ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಯನೂ..ಮಮ್ಮುಟ್ಟಿಯೂ ..

ಶಿಕಾರಿ ಚಿತ್ರ ನಿರ್ದೇಶಕ ಮಮ್ಮುತ್ತಿಯೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದರು. ಅದು ಇಲ್ಲಿದೆ- ಅಭಯ ಹೇಳಿದ ಮಮ್ಮುಟ್ಟಿ ‘ಶಿಕಾರಿ’ ಕಥೆ .

ಈ ಲೇಖನಕ್ಕೆ ಖ್ಯಾತ ವಿಮರ್ಶಕರೂ ‘ಅವಧಿ’ಯ ಓದುಗರೂ ಆದ ಪ್ರೊ ಸಿ ಎನ್ ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ

ಪ್ರಿಯ ಅಭಯ:

ಹಿರಿಯ ನಟ ಮಮ್ಮುಟ್ಟಿಯವರನ್ನು ತುಂಬಾ ಆಪ್ತವಾಗಿ, ಆದರೆ ಮೆಲುದನಿಯಲ್ಲಿ, ಪರಿಚಯ ಮಾಡಿಕೊಟ್ಟಿದ್ದೀರಿ; ಧನ್ಯವಾದಗಳು. ಮಮ್ಮುಟ್ಟಿಯವರ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದರೂ ಅವರ ’ಹೃದಯ ಶ್ರೀಮಂತಿಕೆ’ ಇಷ್ಟು ಅಗಾಧ ಎಂಬುದು ಗೊತ್ತಿರಲಿಲ್ಲ (ತಾವೇ ಬರೆದುಕೊಂಡು ಕನ್ನಡ ಸಂಭಾಷಣೆಯನ್ನು ಹೇಳುವುದು; ಸರಿ ರಾತ್ರಿಯಲ್ಲಿ ತೀರ್ಥಹಳ್ಳಿಯಲ್ಲಿ ಶೂಟಿಂಗ್‍ನಲ್ಲಿ ಭಾಗವಹಿಸುವುದು . . . ನಂಬಲು ಅಸಾಧ್ಯವಾಗುತ್ತಿದೆ).

ಪ್ರಾಯಃ, ಅತ್ಯುನ್ನತ ಸ್ಥಾನಕ್ಕೆ ಏರುವ ಪ್ರತಿಯೊಬ್ಬ ಕಲಾವಿದನೂ ’ಸಂತ’ನೇ ಆಗಿರುತ್ತಾನೋ ಏನೋ! ತಮ್ಮ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಹೋದಾಗಲೂ ಪಂಚತಾರಾ ವಸತಿಯನ್ನು ಅಲಕ್ಷಿಸಿ, ಕಾರಂತರ ಸಾಧಾರಣ (ಬಾಡಿಗೆ) ಮನೆಯಲ್ಲಿ ಇಳಿದುಕೊಂಡು, ಅಲ್ಲಿಯ ಹಕ್ಕಿ-ಬೆಕ್ಕುಗಳೊಡನೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದ ರಾಜ್‍ಕುಮಾರ್, ಕಾರಂತರು ಕಷ್ಟದಲ್ಲಿದ್ದಾಗ, ಅವರ ಅನೇಕ ’ಧ್ವನಿ-ಬೆಳಕು’ ಕಾರ್ಯಕ್ರಮಗಳಿಗೆ ಒಂದು ಚಿಕ್ಕಾಸೂ ಪಡೆಯದೆ ತಮ್ಮ ವಿಶಿಷ್ಟ-ಅಮೋಘ ಧ್ವನಿಯನ್ನು ಕೊಟ್ಟ ಅಮಿತಾಭ್ — ಭಾರತದಲ್ಲಿ ಇಂತಹ ’ಸಂತ-ಕಲಾವಿದ’ರ ಒಂದು ದೊಡ್ಡ ಪರಂಪರೆಯೇ ಇದೆ. ಆ ಪರಂಪರೆಗೆ ಸುಲಭವಾಗಿ ಸೇರುವ ಮಮ್ಮುಟ್ಟಿಯವರನ್ನು ಕುರಿತ ನಿಮ್ಮ ಲೇಖನಕ್ಕಾಗಿ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು. ನಿಮ್ಮ “ಶಿಕಾರಿ” ಚಿತ್ರ ಬಾಕ್ಸ್‌‍ಆಫೀಸ್ ಸೇರಿದಂತೆ ಎಲ್ಲಾ ನೆಲೆಗಳಲ್ಲಿಯೂ ಅಗಾಧ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.

-ಸಿ. ಎನ್. ರಾಮಚಂದ್ರನ್

 

‍ಲೇಖಕರು G

15 December, 2011

3 Comments

  1. D.RAVIVARMA

    MUMMATTI ಬಗ್ಗೆ ನಿಮ್ಮ ಬರಹ ನಿಜಕ್ಕೂ ಮನ ಮುಟ್ಟುವಂತಿದೆ, ಮನುಸ್ಯ ಮಾನಸಿಕವಾಗಿ ಪಕ್ವವದೆಂತೆಲ್ಲ ಆತನಲ್ಲಿ ಸರಳತೆ ,ಸಂತತನ ಹಾಗು ಎಲ್ಲ ಬ್ರಮೆಗಳಿಂದ ಹೊರಬಂದು ತನ್ನನ್ನು ತಾನೇ ಸಮರ್ಪಿಸಿಕೊಳ್ಳುತ್ತ ಹೋಗುತ್ತಾನೆ,, ಇತಿಹಾಸದಲ್ಲಿ ಕೆಲವು ನಟರು, ಈ ಸಾಲಿಗೆ ಸೇರುತ್ತಾರೆ, , ಅವರು ತಮ್ಮ ನಟನೆಗಿಂತ, ಅವರ ಬದುಕಿದ ರೀತಿ ಹಾಗು ನಂಬಿದ ಸತ್ಯಗಳು ,ಸಮಾಜದೊಂದಿಗೆ ಅವರ ಮುಕ್ತ ಸಂಭಂದ ಗಳಿಂದಾಗಿ ಜನರ ಮನದಲ್ಲಿ ನಿರಂತರವಾಗಿ ಇರುತ್ತಾರೆ ಈ ನಿಟ್ಟಿನಲ್ಲಿ ಕನ್ನಡದ ರಾಜ್ ಕುಮಾರ್. ಶಂಕರ್ನಾಗ್, ಬಿ ,ವಿ ,ಕಾರಂತ್, ಅಶ್ವಥ್ ನಮ್ಮ ಮನದಲ್ಲಿ ಉಳಿದಿದ್ದಾರೆ .ನಿಮ್ಮ ಲೇಖನ ನಿಜಕ್ಕೂ ನನಗೆ ಥ್ರಿಲ್ ನೀಡಿತು.ಆನ್ that matter ನೀವು ಆ ಮಹಾನ್ ನಟನ ಬದುಕಿನ ಮತ್ತೊಂದು ಮಗ್ಗುಲನ್ನು ಪರಿಚಯಿಸಿದ್ದಕ್ಕೆ ವಂದನೆಗಳು
    ರವಿ ವರ್ಮ ಹೊಸಪೇಟೆ

  2. sandhya

    ಯಾವುದೇ ರ೦ಗದಲ್ಲಿ ವ್ಯಕ್ತಿ ಸಾಧನೆಯ ಮೆಟ್ಟಿಲನ್ನು ಏರುತ್ತಾ ಹೋದ೦ತೆ, ನಾವು ಅವರನ್ನು ಉನ್ನತವಾದ ಸ್ಥಾನದಲ್ಲಿಡುತ್ತಾ ಹೋಗುತ್ತೇವೆ. ಆದರೆ ಅವರು ನಮಗೆ ಹತ್ತಿರವಾಗುವುದು ಅವರು ಆ ಹೆಗ್ಗಳಿಕೆ ಬಿಟ್ಟು ಸಾಮಾನ್ಯರಾಗಿ ನಮ್ಮೊ೦ದಿಗೆ ಬೆರೆತಾಗಲೇ. ಅಷ್ಟು ಎತ್ತರದಲ್ಲಿದ್ದರೆ ಮೆಚ್ಚಬಹುದು, ಆದರೆ ಪ್ರೀತಿಸಬೇಕೆ೦ದರೆ ನಮ್ಮ ಜೊತೆಯಲ್ಲಿ ಇರಬಲ್ಲ೦ತವರನ್ನು ಮಾತ್ರ..

  3. ನಾಗವೇಣಿ ಎ.

    ನನ್ನ ಅನಿಸಿಕೆಯ ಪ್ರಕಾರ ನಾನು ಮೂವತ್ತು ವರುಷಗಳ ನಂತರ ಇಂದಿಗೂ ಕೇವಲ ಬೆಳೆಯುತ್ತಿರುವ ನಟ ಎಂದು ಅನಿಸುತ್ತದೆ. ನಾನು ಬೆಳೆಯುವುದು ನಿಲ್ಲಿಸಿದ ದಿನ ನಟನೆಯೂ ಮುಗಿಯುತ್ತದೆ ಎಂದು ನನ್ನ ಭಾವನೆ.” ಎನ್ನುವ ಅವರ ಮನೋಭಾವ ನಿಜಕ್ಕೂ ಶ್ಲಾಘನೀಯ. ನಿಮ್ಮ ಚಿತ್ರ ಯಶಸ್ವಿಯಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading