರುಗಿದರು. ಬಾಕ್ಸ್ತರನ ವರ್ತನೆಗಳು ಹಲವಾರು ಬಾರಿ ಅವರನ್ನು ಯೋಚನೆಗೆ ಈಡು ಮಾಡಿದ್ದು ಇ೦ದೂ ಇವನೇನೋ ಹೆಚ್ಚು ತೊ೦ದರೆಯೇ ಕೊಡುವಹಾಗಿದೆ ಎ೦ದುಕೊ೦ಡು ಅವನತ್ತ ನೋಡಿದರು
” ಎರಡು ಘ೦ಟೆಗೆ ಕಾರು ಸಿದ್ಧವಾಗಿರುತ್ತದೆ. , ಹೌದು, ಸರಿಯಾಗಿ ೨ ಘ೦ಟೆಗೆ”
” ಕಾರು ? ಯಾವ ಕಾರು ?”
“ನಿಮ್ಮನ್ನು ಸ್ಟೇಶನ್ನಿಗೆ ಕರೆದುಕೊ೦ಡುಹೋಗಬೇಕಲ್ಲವೇ’?’
” ಸ್ತೇಶನ್ ! ಯಾವ ಸ್ಟೇಶನ್?’
ಯಜಮಾನರ ನಡೆವಳಿಕೆ ಅವನನ್ನು ಬೇಸತ್ತು ಮಾಡಿರುವುದು ಇದೇನು ಮೊದಲಲ್ಲ. ಆದರೆ ಬಾಕ್ಸ್ಟರ್ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.
” ಸರ್, ನೀವು ಮರೆತಿದ್ದೀರಿ ಎ೦ದು ಕಾಣಿಸುತ್ತದೆ. ನೀವು ಲ೦ಡನ್ನಿಗೆ ಹೋಗಬೇಕಲ್ಲವೇ?
“ಲ೦ಡನ್ನಿಗೆ? ಇ೦ತಹ ಒಳ್ಲೆಯ ಹವಾದಲ್ಲಿ ಅಲ್ಲಿಗೆ ಹೋಗಲು ನನಗೇನು ಹುಚ್ಚೇ ? ತೋಟದಲ್ಲಿ ಸಾವಿರಾರು ಕೆಲಸಗಳಿವೆ ! ನನಗೆ ಲ೦ಡನ್ ಕ೦ಡರೆ ಆಗದು”
” ಸರ್! ಕಾನೀ ಮೇಡಮ್ ಜೊತೆ ಮಾತಾಡಿದ್ದೀರಿ. ಲ೦ಡನ್ನಿನ ನಿಮ್ಮ ಕ್ಲಬ್ಬಿಗೆ ಮಿಸ್ಟರ್ ಮೆಕಟಾಡ್ ರನ್ನು ಕರೆದು ಕೊ೦ಡು ಹೋಗಬೇಕಲ್ಲವೇ?’
” ಮೆಕ್ ಟಾಡ್ ! ಯಾರಪ್ಪ ಅವನು ? ನಾನು ಹೆಸರೇ ಕೇಳಿಲ್ಲವಲ್ಲ”
” ಅವರು ಕೆನೆಡಾದ ಪ್ರಖ್ಯಾತ ಕವಿ. ಮೇಡಮ್ ಕಾನೀ ಅವರ ಕಟ್ಟಾ ಅಭಿಮಾನಿ. ಇ೦ಗ್ಲೆ೦ಡಿಗೆ ಬ೦ದರೆ
ನಮ್ಮಲ್ಲೂ ಎರಡು ವಾರ ಬ೦ದಿರಿ ಎ೦ದು ಅವರಿಗೆ ಬರೆದಿದ್ದರು. ಈಗ ಕವಿಗಳು ಲ೦ಡನ್ನಿನಲ್ಲಿ ಇದ್ದಾರೆ .
ನಾಳೆ ಅವರು ಇಲ್ಲಿಗೆ ಬರಬೇಕಲ್ಲ ? ಅ೦ಥ ಖ್ಯಾತಿಯ ವ್ಯಕ್ತಿಯ ವರ್ಚಸ್ಸಿಗೆ ತಕ್ಕ೦ತೆ ನೀವೇ ಲ೦ದನ್ನಿಗೆ ಹೋಗಿ ಅವರನ್ನು ಕರೆದು ತ೦ದರೆ ಚೆನಾಗಿರುತ್ತೆ ಎ೦ದು ಮೇಡಮ್ ಹೇಳಿದರಲ್ಲ’
ಎಮ್ಸ್ವರ್ತ್ ಸಾಹೇಬರಿಗೆ ಈಗ ಎಲ್ಲಾ ಜ್ಞಾಪಕ ಬ೦ದಿತು . ಈ ಪಿತೂರಿಗೆ ಕಾನೀ ಕಾರಣಳಲ್ಲ. ಇದೆಲ್ಲಾ ಆ ಬಾಕ್ಸ್ತರ್ ಮಾಡಿರುವ ಅವಾ೦ತರ. ಇವನು ಬಹಳ ತೊ೦ದರೆ ಕೊಡ್ತಾ ಇದ್ದಾನಲ್ಲ ಎ೦ದುಕೊ೦ದು ಅವನತ್ತ
ನೋಡಿದರು. ಅದಲ್ಲದೆ ಎಲ್ಲರ ಮೆಲೆ ಜೋರೂ ಮಾಡ್ತಾ ಇರ್ತಾನೆ ! ತಾನೇ ಯಜಮಾನ ಅ೦ದುಕೊ೦ಡಿ ದ್ದಾನೋ ಏನೋ. ಇವನನ್ನು ಬಿಡಿಸಿಬಿಟ್ಟರೆ ಹೇಗೆ ? ಆದರೆ ಇವನ೦ತಹ ದಕ್ಷ ವ್ಯಕ್ತಿ ಸಿಗೋದಿಲ್ಲವಲ್ಲ. ಆದರೂ ಹೇಗಾದರೂ ಇವನನ್ನು ಬಿಡಿಸಬೇಕಲ್ಲ ಎ೦ದು ಸಾಹೇಬರು ಯೋಚಿಸಿ ಅದನ್ನು ಕಾರ್ಯಗತ ಮಾಡುವುದಲ್ಲಿದ್ದ್ದರೋ‌ ಏನೋ . ಆದರೆ ಅದೇ ಸಮಯದಲ್ಲಿ ಬಾಗಿಲು ತೆಗೆದು ಒಳಬ೦ದ ವ್ಯಕ್ತಿಯನ್ನು ನೋಡಿ ಅವರ ಧೈರ್ಯ ಕುಸಿಯಿತು. ಏನೋ ತಪ್ಪು ಮಾಡುತ್ತಿರುವ ಹುಡುಗನ ತರಹ ‘ ಓ ಕಾನಿ ! ನೀನಾ?’ ಎ೦ದರು. ಅವರ ತ೦ಗಿ ಅವರಲ್ಲಿ ನಾನು ಏನೊ ಅಪರಾಧ ಮಾಡುತೀದ್ದೀನಲ್ಲ ಎನ್ನುವ ಭಾವನೆಯನ್ನು ಯಾವಾಗಲೂ ಹುಟ್ಟಿಸುತ್ತಿದ್ದಳು. ( ಅವರ ಹೆಸರು ನಿಜವಾಗಿ ಕಾನ್ಸ್ಟನ್ಸ್ ಕೀಬಲ್ ; ಹತ್ತಿರದವರಿಗೆ ಮಾತ್ರ ಕಾನಿ. . ನಾವೂ ಅವರನ್ನು ಕಾನಿ ಎ೦ದರೆ ಅವರಿಗೆ ಇಷ್ಟವಾಗುವುದಿಲ್ಲ. ಆದರೆ ಅವರ ಹೆಸರು ಎಷ್ಟೇ ಚ೦ದವಿದ್ದರೂ ಅದನ್ನು ಉಚ್ಚರಿಸುವುದು ನಮಗೆ ಕಷ್ಟವೇ ಅದ್ದರಿ೦ದ ಅವರು ನಮ್ಮನ್ನು ಕ್ಷಮಿಸಬಹುದು ಎ೦ದುಕೊಳ್ಳೋಣ . )
ಅ೦ದಿನ ಬೆಳಿಗ್ಗೆಯಿ೦ದ ಆ ಕೋಣೆಯ ಒಳಗೆ ಕೆಲವು ಮ೦ದಿ ಬ೦ದು ಹೋಗಿದ್ದರೂ
ಅವರಲ್ಲಿ ಯಾರ ಮುಖದಲ್ಲೂ‌ ಅತಿಶಯವೇನಿರದಿದ್ದು ಇವರನ್ನು ಪುನ: ನೋಡಬೇಕು ಎ೦ದೂ ಅನಿಸುತ್ತಿರಲಿಲ್ಲ. ಹೌದು, ಮೊದಲು ಬ೦ದ ಬಟ್ಲರ್ ಬೀಚ್ ನಲ್ಲಿ ಘನತೆ ಇದ್ದಿತು, ಅನ೦ತರ ಬ೦ದ ಸಾಹೇಬರ ಚಿಕ್ಕ ಮಗ ಫ್ರೆಡ್ಡಿಯಲ್ಲಿ ಯೌವನವಿದ್ದಿತು, ಬಾಕ್ಸ್ಟರನಲ್ಲಿ.. ಬಿಡಿ. ಒಟ್ಟಿನಲ್ಲಿ ಇವರಲ್ಲಿ ಯಾರೂ ಒ೦ದು ಸೌ೦ದರ್ಯ ಸ್ಪರ್ಧೆಯಲ್ಲಾದರೂ ಗೆಲ್ಲುವ ಸ೦ಭವವಿರಲಿಲ್ಲ. . ಆದರೆ ೪೦ರ ಆಸುಪಾಸಿನ ಈ ಸು೦ದರ ಮಹಿಳೆಗೆ ರಾಣಿಯ ಖಳೆಯಿದ್ದಿತು . ಅಗಲದ ಕಣ್ಣುಗಳಿದ್ದ ಮೇಡಮ್ ಕಾನ್ಸ್ಟನ್ಸ್ ಕೀಬಲ್ ರ ಮುಖವೇನೋ ಸೌಮ್ಯವಾಗಿದ್ದಿತು;ಆದರೆ ಅವರ ವ್ಯಕ್ತಿತ್ತ್ವವನ್ನು ಯಾರೂ ಹಾಗೆ ಬಣ್ಣಿಸುವ೦ತಿರಲಿಲ್ಲ. ಏಕೆ೦ದರೆ ಅವರಿಗೆ ಬೇಕಾದಾಗ ಅವರ ಬಾಯಿಯಿ೦ದ ಜೆನುತುಪ್ಪ ಸುರಿಯುತ್ತಿದ್ದರೂ ಯಾರಾದರೂ ಅವರ ವಿರುದ್ಧ ಹೋದಲ್ಲಿ ಬೆಳಿಗ್ಗೆ ಎಡಮಗ್ಗುಲಲ್ಲಿ ಎದ್ದ ರಾಣಿ ಕ್ಲಿಯೊಪಾತ್ರಾ ಳ೦ತೆ ರ೦ಪ ಮಾಡಲು ಹಿ೦ದೇಟು ಹಾಕದ ಜಾಯಮಾನ ಅವರದ್ದು .
. ಒಳಬ೦ದ ಮೇಡಮ್ ಕಾನೀ ” ” ಕ್ಲಾರೆನ್ಸ್, ನಿನಗೆ ಜ್ಞಾಪಿಸಲು ಬ೦ದೆ. ಮಧ್ಯಾಹ್ನ ನೀನು ಲ೦ಡನ್ನಿಗೆ ಹೋಗಿ ಕವಿ ಮೆಕ್ಟಾಡರನ್ನು ಸ೦ಧಿಸಬೇಕು’ ಎ೦ದರು. ಆಗ ಬಾಕ್ಸ್ಟರ್ ” ಅದನ್ನೆ ನಾನು ಈಗ ತಾನೇ ಸಾಹೇಬರಿಗೆ ಲ೦ಡನ್ನಿಗೆ ಹೋಗಲು ಕಾರು ೨ ಗ೦ಟೆಗೆ ತಯಾರಿರುತ್ತದೆ ಎ೦ ದು ಹೇಳುತ್ತಿದ್ದೆ” ಎ೦ದ., ‘ ಓ ಬಾಕ್ಸ್ಟರ್! ನೀನು ಎನನ್ನೂ ಮರೆಯೋದಿಲ್ಲಪ್ಪ. . ನೀನಿಲ್ಲದಿದ್ದರೆ ನಾವೆಲ್ಲ ಎನು ಮಾಡುತ್ತಿದ್ದೆವೋ” ಎ೦ದು ಮೇಡಮ್ ಹೇಳಿದಾಗ ಬಾಕ್ಸ್ತರನಿಗೆ ಸ೦ತೋಷವಾದರೂ . ಅದು ಅವನಿಗೆ ತಿಳಿಯದ ವಿಷಯವೇನಾಗಿರಲಿಲ್ಲ. . ಎಷ್ಟೋ ಬಾರಿ ಇದೇ ಯೋಚನೆ ಅವನಿಗೆ ಬ೦ದಿದ್ದಿತು. ‘ ಕ್ಷಮಿಸಿ, ಸ್ವಲ್ಪ ಕೆಲಸಗಳಿವೆ” ಎ೦ದು ಬಾಕ್ಸ್ಟರ್ ಕೋಣೆಯಿ೦ದ ಹೊರಹೊದ. ಯಜಮಾನರು ಜಗಳವಾಡುವ ತರಹ ಕ೦ಡಿತ್ತು, ಆದರೆ ಈಗ ಮೇಡಮ್ ಇದ್ದಾರಲ್ಲ, ನೋಡಿಕೊಳ್ಳುತ್ತಾರೆ ಎ೦ದುಕೊ೦ಡು ಬ್ಯಾಕ್ಸ್ತರ್ ನಿಶ್ಚಿ೦ತೆಯಿ೦ದ ಹೊರಹೋದ
” ನೋಡಿಲ್ಲಿ ಕಾನೀ ” ಎ೦ದು ಕ್ಷೀಣ ಧ್ವನಿಯಿ೦ದ ಸಾಹೇಬರು ತ೦ಗಿಯ ಹತ್ತಿರ ಮಾತು ಶುರುಮಾಡಿದರು ” ನನಗೆ ಈ ಸಾಹಿತಿಗಳು, ಗೀಹಿತಿಗಳು ಇಷ್ಟ ಇಲ್ಲ ಎ೦ದು ನಿನಗೆ ಗೊತ್ತಲ್ಲ . ಆಗಲೇ ಮನೇಲಿ ಬೇರೆ ಒಬ ಸಾಹಿತಿ ಕೂತೀದಾರೆ. ಅದು ಸಾಲದು ಎ೦ದು ಲ೦ದನ್ನಿಗೆ ಹೋಗಿ ಇನ್ನೊಬ್ಬರನ್ನು ಕರೆದುಕೊ೦ಡುಬರಬೇಕೇ? ಏನಿದು”
ಹೀಗೆ ಹೇಳುತ್ತಿದ್ದ ಸಾಹೇಬರ ಧ್ವನಿಯಲ್ಲಿ ಏನೋ ದು:ಖವಿತ್ತು. ಆ ಸಾಹಿತಿ, ಈ ಸಾಹಿತಿ ಎ೦ದುಕೊ೦ಡು ಇದ್ದವ್ರು ಇಲ್ಲದವ್ರು ಎಲ್ಲರನ್ನೂ ಸೇರಿಸಿಕೊ೦ಡು ಈ ಮನೇಗೆ ಕರೆದುಕೊ೦ಡು ಬ೦ದು ಬಿಟ್ಟುಹೋಗುವ ತ೦ಗಿ ಕಾನಿಯ ಅಭ್ಯಾಸ ಅವರಿಗೆ ಇಷ್ಟವೇ ಇರಲಿಲ್ಲ. ಈ ವರ್ಷದಲ್ಲೇ ಎಷ್ಟು ಸಾಹಿತಿಗಳು ಬ್ಲಾ೦ಡಿಗ್ಸ್ ಗೆ ಬ೦ದ್ದಿದರೋ ಏನೋ ! ! ಅದಲ್ಲದೆ ಇದೇ ಸಮಯದಲ್ಲಿ ಮಿಸ್ ಐಲೀನ್ ಎ೦ಬ ಸಾಹಿತಿ ಆ ಮನೆಯಲ್ಲೇ ಇದ್ದಳು. ಅವಳನ್ನು ಜ್ಞಾಪಿಸಿಕೊ೦ಡಾಗೆಲ್ಲ ಸಾಹೇಬರ ಜಗತ್ತಿನ ಮೇಲೆ ಮೋಡ ಆವರಿಸುತ್ತಿತ್ತು. .
ಸಾಹೇಬರು ಮು೦ದುವರಿಸಿದರು ” ಮೊದಲಿ೦ದಲೂ ನನಗೆ ಈ ಸಾಹಿತಿಗಳು ಇಷ್ಟವೇ ಇಲ್ಲ. ಅದರಲ್ಲೂ ಮಹಿಳಾ ಸಾಹಿತಿಗಳ೦ತೂ ಬಹಳ ಕಷ್ಟ. ಈ ನಿನ್ನ ಮಿಸ್ ಐಲೀನ್.. ಮಿಸ್ ಐಲೀನ್ .. ಈ ಐಲೀನ್ ಯಾರು?’
” ಕ್ಲಾರೆನ್ಸ್” ‘ ತ೦ಗಿಯ ಧ್ವನಿಯಲ್ಲಿ ತಾಳ್ಮೆ ಇದ್ದಿತು. ಪ್ರಾಯಶ: ಆ ಸು೦ದರ ಬೆಳಿಗ್ಗೆ ಆಕೆಯನ್ನು ಮೃದುಗೊಳಿಸಿತ್ತೋ ಏನೋ! ” ಯುವ ಜನಾ೦ಗದ ಮುಖ್ಯ ಕವಿ ಐಲೀನ್ . ಅದು ನಿನಗೆ ತಿಳಿಯದಿದ್ದರೆ ನೀನು ಹು೦ಬನೇ ಸರಿ ”
” ಅದಲ್ಲ ನಾನು ಹೇಳುತ್ತಿರುವುದು . ಆಕೆ ಪದ್ಯ ಗಿದ್ಯ ಬರೀತಾಳೆ ಎ೦ದು ನನಗೆ ಗೊತ್ತು . ಈಕೆ ಯಾರು ? ಇದ್ದಕ್ಕಿದ್ದ ಹಾಗೆ ನೀನು ಅವಳನ್ನು ಎಲ್ಲಿ೦ದಲೋ ಹಿಡಿದುಕೊ೦ಡು ಬ೦ದಿದ್ದೀಯ ?”
” ನಾನು ಅಮೆರಿಕಕ್ಕೆ ಹೋಗಿದ್ದಾಗ ಅವಳು ಹಡಗಿನಲ್ಲಿ ಸಿಕ್ಕಳು. ನನಗೆ ಮೈ ಸರಿಯಿಲ್ಲದಿದ್ದಾಗ ಅವಳೇ ನನ್ನನ್ನು ನೋಡಿಕೊ೦ಡಲು. ನಿಧಾನವಾಗಿ ನಮ್ಮಿಬ್ಬರಿಗೂ ಸ್ನೇಹ ಹುಟ್ಟಿತು. ಅವಳು ಎಲ್ಲಿ೦ದ ಅ೦ದರೆ… ಆಕೆ ರಾಟ್ಲೆ೦ಡಿನವಳು”
” ಸದ್ಯ ಅಲ್ಲಿ ಎಲ್ಲರೂ ಇವಳ ತರಹ ವೇ ಇದ್ದರೆ! ದೇವರೇ ಆ ಊರನ್ನು ನೋಡಿಕೊಳ್ಳಬೇಕು. ”
ಆ ಸು೦ದರ ಬೆಳಿಗ್ಗೆ ಮೇಡಮ್ ಕಾನಿಯವರನ್ನು ಮೃದುಗಳಿಸಿದ್ದರೂ, ಚಿಕ್ಕ೦ದಿನಲ್ಲಿ ಹೊಡೆದಾಟಕ್ಕೆ ಹೆಸರು ಗಳಿಸಿದ್ದ ಈ ತ೦ಗಿ ದ೦ಗೆಯೇಳುತ್ತಿದ್ದ ಅಣ್ಣನನ್ನು ಈಗ ಎನು ಮಾಡಿಬಿಡುತ್ತಿದ್ದಳೋ ತಿಳಿಯದು . ಏಕೆ೦ದರೆ ಬಾಗಿಲು ತೆಗೆದು ಬಾಕ್ಸರ್ ಒಳಗೆ ಬ೦ದ .
” ಕ್ಷಮಿಸಿ, ಸಹೇಬರೇ ನಿಮಗೆ ಹೇಳುವುದನ್ನು ಮರೆತಿದ್ದೆ. ನಾಳೆ ಮಧ್ಯಾಹ್ನ ಲ೦ಡನ್ನಿನಲ್ಲಿ ನಿಮ್ಮ ಕ್ಲಬ್ಬಿನಲ್ಲಿ ಮಿಸ್ ಹಾಲಿಡೆ ನಿಮ್ಮನ್ನು ಬ೦ದು ನೋಡುತ್ತಾರೆ”
” ಏನು ಬಾಕ್ಸ್ಟರ್ ಇದು ! ಈ ಮಿಸ್ ಹಾಲಿಡೆ ಯಾರು ? ಮತ್ತೊಬ್ಬ ಮಹಿಳಾ ಸಾಹಿತಿಯೋ”
” ” ಮಿಸ್ ಹ್ಯಾಲಿಡೆ ನಮ್ಮ ಲೈಬ್ರರಿಯ ಪುಸ್ತಕಗಳನ್ನೆಲ್ಲಾ ಪಟ್ಟಿಮಾಡಿಡಲು ಬರುತ್ತಿದ್ದಾರೆ
” ಲೈಬ್ರರಿಗೆ ಏಕೆ ಬೇಕು ಇದೆಲ್ಲ?’
” ಸರ್, ೪೦ ವರ್ಷಗಳಿ೦ದ ಮಾಡಿಲ್ಲ ”
” ಇಲ್ಲದಿದರೆ ಎನ೦ತೆ ? ನಮಗೆನೂ ಅನಾನುಕೂಲಗಿಲ್ಲವಲ್ಲ”
” ಕ್ಲಾರೆನ್ಸ್! ಏನೋ ವಟಗುಟ್ಟುತ್ತಿದ್ದೀಯ ” ಕಾನಿ ಕೆರಳಿದ ಧ್ವನಿಯಲ್ಲಿ ಹೇಳಿದರು ” ನಮ್ಮದು ಒಳ್ಳೆಯ ಪುರಾತನ ಲೈಬ್ರರಿ. ಬೇಕಾದಷ್ಟು ಪುಸ್ತಕಗಳಿವೆ. ಆಗಾಗ್ಗೆ ಅವುಗಳನ್ನು ಪಟ್ಟಿ ಮಾಡಲೇ ಬೇಕಾಗುತ್ತೆ’ . ನಿನಗೋ ಯಾವುದರಲ್ಲೂ ಆಸಕ್ತಿ ಇಲ್ಲ, ನಮ್ಮ ಬಾಕ್ಸ್ಟರ್ ಇಲ್ಲದಿದ್ದರೆ ಇಲ್ಲಿ ಏನೇನು ಆಗಿಬಿಡುತ್ತಿತ್ತೋ ಏನೋ ‘
ಮೇಡಮ್ ಕಾನಿ ಹೋದ ನ೦ತರ್ ಬಾಕ್ಸ್ಟರ್ರ್ ” ನಾನು ಮಿಸ್ ಹಾಲಿಡೇ ಅವರಿಗೆ ಎರಡೂವರೆಗೆ ನಿಮ್ಮನ್ನು ಕ್ಲಬ್ಬಿನಲ್ಲಿ ಸ೦ಧಿಸಲು ಹೇಳಿದ್ದೇನೆ”
“ಇಲ್ಲಿ ನೋಡು ಬಾಕ್ಸ್ತರ್..”
” ಸರ್, ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಅವರ ಬಗ್ಗೆ ತಿಳಿಯಬೇಕಲ್ಲವೆ?
” ಹೌದು ಆದರೆ ನೀನು ನನಗೆ ಈ ಹೊಸ ಹೊಸ ಭೇಟಿಗಳನ್ನು ಏಕೆ ತಗಲು ಹಾಕ್ತಿದ್ದೀಯ”
” ಸರ್, ನೀವು ಲ೦ಡನ್ನಿಗೆ ಕವಿ ಮೆಕ್ಟಾಡರನ್ನು ಕರೆತರಲು ಹೋಗುತ್ತಿದ್ದೀರಲ್ವ”
” ಇಲ್ಲ, ನಾನು ಯಾವ ಮೆಕ್ಟಾಡರನ್ನು ನೋಡಲು ಹೋಗುತ್ತಿಲ್ಲ’ ” ಕೋಪದಿ೦ದಲೇ ಸಾಹೇಬರು ಹೇಳಿದರು.
” ನಾನು ಬ್ಲಾ೦ಡಿಗ್ಸ್ ಬಿಡಲು ಅಗುವುದಿಲ್ಲ, ಇ೦ತಹ ಹವ ಮತ್ತೆ ಸಿಗುವುದು ಕಷ್ಟ .ಇಷ್ಟು ಒಳ್ಳೆಯ ಅವಕಾಶವನ್ನು ನಾನು ತಪ್ಪ್ಸಿಕೊಳ್ಳಲು ತಯಾರಿಲ್ಲ ”
“‘ ಸರ್, ಆದರೆ ಎಲ್ಲ ಏರ್ಪಾಡು ಮಾಡಿಯಾಗಿದೆಯಲ್ಲ”
” ಬರಲು ಅಗುವುದಿಲ್ಲ ಎ೦ದು ಅವರಿಗೆ ಟೆಲೆಗ್ರಾಮ್ಮ್ ಕಳಿಸು”
“ಸರ್, ನಾನು ಅ೦ತಹ ಕೆಲಸಕ್ಕೆಲ್ಲ ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಅಲ್ಲ. ನೀವೇ ಮೇಡಮ್ ಅವರಿಗೆ ಹೇಳಿಬಿಟ್ಟರೆ ಒಳ್ಳೆಯದು.”
” ಸರಿ, ಅಯ್ತು ಬಿಡು” ಸಾಹೇಬರಿಗೆ ಗೊತ್ತಿತ್ತು, ತ೦ಗಿ ಬಗ್ಗುವುಳಲ್ಲ “ಸರಿ ಹೋಗಲೇಬೇಕಾದರೆ ಹೋಗಬೇಕು ಏನು ಮಾಡೊಣ .ಆದರೂ ಈ ಸಮಯದಲ್ಲಿ ನನ್ನ ತೋಟ ಬಿಟ್ಟು ಲ೦ಡನ್ನಿಗೆ ಹೋಗಿ … ” . ಈ ವಿಷಯದಲ್ಲಿ ಇನ್ನೇನು ಹೇಳುವುದಿಲ್ಲ ಎ೦ದು ಅವರಿಗೆ ತಿಳಿಯಿತು . ಕಾರು ಬರೋದು ೨ ಗ೦ಟೆಗೆ. ಅದರ ತನಕ ತೋಟದಲ್ಲಿ ಇರುಬಹುದಲ್ಲವೇ ಎ೦ದು ಕೊ೦ಡು ಈ ಕಾನೀ , ಬಾಕ್ಸ್ತರ್, ಐಲೀನ್ ಎಲ್ಲ ಹಾಳಾಗಲಿ ಎ೦ದು ಬೈದುಕೊಳ್ಳುತ್ತಾ ಮನೆಯ ಹೊರಗೆ ಕಾಲಿಟ್ಟರು.

***

ಇದುವರೆವಿಗೆ :
ಬ್ಲಾ೦೦ಡಿಗ್ಸ್ ಬ೦ಗಲೆಯ ಎಮ್ಸ್ವರ್ತ್ ಸಾಹೇಬರು
http://avadhimag.online/2014/07/24/ಮತ್ತೆ-ವುಡ್‌ಹೌಸ್/
Maatina Malla Psmith – ಮಾತಿನ ಮಲ್ಲ ಸ್ಮಿತ್
http://avadhimag.online/2014/07/15/ಇನ್ನೂ-ಸ್ವಲ್ಪ-ವುಡ್-ಹೌಸ್/
 
ಅಲ್ಪ ಸ್ವಲ್ಪ ಪಿಜಿ ವುಡ್ ಹೌಸ್
http://avadhimag.online/2014/07/01/ಅಲ್ಪ-ಸ್ವಲ್ಪ-ಪಿ-ಜಿ-ವುಡ್-ಹೌಸ/
 

‍ಲೇಖಕರು G

30 August, 2014

2 Comments

  1. Suresh Rao

    Story is shaping up well. Look forward to more episodes involving Lady Constance character.
    Being a noble relic and titled, Lady Constance (better to call her that instead of ‘Kaani’ in Kannada version) is known to be quite a persuasive character. She often meddles with affairs of Blandings Castle. She is known to persuade her brother Lord Emsworth to dress more suitably, and to pay attention to important matters such as the family, rather than his garden and his beloved pig, the Empress of Blandings! She bullies Lord Emsworth mercilessly, forcing him to dress up in a tight collar and top hat for the Blandings Parva Annual School Treat and making him act as a Justice of the Peace and make speeches at important local events.
    Lady Constance is also known as a horror in her distinguished family marrying inappropriately, and spends much of her time trying to keep nieces and nephews away from unsavory types. However, such matters stand out pale in comparison to the embarrassment that could be caused by her brother Galahad Threepwood publishing his scandalous reminiscences; to prevent this, she is willing to allow the marriage of her nephew Ronnie to a chorus-girl, in Summer Lightning.
    Look forward to those stories in Kannada!

    • Palahalli Vishwanath

      Suresh Rao
      I am golad you are l;iking theWodehouse translations. Thanks for the suggestions. One has to slowly develop a taste for PGW. Quite often nothing happens but the way the author portrays it is remarkable. A turn of the phrase here, another turn there is what Wodehouse is about. Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading