ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅದೆಷ್ಟೋ ಮೌನ ಪ್ರೇಮ ಗೀತೆ…..’ – ಸ್ವರ್ಣ ಎನ್.ಪಿ.

 

ಪ್ರೀತಿ ಭಾವವಾಗೆ ಉಳಿಯಲಿ, ಅದಕೆ ಹೆಸರು ಹಚ್ಚಬೇಕೆ….? 

ನಿನ್ನೆ ಪ್ರಕಟವಾದ ಈ ಮಧುರ ರಾಗವನ್ನು ಸ್ವರ್ಣ ಅವರು ಭಾವವಾಗಿಸಿದ್ದು ಹೀಗೆ…

ಆ ಕಂಗಳಲಿದೆ ಮಧುರವಾದ ಒಂದು ಬಂಧ

ಬಂಧಕ್ಕೆ ಬೇಡ ಹೆಸರ ಬಂಧನ

ಭಾವವೊಂದೇ ಅದರ ಇಂಧನ

ಮಾತಲ್ಲ , ಕೂಗಲ್ಲ

ಅದೊಂದು ನೀಲಾಕಾಶದ ಶುಭ್ರಮೌನ

ಅನುಭವಿಸಿ ಅನುಭಾವಿಯಾಗು

ಆರದು, ಆರಿಸದು, ನಿಲ್ಲದದು

ಯುಗಯುಗಳಿಂದ ಹರಿಯುತ್ತಿರುವ ಅಮೃತ ಬಿಂದು

ಮಂದಹಾಸ ಕಣ್ಣಂಚಿನಲ್ಲಿ

ಬಾಗಿದ ಚಂದ್ರ ಕಿರಣ ರೆಪ್ಪೆಗಳಡಿಯಲ್ಲಿ

ಹೊರಬಾರದು ಮಾತು ತುಟಿಗಳಿಂದಾಚೆ

ಆದರೂ ನಡುಗುವಧರಗಳಲಿದೆ,

ಅದೆಷ್ಟೋ ಮೌನ ಪ್ರೇಮ ಗೀತೆ

‍ಲೇಖಕರು G

15 February, 2012

1 Comment

  1. malathi S

    Lovely lines..good attempt Swarna!!
    dear Avadhi!! lovely pics of Orchids….love those flowers!!
    🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading