ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಬ್ಳಿ ಹೆಗಡೆ ಹೊಸ ಕವಿತೆ – ನಾ..ದಶಮುಖ…

ಅಬ್ಳಿ ಹೆಗಡೆ

ನನ್ನ ಮುಖ ನಾನೇ
ಇನ್ನೂ ಓದದ
ಓದಬೇಕೆಂದರೂ
ಓದಲಾಗದ,ಹಳೆಯ
ಪುಟ್ಟ ಪುಸ್ತಕ
ತೆರೆಯದೇ..
ಎಷ್ಟೋ ಕಾಲದ
ಮೇಲೆ
ಹೊತ್ತು ಗೊತ್ತಿಲ್ಲದೇ
ಯಾರ್ಯಾರೋ
ಬಂದು, ಮಡಚಿದ
ನೆರಿಗೆಗಳ
ನೇರಮಾಡಿ
ಧೂಳ ಝಾಢಿಸಿ
ಅವಸರದಲ್ಲಿ ಓದಿ

ತಮ್ಮಿಷ್ಟದಂತೇ
ತಮಗನಿಸಿದಂತೇ
ವ್ಯಾಖ್ಯಾನಿಸಿ
ನನ್ನೆದುರು, ಕನ್ನಡಿ
ಆಗುತ್ತಾರೆ ನನಗೆ.
ನನ್ನ ಒಂದು ಮುಖ
ಹತ್ತಾಗಿ, ಒಂದೊಂದೂ
ಒಂದೊಂದು ತರಹ
ನನಗೇ ದಿಗ್ಭ್ರಮೆ
ನನಗೇ ಅರಿವಿಲ್ಲದ
ನನ್ನ ದಶಮುಖ
ಕಾಣಿಸಿದ ಕನ್ನಡಿಗೆ
ನಾನೆಂದೂ ಕ್ರತಜ಼.

‍ಲೇಖಕರು Admin

19 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading