ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೇರಿಕಾದಿಂದ ರೋಹಿತ್ ವೇಮುಲನನ್ನು ಹುಡುಕಿ ಬಂತು ಕಾರ್ಲ್ ಸಗಾನ್ ಕುಟುಂಬದ ಪತ್ರ

‘ಈ ಪತ್ರವನ್ನು ಓದುವ ಹೊತ್ತಿಗೆ ನಾನು ಇರುವುದಿಲ್ಲ!’ ಎಂದು ನೊಂದು ನುಡಿದ ರೋಹಿತ್ ವೇಮುಲ ತನ್ನ ಸಾವಿಗೆ ಕಾರಣವೇನು? ಎನ್ನುವುದನ್ನು ಬರೆಯುತ್ತಾ ಹೋಗುತ್ತಾನೆ . ಅದಕ್ಕಿಂತಲೂ ಹೆಚ್ಚಾಗಿ ತನ್ನ ಕನಸುಗಳೇನಿತ್ತು ಎನ್ನುವುದನ್ನು ಬರೆಯುತ್ತಾನೆ. –

ನಾನು ಒಬ್ಬ ಬರಹಗಾರನಾಗಬೇಕು ಎಂದು ಆಶಿಸುತ್ತಿದ್ದೆ, Carl Sagan ರಂತೆ ಒಬ್ಬ ವಿಜ್ಞಾನದ ಬರಹಗಾರನಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಕೊನೆಗೆ ನನಗೆ ಈ ಕಡೆಯ ಪತ್ರ ಬರೆಯುವ ಅವಕಾಶ ಮಾತ್ರ ನನಗೆ ಸಿಕ್ಕಿದೆ.

12647526_739596502806579_6162659658740708347_nನಾನು ವಿಜ್ಞಾನ, ನಕ್ಷತ್ರ ಮತ್ತು ನಿಸರ್ಗವನ್ನು ಪ್ರೀತಿಸಿದೆ. ನಂತರ ನನಗೆ ಅರಿವಿಲ್ಲದೆ ನಿಸರ್ಗದ ಬಂಧವನ್ನು ಕಡಿದುಕೊಂಡ ಮನುಷ್ಯರನ್ನು ಪ್ರೀತಿಸಿದೆ. ಆದರೆ ವಾಸ್ತವದ ಜಗತ್ತಿನಲ್ಲಿ ಮನುಷ್ಯರ ನಡುವಿನ ಭಾವನೆಗಳು ಸೆಕೆಂಡ್ ಹ್ಯಾಂಡೆಡ್ ಆಗಿ ಬದಲಾಗಿವೆ.

ಇಲ್ಲಿ ಪ್ರೀತಿಯೂ ಕೃತಕವಾಗಿ ನಿರ್ಮಿಸಲ್ಪಟ್ಟಿದೆ, ನಮ್ಮ ಭಾವನೆಗಳಿಗೆ ಬಣ್ಣ ಕೊಡಲಾಗಿದೆ. ನಮ್ಮ ನೈಜತೆಯು ಕೃತಕ ಕಲೆಯ ಮೂಲಕವೇ ಮೌಲ್ಯೀಕರಣಗೊಳ್ಳುವ ಹಂತಕ್ಕೆ ನಾವು ತಲುಪಿದ್ದೇವೆ. ನಿಜ ಹೇಳಬೇಕು ಎಂದರೆ ಇಂದು ಜಗತ್ತಿನಲ್ಲಿ ನೋವು ಇಲ್ಲದ ಪ್ರೀತಿಯನ್ನು ಪಡೆಯುವುದು ಅಂತ್ಯಂತ ಕಷ್ಟಕರವಾಗಿದೆ.. ಎಂದು ನೊಂದು ನುಡಿಯುತ್ತಾನೆ

ಹಾಗೆ ರೋಹಿತ್ ಪತ್ರದಲ್ಲಿ ತಿಳಿಸಿದ ಆ ಕಾರ್ಲ್ ಸಗಾನ್ ಯಾರು?

sagan quote

ಕಾರ್ಲ್ ಸಗಾನ್ ಅಮೆರಿಕಾದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ. ರಾಹುಲ್ ಬರೆದ ಪತ್ರದಲ್ಲಿ ಆ ವಿಜ್ಞಾನಿಯ ಹೆಸರನ್ನು ನೋಡಿದ ಮೀಡಿಯಾ ಒನ್ ಟಿ ವಿ ಯ ನಿರ್ವಾಹಕ ಸಂಪಾದಕ ರಾಜೀವ್ ರಾಮಚಂದ್ರನ್ ಕಾರ್ಲ್ ಸಗಾನ್ ಅವರ ಪತ್ನಿಯ ವಿಳಾಸವನ್ನು ಪತ್ತೆ ಹಚ್ಚಲು ಶ್ರಮಿಸಿದರು. ಗೆಳೆಯರ ಮೂಲಕ ಆನ್ ಡ್ರುಯಾನ್ ಅವರ ಇ ಮೇಲ್ ಸಿಕ್ಕಿತು. ರೋಹಿತ್ ತಮ್ಮ ಪತ್ರದಲ್ಲಿ ಕಾರ್ಲ್ ಅವರ ಹೆಸರು ನಮೂದಿಸಿ ಕನಸು ಹಂಚಿಕೊಂಡ ಬಗ್ಗೆ ತಿಳಿಸಿದರು.

ಆನ್ ಡ್ರುಯಾನ್ ಹೆಸರಾಂತ ಸಾಹಿತಿ. ಕಾರ್ಲ್ ಸಗಾನ್ ಅವರ ಬಹುತೇಕ ವಿಜ್ಞಾನ ಸಂಬಂಧಿತ ಡಾಕ್ಯುಮೆಂಟರಿಳಿಗೆ ಸ್ಕ್ರಿಪ್ಟ್ ಬರೆದಾಕೆ. ರೋಹಿತ್ ಸಾವಿನ ಬಗ್ಗೆ ತಿಳಿದ ಅವರು ಆ ದುರಂತದ ಬಗ್ಗೆ ಮೇಲ್ ಕಳಿಸಿದ್ದಾರೆ. ನೊಂದಿದ್ದಾರೆ ಅದು ಇಲ್ಲಿದೆ. ಭಾವಾನುವಾದ-ಕಿರಣ್ ಎಂ ಗಾಜನೂರು

TALLAHASSEE, FL - 1984: Cosmologist and author Carl Sagan and his wife author Ann Druyan pose in the Turnbull Conference Center on the campus of Florida State University in Tallahassee, Florida in 1984. (Photo by Mickey Adair/Getty Images)

ಪ್ರೀತಿಯ ರಾಜೀವ್ ರಾಮಚಂದ್ರನ್

ರೋಹಿತ್ ವೇಮುಲಾ ಕುರಿತು ತಾವು ಬರೆದು ತಿಳಿಸಿದ್ದಕ್ಕೆ ನಾನು ನಿಮಗೆ ಅಭಾರಿಯಾಗಿದ್ದೇನೆ. ನಾನು ಆ ಸಾವಿಗೆ ಸಂತಾಪ ಸೂಚಿಸುತ್ತಿದ್ದೇನೆ.

ಆತನ ಆತ್ಮಹತ್ಯಾ ಟಿಪ್ಪಣಿಯನ್ನು ಓದುತ್ತಾ ಓದುತ್ತಾ ನನಗೆ ನಮ್ಮನಾಗರೀಕತೆಯಲ್ಲಿ ಎದ್ದುಕಾಣಬಹುದಾದ ಪಕ್ಷಪಾತಿ ಧೋರಣೆಗಳು ಹಾಗೂ ಅದಕ್ಕಾಗಿ ನಾವು ಸಲ್ಲಿಸಬೇಕಾದ ಬಲಿದಾನ ಅರ್ಥವಾಗುತ್ತಿದೆ . .  ಮನುಷ್ಯ ತನ್ನ ಬದುಕಿನ ಕುರಿತು ಹೊಂದಿರುವ ಪೂರ್ವಾಗ್ರಹಗಳ ಕಾರಣಕ್ಕೆ ಕಳೆದುಕೊಂಡ ಕೊಡುಗೆ, ಹೊಸತನವನ್ನು ಅಳೆಯುವ ಶಕ್ತಿ ಹೊಂದಿದ್ದರೆ ಖಂಡಿತಾ ಇಂದು ನಾವು ಧಿಗ್ಭ್ರಮೆಗೆ ಒಳಗಾಗುತ್ತಿದ್ದೆವು. . .

ನೀವೇ ಹೇಳಿ ರಾಜೀವ್: ರೋಹಿತ್ ಪ್ರಕರಣದ ಹಿನ್ನಲೆಯಲ್ಲಿ ನಡೆಯುತ್ತಿರುವ ಹೋರಾಟ ಶತಮಾನಗಳ ಕಾಲ ನಡೆದುಕೊಂಡು ಬರುತ್ತಿರುವ ಈ ಶೋಷಣೆಯ ಪುನಾರಾವರ್ತನೆಯ ಪ್ರಮಾಣವನ್ನಾದರೂ ಕಡಿಮೆ ಮಾಡಬಹುದೇ? ನಾನು ಈ ಹೃದಯ ಒಡೆಯುವ, ಅನಾವಶ್ಯಕ ನೋವು, ಸಂಭಾವ್ಯ ನಷ್ಟವನ್ನು ತಪ್ಪಿಸುವ ಭರವಸೆಗಾಗಿ ಪ್ರಯತ್ನಪೂರ್ವಕವಾಗಿ ಹುಡುಕುತ್ತಿದ್ದೇನೆ. . . .

ಪ್ರಜ್ಞಾಪೂರ್ವಕವಾಗಿ. . .

ಆನ್

Dear Rajeev Ramachandran,

Deeply grateful to you for writing to me about Rohit Vimula, whose death and lost promise I mourn.

To read his suicide note and to learn the details of his predicament is to get a vivid inkling of the actual cost of bias to our civilization. If we could somehow quantify the totality of lost contributions and innovations as a result of prejudice, I believe we would find it staggering.

You tell me, Rajeev: Is it possible that the attention paid to Rohit’s story will lessen its chronic repetition? I am trying to find something hopeful in an otherwise heartbreaking example of needless suffering and squandered potential.

Truly,
Ann

‍ಲೇಖಕರು Admin

2 February, 2016

3 Comments

  1. Dr. Prabhakar M. Nimbargi

    “heartbreaking example of needless suffering and squandered potential.”
    This is what Rohith’s death is. Ann’s letter is a perpetual obituary to mentality of everyone in our country. This is so in 99.999% cases. Administrators as well as public need to change their mentality towards others.

  2. kvtirumalesh

    ಕಾರ್ಲ್ ಸಾಗಾನ್. ಅವನ ಕಾಸ್ಮೋಸ್ ಕೃತಿಯನ್ನು ನಾನು ಕೂಡ ಆಗಾಗ ಓದುತ್ತಿರುತ್ತೇನೆ. ಇಂಠ ಕೃತಿಗಳನ್ನು ಓದುವುದರಿಂದ ಮನಸ್ಸಿಗೆ ಅದೇನೋ ಹಿತವೆನಿಸುತ್ತದೆ.
    ಕೆಲವು ವರ್ಷಗಳ ಹಿಂದೆ ಒಂದು ಲೈಬ್ರರಿಯಲ್ಲಿ ಕುಳಿತು ಸಿಗ್ಮಂಡ್ ಫ್ರಾಯ್ಡನ New Introductory Lectures on Psychoanalysis ಎಂಬ ಪುಸ್ತಕದಲ್ಲಿನ The Question of Weltanschauung ಅಧ್ಯಾಯವನ್ನು ಓದುತ್ತಿದ್ದೆ. ಯಾವ ಯಾವ ಕಾರಣಗಳಿಗೋ ನನ್ನ ಮನಸ್ಸು ಪ್ರಕ್ಷುಬ್ದವಾಗಿದ್ದ ಕಾಲವಾಗಿತ್ತು ಅದು. ಬಹಳ ಒಂಟಿಯಾಗಿದ್ದೆ. ನನ್ನ ಬರಹಗಳನ್ನು ಮೂಲಭೂತವಾದಿಗಳು ಟೀಕಿಸುತ್ತಿದ್ದರು. ಒಮ್ಮೆ ಡಾರ್ವಿನ್ ಕುರಿತು ನಾನು `ಆಳ ನಿರಾಳ’ ಅಂಕಣದಲ್ಲಿ ಬರೆದಾಗ ಒಬ್ಬ ಸೃ‍ಷ್ಟಿವಾದಿ ನನ್ನನ್ನು ಈ ಮೇಲ್ ಮೂಲಕ ಬೆಂಬತ್ತಿದ. ಪತ್ರಗಳಿಗೆ ನಾನು ಹೆಚ್ಚಾಗಿ ಉತ್ತರಿಸದೆ ಇರುವುದಿಲ್ಲ. ಆದರೆ ನಾನು ಉತ್ತರಿಸಿದಂತೆ ಈ ಡಾರ್ವಿನ್ ವಿರೋಧಿಯ ಆಕ್ರಮಣ ಜೋರಾಗುತ್ತ ಹೋಯಿತು. ಕೊನೆಗೆ, ನೀನು ಸಿಕ್ಕಿದರೆ ನಿನ್ನ ಮುಖಕ್ಕೆ ಉಗಿಯುತ್ತೇನೆ ಎಂದು ಬೆದರಿಸುವ ತನಕ ಮುಂದುವರಿದ! ಅನಂತಮೂರ್ತಿಯವರನ್ನು ಕೂಡ ಅವನು ಇದೇ ರೀತಿ ಬಯ್ಯುತ್ತಿದ್ದ–ಯಾಕೆಂದರೆ ಅವರಿಗೆ ಮೇಲ್ ಮಾಡಿದ ಪತ್ರದ ಪ್ರತಿಯನ್ನು ನನಗೆ ರವಾನಿಸುತ್ತಿದ್ದ. ನಾವು ಎಂಥಾ ಕಾಲದಲ್ಲಿ ಇದ್ದೇವೆ ಎಂದು ಗಾಬರಿಯಾಯಿತು. ಆದರೂ ನಾನು ಹತಾಶನಾಗಿರಲಿಲ್ಲ; ಯಾಕೆಂದರೆ ಕೊನೆಗೂ ನನ್ನ ಬರಹಗಳ ಉದ್ದೇಶ ಶೈಕ್ಷಣಿಕವಾದ್ದು.
    ಇಂಥ ಸಂದರ್ಭದಲ್ಲಿ ಫ್ರಾಯ್ಡ್-ನ್ನ ಓದುತ್ತಿದ್ದಂತೆ ಫ್ರಾಯ್ಡ್ ನನ್ನನ್ನೇ ಉದ್ದೇಶಿಸಿ ಆ ಅಧ್ಯಾಯವನ್ನು ಬರೆದ ಹಾಗೆ ಅನಿಸಿತು–ನನ್ನನ್ನು ಮತ್ತು ನನ್ನಂಥವರನ್ನು; ಅವನು ವಿಜ್ಞಾನ ವರ್ಸಸ್ ಮತಧರ್ಮಗಳ ಕುರಿತು ಹೇಳುದ್ಫ: ಆಧುನಿಕ ವಿಜ್ಞಾನ ಇನ್ನೂ ಹಸುಳೆ; ಅದಕ್ಕೆ ಸುಮಾರು ೨೦೦ ವರ್ಷ ವಯಸ್ಸು ಅ‍ಷ್ಟೆ. ಭೂಮಾನದ ಕಾಲದಲ್ಲಿ ಇದು ಏನೂ ಅಲ್ಲ. ಬೆಳೆಯುವುದು ಇನ್ನೂ ಇದೆ–ಎಂದು ಮುಂತಾಗಿ. ಈ ಅಧ್ಯಾಯದಲ್ಲಿನ್ ಅವನ ಮಾತುಗಳು ನನಗೆ ಅದೆಷ್ಟು ಸಾಂತ್ವನ ನೀಡಿದವಂದರೆ ನಾನವನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಲೇಖಕರನ್ನು ಓದುವ ಉಪಯೋಗ ಇದು.
    *
    ಈಗ ಈ ರೋಹಿತ್ ಬಹಳ ಓದಿಕೊಂಡವ ಎನ್ನುವುದು ಅವನ ಪತ್ರದಿಂದ ಗೊತ್ತಾಗುತ್ತದೆ. ಕಾರ್ಲ್ ಸಾಗಾನ್-ನ ಆದರ್ಶ ಅವನ ಮುಂದಿತ್ತು. ಅವನ ಆತ್ಮಹತ್ಯೆಗೆ ನಿಜಕ್ಕೂ ನಿರ್ದಿಷ್ಟವಾದ ಕಾರಣವೇನಿತ್ತು ಎನ್ನುವುದು ನನಗಿನ್ನೂ ಗೊತ್ತಾಗುತ್ತ ಇಲ್ಲ. ಬಹುಶಃ ಮುರಿದುಬಿದ್ದ ಮನುಷ್ಯ ಸಂಬಂಧ? ಭ್ರಮನಿರಸನ? ಆ ಗಳಿಗೆಯಲ್ಲಿ ಅವನು ಕಾರ್ಲ್ ಸಾಗಾನ್ ಅಥವಾ ಫ್ರಾಯ್ಡನ ಬರಹಗಳನ್ನು ಕೈಗೆ ಎತ್ತಿಕೊಂಡಿದ್ದರೆ ಈ ವೃಥಾ ಸಾವು ತಪ್ಪುತ್ತಿತ್ತು ಎನಿಸುತ್ತದೆ. (ಇಲ್ಲಿ ಫ್ರಾಯ್ಡ್ ಬಹಳ ಪ್ರಸ್ತುತ, ಯಾಕೆಂದರೆ ಯೆಹೂದಿವಿರೋಧಿ ಜನಾಂಗದ್ವೇಷಕ್ಕೆ ಗುರಿಯಾದವ ಆತ–ಆದ್ದರಿಂದ ಕೊನೆಗಾಲದಲ್ಲಿ ಅವನು ದೇಶವನ್ನೇ ಬಿಡಬೇಕಾಯಿತು.)
    ರೋಹಿತ್-ನನ್ನು ನೋಡಿಕೊಳ್ಳಬೇಕಿದ್ದ ಪ್ರಾಧ್ಯಾಪಕರು ಎಲ್ಲಿದ್ದರು ಎಂಬ ಪ್ರಶ್ನೆಯೂ ನನ್ನ ಮನಸ್ಸಿನಲ್ಲಿದೆ. ಒಬ್ಬ ಗೈಡ್ ಅಥವಾ ಸೂಪರ್ವೈಸರ್ ಎಂದರೆ ಥೀಸಿಸ್-ನ ಚರ್ಚೆಗೇ ಮುಗಿಯಿತೇ? ಯುವ ಮನಸ್ಸುಗಳು ಮನ ಬಿಚ್ಚುವುದು ಯಾರೊಂದಿಗೆ?
    ಫ್ರೆಂಡ್, ಫಿಲಾಸಫರ್, ಗೈಡ್ ಎನ್ನುತ್ತೇವೆ–ಅವರೀಗ ಎಲ್ಲಿ?

    ಕೆ.ವಿ.ತಿರುಮಲೇಶ್

  3. ಆಸು ಹೆಗ್ಡೆ

    ಅನುವಾದ ಮಾಡುವಾಗ ಮೂಲವನ್ನು ಮೂಲೆಗೆಸೆದಿರುವಂತಿದೆ. ಇಂಥವರ ಬಗ್ಗೆ ಮರುಕಪಡಬಹುದಷ್ಟೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading