
ಗಿರಿಧರ ಕಾರ್ಕಳ
ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾಗ ಕಾಲೇಜು ಸಹಪಾಠಿ ಚಿದಾನಂದನನ್ನು ನೋಡಲು ಉಚ್ಚಿಲ ಸಮುದ್ರ ತೀರದ ಅವನ ಮನೆಗೆ ಹೋಗಿದ್ದೆ. ಚಿದಾನಂದ ಪ್ರಸಿದ್ಧ ಲೇಖಕ ವಿದ್ವಾನ್ ದಿ.ರಾಮಚಂದ್ರ ಉಚ್ಚಿಲರ ಮಗ.
ಅವನ ಮನೆಗೆ ಹೋದವನು ಅವನ ಜತೆ ಮನೆ ಎದುರಿನ ಸಮುದ್ರ ದಂಡೆಯುದ್ದಕ್ಕೂ ನಡೆಯುತ್ತಾ …….
ತಲುಪಿದ್ದು ಹಿರಿಯ ಸಾಹಿತಿ ಅಮೃತ ಸೋಮೇಶ್ವರರ ಮನೆಗೆ..!!
ಅವರನ್ನು ನೋಡದೆ ವರ್ಷಗಳೇ ಆಗಿತ್ತು.ಅವರ ಜತೆ ಸಾಹಿತ್ಯ, ಆರೋಗ್ಯ, ಅವರ ಹೊಸಮನೆ ಅದೂ ಇದೂ ಹರಟುತ್ತ ಅರ್ಧ ಮುಕ್ಕಾಲು ಗಂಟೆ ಇದ್ದು ಬಂದೆವು. ಅವರಿಗೂ ಸಂತೋಷವಾಗಿತ್ತು.
ಹಾಗೆ ಅವರೊಂದಿಗೆ ಕಳೆದ ಆ ಮದ್ಯಾಹ್ನ ನನ್ನ ಪಾಲಿಗೆ “ಅಮೃತ ಘಳಿಗೆ” ಯಾಯ್ತು..!!!







0 Comments