ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ್ ನವಲಕಲ್ ಹೊಸ ಕವಿತೆ – ಆದರೂ ಪ್ರೀತಿಸಿದ್ದೆವು…

ಮಹಾಂತೇಶ್ ನವಲಕಲ್


ಓಡಿ ಹೋಗಲಿಲ್ಲ ಕೂಡಿ ಬಾಳಲಿಲ್ಲ
ಬಿಟ್ಟು ಹೋದ ಜಾಗದಲ್ಲಿ ಕ್ರಾಂತಿ ಬೀಜ ಬಿತ್ತಲಿಲ್ಲ
ಆರ್ದತೆಯ ನುಡಿಗಟ್ಟು ಕಾವ್ಯ ರಚಿಸಲಿಲ್ಲ
ಕುರುಚಲ ಗಡ್ಡದಲಿ ವೈಧವ್ಯದ ಹಾಡು ಹಾqಲಿಲ್ಲ
ಆದರೂ ಪ್ರೀತಿಸಿದ್ದೆವು

ಮುಂಗಾರಿನ ಮಳೆಯ ಪ್ರಥಮ ಮಳೆಯ ವಾಸನೆ
ಮೂಗಿಗೆ ಬಡಿಯಲಿಲ್ಲ
ಚಂದಿರಿನ ಸುಂದರ ಕಿರಣಗಳು ಚರ್ಮವು ಸುಡಲಿಲ್ಲ
ನಳ ನಳಿಸುವ ಗುಲಾಬಿಯ ಪಕಳೆಗಳ ಅಗತ್ಯ ಬೇಕಾಗಲಿಲ್ಲ
ಆದರೂ ಪ್ರೀತಿಸಿದ್ದೆವು


ನಡೆದಾಡುವಾಗ ಗಾಳಿಯೊಳಗಣ ನೀರು ಹುಯ್ಯಲಿಲ್ಲ
ಸುಮ್ಮನೆ ಹಿಮದೊಳಗಿನ ಬೆಂಕಿ ಉರಿಯಲಿಲ್ಲ
ಹಾಗೆಯೇ ಕಲ್ಲೊಳಗಿನ ಹೇಮ ಮುಡಿಯಲಿಲ್ಲ
ಅಪ್ಪ ಅಮ್ಮರನು ಅಳಿಸಲಿಲ್ಲ
ಯಾವ ಪತ್ರಗಳ ವಿನಿಮಯದ ಕಸರತ್ತುಗಳು ಇರಲಿಲ್ಲ
ಆದರೂ ಪ್ರೀತಿಸಿದ್ದೆವು


ಒಂದು ದಿನ ಸೋಮುವಾರದ ಸಂತೆಗೆ ಹೋಗಿದ್ದೆವು
ಅಂಗಡಿಯಲಿ ಮೂರುಪಾಕದ ಬಣ್ಣವ ತಂದಿದ್ದೆವು
ನೆರಳಿಲ್ಲದ ನೀರಿನಲಿ ಅದ್ದಿ ತೆಗೆದುವು
ಸರ‍್ಯನಿಲ್ಲದ ಬೆಳಕಿಗೆ ಒಡ್ಡಿದೆವು
ಆದರೂ ಪ್ರೀತಿಸಿದ್ದವು


ಪ್ರೀತಿ ಮುರಿವ ಕಾರಣಗಳನು ಶಾಸ್ತ್ರೀಯವಾಗಿ ಅಭ್ಯಾಸಿಸಿದೆವು
ಯಾವ್ಯವ ಬ್ರಾö್ಯಂಡಿನ ಬ್ರೆವರೇಜುಗಳು ಉದ್ದಿಪನಗೊಳಿಸುತ್ತವೆ ಎಂದು ನೋಡಿದೆವು
ನರತಂತುಗಳನು ಹರಿಯುವು ಉತ್ತಮ ತಂತು ಯಾವುದೆಂದು ತಿಳಿದೆವು
ನೋಡುತ್ತಿದ್ದಂತೆ ಕಾರ್ತಿಕದ ಕಗ್ಗತ್ತಿನಲಿ ಒಂದು ದಿನ ಮಾಯವಾದೆವು

‍ಲೇಖಕರು Admin

15 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading