ಅನಂತಮೂರ್ತಿ ಇಲ್ಲಿದ್ದಾರೆ..

ಯು ಆರ್ ಅನಂತಮೂರ್ತಿ ಅವರಿಗೆ ೮೦ ವಸಂತ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹರಡಿಕೊಂಡ ಸಂಭ್ರಮ ಇಲ್ಲಿದೆ. ಅಭಿನವ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅನಂತಮೂರ್ತಿ ಅವರ ‘ನಿಜದ ಬೆಳಕಿನೆಡೆಗೆ ಒಂದು ಧ್ಯಾನ’ ಕೃತಿ ಬಿಡುಗಡೆ ಮಾಡಲಾಯಿತು. ಆ ಸಂಭ್ರಮದ ನೋಟ ನಿಮಗಾಗಿ..

ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು ಫೋಟೋದ ಮೇಲೆ ಕ್ಲಿಕ್ಕಿಸಿ

‍ಲೇಖಕರು G

December 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.Ravivarma

    80 ರ ಹೊಸ್ತಿಲಲ್ಲಿರುವ ನವಯುವಕ ಅನಂತಮೂರ್ತಿ ಅವರಿಗೆ ಅನಂತ ನಮನ … ನನ್ನ ಕಾಲೇಜ್ ದಿನಗಳಿಂದಲೂ ನಿಮ್ಮ ಒಬ್ಬ ಪ್ರೀತಿಯ ಓದುಗ…ಹಾಗೆ ನೋಡಿದ್ರೆ ನಮಗೆ ಓದುವ ಹುಚ್ಚು ಹಚ್ಚಿದ್ದೆ ನೀವುಗಳೆಲ್ಲ… ಕಾರಂತರು.ಕುವೆಂಪು,ನಿರಂಜನ.ಲಂಕೇಶ್,ಚಿತ್ತಾಲರು,ಚಂಪಾ,ತೇಜಸ್ವಿ ,ಕಾರ್ನಾಡ್ , ಕಂಬಾರರು ಬೀಚಿ, ದಿವಿಜಿ ,ಬೇಂದ್ರೆ, ,ಹಾಗೆ ಇನ್ನು ನೂರಾರು ಯುವ ಬರಹಗಾರರು ಇದರೊಟ್ಟಿಗೆ ಎಡ ಮತ್ತು ಪ್ರಜಾ ಪ್ರಭುತ್ವೀಯ ಶಕ್ತಿಗಳ ಪ್ರಕಟಣೆಗಳ ನ್ನು ಓದೋದೇ ನಮಗೆ ಒಂದು ವಿಸಿಸ್ತ ಥ್ರಿಲ್ ಕೊಡುತ್ತಿತ್ತು… ನಿಮ್ಮ ,ಮತ್ತು ಲಂಕೇಶರ ಪುಸ್ತಿಕೆಗಳ ಕೆಲವು ನನಗೆ ಕುಶಿ ಕೊಟ್ಟ ….

    ಹೇಳಿಕೆಗಳನ್ನು ಬೋರ್ಡ್ ಮೇಲೆ ಬರೆದು ,ಕುಶಿಪದುತ್ತಿದ್ದೆ… ನಿಮ್ಮ ಕ್ಲಿಪ್ joint ಕಥೆಯ ಒಂದು ಸ್ವಗತದ ಮಾತು ; ‘ನನ್ನಂತೆ ಕಾಲೇಜಿನ ಮುಂದಿರುವ ಮರದ ಕೆಳಗೆ ಯಾವುದಾದರು ಒಬ್ಬ ಹುಡುಗ ಒಬ್ಬ ಹುಡಿಗಿಯ ಜೊತೆ ಮಾತನಾಡುತ್ತ ನಿಂತಲ್ಲಿ ಅಪ್ರಬುದ್ದ ಹುಡುಗರಿದ್ದರಲಿ ,ಪ್ರಬುದ್ಧ ಅದ್ಯಾಪಕರ ಕಣ್ಣು ಅವನ ಮೇಲೆ….’ ಹಾಗೆ ನಿಮ್ಮ ಸಂಸ್ಕಾರದ ಮಾತು ನಾನು ‘ಬ್ರಾಹ್ಮಣ್ಯ ಬಿಟ್ಟರು ಬ್ರಾಹ್ಮಣ್ಯ ನನ್ನನ್ನು ಬಿಡಲಿಲ್ಲ….. ಹೀಗೆ ಹೀಗೆ ಎಂದೋ ಓದಿದ ಕಥೆಯ ಕಾದಂಬರಿಯ ಸಾಲುಗಳು ಇಂದಿಗೂ ನನ್ನ ತಲೆಯಲ್ಲಿ ಸುಳಿದಾಡುತ್ತಿವೆ ..ಪಾಬ್ಲೋ ನೆರೋದ ಅವರ ಕವನಗಳನ್ನು ಅನುವಾದಿಸಿದ ತೇಜಸ್ವಿನಿ ನಿರಂಜನ ಅವರ ಈ ಸಾಲುಗಳನ್ನಂತು ನೂರಾರು ಬರಿ ಗೋಡೆಯ ಮೇಲೆ ರೂಮಿನ ಗೋಡೆಗಳಲ್ಲಿ .. ಕಂಡ ಕಂಡಲ್ಲಿ ಬರೆದು ಹಾಕಿದ್ದೆ ಅದು ….
    ‘ನಾನೇಕೆ ಮಾತನಾಡುವುದಿಲ್ಲ ,
    ಬಯಕೆಗಳ ಬಗ್ಗೆ ,ಬಳ್ಳಿಗಳ ಬಗ್ಗೆ ,
    ನನ್ನ ನಾಡಿನ ಅಗ್ನಿಪರ್ವತಗಳ ಬಗ್ಗೆ ,
    ಎಂದು ನೀವು ಕೆಳುತ್ತಿರಿ …?
    ನೋಡಿ- ಬೀದಿಯ ಮೇಲೆ ರಕ್ತವಿದೆ ..
    ರಕ್ತವಿದೆ – ಬೀದಿಯಮೇಲೆ …. ….. ಹೀಗೆ ಹೀಗೆ …
    ನಿಮ್ಮ ಸಂಸ್ಕಾರದ ಮಾತನ್ನು ನಾನು ಕೆಲವೊಮ್ಮೆ ನನ್ನ ಸ್ವಾರ್ಥಕ್ಕೆ ಮಾರ್ಪದಿಸಿಕೊಂಡಿದ್ದೆ…. ‘ನಾನು ಗುಂಡನ್ನು ಬಿಟ್ಟರು ಗುಂಡು ನನ್ನನ್ನು ಬಿಡಲಿಲ್ಲ ‘… ಎಂದು ಸಾಹಿತ್ಯಿಕ ಸ್ನೇಹಿತರ ಮುಂದೆ . ತಮಾಷೆ ಮಾಡುತ್ತಿದ್ದೆ…
    ಹೆಗ್ಗೋಡಿನ ಶಿಬಿರಗಳಲಿ ನಿಮ್ಮ ಮಾತಿನ ಮೋಡಿಗೆ ಮರುಳಾಗಿ ಹೋಗಿದ್ದೆ… ನಿಮ್ಮ ಆ ಕ್ಷಣದ ಮುಖಭಾವ…expression ..ಒಂದಿಸ್ತು ಸಿಟ್ಟು,ಒಂದಿಸ್ತು ನಗು … ನಿಮ್ಮನ್ನು ಸುತ್ತುವರಿಯು ಅಭಿಮಾನಿಗಳು .. ಅವರೊಂದಿಗೆ ನೀವು ಕೊಡುವ ಪ್ರೀತಿಯ ಫೋಟೋ … ಇವೆಲ್ಲವೂ ನೋಡಿ ಕನ್ನಡ ಸಾಹಿತ್ಯದ ಡಾನ್ ಗಳಲ್ಲಿ ನೀವು ಒಬ್ಬರೆಂದು ನಿರ್ನಯಿಸಿದ್ದೆ…. ಕನ್ನಡವಿಸ್ವ ವಿದ್ಯಾಲಯಕ್ಕೆ ಬಂದಾಗ ನಮ್ಮ ‘ಸ್ಪಂದನ ‘ಕಟ್ಟೆಗೆ ನಾಕಾರುಸಲ ಬಂದು ಆ ಕ್ಷಣದ ಒತ್ತಡಗಳ ಬಗ್ಗೆ ತುಂಬಾ ಗಮ್ಬೀರವಾಗಿ ಮಾತನಾದಿದ್ದಿರಿ…ಕನ್ನಡ ಸಾಹಿತ್ಯದಲ್ಲಿ ಬರಹ ಹಾಗು ಮೋದಿ ಮಾಡುವ ಮಾತು ಎರಡನ್ನು ಮೈಗುಡಿಸಿ ಕೊಂಡ ವರು ಕಡಿಮೆ… ನೀವು ಎರಡನ್ನು ಮೈಗುಡಿಸಿಕೊಂದಿದ್ದಿರಿ…ಕೇಳುಗರನ್ನು ಸಮ್ಮೋಹನಕ್ಕೆ ಒಳಪಡಿಸುವ ಶಕ್ತಿ ನಿಮ್ಮ ಮಾತಿಗಿದೆ….
    ನಿಮ್ಮ ಬರ್ಹಕ್ಕು ಓದುಗನನ್ನು ಒಂದು ಹೊಸ ಚಿಂತನೆಯತ್ತ ಕೊಂಡೊಯ್ಯುವ ತಾಕತ್ತಿದೆ… ಅದು ಅಸ್ತೆ ಕುತೂಹಲ ಹಾಗು ಮೈನವಿರೇಳಿಸುವ ಭಾಷೆ ಇಂದ ಕೂಡಿರುತ್ತದೆ….

    ನಿಮ್ಮ ಬರಹ,ಚಿಂತನೆ, ಹಾಗು ಸಾಮಾಜಿಕ ಬದ್ದತೆಗೆ ನನ್ನ ಪ್ರೀತಿಪುರ್ವಕ ವಂದನೆಗಳು …. ಏ ದಿಲ್ ಮಾಂಗೇ ಮೋರ್ ….

    ನಿಮ್ಮ ಪ್ರೀತಿಯ ..ಅಭಿಮಾನಿ ಓದುಗ…

    ಡಿ ,ರವಿವರ್ಮ ..ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: