ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಥ- ಅಪಾರ್ಥ!

ಅರ್ಥ- ಅಪಾರ್ಥ!

Santosh-Tamraparni

ಸಂತೋಷ ತಾಮ್ರಪರ್ಣಿ

ನೀವು ಮನೆಯಲ್ಲಿರುತ್ತೀರ. ಪಕ್ಕದ ಮನೆ ಹುಡುಗ ಗೇಟನ್ನು ತೆಗೆದು, ಮನೆ ಒಳಗೆ ಬರುತ್ತಾನೆ. ತನ್ನ ಕೆಲಸ ಮುಗಿಸಿ ಹೊರಗೆ ಹೋಗುವಾಗ ನೀವು ಅವನಿಗೆ ಸಹಜವಾಗಿ ಹೇಳುತ್ತೀರಿ “ಹೋಗು ಮುಂದ ಗೇಟ್ ಬಾಗ್ಲಾ ಹಾಕ್ಕೊಂಡ ಹೋಗಪಾ”. ಅವನು, ಆಯ್ತು ಅಂತ ತಲೆಯಲ್ಲಾಡಿಸಿ ಹೋಗ್ತಾನೆ. ಈ ಥರ ಆಗುವುದು ಸ್ವಲ್ಪ ಉತ್ತರ ಕರ್ನಾಟಕದ ಕಡೆ ಜಾಸ್ತಿ ಅಂತ ಅನ್ನಿಸುತ್ತೆ.

ಮೇಲಿನ ಪ್ಯಾರಾದಲ್ಲಿ ನಿಮಗೇನಾದರೂ ತಪ್ಪಿದೆ ಅಂತ ಅನ್ನಿಸಿತಾ? ಇದೆ ಅಂತಾದರೆ ಒಳ್ಳೆಯದು, ನಿಮಗಾಗಲೇ ಹೊಳೆದಿದೆ ಅಂತ ಅರ್ಥ. ಇಲ್ಲಾ ಅಂದರೆ ಇನ್ನೂ ಒಳ್ಳೆಯದು, ಅದೇನಿರಬಹುದು ಅಂತ ಮುಂದೆ ಓದ್ತೀರ. ಇದರಲ್ಲಿ ತಪ್ಪಿದ್ದಿದ್ದು ‘ಗೇಟ್ ಬಾಗಿಲು’ ಅಂತ ಅಂದಿರುವುದರಲ್ಲಿ. ಆಹಾ! ಸಾಮರಸ್ಯ ಅಂದರೆ ಹೀಗಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಹೇಗೆ ಹಾಲು-ಜೇನಿನಂತೆ ಕೂಡಿಕೊಂಡು ಬಿಟ್ಟಿವೆ. ಗೇಟ್ ಮತ್ತು ಬಾಗಿಲು ಎರಡೂ ಒಂದೇ. ಆದರೂ ನಾವು ಗೇಟ್ ಬಾಗಿಲು ಅಂತ ಅಂತೀವಿ. ಯಾಕೆ? ಅದು ನಮ್ಮಿಷ್ಟ! ಗೇಟ್ ಹಾಕ್ಕೊಂಡು ಹೋಗು ಅಥವಾ ಬಾಗಿಲು ಹಾಕ್ಕೊಂಡು ಹೋಗು ಅಂತ ಅಂದರೆ ಸಾಕಲ್ಲವೇ?

laughingನಿಮಗೆ ಗೊತ್ತಿರಬಹುದು, ಗ್ರಹಣ (ಸೂರ್ಯನಿಗೆ ಅಥವಾ ಚಂದ್ರನಿಗೆ ಹಿಡಿದ, ನಮಗೆ ಹಿಡಿದ ಅಲ್ಲ) ಬಿಟ್ಟ ಮೇಲೆ, ಅಥವಾ ಇನ್ಯಾವುದೋ ಮೈಲಿಗೆ ಸಂದರ್ಭದಲ್ಲಿ ನಾವು ಮನೆಯನ್ನು (ಮನವನ್ನಲ್ಲ) ಶುಚಿ ಮಾಡಲು ಬಳಸುವುದು ‘ಆಕಳ ಗೋ ಮೂತ್ರ’ ವನ್ನು. ಈಗ ಬಹುಶಃ ನಿಮಗೇ ಗೊತ್ತಾಗಿರುತ್ತದೆ. ಅಲ್ವಾ ಮತ್ತೆ? ಆಕಳ ಮೂತ್ರಕ್ಕಲ್ಲದೇ ಕತ್ತೆ ಮೂತ್ರಕ್ಕೆ ಗೋ ಮೂತ್ರ ಅನ್ನೋಕಾಗುತ್ತಾ? ಆದರೂ, ನಮಗೆ ‘ಆಕಳ ಗೋ ಮೂತ್ರ’ ಅಂತ ಅನ್ನದ ಹೊರತು ಸಮಾಧಾನ ಇಲ್ಲ.

ಉತ್ತರ ಕರ್ನಾಟಕ ಅಷ್ಟೇ ಏಕೆ? ಬೆಂಗಳೂರನ್ನೇ ತೆಗೆದುಕೊಳ್ಳಿ. ಬೆಂಗಳೂರಿನಲ್ಲಿನ ಪ್ರತಿಯೊಂದು ಹೊಟೇಲುಗಳಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿ ಬರುವ ಪದ- ‘ರೈಸ್ ಬಾತ್’ . ಅದರಲ್ಲೂ ವಿಧ ವಿಧವಾದ ರೈಸ್ ಬಾತ್ ಗಳು ಬೇರೆ. ಕನ್ನಡ ಬರದವರಿಗೂ ಇದು ಗೊತ್ತು. ಯಾಕೆಂದರೆ, ಇದರಲ್ಲಿ ಕನ್ನಡವೇ ಇಲ್ಲವಲ್ಲ. ಮೊದಲನೆಯ ಪದ ಇಂಗ್ಲಿಷ್ ಆದರೆ, ಎರಡನೆಯದು ಮರಾಠಿ (ಹಿಂದಿಯಲ್ಲ, ಹಿಂದಿಯಲ್ಲಿ ಅನ್ನಕ್ಕೆ ‘ಚಾವಲ್’ ಅಂತಾ ಅನ್ನುತ್ತಾರೆ.)

ಎಷ್ಟೋ ಸಲ ಮಾತನಾಡುವಾಗ ನಾವು ಅದರ ಬಗ್ಗೆ ಯೋಚನೇನೆ ಮಾಡಿರಲ್ಲ. ಸುಮ್ಮನೆ ನಮಗೆ ತಿಳಿದಂತೆ ಮಾತಾಡ್ತಾ ಹೋಗ್ತೇವೆ. ಆಡಿದವರಾಗಲೀ, ಕೇಳಿದವರಾಗಲೀ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೋದಾಗ ಈ ತರಹದ ತಪ್ಪುಗಳು ಮರುಕಳಿಸುತ್ತವೆ. ಆದರೆ ಅವು ನಾವು ಅಂದುಕೊಂಡಷ್ಟು ನಿರುಪದ್ರವಿಯೇ? ಅಲ್ಲ. ನಮ್ಮ ಮಕ್ಕಳು ಅಥವಾ ನಮಗಿಂತ ಕಿರಿಯರು (ವಯಸ್ಸಿನಲ್ಲಿ) ಇದನ್ನೇ ಅನುಕರಿಸಬಹುದು. ಅಥವಾ ನಮಗೆ, ಇದೇ ಅಭ್ಯಾಸವಾಗಿ, ಬೇರೆ ಕಡೆಯೂ ಇದೇ ತೆರನಾದ ಮಾತುಗಳನ್ನು ಬಳಸಬಹುದು. ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದಲ್ಲವೇ?

ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷಿನಲ್ಲಿಯೂ ಈ ತರಹದ ಮಾತುಗಳನ್ನಾಡುತ್ತಾರೆ. ಉದಾಹರಣೆಗೆ, she is my cousin sister ಅನ್ನುವುದು. ಇಲ್ಲಿ ಸರಿಯಾದದ್ದು she is my cousin ಎಂಬುವದೇ ಹೊರತು, cousin sister ಅಲ್ಲ. ನಾನು ಕಾಲೇಜಿನಲ್ಲಿರಬೇಕಾದರೆ (ಬಹುಶಃ ನೀವು facebook, whatsapp ನಲ್ಲಿ ಓದಿರಬಹುದು) ತುಂಬಾ ಬಳಕೆಯಲ್ಲಿದ್ದ ಒಂದು ಜೋಕ್ ನೆನಪಿಗೆ ಬಂತು. ಪ್ರಿನ್ಸಿಪಾಲ್ ನ ಯಾರೋ ಕೇಳಿದರಂತೆ ‘ನಿಮಗೆಷ್ಟು ಮಕ್ಕಳು?’ ಆಗ ಅವರು ‘I have two daughters and both are girls’ ಅಂತ ಹೇಳಿದರಂತೆ!
ದಯವಿಟ್ಟು ನಾನು ಹೇಳಿದ್ದನ್ನು ‘ತಪ್ಪು ಅಪಾರ್ಥ’ ಮಾಡಿಕೊಳ್ಳಬೇಡಿ.

‍ಲೇಖಕರು admin

6 May, 2016

8 Comments

  1. sanju walikar

    This one is most interesting of your previous two articles..I can feel your forte/specialness of ur writing in this..this article would have been included with some more ARTHA/APARTHAS..while reading I don’t wanted to it end..anyway nice one..keep good work going..

    I dont know why but ur this article made me to open Avadhimag in my office desktop n hav it book marked..many thanks to u.

    • ಸಂತೋಷ ತಾಮ್ರಪರ್ಣಿ

      Thank you very much for your comments. May be I shall try to include couple of more ‘Artha-Aparthas’ in next articles. If you have enjoyed reading it then, article has served its purpose.

  2. ಪ್ರಮೊದ್ ಹಾವನೂರ್

    Hi Santosh,

    Good to see more articles pouring in. This article has come out vividly . There are copius examples of such blunders. My appreciation to you and your nimble observation.
    Just to be a little critic ( hope you don’t mind), the ending could have been a little better. This thought came to me because the body of the article was really appealing and hence, probably the expectation at the end of the article was elevated.
    Hope to read more interesting articles. All the best.

    • ಸಂತೋಷ ತಾಮ್ರಪರ್ಣಿ

      Hi,
      I agree with you as few have expressed more or less the same about the ending. It could have been little more enriching.
      It is appreciated that you spent time in reading and subsequently, analyzing. The latter helps in improving the skill. Thank you for your suggestion and keep suggesting. Finally, I don’t mind!
      Thank you.

  3. prashant kulkarni

    Superb le Santosh, more interesting, getting full maja while reading article, post more such article, can be filtered and pure our language

    • ಸಂತೋಷ ತಾಮ್ರಪರ್ಣಿ

      Happy to know that you have enjoyed reading it. Thank you.

  4. GGKKNN

    “ಬೆಂಗಳೂರನ್ನೇ ತೆಗೆದುಕೊಳ್ಳಿ”

    kodi saar!! kodi kodi!! 😉 😀

    • Anonymous

      Ha ha ha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading