ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೇ ಕಿಟ್ಟಿ, ಸ್ವಾನ್ ಕಿಟ್ಟಿ ಅನ್ನಿ..

ಜಿ ಎನ್ ಮೋಹನ್ 

ಇವರು ಕೃಷ್ಣಮೂರ್ತಿ.. ಅಂದರೆ ಯಾರಿಗೆ ಎಂದರೆ ಯಾರ್ಯಾರಿಗೂ ಅರ್ಥವಾಗುವುದಿಲ್ಲ.
ಅದೇ ಕಿಟ್ಟಿ, ಸ್ವಾನ್ ಕಿಟ್ಟಿ ಅನ್ನಿ
ಎಲ್ಲರಿಗೂ ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ
ಕೃಷ್ಣಮೂರ್ತಿ ಎನ್ನುವ ಬಿಗುಮಾನದ ಹೆಸರನ್ನ ಎಂದೋ ಪಕ್ಕಕ್ಕಿಟ್ಟು ಎಲ್ಲರಿಗೂ ಆತ್ಮೀಯ ‘ಕಿಟ್ಟಿ’ಯಾಗಿಬಿಟ್ಟರು
‘ಸ್ವಾನ್’ ಎನ್ನುವ ಸ್ವಂತ ಕನಸಿಗೆ ರೆಕ್ಕೆ ಕಟ್ಟಿ ತಮ್ಮ ಹೆಸರಿನ ಜೊತೆಗೆ ಸ್ವಾನ್ ಹೆಸರನ್ನೂ ಕಟ್ಟಿಕೊಂಡರು

10334246_249906621872300_2912572751198260785_nಮೆಲುದನಿಯ, ಮುಗುಳ್ನಗೆಯ ಕಿಟ್ಟಿ ಎಲ್ಲರಿಗೂ ಒಂದೇ ಏಟಿಗೆ ಆತ್ಮೀಯರಾಗಿ ಬಿಡುತ್ತಾರೆ
ಆ ರೀತಿ ಮೆಲು ನಗೆ, ಮುಗುಳ್ನಗೆ ಇದ್ದವರು ಬೇಕಾದಷ್ಟಿದ್ದಾರಲ್ಲಾ ಅನ್ನುವುದು ನಿಮ್ಮ ಪ್ರಶ್ನೆಯಾದರೆ..
ಕಿಟ್ಟಿ ಆ ಎಲ್ಲರಿಗಿಂತ ಬೇರೆಯಾಗುವುದು ತಮ್ಮ ಮುದ್ರಣ ಕುಶಲತೆಯಿಂದ.

ಅವರೊಳಗೊಬ್ಬ ಬರಹಗಾರನೂ ಇದ್ದಾನೆ, ಅವರೊಳಗೊಬ್ಬ ಕಲಾವಿದ ಸಹಾ ಇದ್ದಾನೆ, ಅವರೊಳಗೊಬ್ಬ ಮುದ್ರಣ ತಂತ್ರಜ್ಞನೂ ಇದ್ದಾನೆ
ಈ ಮೂರೂ ಮುಪ್ಪರಿಗೊಂಡೇ ಸ್ವಾನ್ ಹಾಗೂ ಕಿಟ್ಟಿ ಇಬ್ಬರೂ ಎಲ್ಲರಿಗಿಂತ ಭಿನ್ನ ಎನಿಸಲು ಕಾರಣವಾಗಿದೆ

ಕಿಟ್ಟಿಯ ಸ್ವಾನ್ ಬಾಗಿಲು ತಟ್ಟಿ ನಾನು ಸುಮಾರು ವರ್ಷಗಳಾಯಿತು ಮೊದಲ ಬಾರಿ ಬಾಗಿಲು ತಟ್ಟಿದಾಗ ಅದು ತೆರೆಯಲೇ ಇಲ್ಲ
ಖಂಡಿತಾ ನಿಮ್ಮ ಪುಸ್ತಕ ಮುದ್ರಿಸಲು ಸಮಯವಿಲ್ಲ ಎನ್ನುವ ಉತ್ತರ ಬಂತು ಯಸ್, ಕಿಟ್ಟಿ ಭಿನ್ನ ಆಗುವುದು ಈ ಕಾರಣಕ್ಕೆ ಕೂಡಾ..
ಎಷ್ಟೋ ಜನರಿಗೆ ಸಿದ್ಧಿಸದೇ ಇರುವುದೇ ಈ ‘ನೋ’ ಎನ್ನುವ ಕಲೆ
ಹಾಗಾಗಿ ಔಧಾರ್ಯಕ್ಕೆ ಬಸಿರಾಗುತ್ತಾರೆ.
ಒಂದೋ ಹೆರಲಾರರು, ಹೆತ್ತರೂ ಏನಾದರೂ ನ್ಯೂನ್ಯತೆ

ಕಿಟ್ಟಿ ‘ನೋ’ ಎನ್ನುತ್ತಾರೆ ‘ಹಾಂ’ ಎಂದವರ ಕೃತಿ ಪುಸ್ತಕ ಸೊಗಸು ಬಹುಮಾನ ಪಡೆದೇ ಸೊಗಸಾಗಿದೆ ಎನಿಸಿಕೊಳ್ಳಬೇಕಾಗಿಲ್ಲ ಹಾಗಿರುತ್ತದೆ
ಕಿಟ್ಟಿಗೆ ದುಂಬಾಲು ಬಿದ್ದು ಅವರ ಮುದ್ರಣ ‘ಕಲಾಗಾರ’ದಲ್ಲಿ ನನ್ನ ಸಾಕಷ್ಟು ಪುಸ್ತಕಗಳು ಹೊರಬಂದಿವೆ
ಜನ ವಾಹ್ ಎಂದಿರುವುದು ಅರುಣ್ ವಿನ್ಯಾಸ ಹಾಗೂ ಕಿಟ್ಟಿ ಮುದ್ರಣಕ್ಕೆ ಜಾಸ್ತಿ
ಬರೆದ ನನಗೆ ಸಮಾಧಾನಕರ ಬಹುಮಾನ

ಇಂತಹ ಕಿಟ್ಟಿ ಯಾರು ಎಂದು ಗುಂಪಲ್ಲಿ ಹುಡುಕಲು ಹೋದರೆ ಖಂಡಿತಾ ನೀವು ಗೆಲ್ಲಲಾರಿರಿ. ಯಾಕೆಂದರೆ ಕಿಟ್ಟಿ ಕಿಟ್ಟಿಯೇ
ಎಲ್ಲೋ ಸಂತೆಯಲ್ಲಿ ಒಂದಾಗಿ ಹೋಗಿರುತ್ತಾರೆ ನಾಚಿಕೆಯಿಂದ

ಇಷ್ಟೆಲ್ಲಾ ಬರೆದದ್ದು
ಅವರಿಗೆ ಬೆಣ್ಣೆ ಹಚ್ಚಲೆಂದೇ
ನನ್ನೆಲ್ಲಾ ಪುಸ್ತಕಗಳೂ ಅಲ್ಲಿಯೇ ಮುದ್ರಣಗೊಳ್ಳಲಿ
ಅವರ ಮುದ್ರಣ ಮೋಹವೂ ಕುಸಿಯದೆ ಎತ್ತರಗಳನ್ನು ಏರಲಿ

svan kitty1

svan kitty2

 

‍ಲೇಖಕರು Admin

5 August, 2016

3 Comments

  1. Sharanu hampi

    ಸ್ವಾನ್ ಕಿಟ್ಟಿ ಬಗೆಗಿನ ನಿಮ್ಮ ಬರೆಹ ಸುಂದರ ಮುದ್ರಣದಷ್ಟೆ ಹೊಳಪು. ಅವರ ಬಳಿ ನಾನು ಒಂಚೂರು ಕೆಲಸ ಮಾಡಿದ್ದೇನೆ, ಪ್ರೀತಿಯ ಮನುಷ್ಯ. ಇಷ್ಟವಾಯಿತು…

  2. Shama, Nandibetta

    “ಅವರ ಮುದ್ರಣ ಮೋಹವೂ ಕುಸಿಯದೆ ಎತ್ತರಗಳನ್ನು ಏರಲಿ”

    ಹೌದು ಮೋಹಗಳು ಕುಸಿಯಬಾರದು. ಬೆಳೆಯಬೇಕು, ಹೊಳೆಯಬೇಕು, ಬರಹವಾಗಿ ಉಳೀಬೇಕು.

  3. Rajeshwari

    We were colleagues once upon a time.Even I was working with him in Lakshmi Mudranalaya.He is very good at heart, friendly natured person..One of my favourite brother whom I love so much in my life..:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading