'ಅದ್ವೈತ ಸ್ಥಿತಿಯು ಪ್ರೇಮವೇ?!' – ರೋಹಿಣಿ ಸತ್ಯಾ

ಪ್ರೇಮ-ಭಾವನೆ-ಸ್ಥಿತಿ

– ರೋಹಿಣಿ ಸತ್ಯ

ಪ್ರೇಮ ಭಾವನೆಗಳ ಬೀಜವು ಹಗುರಾಗಿ
ಗಾಳಿಯಲ್ಲಿ ತೂರಿ ನೆಲವನ್ನು ಚುಂಬಿಸಿದಾಗ
ಬೀಜ ಬಿರಿದು ಎರಡು ರೆಕ್ಕೆಗಳಂತೆ
ನಡುವಿನ ಮೊಳಕೆ ಕೊಕ್ಕಿನಂತೆ
ಹಾರಿತು ಹಕ್ಕಿಯು ಗಾಳಿಯಲ್ಲಿ ಹಗುರಾಗಿ

ಈ ಪ್ರೇಮದ ಹಣೆಯ ಬರಹವೇ ಇಷ್ಟು
ತೂರುವುದು ಹಾರುವುದು ಏರುವುದು
ಒಮ್ಮೆಯೂ ಸೇರುವುದಿಲ್ಲ ತೀರವು
ಆದರೂ… ಅಣುಅಣುವಿನಲ್ಲೂ ಕಣಕಣದಲ್ಲೂ –
ಅಂದಿಗೂ ಇಂದಿಗೂ ಎಂದಿಗೂ ನವನವೀನವು
ನಮ್ಮೆಲ್ಲರ ಬದುಕಿನ ಉಸಿರಿನ ತಾನವು
ಇದೆಲ್ಲ ಒತ್ತಟ್ಟಿಗಿರಲೀ…
 
ಇಷ್ಟಕ್ಕೂ ಪ್ರೇಮವೆಂದರೇನು…?!
ವೀಣೆ ಸಿತಾರ್ ತಂತಿಯ ಬೆರಳ ತುದಿಯ ನಾದವೇ?!
ಗಾಳಿಯಲ್ಲಿ ಹಾರಿಬಂದು ಕೆನ್ನೆಯ ಸವರುವ ಗುಲಾಬಿದಳವೇ?!
ಹೀಗೇ ಖೇದವಾದಾಗ ನನಗಾಗಿ ಉದುರುವ ಕಣ್ಣೀರಿನ ಹನಿಯೇ?!
ಹಾಗೇ ತೇಲಿಬಂದು ಮನವನ್ನು ಚುಂಬಿಸುವ ಪಿಸುದನಿಯೇ?!
ವರ್ಣದ್ರವ್ಯಗಳೆಲ್ಲವೂ ಸೋರಿಹೋಗಿ ಮೂಡಿದ ಅಮೂರ್ತ ಚಿತ್ರವೇ?!
ಸುಂದರ ಸೃಷ್ಟಿಯ ಸವಿಯ ಸವಿದ ಅನುಭವವೇ?!
ಹಗಲು ರಾತ್ರಿಗಳು ಹಾಡುವ ಅನುರಾಗದ ರಾಗವೇ?!
 
ಹೀಗೇ… ಯೋಚನಾಲಹರಿಯ ಲಹರಿಯಲ್ಲಿ
ವಿಭ್ರಮವಾಗಿ ಬುಗರಿಯಂತೆ ಸುತ್ತುತ್ತಾ
ಕಾಲಬಿಲದೊಳಗೆ ತೂರಿಹೋದಾಗ
ಆದಿಭೌತಿಕಗಳಿಗೆ ನಿಲುಕದ
ಆದಿ-ಮಧ್ಯ-ಅಂತ್ಯವಿರದ, ಅಮೇಯಾನಂದ, ಅಭೌತಿಕ
ಅದ್ವೈತ ಸ್ಥಿತಿಯು ಪ್ರೇಮವೇ?!
 

‍ಲೇಖಕರು G

February 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. SandhyaVenkatesh(Tapasvini)

    Preetige innondu saatiyihudenu
    Preetige preeti sama allavenu
    Srishtikartanali preeti iddudara kaarana
    Aayitu bhuviyalli manujana janana
    Preethiyennuvudu bhaanaatmakavaadudu
    Ee bhaavaneyu ellarallu mooduvantahudu
    Aadare bhaavanegalannu abhivyaktapadisuvudu
    Kavigalige maatra saadhyavaaguvudu
    Preetiya Vibhinnateyannu Padagalalli Bannisiruva ee nimma Kavi Hrudayakke naanu vinamralaagi tale baaguttene! Nimma Sneha doretiruvude nanna bhaagyavendu bhaavisuttene! Nimma ee kaavyavennuva nadiyu nirantaravaagi hariyuttirali, nammanta nooraaru kaavya priyara daahavannu tanisuttirali endu naanu preetiya pratiroopavaada nanna necchina bhagavanta Shrikrishnalli praarthisuttene! Premigala Dinaacharaneya Shubhaashayagalu Nimage!

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆಂದವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: