ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಧ ಮಸಾಲೆ ದೋಸೆ.. ಮಾರುದ್ದ ಕ್ಯೂ

ಅವಿರತ ಸತೀಶ್

ಯಾವುದು ಇದು ನಾಗರ ಕಲ್ಲು ಅಂದುಕೊಂಡ್ರಾ? ಯಾರಪ್ಪ ಈ ಮನುಷ್ಯ ಇಷ್ಟೊಂದು ಗತ್ತಿನಲ್ಲಿ ಕುಳಿತಿದಾರೆ ಅಂತ ಯೋಚಿಸ್ತಾ ಇದೀರಾ? ಇದು ಒಂದು ದೇವಸ್ಥಾನದ ಅಂಗಳ. ಇಲ್ಲಿರುವುದೇ ಸಿದ್ದಪ್ಪನ ಮಸಾಲೆ ದೋಸೆ ಹೋಟೆಲ್. ಇಲ್ಲಿ ಕುಳಿತಿರುವವರೇ ಸಿದ್ದಪ್ಪ..

ಸಿದ್ದಪ್ಪನ ಹೊಟೆಲ್…. ಆದ್ರೆ ಇದು ಹೊಟೆಲ್ ಅಲ್ಲ. ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ (ಪಲ್ಲವಿ ಥಿಯೇಟರ್ ಹಿಂಬಾಗ) ದೇವಸ್ಥಾನದ ಆವರಣದಲ್ಲಿ ಇರೋ ಪುಟ್ಟ ಮನೆ. ಸುಮಾರು ೪೦ ವರ್ಷದ ಹಳೇಯ ಹೋಟೆಲ್ ಗೆ ಎಷ್ಟು ಬೇಡಿಕೆ ಎಂದರೆ ಬೆಳಿಗ್ಗೆ ೮.೩೦ಕ್ಕೆ ಹೊಟೆಲ್ ಬಾಗಿಲು ತೆಗೆದರೆ ಜನ ೭.೩೦ಕ್ಕೆ ಸಾಲಿನಲ್ಲಿ ನಿಂತಿರುತ್ತಾರೆ.

ಸಾಲಿನಲ್ಲಿದ್ದರೆ ಪರ್ವಾಗಿಲ್ಲ ಕೆಲವರ ಕೈನಲ್ಲಿ ತಟ್ಟೆ, ಅಡಕೆ ಪಟ್ಟೆ ಇರುತ್ತವೆ ಕಾರಣ ಹೊಟೆಲ್ ನವರು ನ್ಯೂಸ್ ಪೇಪರ್ ಮೇಲೆ ಬಾಳೆ ಎಲೆ ಇಟ್ಟು ಕೈಗೆ ಕೊಡ್ತಾರೆ….. ಅಷ್ಟು ಜನ ಸಾಲಿನಲ್ಲಿ ನಿಲ್ಲೋದು ಇವರು ಮಾಡುವ ಮಸಾಲೆ ದೋಸೆಗೆ ಆದರೆ ಇವರು ಕೊಡೋದು ಬರಿ ಅರ್ಧ ಮಸಾಲೆ ದೋಸೆ ಇನ್ನು ಅರ್ಧ ಬೇಕು ಅಂದರೆ ಮತ್ತೆ ಸಾಲಿನಲ್ಲಿ ನಿಲ್ಲಬೇಕು.. ಎಲ್ಲಾದರು ನೋಡಿದೀರ ಇಂತ ವ್ಯವಸ್ಥೆ.

ದೋಸೆಗೆ ಮೊದಲು ಅವರು ಕೊಡೊ ಇಡ್ಲಿ, ತುಪ್ಪದ ದೋಸೆ ಹಾಗು ರೈಸ್ ಬಾತ್ ನ ಸ್ವಾದಿಷ್ಟ ಹೇಳತೀರದು. ಇದರ ಜೊತೆ ಅವನು ಹಾಕುವ ಚಟ್ನಿ ಮೇಲೆ ಸಾಗು ರುಚಿ ತಿಂದವರಿಗೇ ಗೊತ್ತು. ಹಾಗೆ ಒಂದು ಚಮಚ ತುಪ್ಪಕ್ಕು ೧೦ರೂ ವಿಚಿತ್ರ ಅನ್ನಿಸ್ತ ಇದೆಯಾ?

 

 

‍ಲೇಖಕರು Admin

4 January, 2016

1 Comment

  1. Gubbachchi Sathish

    ಪ್ರಿಯ ಸತೀಶ್, ನೀವು ಹೀಗೆಲ್ಲಾ ದೋಸೆಯ ಆಸೆ ತೋರಿಸಬಾರದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading