ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ಯಾಚಾರದ ಸುಳಿಯಲ್ಲಿ, ಮಹಿಳೆ ಮತ್ತು ಮಕ್ಕಳು

ಕೆ ಎಂ ವಿಶ್ವನಾಥ(ಮಂಕವಿ) ಮರತೂರ

ತಾಯಿ, ತಂಗಿ, ಅಕ್ಕ, ಹೆಂಡತಿ, ಪ್ರೇಯಸಿ ಹೀಗೆ ಹೆಣ್ಣಿನ ಪಾತ್ರ ನಮ್ಮ ಬದುಕಿನಲ್ಲಿ ಹಲವು ರೂಪಗಳಲ್ಲಿ ಹತ್ತಾರು ಸೇವೆ ಮಾಡುವಲ್ಲಿ ತನ್ನ ಜೀವನ ಸವೆಯುತ್ತಿದ್ದಾಳೆ. ಅವಳೊಂದು ಅಂದದ ಗೊಂಬೆ, ನನ್ನ ಬಾಳು ಬೆಳಗುವ ದೀಪ, ಬದುಕಿನ ದಿಕ್ಕು ಬದಲಿಸುವ ಬಯಕೆ, ಪ್ರತಿಯೊಬ್ಬರ ಜೀವನದಲ್ಲಿ ಬರುವ ಅವಳು ನನ್ನ ಬದುಕಿನಲ್ಲಿಯೂ ಬಂದಳು ಅವಳ ಒಳಗಿನ ನೋವು ನಲಿವುಗಳಿಗೆ ನಾನು ನನ್ನೊಳಗೆ ಹೆಣ್ಣಿನ ಅಂತರಂಗದೊಳಗಿನ ಅವಾಂತರವ ಕಂಡು ಕೊರಗಿದೆ.
ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆ ಮಾತು ಜನಜನಿತವಾಗಿದೆ ಆದರೆ ಹೆಣ್ಣಿನ ಅಂತರಂಗದೊಳಗೆ ಆ ಭಗವಂತ ಎಂತೆಂತಹ ನೋವು ಅಡಗಿಸಿಟ್ಟಿರುವ ಎಂಬುವ ಸತ್ಯ ಅರೆತಾಗಲೇ ಅರಿವಾಗುವುದು ಅವಳ ನೈಜ ಬದುಕಿನಲ್ಲಿ ಅದೆಷ್ಟೋ ನೋವುಗಳು ಹೀಗೆ ಮರೆಯಾಗಿ ಅವಳನ್ನು ಮನೆಯ ಆಟಿಕೆ ಸಾಮಾನುಗಳಂತೆ ಬಳಸಿಕೊಳ್ಳುತ್ತಿರುವ ಸತ್ಯ ಪತ್ತೆಯಿಲ್ಲದೆ ಮರೆಯಾಗುತ್ತಿದೆ.
ಈ ಬೆಳೆದುನಿಂತ ಸಮಾಜದಲ್ಲಿ ಹೆಣ್ಣನ್ನು ಅವಳ ದು:ಖಗಳನ್ನು ಮರೆಮಾಚಲಾಗುತ್ತಿದೆ. ಹೆಣ್ಣಿಗೆ ಎಲ್ಲಿ ಗೌರವವಿದೆ ಎಂಬ ಮಾತು ಕೇಳಿದರೆ ನಮಗೆ ಸಿಗುವ ಉತ್ತರ ಮಾತ್ರ ಶೂನ್ಯವಾಗಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಅವಳಿಗೆ ಸಮಾನ ಕೂಲಿ ಸಿಗುತ್ತಿಲ್ಲ ಕೆಲಸ ಮಾತ್ರ ಗಂಡಸನಿಗಿಂತ ಹೆಚ್ಚಿನ ಕೆಲಸವಿದೆ ಆದರೂ ಗಂಡು ಸಮಾಜ ಸುಮ್ಮನೆ ಕುಳಿತಿದೆ.
ಮನೆಯ ಚಿಕ್ಕ ತಂಗಿ ಹನ್ನೆರಡು ವರ್ಷವಾಗುತ್ತಿದ್ದಂತೆ ನಾಚಿ ತಲೆಬಾಗಿ ನಡೆಯಬೇಕು, ಮನೆಯವರಿಗೆ ಎದುರು ಮಾತನಾಡುವಂತಿಲ್ಲ, ಕಟ್ಟುಪಾಡುಗಳ ಬದುಕು ಅವಾಗಲೇ ಅವ್ವ ಅಪ್ಪನ ಕಟ್ಟಪ್ಪಣೆಗಳು ಪ್ರಾರಂಭವಾಗುತ್ತವೆ. ಮನೆಯ ಹೊರಗೆ ಹೋಗಬೇಡ ಓಣಿಯ ಹುಡುಗರಿಂದ ದೂರವಿರು, ಬೇರೆ ಓಣಿ ಆಡಲು ಹೋಗಬೇಡ ಹೀಗೆ ಒಂದೇ ಎರಡೇ ಒಂದು ವೇಳೆ ಕಾಲೇಜಿಗೆ ಹೋಗುವ ಹುಡುಗಿಯಾದರೆ ರಾತ್ರಿ ಮನೆಗೆ ಬೇಗ ಬರಬೇಕು, ಬೇರೆ ಗೆಳೆಯರ ಜೊತೆಗೆ ಸೇರಬೇಡ ಸೇರಿದರು ಅಲ್ಲಿ ಇಲ್ಲಿ ನಿಲ್ಲುವಂತಿಲ್ಲ ಎಂತಹ ದೊಡ್ಡ ಫಾರ್ ವರ್ಡ ಮನೆಯವರಾದರು ಎಷ್ಟೆ ಓದಿರುವ ತಂದೆ ತಾಯಿಯಾದರು ತಮ್ಮ ಮಗಳು ದೊಡ್ಡವಳಾಗಿದ್ದಾಳೆ ಎಂಬ ವಿಷಯ ತಿಳಿದ ಮೇಲೆ ಅವರು ಹಾಕುವ ಕಟ್ಟು ಪಾಡುಗಳು ಮಾತ್ರ ಯಾವತ್ತು ಮರೆಯುವದಿಲ್ಲ ಇದು ನಮ್ಮ ಹೆಣ್ಣಿನ ಸಬಲೀಕರಣ.
ಮನೆಯಲ್ಲಿ ಅಮ್ಮ ಅಡಿಗೆ ಕಲಿಯದಿದ್ದರೆ ಪಿರೆಡ್ ತೆಗೆದುಕೊಳ್ಳುತ್ತಾಳೆ ನಾಳೆ ಮದುವೆಯಾದ ಮೇಲೆ ನೀ ಯಾವ ನೌಕರಿ ಮಾಡಿದರು ಮನೆಯ ಅಡಿಗೆ ಮಾಡಲೇಬೇಕು ನೀನೆನು ಸಾಹೇಬತಿ ಆದರೂ ಗಂಡನೊಂದಿಗೆ ಹೆಂಡತಿಯಾಗಿರಲೇಬೇಕು ಎಂಬ ಸತ್ಯ ಅವ್ವ ಆಗಾಗ ನೆನಪಿಸುತ್ತಾ ಇರುತ್ತಾಳೆ. ಅಪ್ಪನು ನನ್ನ ಮಗಳು ಮಗಳಲ್ಲಾ ಮಗ ಎಂದು ಜಂಬದಿಂದ ಹೇಳಿದರು ಮಗನಿಗೆ ನೀಡಿದ ಸ್ವಾತಂತ್ರ್ಯ ಮಾತ್ರ ಕೊಡುವುದಿಲ್ಲ ಇಂದಿಗೂ ಹೆಣ್ಣಿಗೆ ಆಸ್ತಿಯಲ್ಲಿ ಪಾಲು ಇಲ್ಲ ಎಂಬ ಸತ್ಯ ಮರೆಯುವಂತಿಲ್ಲ. ಯಾವ ತಂದೆ ತಾನೆ ತನ್ನ ಮಗನಿಗೆ ನೀಡಿದಷ್ಟು ಮಹತ್ವ ಮಗಳಿಗೆ ನೀಡಿದ್ದಾನೆ ಹೇಳಿ, ಮಹತ್ವ ಕೊಟ್ಟರು ಮದುವೆಯಾಗುವರೆಗೂ ಮಾತ್ರ ಕೊಡುತ್ತಾರೆ. ಮದುವೆಯಾದಮೇಲೆ ಮತ್ತೆ ಅದೇ ಹಳೆ ಗಾದೆ ಮಾತು ಹೇಳಿ ಮರೆಯಾಗುತ್ತಾರೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅಲ್ಲವಾ?

ಸ್ನೇಹಿತರೆ, ನಾವು ಎಷ್ಟೆ ಮುಂದುವರೆದಿರಬಹುದು ಆದರೆ ನಮ್ಮ ಮನಸ್ಸಿನ ಪುಟದಲ್ಲಿ ಮಾತ್ರ ಹೆಣ್ಣಿನ ಬಗ್ಗೆ ಇರುವ ಭಾವನೆ ಮಾತ್ರ ಹಳೆಯದೆ, ನಮ್ಮ ಮಹಿಳೆಯ ಬಗ್ಗೆ ನಮಗಿರುವ ಪೂರ್ವಗೃಹ ಬದಲಾಗಬೇಕು, ನಮ್ಮ ಒಳಗಿನ ಹೃದಯ ಗಟ್ಟಿ ಮಾಡಿಕೊಂಡು ಅವಳಿಗೆ ಸಮಾನ ಅವಕಾಶಗಳನ್ನು ನೀಡಬೇಕು. ಆಗ ಮಾತ್ರ ಅವಳು ನಮ್ಮೊಳಗೆ ಒಬ್ಬಳು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿ ಮೂಡಿ ಬರುತ್ತದೆ. ಇಲ್ಲವಾದಲ್ಲಿ ನಾವೆಲ್ಲ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡು ಸಾಯುವದಂತು ಅತ್ಯಂತ ಘೋರ ಸತ್ಯವೆಂಬುವದರಲ್ಲಿ ಎಳ್ಳು ಕಾಳಿನಷ್ಟು ತಪ್ಪಿಲ್ಲ.
ಯತ್ರ ನಾರೆಸ್ತೊ ತತ್ರ ದೇವತಾ ಎಂಬ ಮಾತು ಇತಿಹಾಸದ ಪುಟದಲ್ಲಿ ಕೇಳಿದ್ದೇವೆ. ನಮ್ಮ ಕರ್ನಾಟಕದ ಇತಿಹಾಸದಲ್ಲಿ ಮಹಿಳೆಗೆ ಅತ್ಯಂತ ದೊಡ್ಡ ಸ್ಥಾನವಿದೆ. ಅವಳನ್ನು ಪೂಜಿಸುತ್ತಾ ಬಂದಿದ್ದೇವೆ. ಮಹಿಳೆ ನಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ ಹಾಸುಹೊಕ್ಕಾಗಿದ್ದಾಳೆ. ಅವಳ ಜೀವನ ಪುರುಷ ಸಮಾಜಕ್ಕೆ ಅರ್ಪಿತವಾಗಿದೆ. ಅವಳ ಗುಣಗಾನದಲ್ಲಿ ಅನೇಕ ಗ್ರಂಥಗಳು, ಪುರಾಣಗಳು ಮುಳುಗಿಹೋಗಿವೆ. ಹಾಗಾದರೆ ಅವಳು ಎಲ್ಲಿ ಸೇಫ್ ಇದ್ದಾಳೆ ನಾವು ಹೇಗೆ ಅವಳನ್ನು ನೋಡಿಕೊಳ್ಳುತ್ತಿದ್ದೇವೆ ಎಂಬ ವಿಚಾರ ಮಾಡಬೇಕಾದ ಅಗತ್ಯವಿದೆ.
ಅವಳೆಲ್ಲಿ ಸೇಫ್ ಇದ್ದಾಳೆ.?
ಹೆಣ್ಣು ಈ ಬಾಳಿಗೆ ತುಂಬ ಅವಶ್ಯಕ, ಅವಳಿಲ್ಲದ ಈ ಬದುಕನ್ನು ನಾವು ಉಹಿಸಲು ಸಾಧ್ಯವಿಲ್ಲ ಹಾಗಾದರೆ ಅವಳನ್ನು ನಾವೆಷ್ಟು ಸೇಫ್ ಆಗಿ ನೋಡಿಕೊಳ್ಳುತ್ತಿದ್ದೇವೆ ಎಂಬ ವಿಚಾರ ಮಾಡಿದರೆ ನಮ್ಮ ನಿಜ ಬಣ್ಣ ಬಯಲಾಗುತ್ತದೆ. ಸ್ವತ: ಮನೆಯಿಂದ ದೂರದ ಸಂಬಂಧಗಳಿಗೂ ಅಲ್ಲದೇ ಬೇರೆಯವರ ಹೆಣ್ಣಿಗೂ ನಾವಿಂದು ಎಷ್ಟು ಗೌರವ ಕೊಟ್ಟಿದ್ದೇವೆ ಎಂಬ ಕಟುಸತ್ಯ ಮಾತ್ರ ಯಾರು ಬಲ್ಲರು.
ಇದೀಗ ನಮ್ಮ ಭೂಮಿಯ ಮೇಲೆ ಅತ್ಯಾಚಾರವೆಂಬ ಮಾರಿಯೂ ಮನೆ ಮಾಡಿದೆ. ಎಲ್ಲಿ ನೋಡಿದರು ಅತ್ಯಾಚಾರದ ಹಾವಳಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಯುವತಿಯರು ಅತ್ಯಾಚಾರವೆಂಬ ಪೆಡಂಭೂತದ ಬಲೆಗೆ ಬೀಳುತ್ತಾರೆ ಎಂಬ ಕೂಗು ಕೇಳುತ್ತಿದ್ದೇವು ಆದರೆ ಇದೀಗ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಂಬ ಘೋರ ಕೃತ್ಯಗಳು ಪ್ರಾರಂಭವಾಗಿ ಮಹಿಳೆಯರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿವೆ. ಅವಳನ್ನು ಮತ್ತೆಲ್ಲಿ ನಾವು ಇತಿಹಾಸಕ್ಕೆ ಮರುಕಳಿಸುತ್ತೇವೆಯೊ ಎಂಬ ಭಯದ ವಾತಾವರಣ ನಿಮರ್ಾಣಾವಾಗಿದೆ. ನಾಲ್ಕು ಗೋಡೆಗಳ ಮದ್ಯ ಬದುಕುತ್ತಿರುವ ಮಹಿಳೆಯನ್ನು ನಾವು ಮತ್ತೆ ಪುನರ್ ಜನ್ಮ ನೀಡುತ್ತೇಯೆ? ಎಂಬ ವಿಚಿತ್ರ ಅನುಭವ ಇಂದಿನ ಹಲವು ಬೆಳವಣಿಗೆಗಳಿಂದ ಹೊರಬರುತ್ತಿದೆ.
ಮಹಿಳೆಯರು ಗಂಡಸರ ಯಾವ ಸಂಬಂಧವು ನಂಬುವಂತಿಲ್ಲ, ಅವಳು ಯಾರಿಂದಲೂ ಸೇಫ್ ಇಲ್ಲಾ ಎಂಬ ಮಾತು ಇದೀಗ ಸತ್ಯವಾಗುತ್ತಿದೆ. ಯಾವ ರಂಗದಲ್ಲಿ ನಮ್ಮ ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣಬೇಕೊ, ಅಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮಹಿಳೆ ಯಾವ ನೌಕರಿ ಮಾಡಿದರೆ ಸೇಫ್ ಆಗಿರುತ್ತಾಳೆ ಎಂಬ ಮಾತು ಹೆಣ್ಣು ಹಡೆದ ತಂದೆ ತಾಯಿ ಯೋಚಿಸಬೇಕಾದ ಸಮಯ ಬಂದಿದೆ. ಸಧ್ಯಕ್ಕೆ ಪ್ರತಿಯೊಂದು ಹುದ್ದೆಯಲ್ಲಿಯೂ ಮಹಿಳೆಗೆ ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಲುಗಲ್ಲದ ಹಸುಳೆಗಳ ಜೀವನದ ಬಗ್ಗೆ ಯೋಚಿಸದೆ ಮರೆಯಾಗುತ್ತಿದೆ ಈ ಗಂಡು ಸಮಾಜ.
ಹೆಣ್ಣಿಗೆ ಸಬಲೀಕರಣ ಮಾಡುತ್ತೇವೆ ಎಂಬ ನೆಪವೊಡ್ಡಿ, ನಮ್ಮ ಆಳುವ ಆಡಳಿತ ವರ್ಗವು ಹೆಣ್ಣಿಗೆ ಮೋಸ ಮಾಡುತ್ತಿದೆ. ಅವಳಿಗಾಗಿ ಅವಳ ಸಬಲೀಕರಣಕ್ಕಾಗಿ ಅದೆಷ್ಟು ಯೋಜನೆಗಳು ಅದೆಷ್ಟು ಹಣ ವ್ಯಯ ಮಾಡಲಾಗುತ್ತಿದೆ ಆದರೆ ಅವಳಿನ್ನು ಕೂಲಿನಾಲಿ ಮಾಡಿ ಬದುಕುವ ವಿಷಯ ಮಾತ್ರ ತಪ್ಪಿಲ್ಲ. ನನ್ನ ಪ್ರಕಾರ ತಪ್ಪುವುದಿಲ್ಲ ಏಕೆಂದರೆ ಅವಳನ್ನು ನಮ್ಮ ಮನಸ್ಸಿನ ಪುಟದಲ್ಲಿ ಹೇಮರಡ್ಡಿ ಮಲ್ಲಮ್ಮ ಎಂಬ ವಿಷಯ ಮಾತ್ರ ಉಳಿದಿದೆ. ಎಲ್ಲೊ ಬೆರೆಳೆಣಿಕೆಗೆ ಮಾತ್ರ ಸುನಿತಾ ವಿಲಿಯಂಸ್ ಎಂಬ ವಿಷಯ ಕೇಳಿ ಬರುತ್ತಿದೆ. ಮಹಿಳೆ ಯಾವ ಸ್ಥಳದಲ್ಲಿ ಸೇಫ್ ಎಂಬ ಮಾತು ಇದೀಗ ಉಳಿದಿಲ್ಲ ಯಾವ ಸಂಬಂಧವನ್ನು ಕೂಡ ನಂಬಿ ಬದುಕುವಂತಿಲ್ಲ ಎನಿಸುತ್ತಿದೆ.
ಮೂಲೆಗುಂಪಾದ ಮಹಿಳೆ
ಎಲ್ಲಿ ಮಹಿಳೆಯನ್ನು ಪೂಜಿಸಲಾಗುತ್ತದಯೊ ಅಲ್ಲಿ ದೇವರು ನೆಲೆಸುತ್ತಾನೆ ಎಂಬ ಪೌರಾಣಿಕ ಮಾತಿದೆ. ನಮ್ಮ ದೇಶದ ಬಹುದೊಡ್ಡ ಆಸ್ತಿ ನಮ್ಮ ಮಹಿಳೆ, ನಮ್ಮ ಪೂರ್ವಜರಿಂದ ಇಲ್ಲಿಯವರೆಗೆ ನಮ್ಮ ಮಹಿಳೆಯನ್ನು ಅತ್ಯಂತ ಗೌರವದಿಂದ ನಡೆದುಕೊಂಡು ಬಂದಿದ್ದೇವೆ. ಅವಳ ಹಕ್ಕುಗಳನ್ನು ಕಾಯುತ್ತಾ ಬಂದಿದ್ದೇವೆ. ನಮ್ಮ ಬದುಕಿನ ಪುಸ್ತಕದ ಪ್ರತಿ ಪುಟದಲ್ಲಿ ಅವಳ ಪಾತ್ರವು ಮಹತ್ವವಿದೆ. ಅವಳಿಲ್ಲದೇ ನಮ್ಮ ಬಾಳಿನ ಬಂಡಿ ಸಾಗುವುದೇಯಿಲ್ಲ.
ನಮ್ಮ ಭಾರತದಂತಹ ದೇಶದಲ್ಲಿ ನಮ್ಮ ಮಹಿಳೆಗೆ ನಾವು ಕೊಡುವ ಅತ್ಯಂತ ದೊಡ್ಡ ಗೌರವವೆಂದರೆ ಅವಳನ್ನು ಅವಳ ಹಕ್ಕುಗಳನ್ನು ಕಾಯುವುದು ಅತೀ ಅಗತ್ಯದ ಕೆಲಸ ಹಾಗಾದರೆ ನಾವು ನಮ್ಮ ಮಹಿಳೆಯನ್ನು ಎಲ್ಲಿ ಕಡೆಗಣಿಸುತ್ತಿದ್ದೇವೆ ಎಂಬ ವಿಚಾರವನ್ನು ಸ್ವಲ್ಪ ಒರಗೆ ಹಚ್ಚಿ ನೋಡಿದರೆ ನಾವು ಮಹಿಳೆಯನ್ನು ಹೇಗೆ ಬಳಕೆ ಉಳಿಕೆ ಮಾಡುತ್ತಿರುವೇವು ಎಂಬ ಕಲ್ಪನೆ ಮೂಡುತ್ತದೆ. ಅವಳ ಬಾಳಿನ ಜೊತೆಗೆ ಆಟ ಆಡುತ್ತಿರುವೇವು ಎನಿಸುತ್ತದೆ. ಆಡಂಬರದ ಬದುಕಿನಲ್ಲಿ ನಮ್ಮ ಮಹಿಳೆಯನ್ನು ಅತ್ಯಂತ ದೂರದಲ್ಲಿ ಇಟ್ಟು ಯೋಚಿಸುವ ಕೆಲಸ ಮಾಡುತ್ತಿದ್ದೇವೆ ಎಂಬ ಘೋರ ಕಲ್ಪನೆಯೊಂದು ಒಡಮೂಡಿ ಬರುತ್ತಿದೆ.
ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಅರೆಸಿ ಹೋಗುವ ಮಹಿಳೆಯರ ಬದುಕು, ಯಾವಾಗ ಯಾವ ರೂಪ ಪಡೆಯುವುದು ಎಂಬ ಆತಂಕದಲ್ಲಿ ಮಹಿಳೆ ಉಸಿರುಗಟ್ಟಿಸುವ ಸ್ಥಿತಿಗತಿ ಎದುರಾಗಿದೆ. ಬೆಂಗಳೂರಿನಂತಹ ನಗರದಲ್ಲಂತು, ಯಾವ ಬೀದಿಯಲ್ಲಿ ಯಾವ ಸಮಯದಲ್ಲಿ ನಮ್ಮ ಮಹಿಳೆ ಪುರುಷರ ಯಾವ ಕಾಮುಕ ಕೋಪಕ್ಕೆ ಒಳಗಾಗಿ ತಮ್ಮ ಅಮೂಲ್ಯ ಬದುಕಿನ ಕ್ಷಣಗಳನ್ನು ಮುಗಿಸಿಕೊಳ್ಳುತ್ತಾರೆ ಎಂಬ ಅಂತರಂಗದೊಳಗಿನ ಅವಾಂತರವನ್ನು ಯಾರಿಗೂ ಹೇಳದೇ ತನ್ನೊಳಗೆ ಸಹಿಸಿಕೊಳ್ಳುತ್ತಾ ಬದುಕು ನಡೆಸುತಿದ್ದಾಳೆ. ಇದನ್ನು ಕಂಡ ಬುದ್ದಿ ಜೀವಿಗಳು ಬರಿ ಮಾತಿನಲ್ಲಿ ದೊಡ್ಡ ಸಂಭಾಷಣೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಬರಿ ಕನಿಕರದ ಕಣ್ಣೀರು ಸುರಿಸಿ ಮಹಿಳೆಯ ನೈಜ ಸಮಸ್ಯೆಗಳತ್ತ ಗಮನಕೊಡುತ್ತಿಲ್ಲ ಎಂಬುವುದು ದೊಡ್ಡ ವಿಪಯರ್ಾಸವೇ ಸರಿ.
ಹಾಗಾದರೆ ಯಾರು ಬದಲಾಗಬೇಕು?
ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಇವು ಸಾಮಾಜಿಕ ಅಪರಾಧಗಳು. ಇವುಗಳನ್ನು ಬುಡಸಮೇತ ಕಿತ್ತು ಹಾಕಲು ನಮ್ಮ ಸಮಾಜದಲ್ಲಿ ಯಾರು ಬದಲಾಗಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲದ್ದು ಎಂದು ಅಂದುಕೊಂಡಿದ್ದು ಅದಕ್ಕೆ ಮೂಲಕಾರಣ ಎಲ್ಲರಿಗೂ ಗೊತ್ತಿದೆ ಆದರೆ ನಾವುಎಲ್ಲರೂ ಗೊತ್ತಿದ್ದು ತಪ್ಪು ಮಾಡುತ್ತಿರುವೇವು ಎಂಬ ಸತ್ಯ ಅರೆತು ತುಂಬ ಬೇಸರವಾಗುತ್ತದೆ.
ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬ ಗಾದೆಯಂತೆ ಸಮಾಜದಲ್ಲಿಯ ಹಲವು ಜನರ ಹಲವು ವಿಚಾರದ ಜಗಳದ ಮಧ್ಯೆ ನಮ್ಮ ಮಕ್ಕಳು ಮತ್ತು ಮಹಿಳೆಯರು ತಮ್ಮ ಅಮೂಲ್ಯವಾದ ಬಾಲ್ಯವನ್ನು ಬಲಿಕೊಟ್ಟು ತಮ್ಮ ಬದುಕನ್ನು ಕಳೆದುಕೊಳ್ಳುತ್ತಿರುವುದು ಒಂದು ದುರಂತವೆ ಸರಿ, ಹಾಗಾದರೆ ಈ ಸಾಮಾಜದ ಅಸಯ್ಯ ಪದ್ಧತಿ ಹೋಗಲಾಡಿಸಲು ಯಾರ್ಯಾರು ಕೈ ಜೋಡಿಸಬೇಕು ನೈಜವಾಗಿ ಯಾರು ಹೊಣೆ ಎಂಬ ವಿಚಾರದತ್ತ ಕಿವಿಗೊಡುವುದಾದರೆ ಈ ಪದ್ಧತಿ ಹೋಗಲಾಡಿಸುವುದು ಎಲ್ಲರ ಸಂಪೂರ್ಣ ಜವಾಬ್ದಾರಿಯಾಗಿದೆ ಒಬ್ಬರು ಇಬ್ಬರ ಮನಸಿನೊಳಗೆ ಬದಲಾವಣೆ ಮಾಡಿದರೆ ಸಾಧ್ಯವಿಲ್ಲ ಪ್ರತಿಯೊಬ್ಬರಲ್ಲಿ ಬದಲಾವಣೆ ಮಾಡಿದಾಗ ಮಾತ್ರ ಈ ಪದ್ಧತಿಗಳು ನಿಮರ್ೂಲನೆಯಾಗಲು ಸಾಧ್ಯವಾಗುತ್ತದೆ.
ಯುವಕರು
ಬೆಳೆಯುತ್ತಿರುವ ಯುವಕರು ತಮ್ಮ ತಂದೆ ತಾಯಂದಿರ ಮಾತು ಕೇಳಿ ಅವರ ಮನಗೆಲ್ಲುವ ಮಕ್ಕಳಾಗಬೇಕು. ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮಕ್ಕೆ ಬಲಿಯಾಗುವುದು ಸಹಜ ಆದರೆ ಅದನ್ನೇ ನೆಪ ಮಾಡಿಕೊಂಡು ತಂದೆ ತಾಯಿಯ ಮನಸ್ಸಿನ ಮೇಲೆ ಘೋರ ಪರಿಣಾಮ ಬೀರುವ ಕೆಲಸ ಮಾಡುವುದು ಸರಿಯಲ್ಲ ಇವತ್ತು ಅದೆಷ್ಟು ಜನ ತಂದೆ ತಾಯಿಗಳು ತಮ್ಮ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲೂ ಮೂಲ ಕಾರಣ ಇಂದಿನ ಯುವಕರು ಈ ಪ್ರೀತಿ ಪ್ರೇಮ ಮಾಡಿ ಸಂಬಂದಗಳನ್ನು ಕಳೆದುಕೊಂಡು ಓಡಿ ಹೋಗುವುದು ಮನೆಯ ಜನರಿಗೆ ಮರಿಯ್ಯಾದೆ ಕೊಡದೇ ಇರುವುದು ಮೂಲಕಾರಣ. ನಮ್ಮ ಯುವಕರ ಮನಸ್ಥಿತಿ ಬದಲಾಗಬೇಕು, ತಂದೆ ತಾಯಿ ಮಾತಿಗೆ ಬೆಲೆ ಕೊಡುವ ಹಾಗೆ ಆಗಬೇಕು ಅಪ್ಪ ಅಮ್ಮ ನಮ್ಮ ಸುಖಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ ಎಂಬ ಸತ್ಯವನ್ನು ಅರೆಯಬೇಕು ಅರೆತು ಅವರೊಂದಿಗೆ ವರ್ತಿಸಬೇಕು.

ಯುವ ಸಮುದಾಯದಲ್ಲಿ ನೆಲೆವೂರಿರುವ ಪ್ರೀತಿ ಪ್ರೇಮವೆಂಬ ಪೆಡಂಭೂತವನ್ನು ಕನಸ್ಸಿನಿಂದ ಕಿತ್ತು ಹಾಕುವ ಮೂಲಕ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ಯುವಕರು ಕೈಜೋಡಿಸಬೇಕು. ಸಮಾಜದ ಹಲವು ವಿಚಾರಗಳಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ದೇಶದ ಏಳಿಗೆಯನ್ನು ಬಯಸುವ ನಾವು ನಮ್ಮೊಳಗಿನ ಹಲವು ಮೂಢನಂಬಿಕೆಗಳಿಂದ ಹೊರಬರಬೇಕು ಆಗ ಮಾತ್ರ ಈ ಸಾಮಾಜಿಕ ಪಿಡುಗಗಳು ತಮ್ಮ ದಾರಿ ಹಿಡಿದು ಸಮಾಜಕ್ಕೆ ಅಂಟಿಕೊಳ್ಳುವುದನ್ನು ಬಿಟ್ಟು ಓಡುತ್ತವೆ.
ತಂದೆ ತಾಯಿಗಳು
ನಮ್ಮ ಹೆತ್ತ ತಂದೆ ತಾಯಿಗಳು ಕೂಡ ಈ ಸಾಮಾಜಿಕ ಪಿಡುಗಗಳಿಗೆ ಕಾರಣೀಭೂತರಾಗುತ್ತಾರೆ. ಅವರಲ್ಲಿಯೂ ಕೆಲವು ಬದಲಾವಣೆಗಳಾಗಬೇಕು ಮಕ್ಕಳು ಹೆರುವುದು ಎಷ್ಟು ಮುಖ್ಯವೊ ಅವರನ್ನು ಬೆಳೆಸುವುದು ಅಷ್ಟೆ ಮುಖ್ಯವಾಗುತ್ತದೆ. ಬೆಳೆಯುತ್ತಿರುವ ಮಕ್ಕಳ ಮುಂದೆ ಹೇಗೆ ವತರ್ಿಸಬೇಕು, ಯಾವ ವಿಚಾರ ಮಾತನಾಡಬೇಕು? ಹೇಗೆ ಮಾತನಾಡಬೇಕು? ಎಲ್ಲಿ ಮಾತನಾಡಬೇಕು ಎಂತಹ ವಿಷಯವನ್ನು ಮಕ್ಕಳ ಎದುರಿಗೆ ಮಾತನಾಡಬೆಕು ಎಂಬ ವಿಚಾರವನ್ನು ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕು ಜೊತೆಗೆ ತಾವು ಅದರಂತೆಯೇ ನಡೆದು ತೋರಿಸಬೇಕು, ಹೇಳುವುದು ಒಂದು ಮಾಡುವುದು ಇನ್ನೊಂದು ಆಗಬಾರದು ನಮ್ಮ ಮಕ್ಕಳಿಗೆ ಸಿಗರೇಟ್ ಸೇದಬಾರದು ಎಂದು ಹೇಳಿ ಸ್ವತ: ತಂದೆ ತಾಯಿಯೇ ಸಿಗರೇಟ್ ಸೇದಿದರೆ ಅದು ಮಕ್ಕಳ ಮನಸ್ಸಿನ ಮೇಲೆ ಘೋರವಾದ ಪರಿಣಾಮ ಬೀರುತ್ತದೆ.
ಹೆತ್ತ ತಂದೆ ತಾಯಿಯೇ ಬೆಳೆದು ನಿಂತ ಮಕ್ಕಳ ಎದುರು ಅಸಯ್ಯವಾದ ವರ್ತನೆ ಮಾಡಿದರೆ ಆ ಮಕ್ಕಳು ಹಿರಿಯರನ್ನು ಅನುಕರಿಸುತ್ತಾರೆ ಅದಕ್ಕಾಗಿ ಮಕ್ಕಳ ಎದುರು ಮಾತನಾಡುವ ಮುನ್ನ ಯೋಚಿಸುವ ಅಗತ್ಯ ಹಾಗೂ ಅನಿವಾರ್ಯವಿದೆ. ಇಂದು ಅದೆಷ್ಟೊ ಹಿರಿಯರು ಮಕ್ಕಳ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರ ಮಾಡುತ್ತಿರುವಾಗ ಈ ಸಾಮಾಜಿಕ ಪೆಡಂಭೂತಗಳು ಅಳಿಸಲು ಸಾಧ್ಯವಿಲ್ಲ. ಹಾಗಾದರೆ ನಮ್ಮ ಮಕ್ಕಳಿಗೆ, ಮಹಿಳೆಗೆ ಎಲ್ಲಿ ರಕ್ಷಣೆಯಿದೆ ಎಂಬ ಘೋರ ಪ್ರಶ್ನೆ ಎದುರಾಗುತ್ತದೆ.
ನಮ್ಮ ಕಾನೂನು
ನಮ್ಮ ಕಾನೂನುಗಳು ತನ್ನ ಕಾರ್ಯ ಮಾಡದೇ ಇರುವುದ್ದಕ್ಕೆ ಈ ಸಾಮಾಜಿಕ ಪಿಡುಗಳು ನಮ್ಮ ಮಕ್ಕಳನ್ನು ಮಹಿಳೆಯನ್ನು ಹತ್ತಿಕ್ಕುತ್ತಿವೆ. ಅವರನ್ನು ಕುಕ್ಕಿ ಕುಕ್ಕಿ ಸಾಯಿಸುತ್ತಿವೆ. ಕಾನೂನು ಮಾಡಿ ಅದನ್ನು ಪಾಲನೇ ಮಾಡದೇ ಇರುವ ಮೂಢ ಜನರು ನಾವು. ಹಲವು ಮಕ್ಕಳ ಮತ್ತು ಮಹಿಳಾ ಕಾನೂನುಗಳನ್ನು ಗಾಳಿಗೆ ತೂರಿ ಜನರ ಮಧ್ಯದೊಳಗೆ ಧೂಳು ಎಬ್ಬಿಸಿ ಇದೀಗ ಅಳುತ್ತಿರುವ ಪರಿಸ್ಥಿತಿ ಸಧ್ಯ ಎದುರಾಗಿದೆ.
ಈ ಸಮಾಜದಲ್ಲಿಯ ಮಕ್ಕಳು ಮತ್ತು ಮಹಿಳೆಯನ್ನು ಹಿಂಸೆಗೊಳಪಡಿಸುವ ಈ ಸಾಮಾಜಿಕ ಪಿಡುಗಳನ್ನು ಹೋಗಲಾಡಿಸಲು ಪ್ರತಿಯೊಂದು ಹಂತದಲ್ಲಿ ಮನದೊಳಗೆ ಬದಲಾವಣೆ ಮಾಡಿಕೊಂಡು ಅದರಂತೆ ಪ್ರಮಾಣಿಕ ಪ್ರಯತ್ನ ನಡೆಯಬೇಕು ಆಗ ಮಾತ್ರ ಮಕ್ಕಳು ಮತ್ತು ಮಹಿಳೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಬದಲಾವಣೆ ಒಬ್ಬರಲ್ಲಿ ಮಾತ್ರ ಆದರೆ ಸಾಲದು ಎಲ್ಲರಲ್ಲಿ ಬದಲಾವಣೆಯಾಗಿ ಮಕ್ಕಳು ಮತ್ತು ಮಹಿಳೆಯರು ಸೇಫ್ ಆದಾಗಾ ಮಾತ್ರ ಈ ಸಾಮಾಜಿಕ ಪಿಡುಗಳಿಂದ ನಮ್ಮ ಮಕ್ಕಳು ಮತ್ತು ಮಹಿಳೆಯನ್ನು ರಕ್ಷಿಸಿದಂತಾಗುತ್ತದೆ.
ಸಮಾಜದ ತಂದೆ ತಾಯಿಯರೆ, ಯುವಕರೆ, ಅಧಿಕಾರಿಗಳೆ, ಶಿಕ್ಷಕರೆ, ನಾವೆಲ್ಲ ನಮ್ಮೊಳಗಿನ ಮೂಢನಂಬಿಕೆಗಳನ್ನು ಹೊಡೆದೂಡಿಸಿ ನಮ್ಮ ಮುಂದಿನ ಪೀಳಿಗೆಯಾದ ನಮ್ಮ ಮಕ್ಕಳು ಮತ್ತು ಮಹಿಳೆಯನ್ನು ಕಾಪಾಡುವುದು ಅವಶ್ಯಕವಾಗಿದೆ. ಬನ್ನಿ ಹಾಗಾದರೆ ನಮ್ಮ ನಮ್ಮಲ್ಲಿ ಬದಲಾವಣೆ ಮಾಡಿಕೊಂಡು ನಮ್ಮ ಭಾವಿ ಪ್ರಜೆಗಳ ಮೇಲೆ ನಡೆಯುತ್ತಿರುವ ಈ ಅವಾಂತರವನ್ನು ಹೊಡೆದೂಡಿಸಲು ಪ್ರಯತ್ನಿಸೋಣಾ..
 

‍ಲೇಖಕರು G

10 August, 2014

2 Comments

  1. Kiran

    All is good and well, but those guys who r@p# do not read these articles and many of can not read at all, it is those careless creatures who perform such deeds without second thoughts.
    Of course there are also more educated men who get into this, but theirs is a well planned operation encouraged by suitable opportunities, but the spontaneous ones are mostly done by un/undereducated people..
    ONLY the QUICKEST & HARSHEST punishment will work as a deterrent, but our judicial system is in such a messy labyrinth of endless appeals & adjournments this can only be achieved by some strong willed constitutional amendment.
    Oh by the way, our courts enjoy a month of summer holidays too!!! Unlike any other govt wing…

  2. Anonymous

    You have very brilliant mind

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading