ಅನು ಪಾವಂಜೆ ಕವಿತೆ: ನನ್ನ ಹಾದಿ…

ಕೊನೆಗೂ ಒ೦ದು ದಿನ ಅರಿವಾಯ್ತು…. ನಾ ಸಾಗೋ ಹಾದಿ ಯಾವುದೆ೦ದು… ನನ್ನ ಸುತ್ತಲಿನ ಗ೦ಟಲುಗಳು ಕೆಡುಕುಗಳನ್ನೇ ಬೊಬ್ಬಿರಿಯುತ್ತಿದ್ದವು…. ಮನೆಯೆಲ್ಲಾ ಕ೦ಪಿಸ ಹತ್ತಿದವು… ನನ್ನ ಮೊಣಕಾಲು ಬಲಹೀನವಾಗುತ್ತಿದ್ದವು…. ಇವೆಲ್ಲಾ ತಮ್ಮ ಮಾತುಗಳನ್ನೇ ಕಿರಿಚುತ್ತಿದ್ದವು… ಆದರೂ ನಾ ನಿಲ್ಲಲಾರದಾದೆ… ನನ್ನ ಹಾದಿ ಯಾವುದೆ೦ದು ಕೊನೆಗೂ ಅರಿವಾಗಿತ್ತು…. ಬೀಸೋ ಗಾಳಿ ಸುಯಿಲಿಟ್ಟು ತನ್ನ ಮೊನಚು ಬೆರಳುಗಳಿ೦ದ ನನ್ನ ಬುಡವನ್ನೇ ಕೆರೆಯುತ್ತಿತ್ತು…. ಅದಾಗಲೇ ಬಹಳ ತಡವಾಗಿತ್ತು…. ಕತ್ತಲು ಕ್ರೂರವಾಗಿತ್ತು… ಹಾದಿಯೆಲ್ಲಾ ಕಸ ಕಡ್ಡಿ…ದೊಡ್ಡಿ… ನಡೆದೇ ನಡೆದೆ…. ಸಾಗುತ್ತಾ ಎಲ್ಲಾ ತಿಳಿಯಾಗಹತ್ತಿತು… ಕ್ರೂರ ಮಾತುಗಳು ಕರಗಿತ್ತು…. ಕರ್ರಗಿನಾಗಸದಲಿ ತಾರೆ ಮೂಡುತ್ತಿತ್ತು.. ಇವೆಲ್ಲದರ ನಡುವೆ…. ಹಗುರಾದ ಒ೦ದು ಸುಯಿಲು… ಮೃದುವಾದ ಒ೦ದು ಒಳ ದನಿ… ನನ್ನದೇ ಎದೆಯೊಳಗಿನ ಖನಿ… ನನ್ನ ಜೊತೆಜೊತೆಗೆ ನಡೆದ… ಹಾದಿಯುದ್ದಕ್ಕೆ ನೆರಳಾದ ನನ್ನದೇ ದನಿ… ಜಗದ ಹಾದಿಯಲ್ಲಿ ಕಲ್ಲುಮುಳ್ಳನ್ನೂ ಮೃದುವಾಗಿಸಿದ ನನ್ನದೇ ಒಳಬಗೆಯ ದನಿ… ಇರೋ ಒ೦ದೇ ಒ೦ದು ಬದುಕನ್ನ ಸಾಯಗೊಡದ ನನ್ನದೇ ಸೋಲೊಪ್ಪದ ಮೆಲುದನಿ…   ( ಮೂಲ :ಮೇರಿ ಆಲಿವರ್  )    ]]>

‍ಲೇಖಕರು G

January 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.RAVI VARMA

    anuvaada tumba chennagide.”jagada haadiyalli kallu mullannu mruduvaagisida nannada olabageya dani ,iro onde ondu badaukannu saayagodada nannade soloppada meludani. nimma kavanagalannu odidde,adare neevu utttma anuvaadakru kuda ettichege ee avadhi,kendasampige yalli bahalstu visista vibhinna barahagararu nijakku tumba vajan aagi bareyuttiddare. thanks to avadhi.
    ravi varma hospet

    ಪ್ರತಿಕ್ರಿಯೆ
  2. kayvee

    Translation unless its appropriate will not create an interest to read while Anu Pavanje has done it so superbly.The simplicity of putting things across makes it an interesting and exciting reading of what Anu always does.
    There is no end to learning in life and there is no end to realize the facts of life as well.We have to choose our own paths right for us which sometimes we may loose sight.
    Its wonderful reading Anu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: