ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಜುನ್ ಶೆಣೈ ಗೆ ಬಾಲ ಪುರಸ್ಕಾರ

“ವಿದ್ಯಾಸಾಗರ ಬಾಲ ಪುರಸ್ಕಾರ”-2013


ಕಳೆದ 14 ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆ, ಶಹಾಪುರ-ಇವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ “ವಿದ್ಯಾಸಾಗರ ಬಾಲ ಪುರಸ್ಕಾರ” ಈ ಬಾರಿ ಚಿಕ್ಕಮಗಳೂರಿನ ಬಸವನಹಳ್ಳಿಯ ಅರ್ಜುನ್ ಶೆಣೈ ಅವರಿಗೆ ದೊರಕಿದೆ. ಹಿರಿಯ ಕವಿ ಶ್ರೀ ಆನಂದ ಝಂಜರವಾಡ ತೀರ್ಪುಗಾರರಾಗಿದ್ದರು.

ತೀರ್ಪುಗಾರರ ಮಾತುಗಳು:

2013 ರ “ವಿದ್ಯಾಸಾಗರ ಬಾಲ ಪುರಸ್ಕಾರ”-ಕ್ಕಾಗಿ ಅಂತಿಮವಾಗಿ ಪರಿಶೀಲನೆಗೆ ಬಂದ ನಾಲ್ಕು ಕೃತಿಗಳಲ್ಲಿ ಅರ್ಜುನ್ ಶೆಣೈ ಇವರ ಶೀರ್ಷಿಕೆ ಇನ್ನೂ ಇಲ್ಲದ ಕವನ ಸಂಕಲನವು, ಇನ್ನುಳಿದ ಮೂರೂ ಸಂಕಲನಗಳಿಗಿಂತ ಹೆಚ್ಚು ಗಟ್ಟಿಯಾಗಿದೆ ಎನ್ನಿಸಿತು.
ಮಕ್ಕಳೇ ರಚಿಸಿದ ಕವಿತೆಗಳನ್ನು ಒಂದು ಸಂಕಲನದ ರೂಪದಲ್ಲಿ ಪರಿಶೀಲಿಸುವದೆಂದರೆ, ಒಂದು ಮಾವಿನ ಮರವನ್ನು ಅದು ಇನ್ನೂ ‘ಬೆಳೆಯುವ’ ಸ್ಥಿತಿಯಲ್ಲೇ ಇರುವಾಗ ನೋಡಿ, ಅದರ ಹಸಿರು, ಅದರ ಆ ವಯಸ್ಸಿಗನುಗುಣವಾದ ಸಹಜ ವಿಸ್ತಾರ, ತನ್ನ ಸುತ್ತಲಿನ ಜಗತ್ತಿನ ಬಗೆಗೆ ಅದು ಇಟ್ಟುಕೊಂಡಿರುವ ವಿಸ್ಮಯದ ಮತ್ತು ವಾತ್ಸಲ್ಯದ ಭಾವಗಳು, ಇವುಗಳನ್ನು ಗಮನಿಸುವುದು ಮುಖ್ಯವಾಗುತ್ತದೆ. ತನ್ನ ಮುಂದಿನ ವಿಕಾಸದ ನೆಲೆಗೆ ಈ ಬಾಲ-ಕವಿಗಳ ಪ್ರತಿಭೆ ಎಷ್ಟು ಸಹಜ ಚೈತನ್ಯದಿಂದ ಉನ್ಮಖಗೊಂಡಿದೆ ಎಂಬುದನ್ನು ನಾನು ಇಲ್ಲಿ ಮುಖ್ಯವಾಗಿ ಗಮನಿಸಿದ್ದೇನೆ.
ಅರ್ಜುನ್ ಶೆಣೈ ಅವರ ಈ ಮೂವತ್ತಾರು ಕವಿತೆಗಳಲ್ಲಿ ನಾನು ಕಂಡಂತೆ ಒಂದು ಕವಿ ಸಹಜ ಮುಗ್ಧತೆ ಇದೆ. ಜೊತೆಗೆ ಈ ಕಾಲದ ಸುತ್ತಣ ಜಗತ್ತಿನ ಹಲವು ತಿಳುವಳಿಕೆಗಳಿಗೆ ಕವಿ ಮನಸ್ಸಿನ ಸ್ಪಂದನವಿದೆ. ಲಯಶುದ್ಧಿ, ಭಾಷೆಯ ಚೆಲುವಿಕೆಯ ಸಹಜತೆ, ಕವಿಯು ವಸ್ತುವನ್ನಾಗಿ ಒಳಗೆ ತೆಗೆದುಕೊಳ್ಳುವ ಜಗತ್ತಿನ ವಿಸ್ತಾರ, ಇವೆಲ್ಲವೂ ಸಾಕಷ್ಟು ಸತ್ವಯುತವಾಗಿವೆ. ಈ ಬಾಲ-ಕವಿಯ ಕಣ್ಣುಗಳಲ್ಲಿ ಕವಿಯ ಬಗೆಯಲ್ಲಿ ಕಾಣುವ ತವಕವಿದೆ. ಪ್ರಯತ್ನವಿದೆ. ಸಾಫಲ್ಯವೂ ಇದೆ.
ಅರ್ಜುನ್ ಶೆಣೈ ಎಂಬ ಈ ವಿದ್ಯಾರ್ಥಿ ಕ್ರಮೇಣ ಬೆಳೆದು, ವಿಸ್ತಾರ-ಆಳ ಎರಡನ್ನೂ ಪಡೆದುಕೊಂಡು, ತನ್ನ ಈಗಿನ ಮುಗ್ಧತೆಯನ್ನು ಕಳೆದುಕೊಳ್ಳದೆ ಮಹತ್ವದ ಮಾಗಿದ ಕವಿಯಾಗಿ ಕನ್ನಡದ ನೆಲದಲ್ಲಿಯೇ ಅರಳಲೆಂದು ಆಶಿಸುತ್ತೇನೆ.
 

‍ಲೇಖಕರು G

29 October, 2013

5 Comments

  1. malathi S

    ಕಾಂಗ್ರಾಟ್ಸ್ ರೆ ಬಾಳಾ. ಅಶಿ ಮುಕಾರಿ ಯೋ…..ಅನೀ ಮಸ್ತ ಮಸ್ತ ಪುರಸ್ಕಾರು ಮೇಳೊ ತುಕ್ಕಾ
    🙂
    ಮಾಲತಿ ಎಸ್

    • Anonymous

      thanks tumka.but tummi kon monu kalni. please reply karathi.

  2. malathi S

    Arun/Arjun ಯಾವುದು ಸರಿ??

    • Anonymous

      my name is arjun shenoy.iam the winner of vidyasagara bala puraskar. arun shenoy is my father.

    • Anonymous

      mother vinaya shenoy. thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading