
-ನಾ ದಿವಾಕರ
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ದೇಶಾದ್ಯಂತ ವ್ಯಾಪಿಸಿದ್ದು ಲಕ್ಷಾಂತರ ಯುವಕ ಯುವತಿಯರು ಬೀದಿಗಿಳಿದು ತಮ್ಮ ಐಕಮತ್ಯ ಪ್ರದಶರ್ಿಸುತ್ತಿದ್ದಾರೆ. ದೆಹಲಿ, ಮುಂಬೈ ನಗರಗಳಲ್ಲೂ ಜನಸಾಗರ ಹರಿದು ಬರುತ್ತಿದೆ. ಜನಲೋಕಪಾಲ್ ಮಸೂದೆಯ ಜಾರಿಗೆ ಒತ್ತಾಯಿಸುತ್ತಿರುವ ಈ ಜನಸಾಮಾನ್ಯರ ಆಕ್ರೋಶದ ಕೂಗು ಕೇಂದ್ರ ಸಕರ್ಾರವನ್ನೂ, ಆಳುವ ವರ್ಗಗಳನ್ನೂ ದಿಗ್ಭ್ರಮೆಗೊಳಪಡಿಸಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಿರಂತರವಾಗಿ ಬಿಂಬಿಸಲ್ಪಡುತ್ತಿರುವ ಅಣ್ಣಾ ಅಲೆ ಜನಸಮೂಹದಲ್ಲಿ ಒಂದು ರೀತಿಯ ಭಾವನಾತ್ಮಕ ಅಲೆಯನ್ನೂ ಸೃಷ್ಟಿಸಿದೆ. ಅಣ್ಣಾ ಹಜಾರೆಯವರ ಹೋರಾಟ ಮತ್ತು ಆಶಯಗಳು ಜನಪರ ಕಾಳಜಿಯಿಂದ ಕೂಡಿರುವುದು ಈ ಅಪ್ರತಿಮ ಜನಬೆಂಬಲಕ್ಕೆ ಕಾರಣವಾಗಿದೆ. ಆದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಪಾದನೆಗಳನ್ನು ಸೂಕ್ಷ್ಮವಾಗಿ ನೋಡಿದಾಗ ಅಣ್ಣಾ ಹಜಾರೆಯ ವೈಭವೀಕರಣ ಎದ್ದುಕಾಣುತ್ತಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಸೂಕ್ತವಲ್ಲವೆಂದೇ ಹೇಳಬಹುದು. ಇಲ್ಲಿ ನಡೆಯುತ್ತಿರುವ ಚಚರ್ೆಗಳು ಭ್ರಷ್ಟಾಚಾರದ ವ್ಯಾಪಕತೆ ಮತ್ತು ಸಮಗ್ರ ಲಕ್ಷಣಗಳನ್ನು ಕಡೆಗಣಿಸಿ ಹೋರಾಟ ನಿರತ ವ್ಯಕ್ತಿಗಳ ಸುತ್ತಲೂ ಗಿರಕಿ ಹೊಡೆಯುತ್ತಿರುವುದು ವಿಷಯದ ಗಾಂಭೀರ್ಯವನ್ನು ನಿರ್ಲಕ್ಷಿಸುತ್ತಿದೆ. ಹಾಗಾಗಿಯೇ ಕಿರಣ್ ಬೇಡಿಯಂಥವರೂ ಸಹ ಅಣ್ಣಾ ಎಂದರೆ ಭಾರತ ಭಾರತ ಎಂದರೆ ಅಣ್ಣಾ ಎಂಬ ಘೋಷಣೆ ಹೊರಡಿಸುತ್ತಾರೆ. ಇಲ್ಲಿ ಹೆಚ್ಚು ಪ್ರಸ್ತುತ ಎನಿಸುವುದು ಮೂರು ಸಂಗತಿಗಳು.
ಮೊದಲನೆಯದು ಇಂತಿಷ್ಟು ದಿನಗಳ ಒಳಗಾಗಿ ತಾವು ರೂಪಿಸಿದ ಜನಲೋಕಪಾಲ್ ಮಸೂದೆಯನ್ನೇ ಸಂಸತ್ತಿನಲ್ಲಿ ಅಂಗೀಕರಿಸಬೇಕು ಎಂಬ ಹಜಾರೆ ಗುಂಪಿನ ಹಠ. ಎರಡನೆಯದು ಜನತೆಯ ಪ್ರತಿಭಟನೆಯನ್ನು ಹತ್ತಿಕ್ಕಲು ಆಳುವ ವರ್ಗಗಳು ಅನುಸರಿಸಿದ ಮತ್ತು ಅನುಸರಿಸಬಹುದಾದ ದಮನಕಾರಿ ನೀತಿಗಳು. ಮೂರನೆಯದು ಹೋರಾಟಕ್ಕೆ ಬೆಂಬಲ ಸೂಚಿಸಿರುವ ಜನಸಮೂಹಗಳ ಆಂತರ್ಯದಲ್ಲೇ ಅಡಗಿರುವ ಭ್ರಷ್ಟಾಚಾರದ ವಿಭಿನ್ನ ರೂಪಗಳು. ಈ ಮೂರೂ ವಿಚಾರಗಳನ್ನು ಗಮನವಿಟ್ಟು ನೋಡಿದಾಗ ಭ್ರಷ್ಟಾಚಾರದ ಸಾಂಸ್ಥಿಕ ಸ್ವರೂಪ ಮತ್ತು ವ್ಯಾಪ್ತಿ ಸ್ಪಷ್ಟವಾಗುತ್ತದೆ. ಸಕರ್ಾರದ ಲೋಕಪಾಲ್ ಮಸೂದೆಗೂ ಜನಲೋಕಪಾಲ್ ಮಸೂದೆಗೂ ಇರುವ ಸೂಕ್ಷ್ಮ ವ್ಯತ್ಯಾಸಗಳೇನೇ ಇರಲಿ, ಎರಡೂ ಮಸೂದೆಗಳು ಸಮಸ್ತ ಜನಾಭಿಪ್ರಾಯವನ್ನಾಧರಿಸಿಲ್ಲ. ಬದಲಾಗಿ ಪ್ರಾತಿನಿಧ್ಯತೆಯನ್ನು ಮಾತ್ರ ಹೊಂದಿವೆ. ಒಂದನ್ನು ಚುನಾಯಿತ ಪ್ರತಿನಿಧಿಗಳು ರಚಿಸಿದ್ದರೆ ಮತ್ತೊಂದನ್ನು ಅಪೇಕ್ಷಿತ ಪ್ರತಿನಿಧಿಗಳು ರೂಪಿಸಿದ್ದಾರೆ. ಹಾಗಾಗಿ ಯಾವುದೇ ಒಂದು ಗುಂಪು ತನ್ನ ರಚನೆಯೇ ಸರ್ವಶ್ರೇಷ್ಠ ಎಂದು ಪ್ರತಿಪಾದಿಸುವುದು ಪ್ರಜಾಪ್ರಭುತ್ವದ ಧೋರಣೆಗೆ ವ್ಯತಿರಿಕ್ತವಾಗುತ್ತದೆ.ಈ ದೃಷ್ಟಿಯಿಂದ ನೋಡಿದಾಗ ಹಜಾರೆಯವರ ಹೋರಾಟದ ಮಾರ್ಗವೂ ಪ್ರಶ್ನಾತೀತ ಎನಿಸುವುದಿಲ್ಲ. ಭಾರತದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರ ತನ್ನದೇ ಆದ ಒಂದು ಸಾಂಸ್ಥಿಕ ಚೌಕಟ್ಟನ್ನು ನಿಮರ್ಿಸಿಕೊಂಡಿದ್ದು, ಇಡೀ ವ್ಯವಸ್ಥೆಯನ್ನು ತನ್ನ ಕಬಂಧ ಬಾಹುಗಳಿಂದ ಅಪ್ಪಿಕೊಂಡಿದೆ. ಜನಲೋಕಪಾಲ್ ಮಸೂದೆ ಆಗ್ರಹಿಸುವ ಕೆಲವು ಸಾಂಸ್ಥಿಕ ಬದಲಾವಣೆಗಳು ಮತ್ತು ಸಾಂವಿಧಾನಿಕ ನಿಯಮಗಳು ಈ ಚೌಕಟ್ಟನ್ನು ಭೇದಿಸುವ ಪ್ರಯತ್ನವನ್ನು ಮಾಡದೆ, ಮೇಲ್ಮೈ ಲಕ್ಷಣಗಳನ್ನು ಮಾತ್ರ ನಿವಾರಿಸಲು ಆಶಿಸುತ್ತದೆ. ವ್ಯಾಪಕ ಜನಬೆಂಬಲ ದೊರೆತ ನಂತರದಲ್ಲಿ ಚುನಾವಣಾ ಸುಧಾರಣೆ ಇತ್ಯಾದಿಗಳ ಪ್ರಸ್ತಾಪವಾಗುತ್ತಿದೆಯಾದರೂ, ಮೂಲಭೂತವಾಗಿ ಜನಲೋಕಪಾಲ್ ಮಸೂದೆ ರಾಜಕೀಯ ಭ್ರಷ್ಟಾಚಾರವನ್ನು ಮಾತ್ರ ಗಂಭೀರವಾಗಿ ಪರಿಗಣಿಸುತ್ತದೆ. ಇದು ಸ್ವಾಗತಾರ್ಹವೇ ಆದರೂ ನವ ಉದಾರವಾದದ ಯುಗದಲ್ಲಿ ಆಳುವ ವರ್ಗಗಳನ್ನೇ ತಮ್ಮ ವಶದಲ್ಲಿರಿಸಿಕೊಂಡಿರುವ ಕಾಪರ್ೋರೇಟ್-ಖಾಸಗಿ ಕ್ಷೇತ್ರದ ಭ್ರಷ್ಟಾಚಾರವನ್ನು ವಿರೋಧಿಸದೆ ಹೋದಲ್ಲಿ ಹಜಾರೆಯವರ ಚಳುವಳಿ ಜೆಪಿ ಚಳುವಳಿಯ ಹಾದಿಯನ್ನೇ ಹಿಡಿಯುತ್ತದೆ. ಒಂದು ಸೈದ್ಧಾಂತಿಕ ಪರಿಕಲ್ಪನೆಯ ಬುನಾದಿಯಿಲ್ಲದ ಇಂತಹ ಸಮೂಹ ಚಳುವಳಿಗಳು ವ್ಯಕ್ತಿಕೇಂದ್ರಿತವಾದಂತೆಲ್ಲಾ, ಒಂದು ನಿದರ್ಿಷ್ಟ ಅವಧಿಯ ನಂತರ ಅವಸಾನ ಹೊಂದುವುದು ಇತಿಹಾಸ ಕಂಡಿರುವ ಸತ್ಯ. ಅಣ್ಣಾ-ಭಾರತ ಸಮೀಕರಣದ ಅಪಾಯವನ್ನೂ ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸಾಮಾಜಿಕ ಹೊಣೆಗಾರಿಕೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಬಹುಪಾಲು ಚಚರ್ೆಗಳಲ್ಲಿ ಖಾಸಗಿ ಕ್ಷೇತ್ರದ ಕಾಪರ್ೋರೇಟ್ ಭ್ರಷ್ಟಾಚಾರವನ್ನು ಕುರಿತು ಪ್ರಸ್ತಾಪವೇ ಆಗದಿರುವುದು. ಅಣ್ಣಾ ಚಳುವಳಿಯನ್ನು ನಿರಂತರ ಪ್ರಸಾರ ಮಾಡುತ್ತಿರುವ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಹೊಂದಿರುವುದೇ ಒಂದು ಭ್ರಷ್ಟ ಅರ್ಥವ್ಯವಸ್ಥೆಯ ಬುನಾದಿಯ ಮೇಲೆ ಎಂಬ ಸೂಕ್ಷ್ಮ ಸಂಗತಿಯನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಇತ್ತೀಚಿನ ರಾಡಿಯಾ ಟೇಪ್ ಪ್ರಕರಣ ಇನ್ನೂ ಹಸಿರಾಗಿಯೇ ಇದೆ. ಇಂತಿಪ್ಪ ಸನ್ನಿವೇಶದಲ್ಲಿ ಜನಪ್ರಿಯತೆಯ ಉತ್ತುಂಗ ಶಿಖರದಲ್ಲಿ ಕುಳಿತು ನೋಡುವ ಬದಲು, ತಳಮಟ್ಟದ ವಾಸ್ತವಗಳನ್ನು ಗ್ರಹಿಸಿ ನೋಡಿದಾಗ ಕಾಪರ್ೋರೇಟ್ ಔದ್ಯಮಿಕ ಹಿತಾಸಕ್ತಿಗಳು ಭ್ರಷ್ಟಾಚಾರ ವಿರೋಧಿ ಅಲೆಗಳು ಸುನಾಮಿ ಅಲೆಗಳಾಗಿ ಮಾರ್ಪಡದಂತೆ ಎಚ್ಚರ ವಹಿಸಲು, ಮಾಧ್ಯಮಗಳ ಮೂಲಕ ತಡೆಗೋಡೆಗಳನ್ನು ನಿಮರ್ಿಸುತ್ತಿರುವುದು ಕಳೆದ ಒಂದು ವಾರದಲ್ಲಿ ಸ್ಪಷ್ಟವಾಗಿದೆ. ಉನ್ನತ ಮಧ್ಯಮ ವರ್ಗದಿಂದ ಆಯ್ದ ಕೆಲವರು ಮತ್ತು ಇದೇ ಭ್ರಷ್ಟ ವ್ಯವಸ್ಥೆಯ ಹರಿಕಾರರಾದ ರಾಜಕೀಯ ವ್ಯಕ್ತಿಗಳು ಹಾಗೂ ಈ ರಾಜಕೀಯ ವ್ಯವಸ್ಥೆಯನ್ನು ಪೋಷಿಸುವ ಮಾಧ್ಯಮ ದೊರೆಗಳು ಭಾಗವಹಿಸುವ ಸಂವಾದದಲ್ಲಿ ಭ್ರಷ್ಟಾಚಾರದ ಸಾಂಸ್ಥಿಕ ಚೌಕಟ್ಟನ್ನು ಬೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಪಾದನೆಗಳು ಮೇಲ್ನೋಟಕ್ಕೆ ಭ್ರಷ್ಟಾಚಾರ ವಿರೋಧಿ ಎಂದು ಕಂಡುಬಂದರೂ ಭ್ರಷ್ಟ ವ್ಯವಸ್ಥೆಯ ಮೂಲ ಬೇರುಗಳು ಮಾತ್ರ ಭದ್ರವಾಗಿಯೇ ಇರುತ್ತವೆ. ಅಣ್ಣಾ ಹಜಾರೆಯ ಹೋರಾಟವನ್ನು ದಮನಿಸುವ ಕೇಂದ್ರ ಸಕರ್ಾರದ ನೀತಿಯನ್ನು ಯಾವುದೇ ಒಂದು ಕಾಪರ್ೋರೇಟ್ ಸಂಸ್ಥೆಯೂ ಖಂಡಿಸದಿರುವುದು ಈ ನಿಟ್ಟಿನಲ್ಲಿ ಗಮನಾರ್ಹ. ದೇಶದ ಪ್ರತಿಯೊಂದು ವಿದ್ಯಮಾನದ ಬಗ್ಗೆಯೂ ತಮ್ಮ ಅಭಿಪ್ರಾಯ ಮಂಡಿಸುವ ವಾಣಿಜ್ಯೋದ್ಯಮಿಗಳು, ಕಾಪರ್ೋರೇಟ್ ಉದ್ಯಮಿಗಳು ಇಡೀ ದೇಶವನ್ನು ಆಕ್ರಮಿಸಿರುವ ಭ್ರಷ್ಟಾಚಾರ ವಿರೋಧಿ ಅಲೆಗಳನ್ನು ಕುರಿತು ಒಂದು ಮಾತನ್ನೂ ಆಡದಿರುವುದು ಅಚ್ಚರಿಯೇನಲ್ಲ. ಕಾರಣ ಮುಂದೊಂದು ದಿನ ಇದೇ ಅಲೆಗಳು ತಮ್ಮ ಬುನಾದಿಯನ್ನು ಅಲುಗಾಡಿಸುವ ಭೀತಿ ಕಾಡುತ್ತಿರುತ್ತದೆ. ನವ ಉದಾರವಾದ ಪೋಷಿಸುವ ಹಣಕಾಸು ಬಂಡವಾಳದ ಸುಭದ್ರ ಕಪಾಟುಗಳಾಗಿರುವ ಕಾಪರ್ೋರೇಟ್ ವಲಯ ತನ್ನ ನರನಾಡಿಗಳು ಶಿಥಿಲವಾಗುವುದನ್ನು ಸಹಿಸಲಾರದು. ಕಾಪರ್ೋರೇಟ್ ವಲಯದ ನರನಾಡಿಗಳೇ ವಿದೇಶಿ ಬಂಡವಾಳ ಮತ್ತು ಭಾರತದಲ್ಲಿನ ನೈಸಗರ್ಿಕ ಸಂಪನ್ಮೂಲಗಳು. ಈ ಸಂಪನ್ಮೂಲಗಳನ್ನು ತಮ್ಮ ಔದ್ಯಮಿಕ ಹಿತಾಸಕ್ತಿಗಳಿಗೆ ಬಳಸಿಕೊಂಡು ದೇಶದ ಪ್ರಗತಿಗೆ ಮುಂದಾಗುವ ಔದ್ಯಮಿಕ ಕ್ಷೇತ್ರಕ್ಕೆ ರಾಜಕೀಯ ಭ್ರಷ್ಟಾಚಾರವೇ ಶಿರಸ್ತ್ರಾಣವಿದ್ದಂತೆ. ಒಂದು ನಿದರ್ಿಷ್ಟ ಉದಾಹರಣೆ ಇಲ್ಲಿ ಉಲ್ಲೇಖನಾರ್ಹ.ಒಂದು ಬೃಹತ್ ಬಹುರಾಷ್ಟ್ರೀಯ ಕಂಪನಿ ತನ್ನ ಉದ್ಯಮದ ಸ್ಥಾಪನೆಗೆ ಅರಣ್ಯ ಭೂಮಿಯನ್ನು ಅಪೇಕ್ಷಿಸುತ್ತದೆ. ಅಥವಾ ಫಲವತ್ತಾದ ಕೃಷಿ ಭೂಮಿಗಾಗಿ ಆಗ್ರಹಿಸುತ್ತದೆ.
ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಕರ್ಾರ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ತನ್ನೆಲ್ಲಾ ಕಾಯ್ದೆ ಕಾನೂನುಗಳನ್ನೂ ಬಳಸಿಕೊಳ್ಳುತ್ತದೆ. ಪೋಸ್ಕೋ, ವೇದಾಂತ, ಮಿಟ್ಟಲ್, ರಿಲೈಯನ್ಸ್ ಹಲವಾರು ನಿದರ್ಶನಗಳು ಇಲ್ಲಿವೆ. ಈ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಯುವ ಲೇವಾದೇವಿ ವ್ಯವಹಾರಗಳು ಕೊನೆಗೆ ಭೂಮಿಯನ್ನೇ ನಂಬಿ ಬದುಕುವ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತವೆ. ಪರಿಹಾರದ ರೂಪದಲ್ಲಿ ನೊಂದ ಮನಗಳನ್ನು ತೃಪ್ತಿಪಡಿಸುವ ಆಳ್ವಿಕರು ಔದ್ಯಮಿಕ ದೊರೆಗಳಿಗೆ ಎಲ್ಲ ಸವಲತ್ತುಗಳನ್ನೂ ಒದಗಿಸುತ್ತಾರೆ. ಎಕರೆಗೆ 30 ಲಕ್ಷ ಬಾಳುವ ಭೂಮಿಯನ್ನು ಕಾಪರ್ೋರೇಟ್ಗಳಿಗೆ ನೀಡಿ ಜನತೆಗೆ 3 ಲಕ್ಷ ಪರಿಹಾರ ನೀಡಲಾಗುತ್ತದೆ. ಇಲ್ಲವಾದಲ್ಲಿ ಬಲವಂತದಿಂದ ವಶಪಡಿಸಿಕೊಳ್ಳಲಾಗುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ರಾಜಕೀಯ ಭ್ರಷ್ಟಾಚಾರ ವ್ಯಾಪಕವಾಗಿರುವುದು ವಾಸ್ತವ. ನಾವು ರಾಜಕಾರಣಿಗಳನ್ನು ದೂಷಿಸುತ್ತೇವೆ. ಆದರೆ ಈ ಪ್ರಕ್ರಿಯೆಯ ಹಿಂದೆ ಅಡಗಿರುವ ಕಾಪರ್ೋರೇಟ್ ವಲಯದ ಸೂಕ್ಷ್ಮ ತರಂಗಗಳು ನಮ್ಮ ಗಮನಕ್ಕೇ ಬರುವುದಿಲ್ಲ. ಪೋಸ್ಕೋಗಳು, ವೇದಾಂತಗಳು ಭ್ರಷ್ಟತೆಯ ಆರೋಪಕ್ಕೆ ಒಳಗಾಗುವುದೇ ಇಲ್ಲ. ಈ ಕುರಿತು ಜನಲೋಕಪಾಲ್ ಸೊಲ್ಲೆತ್ತುವುದಿಲ್ಲ. ಇದು ಇಡೀ ಚಚರ್ೆಯನ್ನು ಆವರಿಸುವ ಪ್ರಶ್ನೆ. ವಿಪಯರ್ಾಸವೆಂದರೆ ಯಾವುದೇ ಚಚರ್ೆಯಲ್ಲಿ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕಾರಣ ಸ್ಪಷ್ಟ. ಸಾಂಸ್ಥಿಕ ಭ್ರಷ್ಟತೆಯ ಒಳನೋಟ ಭಾರತದಲ್ಲಿ ನೆಲೆಯೂರಿರುವ ಭ್ರಷ್ಟ ವ್ಯವಸ್ಥೆಯ ಚೌಕಟ್ಟನ್ನು ಕಾಪರ್ೋರೇಟ್ ವಲಯಗಳು ಮಾತ್ರ ಕಾಪಾಡುತ್ತಿಲ್ಲ. ದೇಶದ ಸಾಮಾಜಿಕ-ಆಥರ್ಿಕ-ಸಾಂಸ್ಕೃತಿಕ ಮತ್ತು ರಾಜಕೀಯ ವಲಯದಲ್ಲಿ ಪಸರಿಸಿರುವ ಎಲ್ಲ ಶಕ್ತಿಗಳೂ ಈ ಚೌಕಟ್ಟನ್ನು ಸುಭದ್ರವಾಗಿರಿಸಲು ಯತ್ನಿಸುತ್ತಿರುತ್ತವೆ. ಅಣ್ಣಾ ಹಜಾರೆ ಚಳುವಳಿಯನ್ನು ಬೆಂಬಲಿಸಿ ಬೀದಿಗಿಳಿದು ಹೋರಾಡುತ್ತಿರುವ ಜನಸಮೂಹದ ಮೂಲಭೂತ ಲಕ್ಷಣಗಳನ್ನು ನೋಡಿದಾಗ ಈ ಸತ್ಯದ ಅರಿವಾಗುತ್ತದೆ. ಭ್ರಷ್ಟತೆ ಎನ್ನುವುದು ಕೇವಲ ವ್ಯಾವಹಾರಿಕ, ಹಣಕಾಸಿನ ವಿದ್ಯಮಾನವಲ್ಲ. ಬದಲಾಗಿ ಮಾನಸಿಕ ಸ್ಥಿತಿ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಡಗಿರಬಹುದಾದ ಭ್ರಷ್ಟ ಮನೋಭಾವದ ಸಾಂಸ್ಥಿಕ ಸ್ವರೂಪವನ್ನು ನಾವು ಸಾಮಾಜಿಕ ವಲಯದಲ್ಲಿ ಸಮಗ್ರ ರೂಪದಲ್ಲಿ ಕಾಣುತ್ತೇವೆ. ಇಲ್ಲಿ ನಾವು ಕೆಲವು ಮೂಲಭೂತ ಸಂಗತಿಗಳನ್ನು ವಸ್ತುನಿಷ್ಠವಾಗಿ ನೋಡಬೇಕಾಗುತ್ತದೆ.ಮಧ್ಯಮವರ್ಗಗಳ ಅನಿವಾರ್ಯತೆಗಳಿಗೆ ಅಡ್ಡಗೋಡೆಯಾಗಿರುವ ರಾಜಕೀಯ ಭ್ರಷ್ಟಾಚಾರವನ್ನು ವಿರೋಧಿಸುವ ಬಿರುಸಿನಲ್ಲಿ ನಮ್ಮ ಸಾಮಾಜಿಕ ವಲಯದ ಸುತ್ತ ಬ್ರಹ್ಮರಾಕ್ಷಸನ ಬಾಹುಗಳಂತೆ ಪಸರಿಸಿರುವ ಭ್ರಷ್ಟ ಪರಂಪರೆಯನ್ನು ನಿರ್ಲಕ್ಷಿಸಿದರೆ ಭಾರತವನ್ನು ಯಾವ ಲೋಕಪಾಲ್ ಸಂಸ್ಥೆಯೂ ರಕ್ಷಿಸಲಾರದು. ಹಜಾರೆಯವರಿಗೆ ಬೆಂಬಲ ನೀಡಿರುವವರಲ್ಲಿ ಮಧ್ಯಮ ವರ್ಗಗಳೇ ಹೆಚ್ಚಾಗಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.
ಭಾರತ ಸಂವಿಧಾನಕ್ಕೆ ಬದ್ಧರಾಗಿ ನ್ಯಾಯ ವಿತರಣಾ ವ್ಯವಸ್ಥೆಯನ್ನು ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ವಕೀಲರು, ದೇಶದ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಆತ್ಮಸಾಕ್ಷಿಯ ಪ್ರಮಾಣ ತೊಟ್ಟು ವೈದ್ಯಕೀಯ ವೃತ್ತಿಯಲ್ಲಿರುವ ವೈದ್ಯರು, ದೇಶದ ಕಾನೂನು ವ್ಯವಸ್ಥೆಯನ್ನು ರಕ್ಷಿಸಿ ಜನತೆಗೆ ಉತ್ತಮ ಸಮಾಜದ ನಿಮರ್ಾಣ ಮಾಡಲು ನೆರವಾಗಬೇಕಾದ ಪೊಲೀಸರು, ಈ ಮೂರು ವೃತ್ತಿಗಳು ದೇಶದ ಸಾಮಾಜಿಕ-ಸಾಂಸ್ಕೃತಿಕ ಬೆನ್ನೆಲುಬಿದ್ದಂತೆ. ಆದರೆ ಇವರಲ್ಲಿ ಎಷ್ಟು ಜನ ತಮ್ಮ ನಿಜವಾದ ಆದಾಯವನ್ನು ಸಕರ್ಾರಕ್ಕೆ ಸಲ್ಲಿಸಿ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ಅಥವಾ ಎಷ್ಟು ವೃತ್ತಿಪರರು ತಮ್ಮ ಶ್ರಮಕ್ಕೆ ತಕ್ಕ ಶುಲ್ಕ ಪಡೆಯುತ್ತಾರೆ. ಭ್ರಷ್ಟ ರಾಜಕಾರಣಿಗಳನ್ನು ಶಿಕ್ಷಿಸಬೇಕು, ನಿಜ ಆದರೆ ಶಿಕ್ಷಣ, ಆರೋಗ್ಯ, ನ್ಯಾಯ ವಿತರಣೆ, ಧರ್ಮ ಎಲ್ಲವನ್ನೂ ಔದ್ಯಮೀಕರಣಗೊಳಿಸಿ ಜನಸಾಮಾನ್ಯರನ್ನು ಶೋಷಿಸುತ್ತಿರುವ ವ್ಯಕ್ತಿ-ಸಂಸ್ಥೆಗಳ ಭ್ರಷ್ಟತೆಯನ್ನು ಶಿಕ್ಷಿಸುವುದು ಹೇಗೆ ? ಗುರೂಜಿ ರವಿಶಂಕರ್, ರಾಮ್ದೇವ್ ಮುಂತಾದವರು ಅಣ್ಣಾ ಹಜಾರೆಯೊಡನೆ ವೇದಿಕೆ ಹಂಚಿಕೊಳ್ಳುವಾಗ ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಧಾಮರ್ಿಕ-ಆಧ್ಯಾತ್ಮಿಕ ಸಂಸ್ಥೆಗಳ ಭ್ರಷ್ಟ ಪರಂಪರೆಯ ನೆನಪಾಗದಿರುವುದಿಲ್ಲ. ಕಾಪರ್ೋರೇಟ್ ವಲಯ ಮತ್ತು ರಾಜಕೀಯ ಪಕ್ಷಗಳನ್ನು ಪೋಷಿಸುತ್ತಲೇ ತಮ್ಮ ಖಾಸಗಿ ಸಾಮ್ರಾಜ್ಯಗಳನ್ನು ನಿಮರ್ಿಸಿಕೊಳ್ಳುತ್ತಿರುವ ಬಾಬಾಗಳು ಲೋಕಪಾಲ್ ಮಸೂದೆಗೆ ಬೆಂಬಲ ಸೂಚಿಸುವುದು ಹಾಸ್ಯಾಸ್ಪದ ಎನಿಸಿದರೂ, ತಮ್ಮ ಸಾಮ್ರಾಜ್ಯಗಳನ್ನು ರಕ್ಷಿಸಿಕೊಳ್ಳುವ ಹುನ್ನಾರವನ್ನೂ ಇದರಲ್ಲಿ ಕಾಣಬಹುದು. ಕೋಟ್ಯಾಂತರ ರೂಗಳ ಬಂಡವಾಳ ಹೂಡುವ ಚಲನಚಿತ್ರ ಕ್ಷೇತ್ರ, ಕೋಟ್ಯಾಧಿಪತಿಗಳಾಗಿರುವ ಸಿನಿಮಾ ತಾರೆಗಳು, ಕ್ರಿಕೆಟ್ ಕಲಿಗಳು ಈಗ ನಡೆಯುತ್ತಿರುವ ಭ್ರಷ್ಟಾಚಾರದ ಸಂಕಥನದಲ್ಲಿ ಕಾಣದೇ ಇರುವುದು ಇಡೀ ಚಚರ್ೆಯ ಶಿಥಿಲ ಸ್ವರೂಪದ ಸಂಕೇತವಾಗಿದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟತೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ ದೇಶದ ಶ್ರಮಿಕ ವರ್ಗಗಳನ್ನು ಪ್ರತಿನಿಧಿಸುವ ಕಾಮರ್ಿಕ ಸಂಘಟನೆಗಳೂ ಸಹ ತಮ್ಮ ಆದಾಯ ವೆಚ್ಚಗಳನ್ನು ಸದಸ್ಯರ ಮುಂದೆ ಪ್ರಾಮಾಣಿಕವಾಗಿ ಸಲ್ಲಿಸುವುದಿಲ್ಲ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಐಷಾರಾಮಿ ಸಭಾಂಗಣದಲ್ಲಿ ಅದ್ದೂರಿಯಾದ ಕಾಮರ್ಿಕ ಸಮಾವೇಶಗಳನ್ನು ನಡೆಸುವ ಸಂಘಟನೆಗಳು ತಮ್ಮ ಉತ್ತರದಾಯಿತ್ವವನ್ನೇ ಮರೆತಿರುವುದೂ ಈ ಸಂದರ್ಭದಲ್ಲಿ ಉಲ್ಲೇಖನಾರ್ಹ. ಭಾರತದ ಇತಿಹಾಸದಲ್ಲಿ ಬಹುತೇಕ ಸಂಘಟನೆಗಳು ವಿಘಟಿತವಾಗಿರುವುದು ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲೇ ಎಂಬ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳವನ್ನೇ ಪ್ರಧಾನವಾಗಿಸಿ ಬಡಜನತೆಯ ನೆತ್ತರು ಹೀರುತ್ತಿರುವ ಉದ್ಯಮಪತಿಗಳು, ಜನರ ಧಾಮರ್ಿಕ ನಂಬಿಕೆಗಳನ್ನು ಶೋಷಿಸುವ ಮಠೋದ್ಯಮಿಗಳು ಇಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತಾರೆ. ಅಂದರೆ ಎಲ್ಲೋ ಒಂದೆಡೆ ನಮ್ಮ ಸಾಮಾಜಿಕ ಚೌಕಟ್ಟಿನಲ್ಲೇ ಭ್ರಷ್ಟಾಚಾರದ ಸಾಂಸ್ಥಿಕ ಸ್ವರೂಪ ದಟ್ಟವಾಗಿ ಹರಡಿದೆ.
ಸರ್ವಜನ ಲೋಕಪಾಲ್ ಅಗತ್ಯ ರಾಜಕೀಯ ಭ್ರಷ್ಟಾಚಾರವನ್ನಷ್ಟೇ ಕೇಂದ್ರೀಕರಿಸಿರುವ ಪ್ರಸ್ತುತ ಹೋರಾಟದ ಕಾವಿನಲ್ಲಿ ಅನೇಕ ಸತ್ಯಗಳು ಬೆಂದು ಹೋಗುತ್ತಿವೆ. ಎರಡೂ ಮಸೂದೆಗಳು ದೇಶವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆ, ಹಣಕಾಸು ಬಂಡವಾಳದ ಪ್ರಾಬಲ್ಯ ಮತ್ತು ಕಾಪರ್ೋರೇಟ್ ಔದ್ಯಮಿಕ ಭ್ರಷ್ಟತೆ, ಇವೆರಡನ್ನೂ ಪ್ರಶ್ನಿಸುವುದಿಲ್ಲ. ನಿಜ, ಭಾರತದ ರಾಜಕಾರಣಿಗಳು ನಮ್ಮನ್ನಾಳುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಬೇಕಿರುವುದು ದೇಶದ ಸಮಸ್ತ ಜನತೆಯನ್ನು ಪ್ರತಿನಿಧಿಸುವ ಹಾಗೂ ಸಮಗ್ರ ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸುವ ಒಂದು ಸಾಂಸ್ಥಿಕ ಚೌಕಟ್ಟು. ಸಕರ್ಾರಿ ಕಛೇರಿಗಳಲ್ಲಿ, ರಾಜಕೀಯ ವಲಯಗಳಲ್ಲಿ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ನಡೆಯುವ ಭ್ರಷ್ಟಾಚಾರದ ಪ್ರಕರಣಗಳನ್ನು ಮಾತ್ರ ನಿವಾರಿಸಲು ಯತ್ನಿಸುವುದು ಸಮಗ್ರ ದೃಷ್ಟಿಕೋನದ ಕೊರತೆಯನ್ನು ಸೂಚಿಸುತ್ತದೆ. ಇಂದು ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರದ ಮೂಲ ಇರುವುದು ಬಂಡವಾಳ ವ್ಯವಸ್ಥೆ ಮತ್ತು ನವ ಉದಾರವಾದದ ಹಣಕಾಸು ಬಂಡವಾಳದ ಚಲನೆಯಲ್ಲಿ. ಈ ಚಲನಶೀಲ ಬಂಡವಾಳವೇ ದೇಶದ ಬಹುಸಂಖ್ಯಾತ ಜನರನ್ನು ದಾರಿದ್ರ್ಯತೆಗೆ ದೂಡುತ್ತಿದೆ. ವೇದಾಂತಗಳು, ಪೋಸ್ಕೋಗಳು, ರಿಲೈಯನ್ಸ್ಗಳು ಜನಸಾಮಾನ್ಯರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿವೆ. ದೇಶದ ಅರಣ್ಯ ಪ್ರದೇಶಗಳು ಕಾಪರ್ೋರೇಟ್ ಸಾಮ್ರಾಜ್ಯಗಳ ಭದ್ರ ಕೋಟೆಗಳಾಗುತ್ತಿವೆ. ನವ ಉದಾರವಾದ ಪೋಷಿದ ಆರ್ಥವ್ಯವಸ್ಥೆ ದೇಶದ ಬಡ ಜನತೆಯ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ. ತಮ್ಮ ಮೂಲಭೂತ ಹಕ್ಕುಗಳನ್ನು, ಜೀವನಾಧಾರವನ್ನು ಉಳಿಸಿಕೊಳ್ಳಲು ಹೋರಾಡುವ ಆದಿವಾಸಿಗಳನ್ನು, ರೈತಾಪಿ ಜನರನ್ನು ಆಳುವ ವರ್ಗಗಳು ನಿದರ್ಾಕ್ಷಿಣ್ಯವಾಗಿ ದಮನಿಸುತ್ತಿವೆ. ಈ ಬಡಜನತೆಯ ಪರವಾಗಿ ದನಿ ಎತ್ತುವ ವ್ಯಕ್ತಿಗಳು ಆಳ್ವಿಕರ ದೃಷ್ಟಿಯಲ್ಲಿ ಮಾವೋವಾದಿಗಳೋ, ರಾಜದ್ರೋಹಿಗಳೋ ಆಗಿಬಿಡುತ್ತಾರೆ. ಲೋಕಪಾಲ್ ಅಥವಾ ಜನಲೋಕಪಾಲ್ ಮಸೂದೆಗಳು ಈ ಶ್ರಮಿಕ ವರ್ಗಗಳ ತುಡಿತಗಳನ್ನಾಗಲಿ, ಸೂಕ್ಷ್ಮ ತರಂಗಗಳನ್ನಾಗಲೀ ಗ್ರಹಿಸದೆ ಹೋದರೆ, ಭಾರತದ ಸಾರ್ವಭೌಮ ಪ್ರಜೆಗಳು ಎದುರಿಸುತ್ತಿರುವ ಭ್ರಷ್ಟ ವ್ಯವಸ್ಥೆ ಸುಧಾರಿಸುವುದಿಲ್ಲ..ಹಜಾರೆಯವರ ಆಂದೋಲನಕ್ಕೆ ವ್ಯಕ್ತವಾಗಿರುವ ಜನಬೆಂಬಲ ಭಾರತದ ಯುವಜನತೆಯಲ್ಲಿ ಸುಪ್ತವಾಗಿದ್ದ ಆಕ್ರೋಶದ ಸಂಕೇತವಾಗಿ ಮಾತ್ರ ಕಾಣುತ್ತದೆ. ಈ ಆಕ್ರೋಶದ ಹಿನ್ನೆಲೆಯಲ್ಲಿ ತಮ್ಮ ದನಿಯನ್ನೇ ಹೊರಗೆಡಹಲಾರದ ಕೋಟ್ಯಾಂತರ ಜೀವಗಳು ಅಧಿಕಾರ ರಾಜಕಾರಣದ ಬಂಧಿಗಳಾಗಿ ನಲುಗಿಹೋಗುತ್ತಿವೆ. ಒಂದು ಪಯರ್ಾಯ ವ್ಯವಸ್ಥೆಯನ್ನು ನಿಮರ್ಿಸುವ ಮೂಲಕ, ಪ್ರಜಾಪ್ರಭುತ್ವಕ್ಕೆ ಹೊಸ ಮುನ್ನುಡಿ ಬರೆಯಬಲ್ಲ ಸಮಗ್ರ ದೃಷ್ಟಿಕೋನದ ಜನಪರ ಹೋರಾಟ ಮಾತ್ರ ಈ ಅಮಾಯಕ ಜೀವಗಳಿಗೆ ಹೊಸ ಬದುಕನ್ನು ಕಾಣಿಸಬಹುದು. ಪ್ರಸ್ತುತ ಜನಾಂದೋಲನ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಲೆಂದು ಆಶಿಸೋಣವೇ ?
ನಾ ದಿವಾಕರ






sir,nimma lekhana egina prastuta horatada jatreyannu eleeleyagi bidisittide,infact pratibhaneyalli bagavahisidavaralli adestu jana masudeyannu odiddaro nangottilla,jana marulo jatre marulo ennuvahage ondu wave eddide, pratibhaneya kuge illadiddaga ee belavanigeyannu swagisade anya dariyilla masudeyenu mantradandavalla adu ee deshada samanyana badukannu sudarisalaradeno, neevu asisuvahage samagra kalajiya janapara horata matra hosabadukannu kattikodabahudu aa dikkinedege idannu kondayya bekide but ee kelsakke siddavaga bekidda buddijeevigala mouna,alasya nijakku vishadaneeya dasru heluvahage uttama prabhutva ennodu ondu lolalotte konepaksha nirankusha adikarishayi manobhava tadegattuvalliyadru namma horata rupugollabekeno namaskara D.RAVI VARMA HOSPET
ನಾ .ದಿವಾಕರ್ ಅವರು ಹೇಳಿರುವ ” ಅಣ್ಣಾ ಚಳುವಳಿಯನ್ನು ನಿರಂತರ ಪ್ರಸಾರ ಮಾಡುತ್ತಿರುವ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಹೊಂದಿರುವುದೇ ಒಂದು ಭ್ರಷ್ಟ ಅರ್ಥವ್ಯವಸ್ಥೆಯ ಬುನಾದಿಯ ಮೇಲೆ ಎಂಬ ಸೂಕ್ಷ್ಮ ಸಂಗತಿಯನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ .” ಈ ಮಾತುಗಳು ಮಧ್ಯಮ ಮೇಲು ವರ್ಗದವರ ಆದಾಯದ ಮುಲಗಳಿಗೂ ಅನ್ವಯವಾಗುತ್ತವೆ . ಏಕೆಂದರೆ ವ್ಯಕ್ತಿಯು ದುಡಿಮೆಯಿಂದ ಪಡೆಯಬಹುದಾದ ಗಳಿಕೆಯಲ್ಲಿ ಅಪಾರವಾದ ಕಂದರವಿರುವ ಅರ್ಥವ್ಯವಸ್ಥೆಯು ಇಡೀ ಸಮಾಜದ ಬದುಕನ್ನೇ ಸಹಿಸಲು ಅಸಾಧ್ಯವಾದ ಸಾಮಾಜಿಕ ಒತ್ತಡಕ್ಕೆ ಒಡ್ಡಿದೆ . ಇವತ್ತಿನ ಸಮಾಜದಲ್ಲಿ ಮಧ್ಯಮ ಮತ್ತು ಮೇಲು ವರ್ಗದಲ್ಲಿರುವ ವ್ಯಕ್ತಿಗಳೆಲ್ಲರ ತುಡಿತ ಭ್ರಷ್ಟಾಚಾರದ ವಿರುದ್ಧವಾಗಿದೆ . ಏಕೆಂದರೆ ತಾವು ಕೋಟಿಗಟ್ಟಲೆ ಅಥವಾ ಲಕ್ಷಗಟ್ಟಲೆ ರೂಗಳಲ್ಲಿ ವ್ಯವಹರಿಸುತ್ತಿರುವ ಕಡೆಗಳಲ್ಲಿ ಲಂಚವಿರುವುದು , ಇವರಿಗೆ ತುಂಬ ಆತಂಕವನ್ನು ಉಂಟುಮಾಡಿದೆ . ದಿನಕ್ಕೆ ಎರಡು ಹೊತ್ತು ಊಟಕ್ಕೆ ಗತಿಯಿಲ್ಲದ ಶೇಕಡ 40 ರಷ್ಷು ಜನಸಮುದಾಯದವರ ನಡುವೆ ನಮ್ಮ ಸಂಪತ್ತು ದಿನೇ ದಿನೇ ಏಕೆ ಹೆಚ್ಚಾಗುತ್ತಿದೆ ? ಹೇಗೆ ಹೆಚ್ಚಾಗುತ್ತಿದೆ ? ದೇಶದ ಒಟ್ಟು ಸಂಪತ್ತಿನಲ್ಲಿ ನಮ್ಮ ಪಾಲು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿದೆಯಲ್ಲಾ ! ಇದೇಕೆ ಇಷ್ಟೊಂದು ಅಂತರ ಎಂಬ ಕಳಕಳಿ ಇಲ್ಲವೇ ಆತಂಕ ಕಿಂಚಿತ್ತಾದರೂ ಇಲ್ಲ . ಈ ಎಲ್ಲ ಚಿಂತನೆಗಳ ಹಿಂದೆ ” ನನ್ನ ಕ್ಷೇಮದ ಬಗೆಗಿನ ಆತಂಕವಿದೆಯೇ ಹೊರತು , ಒಟ್ಟು ಸಮುದಾಯದ ಕ್ಷೇಮದ ಚಿಂತನೆಯಿಲ್ಲ ” . ಅಣ್ಣಾ ಹಜಾರೆಯವರ ಹೋರಾಟ ನಮ್ಮಂತಹ Upper Middle Class ಜನಕ್ಕೆ ದೇಶಪ್ರೇಮದ ಸಂಕೇತವಾಗಿ ಮತ್ತು ಎರಡನೆಯ ಸ್ವಾತಂತ್ರ್ಯ ಹೋರಾಟವಾಗಿ ಕಂಡುಬಂದು ” ವಂದೇ ಮಾತರಂ ” ಹಾಗೂ
” ಬೋಲೋ ಭಾರತ್ ಮಾತಾಕೀ ಜೈ ” ಎಂಬ ಮೊಳಗು ಕೇಳಿ ಬರುತ್ತಿದೆ. ಜಾಣಗುರುಡುತನ ಮತ್ತು ಜಾಣಕಿವುಡುತನಗಳೆರಡನ್ನು ಮೈಗೂಡಿಸಿಕೊಂಡಿರುವ ನನ್ನಂತಹ ಬಹುತೇಕ ಮಂದಿಗೆ ನಾ.ದಿವಾಕರ್ ಅವರ ಬರಹದಲ್ಲಿನ ಸಾಮಾಜಿಕ ವಾಸ್ತವದ ಮಾತುಗಳು ಅಸಂಬದ್ದ ಪ್ರಲಾಪದಂತೆ ಕಂಡುಬರುತ್ತವೆ .
ದಿವಾಕರರೆ,
ಬಹಳ ವಸ್ತು ನಿಷ್ಠವಾದ ವಿಮರ್ಶೆ ನೀಡಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಈ ಪ್ರಕ್ರಿಯೆಗಳು ಎಷ್ಟೊಂದು ಆಗಿಲ್ಲ, ಮುಂದೆ ಆಗುವುದಿಲ್ಲ ಎಂದು ಹೇಳಲಾಗದು.
ಧನ್ಯವಾದಗಳು.
ಕ್ಷಮಿಸಿ.. ನೀವು ಅಣ್ಣ ಮಾಡುತ್ತಿರುವ ಹೋರಾಟದ ದ್ಯೆಯವನ್ನೇ ಬದಲಿಸುತ್ತಿರುವ ಹಾಗಿದೆ.. ಅವರ ಹೋರಾಟವಿರುವುದು ಬ್ರಷ್ಟ್ರಚಾರದ ವಿರುದ್ದ. ನೀವು ಹೇಳುತ್ತಿರುವುದು ನೋಡಿದ್ರೆ ಆದಿವಾಸಿಗಳು, ರೈತಾಪಿ ಜನರು ಅದು ಇದು ಅಂತ ಬೇರೇನೋ ಶಂಖ ಉದುತ್ತಿರುವ ಹಾಗಿದೆ. ನೀವು ಹೇಳೋದು ಖಂಡಿತ ಸರಿ ಇದೆ. ಆದರೆ ಈ ಚಳುವಳಿಯ ಮೂಲ ಉದ್ದೇಶ ಅದು ಅಲ್ಲ ಅನ್ನೋದು ಅರ್ಥ ಮಾಡ್ಕೊಳ್ಳಿ. ಯಾವದನ್ನೂ ತೊಗೊಂಡು ಹೋಗಿ ಎಲ್ಲೊ ಲಿಂಕ್ ಮಾಡ್ಬೇಡಿ.
bhrashtacharada ishtondu ayamagalannu tilisiddakke dhanyavadagalu
ಸಾರ್
ಬ್ರಷ್ಟಾಚಾರದ ಅಷ್ಟೂ ಮುಖಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನನ್ನ ಅಭಿಪ್ರಾಯದಲ್ಲಿ ನೀವು ಹೇಳಿದ್ದೆಲ್ಲಾ ಸರಿಯಾಗಿದೆ ಆದರೆ ಹೆಡ್ಡಿಂಗ್ ಮಾತ್ರ ಸರಿ ಇಲ್ಲ “ಅಣ್ಣಾ ಹಜಾರೆ ಹೋರಾಟ ಮುಟ್ಟಬೇಕಾದ ಸತ್ಯಗಳು” ಅಂದಿದ್ದರೆ ಸೂಕ್ತವಾಗಿತ್ತೇನೋ. ಯಾಕೆಂದರೆ ಇವ್ಯಾವೂ ಹೋರಾಟದ ಬಿಸಿಯಲ್ಲಿ ಕರಗಿ ಹೋಗಲಿಲ್ಲ, ಈ ಹೋರಾಟದಿಂದ ಅವೆಲ್ಲ ಬೆಳಕಿಗೆ ಬರುವ ಸಾದ್ಯತೆಗಳಿವೆ. ನಾವೆಲ್ಲ ಇದರಬಗ್ಗೆ ಮಾತಾಡುವ ಹಾಗಾಗಿದೆ. ಏನಂತೀರ?
ಇಲ್ಲಿ ಪ್ರಸ್ತುತ ಚಳುವಳಿಯ ಮೂಲ ಆಶಯಗಳಿಗಿಂತಲೂ ದೇಶವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳು ಹೆಚ್ಚು ಪ್ರಸ್ತುತ ಎನಿಸುತ್ತದೆ. ನಾನು ಹಜಾರೆಯವರ ಹೋರಾಟವನ್ನು ವಿರೋಧಿಸುತ್ತಿಲ್ಲ, ಖಂಡಿಸುತ್ತಲೂ ಇಲ್ಲ. ಆದರೆ ಈ ಹೋರಾಟದ ಹಿಂದಿನ ಕೂಗು ಕೇವಲ ಮೇಲ್ ಪದರವನ್ನು ಮಾತ್ರ ಸ್ಪಂದಿಸುತ್ತಿದೆ ಎಂದು ಭಾವಿಸುತ್ತೇನೆ. ಭ್ರಷ್ಟಾಚಾರದ ಮೂಲಬೇರುಗಳನ್ನು ತೊಡೆದುಹಾಕದಿದ್ದಲ್ಲಿ ಈಸಮಸ್ಯೆಗಳು ಬಗೆಹರಿಯಲಾರದು. ಅಣ್ಣಾ ಹಜಾರೆಯವರ ಹೋರಾಟವನ್ನು ಬೆಂಬಲಿಸುತ್ತಲೇ ಈ ಹೋರಾಟಕ್ಕೆ ಒಂದು ಹೊಸ ಆಯಾಮವನ್ನು ಒದಗಿಸಬೇಕಾದ ಅನಿವಾರ್ಯತೆಯನ್ನು ಮಾತ್ರ ಇಲ್ಲಿ ಹೇಳಿದ್ದೇನೆ. ಬೂರ್ಷ್ವಾ ಚಳುವಳಿಗಳ ಇತಿ ಮಿತಿಗಳನ್ನು ಇತಿಹಾಸವೇ ದಾಖಲಿಸಿದ್ದು ಭಾರತವೂ ಇದಕ್ಕೆ ಹೊರತಲ್ಲ ಎಂದು ಅರಿತರೆ ಸಾಕು.
ಮತ್ತೊಂದು ಮಾತು ಇಲ್ಲಿ ಕರಗಿಹೋದ ಸತ್ಯಗಳು ಎಂದು ಬಳಸಲು ಕಾರಣ ಇಷ್ಟೆಲ್ಲಾ ತೀವ್ರ ಪ್ರತಿಭಟನೆಗಳ ಹೊರತಾಗಿಯೂ ಕಾರ್ಪೋರೇಟ್ ಮತ್ತು ಖಾಸಗಿ ಕ್ಷೇತ್ರದ ಹಾಗೂ ಔದ್ಯಮಿಕ ದೊರೆಗಳ ಭ್ರಷ್ಟತೆಯನ್ನು ಈವರೆಗೂ ಪ್ರಶ್ನಿಸಲಾಗಿಲ್ಲ.ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಚರ್ಚೆಗಳನ್ನು ಗಮನಿಸಿ ನಿಮಗೇ ತಿಳಿಯುತ್ತದೆ.
ಚಳುವಳಿಯ ದೋಶವೇನೆ ಇರಲಿ,ಏನೂ ಆಗದಿರುವ ಇಲ್ಲಿ ಸದ್ಯ ಇಸ್ಟಾದರೂ ಆಗುತ್ತದಲ್ಲ ಎಂದು ಸ್ವಾಗತಿಸುವುದು ಚಲೊ ಅಲ್ಲವೆ?
ಸರ್ ನೀವು ಹೇಳಿದ್ದು ಅಕ್ಷರಷ: ಸತ್ಯ. ಈಗ ಹೋರಾಡುತ್ತಿರುವವರಲ್ಲಿ ಹೆಚ್ಚಿನವರಿಗೆ ಯಾಕೆ ಹೋರಾಡುತ್ತಿದ್ದೇವೆ ಅನ್ನೋ ಪೂರ್ಣ ತಿಲುವಳಿಕೆ ಇಲ್ಲ. ತುಂಬಾ ದೊಡ್ಡ corruptಗಳು ಸಹ ಹೋರಾಟದಲ್ಲಿ ಇದ್ದಾರೆ. ಆದರೆ ಇಲ್ಲಿವರೆಗೆ ಅದಕ್ಕೂ ಬರ ಇತ್ತಲ್ಲ! ಈಗ at least ಏನೋ ಒಂದು ಶುರು ಆಗಿದೆ. ಇದನ್ನ ಯಾವ ರೀತಿ ಮುಂದೆ ತೆಗೆದುಕೊಂಡು ಹೋಗುತ್ತಾರೆ ಅನ್ನೋದು ದೇಶದ ಹಣೆಬರಹವನ್ನ ನಿರ್ಧರಿಸಲೂಬಹುದಲ್ಲವ?
¢ªÁPÀgÀgÀ ¯ÉÃR£À MªÉÄä ZÀÄgÀÄPÀÄ ªÀÄÄnÖ¸ÀÄvÀÛzÉ. AiÀiÁªÀ ZÀ¼ÀĪÀ½AiÀÄ£ÀÆß ºÀÄlÄÖ ºÁPÀzÉà ºÀÄnÖzÀ ZÀ¼ÀĪÀ½AiÀİè zÉÆÃµÀ ºÀÄqÀÄPÀĪÀÅzÉÆAzÉà C®è. CzÉà ZÀ¼ÀĪÀ½ E£ÀÆß d£À¥ÀgÀ ªÁUÀĪAvÉÃ
ªÀiÁqÀĪÀ°è £ÁªÉãÀÄ ªÀiÁqÀ¨ÉÃPÉAzÀÄ DvÀä aAvÀ£É ªÀiÁrPÉÆAqÀgÉ
M¼ÉîAiÀÄzÉÃ£ÉÆ. £ÀªÀÄä ¥ÀæeÁ¥Àæ¨sÀÄvÀé ªÀåªÀ¸ÉÜ fë¸ÀÄwÛgÀĪÀÅzÀÄ
EzÉà C£ÀPÀëgÀ¸ÀÜ CgɲQëvÀ ªÀÄvÀzÁgÀjAzÀ¯Éà C®èªÉà ??
ಖಂಡಿತವಾಗಿಯೂ ಈ ಚಳುವಳಿಯನ್ನು ಸ್ವಾಗತಿಸಬೇಕು. ಏಕೆಂದರೆ ಕಳೆದ ಎರಡು ದಶಕಗಳಲ್ಲಿ ಈ ರೀತಿಯ ಜನಾಂದೋಲನ ಸಂಭವಿಸಿರಲಿಲ್ಲ. ಆದರೆ ಈ ಇಡೀ ಹೋರಾಟದ ಹಿಂದಿನ ಸೂಕ್ಷ್ಮತೆಗಳನ್ನು ಗ್ರಹಿಸದೆ ಹೋದಲ್ಲಿ ನಾವು ಭವಿಷ್ಯದಲ್ಲಿ ಪರಿತಪಿಸಬೇಕಾಗುತ್ತದೆ. ಅಣ್ಣಾ ಹಜಾರೆ ಮೊದಲ ಹೆಜ್ಚೆ ಇಟ್ಟಿದ್ದಾರೆ. ಮುಂದುವರೆಯುವುದು ನಮ್ಮ ಕರ್ತವ್ಯ. ಸಮಸ್ಯೆ ಇರುವುದು ಇಲ್ಲಲ್ಲ. ಈ ಹೋರಾಟವನ್ನು ಬೆಂಬಲಿಸುವ, ಬೆಂಬಲಿಸದಿರುವ ಮೂಲಕ ತಮ್ಮ ಸ್ವ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಲ್ಲಿ. ಈ ಆಯಾಮವನ್ನು ವಿಶ್ಲೇಷಣೆಗೊಳಪಡಿಸದೆ ಹೋದಲ್ಲಿ ನಾವು ಭವಿಷ್ಯದ ಪೀಳಿಗೆಗೆ ಉತ್ತರ ನೀಡಬೇಕಾಗುತ್ತದೆ.ಜೆಪಿ ಚಳುವಳಿಯಿಂದ ಭಾರತದ ರಾಜಕಾರಣಕ್ಕೆ ಉಂಟಾದ ಅಪಾಯವನ್ನು ಒಮ್ಮೆ ನೆನಪಿಸಿಕೊಳ್ಳಿ.