
ಮಂಡ್ಯ ರಮೇಶ್
‘ಅಮ್ಮಾ, ನೀವು ‘ರಜಾ ಮಜಾ’ ಮಕ್ಕಳ ಶಿಬಿರಕ್ಕೆ ಬರಬೇಕು ಮಕ್ಕಳೊಂದಿಗೆ ಸಂವಾದಿಸಬೇಕು” ಅಂತ ಅಂದೆ !”ನಾನು ಯಾಕೆ” ಅಂತ ಸಂಕೋಚ ಮಾಡಿಕೊಂಡರು, ಮತ್ತಷ್ಟು ಸುಂದರವಾಗಿ ಕಂಡರು! “ನಿಮ್ಮಿಂದ ಎಳೆಯ ತಲೆಮಾರಿನ ಹೆಣ್ಣು ಮಕ್ಕಳು ಗಂಡು ಮಕ್ಕಳು ಕಲಿಯಬೇಕಾದ್ದು ನೂರು ವಿಷಯಗಳಿವೆ, ನೀವು ಹೇಳಬೇಕು” ಅಂತ ಅಂದೆ! ಅವರೊಟ್ಟಿಗೆ ‘ಮೂರೂ ತಲೆಮಾರು’ ಇರಲಿ ಅಂತ ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಹೊರ್ನಾಡ್ ರನ್ನು ಆಹ್ವಾನಿಸಿದ್ದೆವು!
ಅದೊಂದು ಅಪರೂಪದ ಕಾರ್ಯಕ್ರಮ ಎಷ್ಟು ಚಂದ ಮಾತನಾಡಿದರು ಅಂದರೆ, ಆ ಮಾತುಗಳು ಅವರ ಪ್ರತಿರೂಪವಾಗಿತ್ತು !ಅಗಾಧ ಜೀವನಾನುಭವವನ್ನು ಆ ಕಾಲದ ಕಲಾವಿದೆ ಮತ್ತು ಗೃಹಿಣಿ ಯೊಂದಿಗಿನ ಹೋರಾಟದ ಮನೋಭಾವವನ್ನು, ತಮ್ಮ ಸುಂದರ ನಗು, ಭಾವನಾತ್ಮಕ ಗುಣಗಳು, ಅಂತ:ಕರಣ, ಮೆಲುವಾದ ದನಿಯಲ್ಲಿ, ಸ್ಪಷ್ಟ ಭಾಷೆಯ ಆದರೆ ನಿಖರ ನಿಲುವಿನೊಂದಿಗೆ ಮೇಳೈಸಿ ಸಹಜವಾಗಿ ಮಾತಾಡಿ ಎಲ್ಲರ ಮನಗೆದ್ದರು.
ನೂರಾರು ಮಕ್ಕಳ ನಡುವೆ ಮತ್ತೊಂದು ಮಗುವೆಂಬಂತೆ ನಡೆದುಕೊಂಡಿದ್ದರು. ‘ನಟನ’ ಇವತ್ತು ಏನಾದ್ರೂ ಆಗಿದೆಯೆಂದರೆ ಈ ಥರದ ನೂರಾರು ತಾಯಂದಿರ ಆಶೀರ್ವಾದ ತುಂಬಾ ಇದೆ. ಹೊಸ ಮಕ್ಕಳಲ್ಲಿ ಭಾರ್ಗವಿ ನಾರಾಯಣ್ ಅವರನ್ನು ಕಾಣುವ, ಸೃಷ್ಟಿಸುವ ಪ್ರಯತ್ನವಂತೂ ಪ್ರಾಮಾಣಿಕವಾಗಿ ನಡೆಯುತ್ತಲೇ ಇದೆ. ಅಮ್ಮಾ, ಇದೇ ನಮ್ಮ ಅಶ್ರುತರ್ಪಣ.






0 Comments