ಅಯ್ಯಯ್ಯೋ! ಹೆಸರು ಇಡೋ ಸಹವಾಸ ಬೇಡಪ್ಪಾ..

ಪ್ರಕಾಶ ಸಿ. ರಾಜಗೋಳಿ

ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಮಕ್ಕಳಿಗೆ ಮುದ್ದಾದ ಹೆಸರು ಇಡೋದು ಒಂದು ಥರ ಪರೀಕ್ಷೆ ಇಲ್ಲ ಚಾಲೇಂಜ್ ಆಗಿ ಬಿಟ್ಟಿದೆ. ಜನ್ಮ ನಾಮ ರೀತಿಯಾಗಿ ಅಥವಾ ನ್ಯೂಮರಾಲಜಿ ಪ್ರಕಾರ ಅಥವಾ ಕುಲಗುರುಗಳು, ಹಿರಿಯರ ಒತ್ತಾಸೆ, ಗಂಡ ಹೆಂಡತಿ ಒಪ್ಪಂದ ಮಾಡಿಕೊಂಡ ಹೆಸರು ನಾಮಕರಣ ಮಾಡೋದು etc etc

ಕೆಲವು ಹೆಸರು ಅಂತೂ ಅರ್ಥಾನೇ ಆಗೂದಿಲ್ಲ. “ಹಂಗoದ್ರ?” ಅಂತ ಹೆಸರಿನ ಮೀನಿಂಗು ಕೇಳಬೇಕು ಇಲ್ಲಾ ಗೂಗಲ್ಲಿನಲ್ಲಿ ಹುಡಕಬೇಕು!!

ನಮ್ಮ ಕಡಿ ಮಕ್ಕಳ ಹೆಸರು ಇಡೋದು ಮೊದಲು ಅಷ್ಟೊಂದು ತ್ರಾಸ್ ಇರಲಿಲ್ಲ. ಆಯಾಯ ಹಬ್ಬದ ಹಿಂದ ಮುಂದ ಹುಟ್ಟಿದ್ರ ಆ ದೇವರ ಹೆಸರು ಇಡೋದು. ಬಸವರಾಜ, ಬಸಮ್ಮ, ನಂದೀಶ (ಬಸವ ಜಯಂತಿ), ನಾಗೇಶ, ನಾಗರತ್ನ (ನಾಗಪಂಚಮಿ), ಗೌರಿ, ಶ್ರಾವಣಿ, ಮಂಗಳಾ, (ಶ್ರಾವಣ ಮಾಸ), ಗಣೇಶ, ವಿನಾಯಕ (ಗಣೇಶ ಚತುರ್ಥಿ), ಚಾಮುಂಡಿ, ದುರ್ಗಾ (ದಸರಾ), ಲಕ್ಷ್ಮಿ(ದೀಪಾವಳಿ), ಕೃಷ್ಣ, ಕೇಶವ, ಮೋಹನ (ಗೋಕುಲಾಷ್ಟಮಿ), ಮನೋಜ, ಮದನ, ಮನ್ಮಥ, ರತಿ (ಹೋಳಿ ಹುಣ್ಣಿಮೆ), ರಾಮ, ಶ್ರೀರಾಮ (ರಾಮನವಮಿ), ಹನುಮಂತ, ಮಾರುತಿ, ಆಂಜನೇಯ (ಹನುಮ ಜಯಂತಿ), ಶಿವ, ರುದ್ರ, ಮಹೇಶ, ಶಂಕರ, ಶಿವಾನಿ, ಈಶಾನ (ಶಿವರಾತ್ರಿ), ಗುರು, ಸಿದ್ಧಾರ್ಥ, ಪೂರ್ಣಿಮಾ (ಗುರು ಪೂರ್ಣಿಮೆ) ಇತ್ಯಾದಿ.

ಹಿಂದೂ   ಪಂಚಾಂಗ ಪ್ರಕಾರ ನೋಡೂದಾದ್ರ: ಮಳೆ ನಕ್ಷತ್ರ (ಅಶ್ವಿನಿ, ಭರಣಿ, ಸ್ವಾತಿ, ರೋಹಿಣಿ, ರೇವತಿ, ಅನುರಾಧ, ಕೃತ್ತಿಕಾ, ಅಭಿಜಿತ್) ರಾಶಿ (ಮಿಥುನ, ರಿಷಭ, ಸುಕನ್ಯಾ), ತಿಂಗಳು (ಚೈತ್ರ, ವೈಶಾಖ, ಕಾರ್ತಿಕ, ಫಲ್ಗುಣಿ), ಋತುಗಳು (ಹೇಮಂತ, ಶಿಶಿರ, ವಸಂತ, ವರ್ಷಾ)

ಜಾತ್ರೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಇನ್ನ ಯಾವ್ದರೆ ಜಾತ್ರಿ ಹಿಂದ ಮುಂದ ಹುಟ್ಟಿದ್ರ ಅದೇ ದೇವರ ಹೆಸರು ಇಡೋದು. ಯಲ್ಲಪ್ಪ, ಯಲ್ಲವ್ವ, ರೇಣುಕಾ (ಸವದತ್ತಿ ಎಲ್ಲಮ್ಮ ಗುಡ್ಡ ಜಾತ್ರಿ), ಶಂಕರಪ್ಪ, ಶಂಕರವ್ವ (ಬಾದಾಮಿ ಬನಶಂಕರಿ ಜಾತ್ರಿ), ದಾನಪ್ಪ, ದಾನವ್ವ(ಗುಡ್ಡಾಪುರ ದಾನಮ್ಮ ದೇವಿ ಜಾತ್ರಿ), ಮುರುಗೆಪ್ಪ, ಮುರಿಗೆವ್ವ, ಮುರುಘೇಂದ್ರ, ಶಿವಯೋಗಿ, ಮೃತ್ಯುಂಜಯ, ಮಹಾಂತೇಶ (ಧಾರ್‍ವಾಡ ಮುರುಘಾ ಮಠ ಜಾತ್ರಿ,), ಶರಣಪ್ಪ, ಶರಣವ್ವಾ  (ಕಲಬುರಗಿ ಶರಣಬಸವೇಶ್ವರ ಜಾತ್ರಿ), ಉಳವಪ್ಪ, ಚನ್ನಬಸಪ್ಪ, ಚನ್ನಬಸವ್ವ (ಉಳಿವಿ ಜಾತ್ರಿ), ಈರಣ್ಣ, ಈರವ್ವ, ವೀರಭದ್ರ, ವೀರೇಶ (ಯಡೂರು ಇಲ್ಲ ಗೊಡಚಿ ವೀರಭದ್ರೇಶ್ವರ ಜಾತ್ರಿ), ಕೊಟ್ರೇಶ (ಕೂಟ್ಟೂರು ಜಾತ್ರಿ), ಗವಿಸಿದ್ಧೇಶ, ಗವಿಯಪ್ಪ (ಕೊಪ್ಪಳ ಜಾತ್ರೆ), ದ್ಯಾಮಣ್ಣ, ದ್ಯಾಮವ್ವ, ದುರ್ಗಪ್ಪ, ದುರ್ಗವ್ವ, ಕಲ್ಲಪ್ಪ, ಕಲ್ಲವ್ವ, (ಗ್ರಾಮದೇವತೆಗಳ ಜಾತ್ರಿ,).

ಮನೆದೇವ್ರು ಇಲ್ಲ ಪ್ರಸಿದ್ಧ ತೀರ್ಥ ಕ್ಷೇತ್ರಗಳ ದೇವರ ಹೆಸರು ಇಡೋದು ತುಂಬಾ ಕಾಮನ್: ರಾಘವೇಂದ್ರ (ಮಂತ್ರಾಲಯ), ಶ್ರೀಶೈಲ, ಶೈಲಾ, ಮಲ್ಲಿಕಾರ್ಜುನ, ಭ್ರಮರಾಂಬ (ಶ್ರೀಶೈಲ ಮಲ್ಲಿಕಾರ್ಜುನ), ವೆಂಕಟೇಶ, ತಿಮ್ಮಪ್ಪ, ಬಾಲಾಜಿ, ಪದ್ಮಾ (ತಿರುಪತಿ), ಸಾಯಿ (ಶಿರಡಿ ಸಾಯಿ ಬಾಬಾ), ಮಂಜುನಾಥ, ಮಂಜುಳಾ (ಧರ್ಮಸ್ಥಳ ಮಂಜುನಾಥ), ಸಂಗಪ್ಪ , ಸಂಗವ್ವ, ಸಂಗಣ್ಣ, ಸಂಗಮೇಶ (ಕೂಡಲಸಂಗಮ), ಸುಬ್ರಮಣ್ಯ, ಷಣ್ಮುಖ (ಕುಕ್ಕೆ ಸುಬ್ರಹ್ಮಣ್ಯ), ಅಯ್ಯಪ್ಪ, ಮಣಿಕಂಠ (ಶಬರಿ ಮಲೆ ಅಯ್ಯಪ್ಪ), ನಂಜುಂಡೇಶ್ವರ, ನಂಜುಂಡಿ, ಶ್ರೀಕಂಠ (ನಂಜನಗೂಡು) ಇತ್ಯಾದಿ

ವಚನಕಾರರ ಪ್ರಭಾವದಿಂದ ತಮ್ಮ ಮಕ್ಕಳಿಗೆ ಬಸವಪ್ರಭು, ಅಕ್ಕಮಹಾದೇವಿ, ಅಲ್ಲಮ, ಅಲ್ಲಮಪ್ರಭು, ಮುಕ್ತಾಯಕ್ಕ, ಚನ್ನಬಸವಣ್ಣ, ಶರಣ, ಶರಣ್ಯ, ಸಿದ್ಧರಾಮ, ಗುಂಡಯ್ಯ, ಕಕ್ಕಯ್ಯ, ಮಾರಯ್ಯ ಎಂದು ಹೆಸರಿಟ್ಟು ಕೃತಾರ್ಥರಾಗುತ್ತಾರೆ.

ರಾಮಾಯಣ ಮಹಾಭಾರತ ಗಳಿಂದ ಪ್ರಭಾವಿತರಾಗಿದ್ದರೆ ತಮ್ಮ ಮಕ್ಕಳಿಗೆ  ದಶರಥ, ರಾಮ, ವೈದೇಹಿ, ಲಕ್ಷ್ಮಣ, ಭರತ, ಶತ್ರುಘ್ನ, ಸೀತಾ, ಜಾಹ್ನವಿ, ಉರ್ಮಿಳಾ, ಧರ್ಮರಾಜ, ಭೀಮ, ಅರ್ಜುನ, ಧನಂಜಯ, ಸಹದೇವ, ನಕುಲ, ಸುಭದ್ರಾ, ಅಭಿಮನ್ಯು, ಭೀಷ್ಮ, ದ್ರೌಪದಿ, ವಾಸುದೇವ, ರುಕ್ಮಿಣಿ, ಕರ್ಣ, ಬಲರಾಮ, ರಾಧಾ, ಶಂತನು, ಅಶ್ವತ್ಥಾಮ, ಸುಮಿತ್ರಾ, ಕೌಸಲ್ಯ, ಸುಗ್ರೀವ, ಅಂಗದ, ತಾರಾ, ಇಂದ್ರಜೀತ್, ಸುಲೋಚನಾ, ಅಂಜನಾ, ಪಾರ್ಥ, ಪಾರ್ಥಸಾರತಿ ಅಂತ ನಾಮಕರಣ ಮಾಡಬಹುದು.

ಹೆಸರಾಂತ ಋಷಿಗಳ ಇಲ್ಲವೇ ಋಷಿ ಪತ್ನಿಯರ ಹೆಸ್ರನ್ನು ತಮ್ಮ ಮಕ್ಕಳಿಗೆ ಇಡುವ ರೂಢಿಯೂ ಇದೆ: ವಿಶ್ವಾಮಿತ್ರ, ಭಾರದ್ವಾಜ, ಕೌಶಿಕ, ಜಮದಗ್ನಿ, ಗೌತಮ , ಅತ್ರಿ, ವ್ಯಾಸ, ವಾಲ್ಮೀಕಿ, ಕಶ್ಯಪ, ವಶಿಷ್ಟ, ಮನು, ಕಪಿಲ, ಮಾರ್ಕಂಡೇಯ, ಪ್ರಹ್ಲಾದ, ಪರಾಶರ, ಕಣ್ವ, ನಚಿಕೇತ, ಪರಶುರಾಮ, ಸನತ್ಕುಮಾರ, ಪತಂಜಲಿ, ಅನಸೂಯಾ, ಅಹಲ್ಯಾ,  ಲೋಪಮುದ್ರಾ, ಮೈತ್ರೇಯಿ, ಅದಿತಿ, ಅರುಂದತಿ etc

ವೇದ-ಪುರಾಣಗಳಿಗೆ ಸಂಬಂಧಪಟ್ಟ ಕೆಲ ಹೆಸರುಗಳು ಅಥರ್ವ, ಸಾವಿತ್ರಿ, ಗಾಯತ್ರಿ, ಧ್ರುವ, ದಿಲೀಪ, ಶಾರದಾ, ಶಕುಂತಲಾ, ಮೇನಕಾ, ಊರ್ವಶಿ, ರಂಭಾ, ಸತಿ, ದ್ರಾಕ್ಷಾಯಿಣಿ, ವೇದಾ, ವೇದವತಿ, ಅಮೃತ, ಅಮೃತಾ, ಸುಧಾ, ಅನ್ನಪೂರ್ಣ ಇತ್ಯಾದಿ

ತೀರ್ಥ ಕ್ಷೇತ್ರ ದರ್ಶನ ಮಾಡಿದ್ದಕ್ಕೋ ಇಲ್ಲ ಆಯಾ ದೇವರ ಆಶೀರ್ವಾದದಿಂದ ಮಕ್ಕಳು ಹುಟ್ಟಿದ್ರ ಅವರಿಗೆ ವೈಷ್ಣವಿ (ವೈಷ್ಣೋದೇವಿ), ಕೇದಾರ್ (ಕೇದಾರನಾಥ), ಬದರಿ (ಬದರೀನಾಥ), ವಿಶ್ವನಾಥ, ವಿಶಾಲಾಕ್ಷಿ, ವಿಶ್ವೇಶ್ವರ, ಕಾಶಪ್ಪ, ಕಾಶವ್ವ (ಕಾಶಿ), ಮಾನಸಿ (ಮಾನಸ ಸರೋವರ), ಕೈಲಾಶ (ಕೈಲಾಸ ಪರ್ವತ), ಮೀನಾಕ್ಷಿ (ಮಧುರೆ ಮೀನಾಕ್ಷಿ), ಕಾಮಾಕ್ಷಿ (ಕಂಚಿ ಕಾಮಾಕ್ಷಿ), ವಿಠಲ, ಪಾಂಡುರಂಗ, ಪುಂಡಲೀಕ (ಪಂಢರಾಪುರ). ಸಿದ್ದೇಶ, ಸಿದ್ಧಲಿಂಗ, ಸಿದ್ದಪ್ಪ (ಎಡೆಯೂರು ಸಿದ್ಧಲಿಂಗೇಶ್ವರ) ಅಂತ ಹೆಸರಿಡ್ತಾರೆ.

ಮನೆಯಲ್ಲಿ ಹಿರಿಯರು ಅಥವಾ ಸಂಭಂಧಿಗಳು ತೀರಿಕೊಂಡ ನಂತ್ರ ಹುಟ್ಟಿದ್ರ ಅವರದೇ ಹೆಸರು ಇಡೋದು ಇಲ್ಲಂದ್ರ ಮುದುಕಪ್ಪ ಮುದುಕವ್ವ ಅಂತ ಹೆಸರು ಇಟ್ಟು ಕೈ ತೊಳಕೊಳ್ಳೋದು.

ಸಿನೆಮಾ ಹಿಡಿಸಿದ್ರ ಇಲ್ಲವೇ ಸಿನೆಮಾದೊಳಗಿನ ಪಾತ್ರ ಹಿಡಿಸಿದ್ರೆ ಅದರದೇ ಹೆಸರು ಇಡೋದು ಉದಾಹರಣೆಗೆ ಓಂ, ಸಾಮ್ರಾಟ್, ಜೋಗಿ, ಆನಂದ, ಭಜರಂಗಿ, ರಾಮಾಚಾರಿ, ಐರಾವತ, ದಿಯಾ, ಸಾನ್ವಿ etc

ತಮ್ಮ ಫೇವರಿಟ್ ಹೀರೋ ಹೀರೋಯಿನ್ ಹೆಸರುಗಳನ್ನು ಇಡೋದು ಅಗದೀ ಕಾಮನ್: ವಿಷ್ಣು, ಅಂಬರೀಷ್, ರಾಜಕುಮಾರ್, ಸುದೀಪ್, ದರ್ಶನ, ಮಾಲಾಶ್ರೀ, ಆರತಿ, ಭಾರತಿ, ದೀಪಿಕಾ, ಐಶ್ವರ್ಯ, ಶ್ರೀದೇವಿ, ಅನುಷ್ಕಾ, ಸೋನಾಲಿ, ಮಾಧುರಿ, ಅಮಿತ್, ರಾಜೇಶ್, ರಾಜ್, ಅಕ್ಷಯ್, ಚಿರಂಜೀವಿ, ರಜನಿಕಾಂತ್, ಹೃತಿಕ್, ಮಿಥುನ್, ಪ್ರಭಾಸ್, ರಾಹುಲ್, ರೇಖಾ, ಸೀಮಾ, ರಣಬೀರ್, ರಣವೀರ್, ಸಂಜಯ್ , ಸೋನು, ವರುಣ್, ಯಶ್ ಇತ್ಯಾದಿ

ನಮ್ಮ ದೇಶದಲ್ಲಿ ಹೆಸರುವಾಸಿಯಾದ ರಾಜರು, ರಾಣಿಯರು ಮತ್ತು ಅವರಿಗೆ ಸಂಬಂಧಿಸಿದ ಹೆಸರುಗಳನ್ನು ಕೆಲವರು ತಮ್ಮ ಮಕ್ಕಳಿಗೆ ಇಡುತ್ತಾರೆ. ಅಶೋಕ, ಪುಲಿಕೇಶಿ, ಚನ್ನಮ್ಮ, ಮಲ್ಲಮ್ಮ, ಹರ್ಷವರ್ಧನ, ಪೃಥ್ವಿರಾಜ, ಶಿವಾಜಿ, ತಾನಾಜಿ, ಸಂಭಾಜಿ, ಮೌರ್ಯ, ಅಮೋಘವರ್ಷ, ರಾಣಾ, ಚೇತಕ, ಮಹೇಂದ್ರ, ರಾಜೇಂದ್ರ, ವಿಕ್ರಮಾದಿತ್ಯ, ಕೃಷ್ಣದೇವರಾಯ, ಚಾಮರಾಜ, ಕೃಷ್ಣರಾಜ ಇತ್ಯಾದಿ.

ಸ್ವಾತಂತ್ರ್ಯ ಹೋರಾಟಗಾರರು ಭಾಳ ಮೆಚ್ಚಿಕೆ ಆಗಿದ್ರ ಸುಭಾಷ್ (ಸುಭಾಷ್ ಚಂದ್ರ ಬೋಸ್), ಭಗತ್ (ಭಗತ್‌ಸಿಂಗ್), ಆಜ಼ಾದ್ (ಚಂದ್ರಶೇಖರ್ ಆಜ಼ಾದ್), ಮಂಗಲ್ (ಮಂಗಲ್ ಪಾಂಡೆ), ಸರೋಜ, ಸರೋಜಿನಿ (ಸರೋಜಿನಿ ನೈಡು) ಅಂತ ಹೆಸರಿಡೋದು.

ಅವಳಿ ಜವಳಿ ಹುಟ್ಟಿದ್ರೆ ಲವ-ಕುಶ, ಗಂಗಾ-ಜಮುನಾ, ರಾಮ-ಶ್ಯಾಮ, ಸೀತಾ- ಗೀತಾ, ಸಂಜು-ಮಂಜು, ರವಿ-ಶಶಿ, ಅಂಜು-ಮಂಜು etc fixed

ಗೌರವ ಸೂಚಕ ರೀತಿಯಿಂದ ನೋಡಬೇಕೆಂದ್ರೆ. ಸಾಹೇಬ (ಅಣ್ಣಾಸಾಹೇಬ, ಅಪ್ಪಾಸಾಹೇಬ, ಬಾಳಾಸಾಹೇಬ, ರಾವಸಾಹೇಬ, ಕಾಕಾಸಾಹೇಬ, ರಾಣಿ ಸಾಹೇಬ), ಗೌಡ (ರಾಮನಗೌಡ, ದೇವೇಗೌಡ, ಲಿಂಗನಗೌಡ), ರಾಯ (ಹನುಮಂತರಾಯ, ಸುಬ್ಬರಾಯ), ರಾವ್ (ನರಸಿಂಹ ರಾವ್, ಹಯವದನ ರಾವ್), ದೇವಿ (ಉಮಾದೇವಿ, ರಮಾದೇವಿ), ತಾಯಿ (ಸಂಗುತಾಯಿ, ಶಾಂತಾತಾಯಿ), ದಾಸ (ರಾಮದಾಸ, ದೇವದಾಸ), ನಂದ (ವಿಜಯಾನಂದ, ಸರಸಾನಂದ, ರಮಾನಂದ, ಶಿವಾನಂದ, ಲಿಂಗಾನಂದ, ಆತ್ಮಾನಂದ, ನಿತ್ಯಾನಂದ, ಚಿದಾನಂದ), ಈಶ (ಗಿರೀಶ, ಸುರೇಶ, ರಮೇಶ, ವಾಗೀಶ, ಸತೀಶ, ಜಗದೀಶ, ಉಮೇಶ), ಕಾಂತ (ರಮಾಕಾಂತ, ಉಮಾಕಾಂತ, ಶಶಿಕಾಂತ, ಶಿವಕಾಂತ), ನಾಥ (ಸೋಮನಾಥ, ರಘುನಾಥ, ಜಗನ್ನಾಥ), ಧರ (ಗಂಗಾಧರ, ಇಂದುಧರ, ಗಿರಿಧರ, ಶಶಿಧರ), ಪತಿ (ಪಶುಪತಿ, ಉಮಾಪತಿ)

ಆಟಗಾರರು ಇವರಿಗೆ ಫೇವರಿಟ್ ಆಗಿದ್ರೆ ಅವರ ಹೆಸರೇ ಇಡೋದು. ಕಪಿಲ್, ಸುನಿಲ್, ವಿರಾಟ್, ಸಚಿನ್, ಮಹೀಂದ್ರಾ (ಕ್ರಿಕೆಟ್), ಸೈನಾ, ಸಿಂಧು (ಬ್ಯಾಡ್‌ಮಿಂಟನ್), ಧ್ಯಾನ, ಧನ್ರಾಜ್ (ಹಾಕಿ), ಸುಶೀಲ್, ಸಾಕ್ಷಿ, (ಕುಸ್ತಿ)

ಪಂಚ ಮಹಾಭೂತಗಳು ,ಗ್ರಹ, ನಕ್ಷತ್ರ ಅಥವಾ ತತ್ಸಂಬಂದಿ ಹೆಸರುಗಳು ಕೆಲವರಿಗೆ ಲೈಕ್ ಅಕ್ಕಾವು ಅವರು ತಮ್ಮ ಮಕ್ಕಳಿಗೆ: ಇಂದ್ರ, ಇಂದ್ರಾಣಿ, ಅರುಣ, ವರುಣ, ಅನಿಲ, ಪವನ, ರವಿ, ಮಾರ್ತಾಂಡ, ಬಾಲಚಂದ್ರ, ಚಂದ್ರಿಕಾ, ಸೋಮು, ಗುರು, ಬ್ರಹಸ್ಪತಿ, ಸೌದಾಮಿನಿ, ಲೋಕೇಶ, ತುಷಾರ, ರೋಹಿತ, ಪ್ರಕಾಶ, ಕಿರಣ, ರಶ್ಮಿ, ಪ್ರಭಾ, ಉಷಾ, ಛಾಯಾ, ಸಂಧ್ಯಾ, ಸಂದೀಪ, ಮೇಘನಾ, ಇಳಾ, ಮಹಿ, ಧರಿಣಿ, ಭೂಮಿಕಾ, ವಸುಂಧರಾ, ಪೃಥ್ವಿ, ಸೃಷ್ಟಿ, ಆಕಾಶ, ಗಗನ, ವರ್ಷಾ, ಕಲ್ಯಾಣಿ, ರಜನಿ, ರಜನೀಶ, ನಿಶಾ, ವಿಶ್ವ, ಜಗತ್, ನಕ್ಷತ್ರ, ಚುಕ್ಕಿ, ಶಿಖರ, ಶಿಖಾ, ಇಬ್ಬನಿ, ನಿಸರ್ಗ ಅಂತ ಹೆಸರಿಡತಾರೆ.

ಭಾಳ ಮಂದಿ ತಮ್ಮ ಏರಿಯಾದ ನದಿಗಳ ಹೆಸರನ್ನು ಮಕ್ಕಳಿಗೆ ಇಡತಾರೆ. ಮಲಪ್ರಭಾ, ಕೃಷ್ಣಾ, ತುಂಗ, ಭದ್ರಾ, ಭದ್ರೇಶ್, ತುಂಗಭದ್ರಾ, ನರ್ಮದಾ, ಕಾವೇರಿ, ಶರಾವತಿ, ನೇತ್ರಾವತಿ, ಸಿಂಧು, ಬ್ರಹ್ಮಪುತ್ರ, ಯಮುನಾ, ಗಂಗಾ, ಬಾಗೀರಥಿ, ಸರಸ್ವತಿ, ಕಪಿಲಾ, ಹೇಮಾವತಿ, ಗೋದಾವರಿ, ದಾಮೋದರ, ಗೋಮತಿ, ತೀಸ್ತಾ, ಭೀಮ, ಇಂದ್ರಾವತಿ, ಮಹಾನಂದಾ, ಕಬಿನಿ, ಕಾಳಿ, ಭವಾನಿ, ಲೋಕಪಾವನಿ, ಶಾಲ್ಮಲಾ, ಮಂದಾಕಿನಿ ಇತ್ಯಾದಿ

ಸಾಹಿತ್ಯ, ನೃತ್ಯ, ಸಂಗೀತಕ್ಕೆ ಸಂಬಂಧಿಸಿದಂತೆ ಕೆಲ ಚಾಲ್ತಿಯಲ್ಲಿರುವ ಹೆಸರುಗಳು: ಕಾವ್ಯ, ಕವಿತಾ, ಕವನ, ವಚನ, ಕಾದಂಬರಿ, ಪಲ್ಲವಿ, ರಚನಾ, ಲಿಪಿ, ನುಡಿ, ಸ್ವರಾ, ಅಕ್ಷರಾ, ವೀಣಾ, ಸಿತಾರ, ಬಾಸುರಿ, ಸಾರಂಗಿ, ಮುರಳಿ(ಲಿ), ಗೀತಾ, ಸಂಗೀತಾ, ಇಂಚರಾ, ಶ್ರುತಿ, ತರಂಗ, ಲಹರಿ, ಶ್ರಾವ್ಯ, ವೃಂದಾ, ಅಂಕಿತಾ, ಸಂಕೇತ, ಲೇಖಾ, ಸುಲೇಖಾ, ನಟರಾಜ, ಭೈರವಿ, ಶಿಕ್ಷಾ, ಬೃಂದಾ …….

ಪ್ರಾಣಿಗಳ ಮತ್ತು ಪಕ್ಷಿಗಳ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಕೆಲವೊಬ್ರು ಇಡತಾರೆ. ವೃಷಭ, ಬಸವ, ಗೂಳಪ್ಪ, ಸಾರಂಗ, ಕಸ್ತೂರಿ, ನಂದಿನಿ, ನಂದಿ, ಮಯೂರ, ಹಂಸ, ಮೈನಾ, ಕೋಕಿಲಾ, ಸುರಭಿ, ಗಜಪತಿ, ಲೋಹಿತಾಶ್ವ, ಫಣೀಂದ್ರ, ಪನ್ನಗ ಇತ್ಯಾದಿ

ಹೂವುಗಳ ಅಥವಾ ತತ್ಸಂಬಂಧಿ ಪದಗಳೆ ಹೆಸರುಗಳಾದಾಗ: ಗುಲಾಬಿ, ಮಲ್ಲಿಕಾ, ಸೇವಂತಿ, ಕಮಲಾ, ಕಮಲಾಕರ, ಅರವಿಂದ, ನೀರಜ, ಪಾರಿಜಾತ, ಚಂಪಾ, ನಳಿನಿ, ಕುಮುದಾ, ಕುಮುದಿನಿ, ಸುಮಾ, ಪುಷ್ಪಾ, ಕುಸುಮಾ, ಪೂವಣ್ಣ, ಮೃಣಾಲಿನಿ, ಪದ್ಮಜಾ, ಕೇದಿಗೆ, ನೈದಿಲೆ, ಅಂಕುರ, ಪರಾಗ, ಮಕರಂದ, ಮಧು, ಭ್ರಮರ, ಮಂಜರಿ ಅಂತ ಕರೀತಾರೆ.

ಪೂಜೆ ಪುನಸ್ಕಾರಗಳಿಗೆ ಸಂಭಂಧ ಪಟ್ಟಂತ ಕೆಲವು ಹೆಸರುಗಳನ್ನು ನೋಡೋದಾದ್ರೆ…ಪೂಜಾ, ಪ್ರಾರ್ಥನಾ, ಅಭಿಷೇಕ್, ಪ್ರಸಾದ, ಹಾಲಪ್ಪ, ಅರ್ಚನಾ, ತೀರ್ಥ, ಅರ್ಘ್ಯ, ಆರತಿ, ಜ್ಯೋತಿ, ದೀಪಾ, ಕಾಂತಿ, ಉಜ್ವಲ, ದೀಪಕ, ಮೂರ್ತಿ, ಪ್ರತಿಮಾ, ಶಿಲ್ಪಾ, ಇಷ್ಟಲಿಂಗ, ಓಂಕಾರ, ನಿರಂಜನ, ಪ್ರಣವ, ತಿಲಕ, ಸ್ವಸ್ತಿಕ, ಧ್ಯಾನ, ನಮನ, ವಂದನ, ದರ್ಶನ, ಅಭಯ, ಆಶೀರ್ವಾದ, ಭಕ್ತಿ, ದೀಕ್ಷಾ ಪವಿತ್ರಾ, ಪತ್ರೆಪ್ಪ, ಮಂತ್ರ, ಅಕ್ಷತಾ, ಸನ್ನಿಧಿ, ಚೇತನಾ, ಚೈತನ್ಯ, ದೇವ, ಭಗವಂತ, ಭಗವಾನ್, ಶ್ರದ್ಧಾ, ಚಂದನ, ಸಾಕೇತ, ತುಳಸಿ, ಸಂಸ್ಕೃತಿ ಇತ್ಯಾದಿ

ಕೆಲವರಿಗೆ ತಮ್ಮಿಷ್ಟದ ಬಣ್ಣಗಳು ಮಕ್ಕಳ ಹೆಸರುಗಳಾಗುತ್ತವೆ. ಕೇಸರ್, ಶ್ವೇತಾ, ನೀಲಾ, ಕೆಂಪಣ್ಣ, ಕರಿಯಪ್ಪ, ಕರಿಯವ್ವ, ಬೂದಪ್ಪಾ.

ಕೆಲವೊಮ್ಮೆ ಲೋಹಗಳು ಮಕ್ಕಳ ಹೆಸರಾಗುತ್ತವೆ.. ಕನಕ, ಬಂಗಾರಿ, ಬಂಗಾರಪ್ಪ, ಬೆಳ್ಳಿಯಪ್ಪ, ರಜತ, ಚಿನ್ನಪ್ಪ, ಸುವರ್ಣ, ಹೊನ್ನಪ್ಪ, ಕಾಂಚನ, ಹೇಮಾ, ಸ್ವರ್ಣ, ಸೋನಾಲಿ, ಸುಚಿ,

ಸಂಪತ್ತು ಸಂಬಂಧಿ ಕೆಲ ಹೆಸರುಗಳು ಹೀಗಿವೆ. ಮುತ್ತು, ವಜ್ರ, ಮಾಣಿಕ್ಯ, ರತ್ನಾಕರ, ರತ್ನಾ, ನಿಧಿ, ಐಶ್ವರ್ಯ, ಸಿರಿ, ಸಂಪತ್ಕುಮಾರ್, ಶ್ರೀಮಂತ, ಭಾಗ್ಯ, ಸೌಭಾಗ್ಯ, ಸಮೃದ್ಧಿ.

ಮಕ್ಕಳ ಗುಣ – ಸ್ವಭಾವದ ರೀತಿಯಿಂದ ಸೌಮ್ಯ, ಕರುಣಾ, ಕರುಣಾಕರ, ನಿರ್ಮಲಾ, ಶಾಂತಾ, ಶಾಂತೇಶ, ಪ್ರಶಾಂತ, ಸುಶಾಂತ, ಉಗ್ರಪ್ಪ, ತೇಜಸ್ವಿ, ಅನಿತಾ, ದಕ್ಷ, ದಕ್ಷಾ, ಸ್ಮಿತಾ, ವಿಶ್ವಾಸ, ವಿನಯ, ವಿನಯಾ, ಮೌನೇಶ, ಪ್ರಸನ್ನ, ಸಮರ್ಥ, ಶೀಲಾ, ಸುಶೀಲಾ, ಶ್ರೇಯಾ, ಶ್ರೇಯಸ್, ಧ್ಯೆಯಾ, ಸಹನಾ, ತ್ರಿಷಾ, ಪ್ರವೀಣ, ಸುಮತಿ, ಚಿತ್ತಾ, ನಿರ್ಮಲಾ, ಗೌರವ, ಮೂಗಪ್ಪ  ಅಂತ ನಾಮಕರಣ ಮಾಡ್ತಾರೆ

ನಮ್ಮ ಭಾವನೆಗಳು ಹೆಸರುಗಳಾದ ಆಶಾ, ಅಭಿಲಾಷಾ, ಭಾವನಾ, ಕಲ್ಪನಾ, ಸ್ಪೂರ್ತಿ, ವಿನೋದ, ನವೀನ, ನೂತನ, ನವ್ಯಾ, ಸಂತೋಷ, ಆನಂದ್, ಖುಷಿ, ತೃಪ್ತಿ, ಸಂತೃಪ್ತಿ, ಹರ್ಷಿಣಿ, ಪ್ರಮೋದ,, ಪ್ರೇರಣಾ, ಸೌಜನ್ಯ, ವಿಲಾಸ, ಪ್ರಜ್ಞಾ, ಸುಮನಾ, ಕ್ಷೇಮ, ಕುಶಾಲ, ಸೌಖ್ಯ, ಸ್ಮೃತಿ, ಅಂಕುಶ, ದಿಶಾ, ಮನೀಶ್ ಅಂತ ಹೆಸರಿಡಬಹುದು.

ಚೆಂದಾಗಿರುವ ಮಗುವಿಗೆ ಸುಂದರ, ಸುಂದರಾ, ರೂಪಾ, ರೂಪಾಲಿ, ಸುಜಾತಾ, ಶೋಭಾ, ಲಾವಣ್ಯ, ಸುರೇಖಾ, ಉಜ್ವಲಾ, ಮನೋಹರ, ಚೆಲುವ ಅಂತ ಹೆಸರಿಡುತಾರ.        

ಪ್ರೀತಿಸಿ ಮದುವೆಯಾಗಿದ್ದರೆ ತಮ್ಮ ಮಕ್ಕಳಿಗೆ ಅನುರಾಗ, ಪ್ರೀತಿ, ಪ್ರೇಮಾ, ಪ್ರಿಯಾ, ವತ್ಸಲಾ, ಮಮತಾ, ರಮ್ಯಾ, ಸ್ನೇಹಾ, ಪ್ರೀತಂ, ರಮೀತಾ, ಲವಲೀ ಇತ್ಯಾದಿ ಹೆಸರಿಡಬಹುದು.

ಗೆಲುವಿನ ಕುರಿತಾದ ಹೆಸರುಗಳು ಜಯ, ವಿಜಯ, ಅಜೇಯ, ಅಜಿತ, ಅಜಯ, ಕೀರ್ತಿ, ವಿಜೇತ ಮುಂತಾಗಿ ಇರಬಹುದು.

ದೇಹದ ಅಂಗಾಂಗಗಳು ಹೆಸರುಗಳಾದಾಗ ಅಕ್ಷಿ, ನಯನಾ, ನೇತ್ರಾ, ದ್ರಷ್ಠಿ, ಕರ್ಣ, ಬಾಹುಬಲಿ, ಚರಣ, ಶ್ರವಣ, ಸುಮುಖ ಮುಂತಾದವು ಮೂಡಿ ಬರುತ್ತವೆ.

ಊರುಗಳ ಹೆಸರುಗಳು ಕೆಲವೊಮ್ಮೆ ಮಕ್ಕಳ ಹೆಸರುಗಳಾಗಬಹುದು ಗದಿಗೆಪ್ಪ, ಪುರದಪ್ಪ, ಹರಿಹರ (ಕರ್ನಾಟಕ), ಚಿಂತಾಮಣಿ(ಕೋಲಾರ), ಆನಂದ್(ಗುಜರಾತ್), ಸಾಗರ್(ಮಧ್ಯಪ್ರದೇಶ), ಅಮರಾವತಿ(ಮಹಾರಾಷ್ಟ್ರ), ನಿರ್ಮಲ್(ತೆಲಂಗಾಣ), ಅನಂತನಾಗ್(ಜಮ್ಮು & ಕಾಶ್ಮೀರ್) ಇತ್ಯಾದಿ.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರ ಅಥವಾ ದೇವಾನುದೇವತೆಗಳ ಬಗ್ಗೆ ಇರುವ ಹೆಸರುಗಳನ್ನು ಪಟ್ಟಿ ಮಾಡಲು ಸಂಪುಟಗಳೇ ಬೇಕಾಗಬಹುದೇನೋ!

ಒಂದರಿಂದ ಇನ್ಫಿನಿಟಿ ವರೆಗೆ ಹೆಸರಿಸುವದಾದರೆ…….ಏಕನಾಥ, ಏಕೊರಾಮ, ದ್ವಿಜರಾಜ, ತ್ರಿವಿಕ್ರಮ, ಚತುರ್ಭುಜ, ಪಂಚಮಿ, ಪಂಚಾಕ್ಷರಿ, ಷಡಕ್ಷರಿ, ಷಣ್ಮುಖ, ಸಪ್ತಗಿರಿ, ಅಷ್ಟಮಿ, ನವಮಣಿ, ದಶಮಿ, ದಶಾನನ, ನೂರೊಂದಯ್ಯ, ಮೂರುಸಾವಿರದಪ್ಪ, ಏಳುಕೋಟಿ, ಅನಂತ.

ಇನ್ನ ಜನರಲ್ ಆಗಿ ಹೇಳಬೇಕಂದ್ರೆ ಯಾವುದೇ ಹೆಸರುಗಳ ಮುಂದೆ(suffix) ..ಪ್ಪ, ..ವ್ವ, ..ಯ್ಯ, .. ಶಿ, ..ಮ್ಮ, ..ಕ್ಕ, ..ಣ್ಣ, ..ಶ್ರೀ, ..ಕುಮಾರ, ..ಕುಮಾರಿ, ..ಶೇಖರ, ..ಸ್ವಾಮಿ, ..ರಾಜ, ..ರಾಜು, ..ರಾಣಿ, ..ಲಿಂಗ, ..ತೀರ್ಥ, ..ಪ್ರಸಾದ, ..ಸಿಂಗ್, ..ಮೂರ್ತಿ,..ಂದ್ರ, ..ರಡ್ಡಿ, ..ರೆಡ್ಡಿ, ..ದೇವ, ..ಲಾಲ್, ..ಸಾ,.. ಬಾಬು, ..ಬಾಯಿ, ..ಲಕ್ಷ್ಮಿ, ..ಕಿರಣ್, ..ಶ್ವರ, ..ಶ್ವರಿ, ..ಕಲಾ, ..ನ್, ..ಮ್ ಇತ್ಯಾದಿ ತಮಗೆ ಬೇಕಾದ ಹಾಗೆ ಅರ್ಥಗರ್ಭಿತವಾಗಿ ಸೇರಿಸಿಕೊಳ್ಳಬಹುದು.

ಇನ್ನೂ ಕೆಲವೊಬ್ರು ಯಾವುದು ಗದ್ಲಾನೆ ಬ್ಯಾಡ ಅಂತ ತಮ್ಮದೆ (ಗಂಡ ಹೆಂಡ್ತಿ) ಹೆಸರು ಜೋಡಿಸಿ ಮಕ್ಕಳಿಗೆ ಇಡ್ತಾರ: ರವಿ (ರಮೇಶ ಮತ್ತು ವಿದ್ಯಾ), ಚಿರು (ಚಿನ್ನಪ್ಪ ಮತ್ತು ರುದ್ರಮ್ಮ), ಹೇಮಾ (ಹೇಮಂತ ಮತ್ತು ಮಾಳವಿಕಾ), ಆಯ್ರ (ಯಶ್+ರಾಧಿಕಾ), ಪ್ರದೀಪ (ಪ್ರಭಾಕರ ಮತ್ತು ದೀಪಾಂಜಲಿ) ಇತ್ಯಾದಿ

ನನ್ನ ಗೆಳ್ಯಾನ ಮನೆಯವರೊಬ್ಬರು ತಮ್ಮ ಮಗನಿಗೆ ಮಾಡರ್ನ್ ಹೆಸರು ಇಟ್ಟಿದ್ರು “ಕ್ಷಿತಿಜ” ಅಂತ. ಭಾಳ ಮಂದಿಗೆ ಅದನ್ನ ಅನ್ನೋದಕ್ಕೆ ಬರತಿದ್ದಿಲ್ಲ. ಕಾರಣ ಕೇಳಿದಾಗ ಗೊತ್ತಾತು ಅದು ಶಾರ್ಟ್ ಫಾರ್ಮ್ ಆಫ್ ಕಾಮಾ”ಕ್ಷಿ” “ತಿ”ರಕಪ್ಪ “”ಡಿ ಅಂತ!!

ನನ್ನ ಕಲೀಗ್ ಒಬ್ಬರಿಗೆ ಮದುವ್ಯಾಗಿ ಏನು ತ್ರಾಸ್ ಇಲ್ಲದೆ ಮೊದಲೆದ್ದು ಹೆಣ್ಣು ಮಗು ಆತು. “ಸ್ಪೂರ್ತಿ” ಅಂತ ಹೆಸರಿಟ್ಟರು. As usual ಎರಡನೆದ್ದು ಗಂಡು ಆಗಲಿ ಅಂತ ಬಯಸಿದ್ದರು ಆದ್ರೆ ಎರಡನೇ ಸಲಾನು ಜಿಲೇಬಿ ಹಂಚುವಾಂಗ ಆತು. ಆದ್ರ ಅವರು ತೆಲಿ ಕೆಡಿಸ್ಕೊಲಿಲ್ಲ.  ಎರಡನೇ ಮಗಳಿಗೆ “ತೃಪ್ತಿ” ಅಂತ ಹೆಸರಿಟ್ಟು ತೃಪ್ತ ಭಾವದಿಂದ ಎಲ್ಲರಿಗೂ ಒಂಥರಾ ಸ್ಪೂರ್ತಿ ಆದ್ರು!!

ಇನ್ನೊಬ್ರು ನಮ್ಮ ಗೆಳ್ಯಾ ತನ್ನ ಎರಡು ಮಕ್ಕಳಿಗೆ ಹೆಸರಿಟ್ಟಿದ್ದು ಒಂಥರಾ ಮಜಾ ಇದೆ. ಮೊದಲೆದ್ದು ಹುಡುಗಿ ಆತು “ಪೂರ್ಣಿಮಾ” ಅಂತ ಹೆಸರಿಟ್ಟ. ಹಿರಿತಲೆಗಳು ಕುಲದೀಪಕ ಬೇಕು, ‘ಆರತಿಗೆ ಒಬ್ಬಾಕಿ ಮಗಳು ಆದ್ಲು ಇನ್ನ ಕೀರತಿಗೆ ಒಬ್ಬ ಗಂಡು ಮಗ ಬೇಕು’ ಅಂತ ಗಂಟು ಬಿದ್ರು. ದೈವ ಸಂಕಲ್ಪ ಛುಲೊ ಇತ್ತು ಗಂಡು ಮಗ ಹುಟ್ಟಿದ. ಇಂವ “ಬಿಂದುಕುಮಾರ್” ಅಂತ ಹೆಸರಿಟ್ಟ. ಇನ್ನು ಸಾಕು ಅಂತ ಹೆಂಡ್ತಿಗೆ ಆಪರೇಷನ್ನು ಮಾಡಿಸಿಬಿಟ್ಟ. ಅಂದ್ರ ಎರಡು ಮಕ್ಕಳು ಹಡೆದು ಸಂತಾನೋತ್ಪತ್ತಿ ಕ್ರಿಯೆಗೆ “ಪೂರ್ಣ ಬಿಂದು” ಇಟ್ಟು ಬಿಟ್ಟ!!

‍ಲೇಖಕರು Avadhi

October 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸುಜಾತಾ ವಿನಾಯಕ ಮುಂಗುರವಾಡಿ

    ಒಳ್ಳೆಯ ಪ್ರಯತ್ನ /ಬರಹ

    ಪ್ರತಿಕ್ರಿಯೆ
  2. ಸತ್ಯನಾರಾಯಣ

    ನಿಮ್ಮ ಬರಹಗಳನ್ನು ಎಲ್ಲಾ ಪ್ರಕಾಶನಗಳಲ್ಲಿ (ವೃತ್ತಪತ್ರಿಕೆ, ವಾರಪತ್ರಿಕೆ ಈಗ ಅಂತರ್ಜಾಲದಲ್ಲಿ) ಓದುತ್ತ ಬಂದಿದ್ದೇನೆ. ಹೀಗೆಯೇ ಒಳ್ಳೆಯ ಬರಹಗಳನ್ನು ಕೊಡುತ್ತಾ ಇರಿ… ಧನ್ಯವಾದಗಳು

    ಪ್ರತಿಕ್ರಿಯೆ
  3. T S SHRAVANA KUMARI

    ಎಷ್ಟೋ ಜನ ತಾವು ಓದಿದ ಪುಸ್ತಕಗಳಲ್ಲಿನ ಪಾತ್ರಗಳ ಹೆಸರನ್ನೂ ಇಡುವುದುಂಟು.

    ಪ್ರತಿಕ್ರಿಯೆ
  4. BASAVAGOUDA C CHANNANNAVAR

    Your talent is very innovative , keep continue in the same way.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: