ಅಲ್ಲಿ ಪೊಲೀಸರಿಲ್ಲ..

ಮೂಲ ಅರೇಬಿ: ದುನ್ಯಾ ಮಿಖೇಲ್  (ಇರಾಕಿ ಕವಿ)

ಇಂಗ್ಲೀಷಿಗೆ: ಕರೀಂ ಜೇಮ್ಸ್ ಅಬು-ಜೇದ್

ಕನ್ನಡಕ್ಕೆ: ಉದಯ್ ಇಟಗಿ

ಈ ಭೂಮಿಯಿಂದಾಚೆಯಿರುವ

ಅನ್ಯಗ್ರಹವೊಂದಕ್ಕೆ ಹೋಗಲು

ನನ್ನ ಬಳಿ ಸ್ಪೆಷಲ್ ಟಿಕೆಟ್ ಇದೆ.

ತುಂಬಾ ಆರಾಮದಾಯಕ ಮತ್ತು ಸುಂದರವಾದ ಜಗತ್ತು ಅದು;

ತುಂಬಾ ಹೊಗೆಯಿಲ್ಲದ

ತುಂಬಾ ಬಿಸಿಯಿಲ್ಲದ

ಮತ್ತು ತುಂಬಾ ಚಳಿಯಿಲ್ಲದ

ಗ್ರಹ ಅದು.

ಅಲ್ಲಿರುವ ಜೀವಿಗಳು ತುಂಬಾ ವಿನಮ್ರ

ಮತ್ತು ಅಲ್ಲಿನ ಸರಕಾರಗಳಿಗೆ

ಗುಟ್ಟುಗಳೆಂದರೇನೆಂಬುದೇ ಗೊತ್ತಿಲ್ಲ.

ಅಲ್ಲಿ ಪೊಲೀಸರಿಲ್ಲ

ಸಮಸ್ಯೆಗಳಿಲ್ಲ

ಜಗಳಗಳಿಲ್ಲ.

ಮತ್ತು ಅಲ್ಲಿನ ಸ್ಕೂಲುಗಳು

ಮಕ್ಕಳಿಗೆ ತುಂಬಾ ಕಲಿಸಿ

ಅವರನ್ನು ಹೈರಾಣು ಮಾಡುವದಿಲ್ಲ

ಏಕೆಂದರೆ ಅಲ್ಲಿನ್ನೂ ಇತಿಹಾಸ ಶುರುವಾಗಬೇಕಿದೆ

ಭೂಗೋಳ ಇಲ್ಲವೇ ಇಲ್ಲ

ಅನ್ಯ ಭಾಷೆಗಳಂತೂ ಮುನ್ನಾ ಇಲ್ಲ.

ಇದಕ್ಕಿಂತ ಹೆಚ್ಚಾಗಿ ಅಲ್ಲಿ

ಯುದ್ಧಗಳು ನಡೆಯುವುದೇ ಇಲ್ಲ

ಅವು ಪ್ರೀತಿಗಳಾಗಿ ಮಾರ್ಪಾಡಾಗಿವೆ

ಹಾಗಾಗಿ ಅಲ್ಲಿ ಶಸ್ತ್ರಾಸ್ತ್ರಗಳು

ಧೂಳಿನಡಿ ಮಲಗಿಕೊಂಡಿವೆ,

ವಿಮಾನಗಳು ಸಿಡಿಗುಂಡುಗಳನ್ನು

ಸಿಡಿಸದೇ ಸುಮ್ಮನೆ ಸಾಗುತ್ತವೆ

ದೋಣಿಗಳು

ನೀರಿನ ಮೇಲೆ

ಮಂದಹಾಸದಂತೆ ಕಾಣುತ್ತವೆ

ಈ ಅನ್ಯ ಗ್ರಹದಲ್ಲಿ

ಎಲ್ಲರೂ ಶಾಂತಿ ಮತ್ತು ನೆಮ್ಮದಿಯಿಂದಿದ್ದಾರೆ

ಆದರೂ ನಾನು ಅಲ್ಲಿಗೆ

ಒಂಟಿಯಾಗಿ ಹೋಗಲು

ಹಿಂದುಮುಂದು ನೋಡುತ್ತೇನೆ.

‍ಲೇಖಕರು avadhi

September 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: