ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ನರೇಶ್ ಮಂಚಿ ಬರಹ: ಆಹಾ!!

ಅಳಿವಿನಂಚಿನ ಸೂಕ್ಷ್ಮಾಣುಗಳು ಮತ್ತು ನಾನು.. ಅನಿತಾ ನರೇಶ್ ಮಂಚಿ ಬೀಚಿ ಭಯಾಗ್ರಫಿ ಓದುತ್ತಾ ನಡು ನಡುವಿನ ಜೋಕ್ಸ್ಗಳಿಗೆ ಬಿದ್ದು ಬಿದ್ದು ನಗುತ್ತಿರುವಾಗಲೇ ಯಾಕೋ ನಡು ಹಿಡಿದುಕೊಂಡ ಅನುಭವವಾಗಿ ಸಣ್ಣಗೆ ನೋವಾದಂತಾಯಿತು. ಗಂಟೆ ನೋಡಿದರೆ ರಾತ್ರಿ ಒಂದು ! ದಪ್ಪನೆಯ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ನೆಟ್ಟಗೆ ಕುಳಿತುಗೊಳ್ಳದೆ ತಲೆದಿಂಬಿಗೊರಗಿಕೊಂಡು ಓದಿದ್ದರ ಪರಿಣಾಮವಿರಬೇಕು ಎಂದುಕೊಂಡು ಹಾಯಾಗಿ ಕಾಲು ಚಾಚಿ ಕಣ್ಣು ಮುಚ್ಚಿದೆ. ಬೆಳಗ್ಗೆ ಎದ್ದು ಮಾಮೂಲಿನಂತೆ ಕೆಲಸ ಕಾರ್ಯಗಳು ಮುಗಿದ ನಂತರ ಯಾಕೋ ಪುನಃ ನೋವು ಮರುಕಳಿಸಿದ ಅನುಭವ. ಮಗನಲ್ಲಿ ಹೇಳಿದರೆ, ಅಮ್ಮ ಒಂದೇ ನಿಮಿಷದಲ್ಲಿ ನಿನ್ನ ನೋವು ಮಾಯ ಮಾಡಿ ಬಿಡ್ತೀನಿ ಅಂತ ಕಿರುಚಿಕೊಂಡು ಯಾವುದೋ ಭಯಾನಕ ಡ್ರ್ಯಾಗನ್ನಿನ ಚಿತ್ರವಿದ್ದ ನೋವು ನಿವಾರಕ ಸ್ಪ್ರೇಯನ್ನು ಕೈಗಿತ್ತ. ಸರಿ ಎಂದು ಅದನ್ನೆತ್ತಿಕೊಂಡು ನೋವಿನ ಜಾಗಕ್ಕೆ ಗುರಿಯಿಟ್ಟು ಪದೇ ಪದೇ ಸ್ಪ್ರೇ ಮಾಡಿದ್ದೇ ಮಾಡಿದ್ದು. ಒಂದು ನಿಮಿಷದಲ್ಲಿ ವಾಸಿಯಾಗಬೇಕಾದ ನೋವು ಇಡೀ ಕಂಟೈನರ್ ಖಾಲಿ ಆದರೂ ಕಡಿಮೆಯಾಗಿರಲಿಲ್ಲ! ಇದೇನಪ್ಪ ಗ್ರಹಚಾರ ಅಂದುಕೊಂಡು ಇವರಲ್ಲಿ ಹೇಳಿದೆ. ಇವರೋ, ರಾತ್ರಿ ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಓದಿದ್ರೆ ಕಮ್ಮಿಯಾಗುತ್ತಿತ್ತು ಎಂದು ಗೊಣಗಿಕೊಂಡು, ಅರ್ಧ ಗಂಟೆಯಲ್ಲಿ ನೋವು ನಿವಾರಣೆಯಾಗುವ ಖಾತ್ರಿಯೊಂದಿಗೆ ಒಂದು ಮಾತ್ರೆ ಬಿಡಿಸಿ ಕೊಟ್ಟರು. ನನಗಿದರಲ್ಲಿ ನಂಬಿಕೆಯಿಲ್ಲದಿದ್ದರೂ ನನ್ನನ್ನು ಕಾಡುತ್ತಿದ್ದ ನೋವು, ನಾನು ಪರಮ ಹಿಂಸೆ ಎಂದೇ ಪರಿಗಣಿಸುವ ಮಾತ್ರೆ ನುಂಗುವಿಕೆಯನ್ನು ಮಾಡಿಸಿಬಿಟ್ಟಿತು. ಗಂಟೆ ಹೋಗಿ ದಿನ ಕಳೆದರೂ ನೋವು ಜಪ್ಪಯ್ಯ ಅನ್ನಲಿಲ್ಲ. ಇದನ್ನು ಹೀಗೆ ಬಿಟ್ಟರೆ ಆಗುವುದಿಲ್ಲವೆಂದುಕೊಂಡು ನಾನೇ ಶಸ್ತ್ರ ಸನ್ನದ್ಧಳಾಗಿ ಇದ್ದ ಬದ್ದ ವ್ಯಾಯಾಮ ಕಸರತ್ತುಗಳನ್ನೆಲ್ಲಾ ಮಾಡಿ ಇನ್ನಷ್ಟು ನೋವು ಹೆಚ್ಚಿಸಿಕೊಂಡೆ. ಆದರೂ ಪಟ್ಟು ಬಿಡದೆ, ಇದು ಗ್ಯಾಸ್ ಇರಬೇಕೆಂದುಕೊಂಡು, ನಿಂಬೆ ಹಣ್ಣು,ಶುಂಠಿ, ಉಪ್ಪು,ಇಂಗು, ಮಜ್ಜಿಗೆ ಎಂದೆಲ್ಲಾ ತಿಂದು ಕುಡಿದು ಮಾಡಿಯೂ ನೊಡಿದೆ. ಇವರು ದೊಡ್ಡ ಮನಸ್ಸು ಮಾಡಿ ನೋವಿಗೆ ಶಾಖ ಕೊಟ್ಟದ್ದೂ ಆಯಿತು. ಉಹೂಂ! ಏನೇ ಬಂದರೂ ಕುರ್ಚಿ ಬಿಡದ ರಾಜಕಾರಣಿಯಂತೆ ನೋವು ಅಲ್ಲಾಡದೆ ಕುಳಿತಿತ್ತು. ಈಗ ಅನ್ಯಥಾ ಶರಣಮ್ ನಾಸ್ತಿ ಅಂದುಕೊಂಡು ವೈದ್ಯರ ಮೊರೆ ಹೋಗುವುದೇ ವಾಸಿಯೆನಿಸಿತು. ಒಮ್ಮೆ ಬೆನ್ನಿನ ಕಡೆ,ಇನ್ನೊಮ್ಮೆ ಹೊಟ್ಟೆಯ ಭಾಗದಲ್ಲಿ ಹೀಗೆ ಬೇಕೆಂದಲ್ಲಿ ಹೊರಳುತ್ತಿದ್ದ ನೋವಿನಿಂದಾಗಿ ಯಾವ ಸ್ಪೆಷಲಿಸ್ಟ್ನ್ನು ಸಂದರ್ಶಿಸಬೇಕೆಂಬ ಗೊಂದಲ ಆವರಿಸಿಕೊಂಡಿತು. ನನಗಂತೂ ಕಣ್ಣ ಮುಂದೆ ಸ್ಕ್ಯಾನಿಂಗ್ ಮಷಿನ್, ಆಪರೇಷನ್ ಥಿಯೇಟರ್, ಕತ್ತಿ, ಕತ್ತರಿ, ಸೂಜಿ, ಮದ್ದು, ಡಾಕ್ಟರ್,ನಸರ್ುಗಳೆಲ್ಲಾ ಮೆರವಣಿಗೆ ಹೊರಟಂತೆನಿಸಿ ಸಣ್ಣಗೆ ಮೈ ನಡುಗಿತು. ಹೇಗೂ ಈ ಯೋಚನೆ ಬಂದಾಗ ರಾತ್ರಿಯಾಗಿದ್ದದ್ದರಿಂದ ನಾಳೆ ಹೋಗುವುದೆಂದು ದಿನ ಮುಂದೂಡಿದೆ. ರಾತ್ರಿಯೆಲ್ಲಾ ನೋವು, ಆತಂಕದಲ್ಲಿ ಅರೆ ನಿದ್ರೆ ಅರೆ ಎಚ್ಚರದಲ್ಲಿ ಕಳೆಯಿತು. ಬೆಳಗಾದಾಗ ಬೆನ್ನಿನ ಭಾಗದಲ್ಲಿ ಒತ್ತೊತ್ತಾಗಿ ಕೆಂಪನೆಯ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡಿದ್ದವು. ವಿಪರೀತ ಉರಿ, ನೋವು! ತಿಂಡಿ ಕೂಡಾ ತಿನ್ನದೇ ಕೂಡಲೇ ಡಾಕ್ಟ್ರ್ ಬಳಿ ಸವಾರಿ ಹೊರಟಿತು. ಅವರೊಮ್ಮೆ ಸಾವಕಾಶವಾಗಿ ಪರೀಕ್ಷಿಸಿ, ನನ್ನ ಬೆನ್ನಿನ ಭಾದೆಗೆ ಸರ್ಪಸುತ್ತು ಎಂಬ ಸುಂದರ ಶುಭ ನಾಮಧೇಯವನ್ನಿತ್ತರು..! ಹೆಸರು ಹೇಗಿದ್ದರೇನು ನೋವು ತಿನ್ನುವುದಂತೂ ಇದ್ದೇ ಇದೆ ಅಂದುಕೊಂಡು ಹೆಚ್ಚಿನ ವಿವರಗಳನ್ನು ಕೆದಕಿದೆ! ಈಗ ಇನ್ನಷ್ಟು ಗಂಭೀರ ವದನರಾದ ವೈದ್ಯರು ಖಾಯಿಲೆಯ ಗುಣ ಲಕ್ಷಣಗಳನ್ನು ವಿವರಿಸಿ ಇದು ಗಿಚಗಿ ಅಥರ್ಾತ್ ವೆರಿಸೆಲ್ಲಾ ಜೋಸ್ಟರ್  ವೈರಸ್ ಎಂಬ ವೈರಾಣುವಿನಿಂದ ಹರಡುತ್ತದೆಯೆಂದರು. ಇನ್ನಷ್ಟು ಮುಂದುವರೆದು, ಮೊದಲಿಗೆ ಈ ವೈರಾಣು ಚಿಕನ್ ಪಾಕ್ಸ್ ಗೆ ಕಾರಣೀಭೂತವಾಗಿ, ಅದು ವಾಸಿಯಾದ ನಂತರ, ವೈದ್ಯಕೀಯ ಲೋಕಕ್ಕೆ ಇನ್ನೂ ಸ್ಪಷ್ಟವಾಗದ ಕಾರಣಗಳಿಂದಾಗಿ ಬೆನ್ನು ಮೂಳೆಯ ಬಳಿಯ ನರ ಕೋಶಗಳಲ್ಲೇ ಉಳಿದುಕೊಂಡು ಮುಂದೊಮ್ಮೆ ಸರ್ಪಸುತ್ತು ಎಂದು ಕರೆಯಲ್ಪಡುವ ಈ ರೋಗವನ್ನು ಉಂಟುಮಾಡುತ್ತದೆಯೆಂದರು. ಈಗೆಲ್ಲಾ ಮಕ್ಕಳಿಗೆ ಪ್ರತಿರೋಧಕ ಚುಚ್ಚುಮದ್ದುಗಳನ್ನು ಹಾಕುವುದರಿಂದ ಭವಿಷ್ಯದಲ್ಲೊಮ್ಮೆ ಈ ಖಾಯಿಲೆ ಭೂಮಿಯಿಂದಲೇ ಕಣ್ಮರೆಯಗುವ ಸಾಧ್ಯತೆ ಇದೆ ಅಂತಲೂ ಸೇರಿಸಿದರು.ಇಷ್ಟು ದೀರ್ಘ ಭಾಷಣವನ್ನು ಮಾಡಿ ನಾನೇನೂ ಹೆದರಬೇಕಾದ್ದಿಲ್ಲವೆಂದೂ, ಗುಳಿಗೆಗಳನ್ನು ಸೇವಿಸುವುದರಿಂದ ಎರಡು ಮೂರು ವಾರಗಳಲ್ಲಿ ಶಮನವಾಗುವುದೆಂದೂ ಆಶ್ವಾಸನೆಯನ್ನಿತ್ತರು. ಆಟಗಳಲ್ಲಿ ಸಿಂಗಲ್ಸ್, ಡಬ್ಬಲ್ಸ್ ಎಲ್ಲಾ ಕೇಳಿದ್ದೆ. ಕಾಯಿಲೆಗಳೂ ಅದೇ ಹೆಸರು ಹೊತ್ತಿರುವುದು ಅಚ್ಚರಿ ಎನಿಸಿತು.ಆದರೆ ಇಷ್ಟೆಲ್ಲಾ ವಿಷಯಗಳನ್ನು ತಿಳಿದ ಮೇಲೆ ನಾನು, ಒಳಗೊಳಗೇ ವಿನಾಶದ ಅಂಚಲ್ಲಿರುವ ಅಪರೂಪದ ಕಾಯಿಲೆಯೊಂದನ್ನು ಹೊತ್ತಿದ್ದೇನೆಂದು ಹೆಮ್ಮೆಯಿಂದ ಬೀಗಿದೆ!! ಅಂತೂ ಅವರಿಂದ ಪಶು ವೈದ್ಯರು ದನಗಳಿಗೆ ಕೊಡುವಂತದ್ದನ್ನು ಹೋಲುವ ಮಾತ್ರೆಗಳನ್ನು ಪಡೆದು ಮನೆ ಸೇರಿದ್ದಾಯಿತು. ಮಾತ್ರೆಯ ಗಾತ್ರವನ್ನು ನೋಡಿ ಅದನ್ನು ಬಡಪೆಟ್ಟಿಗೆ ನಾನು ನುಂಗುವ ಸಂಭವನೀಯತೆ ಕಮ್ಮಿ ಎಂದು ಮನವರಿಕೆಯಾಗಿ ನನ್ನವರು ದೊಡ್ಡ ನೀರಿನ ಚೆಂಬು ಹಿಡಿದು ಸರ್ಕಸ್ಸಿನ ರಿಂಗ್ ಮಾಸ್ಟರಿನ ಠೀವಿಯಲ್ಲಿ ಬಳಿಯಲ್ಲೇ ನಿಂತಿದ್ದರು. ವಿಪರೀತ ನೋವಿದ್ದ ಕಾರಣ ತಗಾದೆಯಿಲ್ಲದೇ ನುಂಗಿ ನೀರು ಕುಡಿದೆ. ಈಗ ಹೇಗಿದ್ದರೂ ಮನೆಗೆಲಸವೇನೂ ಮಾಡಲಾಗದ ಕಾರಣ ಇನ್ನೊಂದಷ್ಟು ಪುಸ್ತಕಗಳನ್ನು ರಾಶಿ ಹಾಕಿಕೊಂಡು ಕುಳಿತೆ. ಮೊಬೈಲ್ ಕೈಗೆತ್ತಿಕೊಂಡು ಪರಮಾಪ್ತರಿಗೆಲ್ಲಾ ವಿಷಯ ತಿಳಿಸಿದೆ. ಅಲ್ಲಿಯವರೆಗೆ ಮಾನಸಿಕವಾಗಿ ನೆಮ್ಮದಿಯಿಂದಿದ್ದ ನನಗೆ ಅಡಿಗಡಿಗೆ ಬರ ತೊಡಗಿದ ಆತಂಕ ಭರಿತ ಫೋನ್ ಕಾಲ್ಗಳು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆಹಾರದ ಬಗ್ಗೆ ನಾನು ಅನುಸರಿಸಲೇಬೇಕೆಂಬ ಒತ್ತಾಯದ ಪಥ್ಯದ ವಿವರಗಳು ದಿಗಿಲು ಹುಟ್ಟಿಸಿತು. ಉಪ್ಪು ,ಹುಳಿ, ಸಿಹಿ, ಖಾರ , ವಜ್ರ್ಯವೆಂದೂ, ಉಷ್ಣ,ಶೀತ ಗುಣದ ಪದಾರ್ಥಗಳು ನಿಷಿದ್ಧವೆಂದೂ ಘೋಷಿಸಲಾಯಿತು. ಇನ್ನು ಉಳಿದಂತೆ ಇದ್ಯಾವ ಗುಣ ವಿಶೇಷಗಳಿರದ ಪದಾರ್ಥಗಳನ್ನು ಸೇವಿಸಬಹುದೆಂದು ಸಿಂಪಲ್ಲಾಗಿ ಸೂಚಿಸುತ್ತಿದ್ದರು..!! ಅವರಲ್ಲಿ ಯಾರೋ ಒಬ್ಬರು ಇವರಿಗೆ ಡೈರೆಕ್ಟಾಗಿ ಫéೋನಾಯಿಸಿ, ಈ ಕಾಯಿಲೆಗೆ ಹುರುಳಿ ಸೇವಿಸಿದರೆ ಅತ್ಯುತ್ತಮವೆಂದು ಸಲಹೆ ನೀಡಿದರು.ನನ್ನಹಿಂದಿನ ಜನ್ಮದ ಬಗ್ಗೆ ಮೊದಲಿನಿಂದಲೂ ಅನುಮಾನ ಹೊಂದಿದ್ದ ಇವರು, ಅದಕ್ಕೇ ಕಾಯುತ್ತಿದ್ದವರಂತೆ ಮೀಸೆಯಡಿಯಲ್ಲಿ ನಗುತ್ತಾ ಅಂಗಡಿಗೆ ಓಡಿ ಹೋಗಿ ಹುರುಳಿ ತಂದು ಬೇಯಿಸಿ ಕೊಡಲು ಸುರು ಮಾಡಿದರು. ಮೊದಲೆಲ್ಲಾ ನಾನು ಮಾಡುತ್ತಿದ್ದ ತರಲೆಗಳಿಗೆ ಬೇಸತ್ತು ಅಮ್ಮ ಅಜ್ಜಿಯಂದಿರಾದಿಯಾಗಿ ಕುದುರೆ ಎಂದು ಬಯ್ಯುತ್ತಿದ್ದದ್ದು ಈಗ ಕಿಲೊಗ್ರಾಮ್ ಲೆಕ್ಕದಲ್ಲಿ ಹಾರ್ಸ್ ಗ್ರಾಮ್ ತಿನ್ನುವಂತಾಗಿ ಸಾರ್ಥಕವಾಯಿತು! ಈಗ ಒಬ್ಬೊಬ್ಬರಾಗಿ ಭೇಟಿ ಕೊಡಲು ಸುರು ಮಾಡಿದ ಸ್ನೇಹಿತರು ಸಂಬಂಧಿಕರು ಕೆಲವು ಅತ್ಯಪರೂಪದ ಮೂಲಿಕೆಗಳನ್ನು, ಅವು ದೊರಕುವ ದೂರದ ತಾಣಗಳನ್ನು ಹೆಸರಿಸಿ ನನಗೆ ಬಂದಿದ್ದ ರಾಜ ಖಾಯಿಲೆಯ ಬಗ್ಗೆ ಇನ್ನಷ್ಟು ಹೆಮ್ಮೆ ಉಕ್ಕುವಂತೆ ಮಾಡಿದರು. ಜೊತೆಗೆ ಇದಕ್ಕೆ ಕೊಂಡಿ ಹಾಕಿ ಕೊಂಡಿದ್ದ ಅತಿ ರಂಜಿತ ಕಥೆಗಳನ್ನು ಹೇಳತೊಡಗಿದರು. ಒಬ್ಬರಂತೂ ಈ ಗುಳ್ಳೆಯ ಸಾಲು ದೇಹಕ್ಕೆ ಒಂದು ಸುತ್ತು ಬಂದು ಕೂಡಿದರೆ ಸಾವು ನಿಶ್ಚಯವೆಂದರು. ಪಕ್ಕನೇ ನನಗೆ ನೋಕಿಯ ಮೊಬೈಲ್ನಲ್ಲಿದ್ದ ಸ್ನೇಕ್ ಗೇಮ್ ನೆನಪಾಗಿ ನಗು ಬಂದಂತಾದರೂ, ಯಾಕೋ ಒಂದು ಕ್ಷಣ ಅಳುಕೆನಿಸಿ ಹಾಗೇನಾದರೂ ಆದರೆ ಇವರ ಗತಿಯೇನಪ್ಪ ಎಂದು ಬಳಿಯಲ್ಲೇ ಇದ್ದ ಇವರ ಮುಖ ನೋಡಿದೆ. ಇವರು ತಟ್ಟನೆ ನೀನೇನೂ ಚಿಂತಿಸಬೇಡ ನಾನು ಈಗಲೇ ಮ್ಯಾರೇಜ್ ಬ್ರೋಕರ್ಗೆ ಫೋನ್ ಮಾಡುತ್ತೇನೆ ಎಂದು ನನ್ನನ್ನು ಸಮಾಧಾನಿಸಿದರು..!! ಹಗಲು ಹೇಗೋ ಹೊತ್ತು ಕಳೆಯುತ್ತಿದ್ದೆ. ರಾತ್ರಿಯಾದೊಡನೆ ನೋವು ಜಾಸ್ತಿಯಾದಂತಾಗಿ ಮಲಗುವುದೂ ಕಷ್ಟವಾಗುತ್ತಿತ್ತು. ಹಾಗೆ ಎಚ್ಚರವಾದಾಗಲೆಲ್ಲ ವಾಕಿಂಗ್ ಪ್ರಾರಂಭಿಸುತ್ತಿದ್ದೆ.ನನ್ನನ್ನು ನೋಡಿ ಹೋಗಲು ಬಂದಿದ್ದ ಅಮ್ಮ, ಮರುದಿನ ಬೆಳಗ್ಗೆ ಇವರ ಬಳಿ ತಗ್ಗಿದ ಸ್ವರದಲ್ಲಿ ರಾತ್ರಿಯೆಲ್ಲ ಗೆಜ್ಜೆ ಸದ್ದು ಕೇಳಿಸುತ್ತಿತ್ತು. ಭೂತಸಂಚಾರದಂತೆ .. ಏನದು ಎಂದು ವಿಚಾರಿಸುತ್ತಿದ್ದರು. ಇವರು ಕೂಡಲೇ ಹ್ಹೋ..ಹ್ಹೋ , ಅದು ನನ್ನ ಕುತ್ತಿಗೆಗೆ ನೀವು ಕಟ್ಟಿದ ಮರಿ ಭೂತ, ನನಗಂತೂ ಯಾವ ತಂತ್ರಿಗಳ ಬಳಿಗೆ ಹೋದರೂ ಅದರಿಂದ ಬಿಡುಗಡೆ ಇಲ್ಲ ಎಂದು, ನನ್ನ ಕೈಗೆ ಎಣ್ಣೆ ಬೆಣ್ಣೆಗಳನ್ನು ಕಾಣದ ಪ್ಲಾಸ್ಟಿಕ್ ಹಾಳೆಯಂತಿದ್ದ ಚಪಾತಿ ತಟ್ಟೆ ಕೊಟ್ಟು, ತಾವು ತುಪ್ಪ ಹಾಕಿದ ಉತ್ತಪ್ಪ ಕಬಳಿಸತೊಡಗಿದರು. ನಾನು ಇನ್ನೂ ಎಷ್ಟುಕಾಲ ಈ ಒಣ ಚಪಾತಿ ತಿನ್ನಬೇಕೆಂಬ ಚಿಂತೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತೆ.]]>

‍ಲೇಖಕರು G

30 January, 2012

28 Comments

  1. anupavanje

    hahahahaha……soooper anithaa…….:)))))))))))

    • Tanuja S Pai

      Sarpa suttina bagge search madutta madutta ondu haasya barahagaarthiya parichaya aaythu….Thanks….Anitha Naresh Manchi….nenapinalli ittukolluva hesaru…..

  2. lalitha siddabasavaiah

    ಅನಿತಾ , ಈ ಸರ್ಪಸುತ್ತಿನ ಬಗ್ಗೆ ಒಂದು ನಂಬಿಕೆಯಿದೆ. ಇದು ಒಂದು ರಾಜಾರೋಗ. ಇದು ಬಂದವರಿಗೆ ಆರಂಭದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಹೋಗುವಾಗ ಬಹುದೊಡ್ಡ ಶುಭಫಲ ಕೊಟ್ಟುಹೋಗುತ್ತದೆ – ಇದು ಜನಜನಿತ ನಂಬಿಕೆ. ಇದು ಬಂದವರಲ್ಲಿ ಅನೇಕರು ಮಹಾರಾಜರುಗಳಾಗಿದ್ದಾರಂತೆ. ಮಂತ್ರಿಗಳಾಗಿ ದ್ದಾರಂತೆ, ಮನೆ ಕಟ್ಟಿಸಿದ್ದಾರಂತೆ ಇತ್ಯಾದಿ. ಕೊನೆಯ ಫಲದ ಬಗ್ಗೆ ಅನುಮಾನವಿದ್ದರೂ ಮೊದಲಫಲ ಖಾತ್ರಿ. ಆರಂಭದಲ್ಲಿ ಇದು ಕೊಡುವ ನೋವಿದೆಯಲ್ಲ ಅದಕ್ಕಿಂತ ದೊಡ್ಡ ಕಷ್ಟ ಏನಿದೆ ?

  3. A P BHAT

    Fun apart Herpes Zoster has good treatment in modern medicine effective if started early.Regarding diet high protien food like
    horsegram is ok but other restrictions are totally unwarranted.
    Lot of supertitions around this disease. Dr A P Bhat

  4. Tejaswini Hegde

    “ನನ್ನಹಿಂದಿನ ಜನ್ಮದ ಬಗ್ಗೆ ಮೊದಲಿನಿಂದಲೂ ಅನುಮಾನ ಹೊಂದಿದ್ದ ಇವರು, ಅದಕ್ಕೇ ಕಾಯುತ್ತಿದ್ದವರಂತೆ ಮೀಸೆಯಡಿಯಲ್ಲಿ ನಗುತ್ತಾ ಅಂಗಡಿಗೆ ಓಡಿ ಹೋಗಿ ಹುರುಳಿ ತಂದು ಬೇಯಿಸಿ ಕೊಡಲು ಸುರು ಮಾಡಿದರು. ಮೊದಲೆಲ್ಲಾ ನಾನು ಮಾಡುತ್ತಿದ್ದ ತರಲೆಗಳಿಗೆ ಬೇಸತ್ತು ಅಮ್ಮ ಅಜ್ಜಿಯಂದಿರಾದಿಯಾಗಿ ಕುದುರೆ ಎಂದು ಬಯ್ಯುತ್ತಿದ್ದದ್ದು ಈಗ ಕಿಲೊಗ್ರಾಮ್ ಲೆಕ್ಕದಲ್ಲಿ ಹಾರ್ಸ್ ಗ್ರಾಮ್ ತಿನ್ನುವಂತಾಗಿ ಸಾರ್ಥಕವಾಯಿತು!:D:D” – Liked 🙂

  5. veena bhat

    ನಿಮ್ಮ ಹಾಸ್ಯ ಪ್ರಜ್ಞೆಗೆ ನಮೋ ನಮಃ ….ನಾನಾದ್ರೆ ಅತ್ತುಕೊಂಡು ಕೂತಿರುತಿದ್ದೆ …:)

    • pathresh hiremath

      ನೀವು ಅದಕ್ಕೊಂದು ಸುಭಾಷಿತ ಹುಡುಕಿ ಫೇಸ್ ಬುಕ್ ನಲ್ಲಿ ಹಾಕ್ತಿದ್ರಿ…. ಅಲ್ವಾ ಮೇಡಂ…

  6. ಮಾಲಾ

    ಅನಿತ
    ನೋವು ತಿನ್ನುತ್ತಿದ್ದರೂ ಬಹಳ ಬಹಳ ಸುಂದರವಾಗಿ ಈ ಖಾಯಿಲೆ ಬಗ್ಗೆ ಬರೆದಿದ್ದೀರ. ವಾವ್ ಸೂಪರ್ಬ್.

  7. Anil K S

    Nice one..

  8. Amita Ravikirana

    mattomme superrrrrr anita….

  9. malathi S

    🙂 🙂

  10. prakash hegde

    ಅನಿತಾರವರೆ..
    ನಕ್ಕೂ ನಕ್ಕು ಸುಸ್ತಾಯ್ತು…
    ಆ ನೋವನ್ನೂ ಎಂಜಾಯ್ ಮಾಡಿದ್ರಲ್ಲ…
    ಕೊನೆಗೆ ಹೇಗೆ ವಾಸಿ ಆಯ್ತು…? ಅದನ್ನೂ ಬರಿರಿ…
    ಪುಕ್ಕಟೆ ನಗಿಸಿದ್ದಕ್ಕೆ ಥ್ಯಾಂಕ್ಯೂ…

  11. Raghav

    ಹಾಯ್ ಅನಿತಕ್ಕ… ನೋವಿನಲ್ಲೂ ಹಾಸ್ಯಪ್ರಜ್ಞೆಯನ್ನ ಬಿಡಲೊಪ್ಪದ ನಿಮ್ಮ ಬರವಣಿಗೆ ಬಗ್ಗೆ ಕೆಮ್ಮೋ ಹಾಗೆ ಇಲ್ಲಾ ಬಿಡಿ…!! ಬೀ.chi. ಸಾಹಿತ್ಯ ಓದಿದ್ದಕ್ಕೂ ಸಾರ್ಥಕವಾಯ್ತು..!! ಸರ್ಪದೋಷ ಇರಬಹುದೇನೋ… ಯಾವ್ದಕ್ಕೂ ಕುಕ್ಕೆ ಟಿಕೆಟ್ ನ Confirm ಮಾಡ್ಕೊಂಡ್ಬಿಡಿ..!! FREE ADVICE… Lena hain tho le lo..!! 😉

  12. guru

    gambheeravaada vishayavannu thamasheyagi heluva nimma barahada shaili adbhutha.

  13. Ashoka Bhagamandala

    Tumbaa chennagide :):)Innu mele ninge yava kayilenoo barade irali. Innashtu hosa baravanigegalu ninna lekhaniyinda moodali. Have a nice day Anitha.

  14. S K G K BHAT

    A very good article. The time we spend during a sickness is the best time for thoughts !

  15. D.RAVI VARMA

    ಏನಾದ್ರೂ ಆದಾಗ,ಕಾಯಿಲೆ ಬಂದಾಗ ಗೊಣಗುವವರನ್ನು ನೋಡಿದ್ದೇ, ನೀವು ಅದರಲ್ಲಿ ಹುಮೌರ್ ಕಂಡುಕೊಂಡದ್ದು ನೋಡಿ ನಿಜವಾಗಲು ಥ್ರಿಲ್ ಆಯ್ತು . ಆ ತೆರನಾದ ನಿಲುವು ನಮ್ಮ ಕಾಯಿಲೆಯ ಒತ್ತಡವನ್ನು ಕೂಡ ಕಡಿಮೆಮಡುತ್ತದೆ ನಿಮ್ಮಗಳನ್ನು ಒಂತರಾ ಹೊಟ್ಟೆಕಿಚ್ಚು ನನಗೆ, ನೇವು ಏನೆಲ್ಲವನ್ನು ನಿಮ್ಮ ಬರಹಕ್ಕೆ ವಸ್ತುವಾಗಿಸಿಕೊಂದುಬಿದುತ್ತೆರ್, ಅಸ್ತೆ ಅಲ್ಲ ಅದಕ್ಕೊಂದು ಸಾಹಿತ್ಯಿಕ ರೂಪು kottubidutteri ಬೀಚಿ ಭಯಾಗ್ರಫಿ ಓದಿ , ಬೀಚಿ ಈ ನಾಡು ಕಂಡ ಒಬ್ಬ ವಿಸಿಸ್ತ ಸಂವೆದಶೀಲ ಬರಹಗಾರರು.
    ರವಿ ವರ್ಮಾ hosapete .

  16. ಮಂಜುನಾಥ ಕೊಳ್ಳೇಗಾಲ

    “ಆದರೆ ಇಷ್ಟೆಲ್ಲಾ ವಿಷಯಗಳನ್ನು ತಿಳಿದ ಮೇಲೆ ನಾನು, ಒಳಗೊಳಗೇ ವಿನಾಶದ ಅಂಚಲ್ಲಿರುವ ಅಪರೂಪದ ಕಾಯಿಲೆಯೊಂದನ್ನು ಹೊತ್ತಿದ್ದೇನೆಂದು ಹೆಮ್ಮೆಯಿಂದ ಬೀಗಿದೆ!!” – too good. ಸೊಗಸಾದ ಬರಹ. ಲಲಿತ ಪ್ರಬಂಧಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನೀವೊಬ್ಬರು ಪ್ರಾಮಿಸಿಂಗ್ ಲೇಖಕಿ. ಮುಂದುವರೆಸಿ.

  17. Anuradha.rao

    ನನ್ನ ಕಾಲಿನ ಶಸ್ತ್ರಚಿಕಿತ್ಸೆ ಆದಾಗಲೂ ,ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿತ್ತು ,ನನ್ನನ್ನು ನೋಡಲು ಬರುವವರೆಲ್ಲಾ ಹಣ್ಣು ತರುತ್ತಾರೆಂದು ನಮ್ಮವರಿಗೆ ಖುಷಿ …ನಿಮ್ಮ ಬರಹ ಓದಿ ನನಗೆ ಇದೆಲ್ಲಾ ನೆನಪಾಯಿತು …ನಿಮ್ಮ Enjoy the pain attitude ..ತುಂಬಾ ಖುಷಿಯಾಯಿತು …ಹಾಸ್ಯದ ನಡುವೆಯೂ ನಿಮ್ಮ ನೋವಿನ ಬಗ್ಗೆ ಕಾಳಜಿ ಯಾಯಿತು …ಹೇಗಿದ್ದೀರಿ ?
    ಈ ಬಾರಿ ನಮ್ಮೂರಿಗೆ ಹೋದಾಗ ನಮ್ಮವರೋಬ್ಬರಿಗೆ ಸರ್ಪಸುತ್ತು ಆಗಿತ್ತು …ಅವರು ಅಳಲೆಕಾಯಿ ಯ ಮೇಲಿನ ಸಿಪ್ಪೆ ತೆಗೆದು ಒಳಗಿನ ಬೀಜವನ್ನು ತೇದು..ಆ ಜಾಗಕ್ಕೆ ಹಚ್ಚಿ ,ಅರ್ಧ ಚಮಚ ಕುಡಿದರು .ದಿನಕ್ಕೆ ಎರಡು ಬಾರಿ .ಒಂದು ಕಾಯಿ ಐದು ಸಲಕ್ಕೆ ಮುಗಿಯಬೇಕಂತೆ .ಇದು ಸರ್ಪಸುತ್ತಿಗೆ ರಾಮಬಾಣವಂತೆ..
    ನಿಮ್ಮ ನೋವನ್ನು ನಮ್ಮ ನಗೆಯಾಗಿಸಿದ್ದಕ್ಕೆ ಅಭಿನಂದನೆಗಳು .

  18. raghu

    i like it..the style of writing..

  19. veda

    Anitha nimma baraha tumba sogasagide, novina galigeyannu ishtondu hasyabarithavagi hanchikolluvdu metchabekadde sari. Nimma sarpa suttu begane vasiyagali.Intaha chendada lekhanagalannu bareyuva kayile sada nimagante irali:-)

  20. pathresh hiremath

    ಸರ್ಪಸುತ್ತು ರೋಗವನ್ನು ಅನುಭವಿಸಿ ಒಂದು ಲೇಖನ ಮಾಡಿದ್ದೀರಿ…. ಈ ನೆಪದಲ್ಲಾದರೂ ಹಲವಾರು ನಾಟಿ ಔಷಧ ನೋಡುವ ಭಾಗ್ಯ ನಿಮಗೆ ಸಿಕ್ಕಿತಲ್ಲಾ

  21. rudresh

    ಲೇಖನ ಚೆನ್ನಾಗಿದೆ, ಹಾಸ್ಯಮಯವಾಗಿ ಓದಿಸಿಕೊಂಡು ಹೋಗುವುದರೊಂದಿಗೆ ನೋವಿನ ಮಂಜಲುಗಳನ್ನು ಚೆನ್ನಾಗಿ ವಿವರಿಸಿದ್ದೀರಿ… ಜೊತೆಯಲ್ಲಿ ಬರುವ ಸಂಬಂಧಗಳಾದ ಗಂಡನ, ಮಗನ ಸೇವೆಯ ಪರಿಯು ನಮ್ಮ ಮನೆಯಲ್ಲಿಯೇ ನಡೆದಂತಹ ಪ್ರಸಂಗಗಳಂತ್ತಿದ್ದವು…!!!. ಸ್ನೇಹಿತರ ಮೊಬೈಲ್ ಮೊಲಕ ಕೊಡುವ ಪುಕ್ಕಟೆ ಸಲಹೆಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ನೀವು ಅನುಭವಿಸುವ ನೋವನ್ನು ಮನಸ್ಸಿನಲ್ಲಿ ಮೊಡಿದ್ದನ್ನು ಅಚ್ಚುಕಟ್ಟಾಗಿ ಹೊರಹಾಕಿದ್ದೀರಿ.
    ಎಲ್ಲ ಸೌಕರ್ಯವಿರುವ ನಮ್ಮಗಳಿಗೆ ನೋವಿವ ಪರಿ ರೀತಿಯಾದರೆ…!!! ವಯಸ್ಸಾದ, ಯಾರು ಕೇಳದಂತಹ ಸ್ಥಿತಿಯಲ್ಲಿರುವ, ನೋವನ್ನು ತೋಡಿಕೊಳ್ಳಲು ಯಾರು ಇಲ್ಲದವರ ಸ್ಥಿತಿಯಲ್ಲಿರುವವರ ಗತಿಯೇನೋ? ದೇವರೇ ಬಲ್ಲ!!! ಕೆಲವೊಂದು ಬಾರಿ ತಮ್ಮ ನೋವನ್ನು ತೋಡಿಕೊಳ್ಳುವ ಹಿರಿಜೀವಗಳ ನೋವಿಗೆ ಸ್ಪಂದಿಸುವ ಗುಣವಿಲ್ಲವಾಗುತ್ತಿದ್ದೇಯೇ ಎಂಬ ಭಾವ ಕಾಡುತ್ತದೆ ನನ್ನಲ್ಲಿ. ನಮಗೆ ವಯಸ್ಸಾದ ಸಂಬಂಧಗಳು ಯಾಕೋ ಬೇಡವಾದವೇ… ಅವರಿಗೆ ಸಾಂತ್ವನ ಹೇಳುವ ಮನಸ್ಸು ಇಲ್ಲವಾಯಿತೇ ಎಂದು ಒಂದೊಂದು ಬಾರಿ ಯೋಚಿಸುವಂತಾಗುತ್ತದೆ… ನಿಮ್ಮ ಲೇಖನ ಓದಿದಾಗ

  22. bharathi

    soooper ani ..

  23. sathish

    ಲೇಖನಿ ತುಂಬಾ ಚೆನ್ನಾಗಿದೆ, ಸರಳ ಪದಗಳಲ್ಲಿ ಮನ ಮುಟ್ಟುವಂತೆ ವಿವರಿಸಿದಿರ… 🙂

  24. Hariprasad Todthillaya

    nOvinallu naliva kandenu emba chithra geeteya saalugalu nenapaadavu. Tumbaa sundara baraha. Dayavittu bareyuttiri. Thanks & regards.

  25. PRATHIBHA RAGHU

    ನೀವು ಅನುಭವಿಸಿದ ನೋವನ್ನು ಈಗ ನಾನು ಅನುಭವಿಸುತ್ತಾ ಇದ್ದೇನೆ, ದೂರದ ಅಮೆರಿಕಾದಲ್ಲಿ. ಸರ್ಪಸುತ್ತು (shingles) ಎಂದು ಗೊತ್ತಾದೊಡನೆ, ಅಂತರ್ಜಾಲದಲ್ಲಿ ಹುಡುಕುವಾಗ, ನಿಮ್ಮ ಬರಹ ಕಾಣಿಸಿತು. ಭಯಂಕರ ನೋವಿನಲ್ಲೂ ನಗುವನ್ನು ತರಿಸಿದ್ದಕ್ಕೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading