ಅಭಿಷೇಕ ಬಳೆ ಮಸರಕಲ್
ಕಂಡ ಕನಸು ಚೂರು ಚೂರಾಯಿತು ನಿನ್ನ ಕಾರಣ
ಪ್ರೀತಿ ಎಂದೊ ಕೈ ಜಾರಿ ಹೋಯಿತು ನಿನ್ನ ಕಾರಣ
ವಸಂತದ ಕೋಗಿಲೆ ಹಾಡದಾಯಿತು ನಿನ್ನ ಕಾರಣ
ಪುಟ್ಟ ಹೃದಯ ಒಡೆದು ಹೋಯಿತು ನಿನ್ನ ಕಾರಣ
ಹಾಳು ವಿರಹ ಮನದಿ ವಾಸವಾಯಿತು ನಿನ್ನ ಕಾರಣ
ಮಾಗಿ ಸಂಜೆಯಲಿ ದುಗುಡ ತುಂಬಿತು ನಿನ್ನ ಕಾರಣ

ಭರವಸೆಯ ಆಶಾಗೋಪುರ ಕುಸಿಯಿತು ನಿನ್ನ ಕಾರಣ
ನಂಬಿಗೆ ಸಮಾಧಿಯಾಗಿ ಕಾಲವಾಯಿತು ನಿನ್ನ ಕಾರಣ
ಮನ ಮಧುಶಾಲೆಯ ದಾರಿ ಹಿಡಿಯಿತು ನಿನ್ನ ಕಾರಣ
ಕವಿತೆ ಉಸಿರು ಕೊಟ್ಟು ಜೊತೆ ಆಯಿತು ನಿನ್ನ ಕಾರಣ






0 Comments