ಅಣ್ಣಾ ಹಜಾರೆಗೊಂದು ಬಹಿರಂಗ ಪತ್ರ : ನಾ.ದಿವಾಕರ್
ಅಣ್ಣಾ ಹಜಾರೆಗೊಂದು ಬಹಿರಂಗ ಪತ್ರ
ಸನ್ಮಾನ್ಯ ಹಜಾರೆಯವರೇ ಈ ಪತ್ರ ಖುದ್ದು ನಿಮ್ಮನ್ನೇ ಉದ್ದೇಶಿಸಿ ಬರೆದದ್ದು. ನಿಮ್ಮ ಸುತ್ತಲಿನ ಕೇಜ್ರಿ-ಬೇಡಿ-ಭೂಷಣ್ ಕೂಟವನ್ನು ಉದ್ದೇಶಿಸಿದ್ದಲ್ಲ. ಟೀಂ ಅಣ್ಣಾ ಎಂದು ಕರೆಯಲ್ಪಡುವ ನೀವು ಸೃಷ್ಟಿಸಿರುವ ಒಂದು ನಾಗರಿಕ ಸಮಿತಿ ಎಂಬ ಕೂಟದಲ್ಲಿ ಇರುವ ಸದಸ್ಯರಿಗೂ ನಿಮಗೂ ಇರುವ ಮೂಲಭೂತ ವ್ಯತ್ಯಾಸವೆಂದರೆ ನೀವು ವಾಸ್ತವಗಳ ಅರಿವೇ ಇಲ್ಲದವರ೦ತೆ ವರ್ತಿಸುತ್ತಿದ್ದೀರಿ, ನಿಮ್ಮ ಕೂಟದ ಮಿತ್ರರು ವಾಸ್ತವಗಳ ಅರಿವಿದ್ದೂ ಇಲ್ಲದವರಂತೆ ವರ್ತಿಸುತ್ತಾರೆ. ಹಾಗಾಗಿ ನಿಮಗಾಗಿಯೇ ಈ ಪತ್ರ.
ಜನಲೋಕಪಾಲ್ ಮಸೂದೆ ನಿಮ್ಮ ಕನಸಿನ ಕೂಸು. ನಿಮ್ಮ ತತ್ವ ಆದರ್ಶಗಳಿಗೆ ಅನುಸಾರವಾಗಿ ಒಂದು ಸ್ವಾಸ್ಥ್ಯ ಸಮಾಜವನ್ನು ನಿಮರ್ಿಸಲು, ಒಂದು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು, ಸ್ವತಂತ್ರ ಭಾರತದ ನೈಜ ಆಶಯಗಳನ್ನು ಸಾಕಾರಗೊಳಿಸಲು, ದೇಶದ ಜನತೆಗೆ ಉತ್ತಮ ಬಾಳ್ವೆಗೆ ಪೂರಕವಾದ ವಾತಾವರಣ ನಿಮರ್ಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ನಿಮ್ಮ ಜನಲೋಕಪಾಲ್ ಮಸೂದೆ ಈ ನಿಟ್ಟಿನಲ್ಲಿ ಒಂದು ಪ್ರಯತ್ನವಷ್ಟೇ. ಈ ಪ್ರಯತ್ನದಲ್ಲಿ ನೀವು ಈಗಾಗಲೇ ಮೂರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದೀರಿ. ನಿಮ್ಮ ನಿರಶನದ ಸಾಫಲ್ಯ ವೈಫಲ್ಯಗಳೇನೇ ಇರಲಿ, ಅದರ ಸಾರ್ಥಕತೆ ಏನೇ ಇರಲಿ, ಈ ದೇಶದ ಆಳುವ ವರ್ಗಗಳು ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಡ್ಡುತ್ತಿರುವ ತಡೆಗೋಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ ? ಇಲ್ಲಿ ಸಂವಿಧಾನ ಶ್ರೇಷ್ಠವೋ, ಸಂವಿಧಾನ ಬದ್ಧ ಸಂಸತ್ತು ಶ್ರೇಷ್ಠವೋ ಅಥವಾ ಈ ಎರಡೂ ಪ್ರತಿನಿಧಿಸುವ ದೇಶದ ಸಾರ್ವಭೌಮ ಪ್ರಜೆಗಳು ಶ್ರೇಷ್ಠವೋ ಎಂಬ ಪ್ರಶ್ನೆ ಅಪ್ರಸ್ತುತ. ಏಕೆಂದರೆ ಶ್ರೇಷ್ಠತೆಯ ಪ್ರಶ್ನೆ ಉದ್ಭವಿಸಿದಾಗ ಅಹಂಭಾವ ತಂತಾನೇ ಸೃಷ್ಟಿಯಾಗುತ್ತದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯೇ ಸ್ಪಷ್ಟ ನಿದರ್ಶನ.
ನಿಮ್ಮ ಆಶಯದಂತೆಯೇ 42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಒಂದು ಮಸೂದೆಗೆ ಮರುಜೀವ ಬಂದಿದ್ದು ನಿಮ್ಮ ಹೋರಾಟದ ಪ್ರತಿಫಲ. ಇದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದು ಅಂಶವನ್ನೂ ಗಮನಿಸಿ. 2011ರಲ್ಲಿ ಭಾರತ ತನ್ನ ಭ್ರಷ್ಟತೆಯ ವಿರಾಟ್ ಸ್ವರೂಪವನ್ನು ಅನಾವರಣಗೊಳಿಸಿದೆ. ವಿಶ್ವದ ಇತರ ರಾಷ್ಟ್ರಗಳಲ್ಲೂ ಇದು ಬೇರೊಂದು ಸ್ವರೂಪದಲ್ಲಿ ವ್ಯಕ್ತವಾಗಿದೆ. ದಶಕಗಳ ಕಾಲ ಸರ್ವಾಧಿಕಾರದ ನೆರಳಲ್ಲೇ ಬದುಕಿದ ಜನಸಾಮಾನ್ಯರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಟ್ಯುನಿಷಿಯಾದಂತಹ ಪುಟ್ಟ ರಾಷ್ಟ್ರದಲ್ಲಿ ನಡೆದ ಕ್ರಾಂತಿಕಾರಿ ಚಳುವಳಿ ಇಡೀ ವಿಶ್ವದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಮಟ್ಟಿಗೆ ಪ್ರಭಾವ ಬೀರಿದೆ. ಇಸ್ಲಾಂ ಎಂದರೆ ಭಯೋತ್ಪಾದನೆ, ಮುಸ್ಲಿಂ ಎಂದರೆ ಭಯೋತ್ಪಾದಕ ಎಂದು ಚಿತ್ರಿಸುತ್ತಿದ್ದ ಪ್ರಪಂಚದ ಕೆಲವು ಬುದ್ಧಿ(?)ಜೀವಿಗಳಿಗೆ ಈಜಿಪ್ಟ್, ಯೆಮನ್, ಜೋಡರ್ಾನ್, ಟ್ಯುನಿಷಿಯ, ಟರ್ಕಿ ಮುಂತಾದ ರಾಷ್ಟ್ರಗಳ ಬೆಳವಣಿಗೆಗಳು ಕಣ್ಣು ತೆರೆಸಿರುವುದೇ ಅಲ್ಲದೆ, ಸಮಕಾಲೀನ ಸಮಾಜದಲ್ಲಿ ಮುಸ್ಲಿಮರಾಗಲಿ, ಹಿಂದೂಗಳಾಗಲಿ, ಕ್ರೈಸ್ತರಾಗಲಿ ಎದುರಿಸುತ್ತಿರುವ ಸಮಸ್ಯೆ ನವ ಉದಾರವಾದವೊಂದೇ ಎಂಬ ಸತ್ಯವನ್ನು ಈ ಹಲವು ಹೋರಾಟಗಳು ನಿರೂಪಿಸಿವೆ.
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದನ್ನು ಹೊರತುಪಡಿಸಿದರೆ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಓರ್ವ ಗಾಂಧಿವಾದಿಯಾಗಿ ನೀವು ಇದನ್ನು ಗಮನಿಸಿರಲೇಬೇಕು. ನಿಮ್ಮ ತವರೂರಿನ ಸುತ್ತಲೂ ತರಗೆಲೆಗಳಂತೆ ಉದುರುತ್ತಿರುವ ರೈತ ಜೀವಗಳು ನಿಮಗೆ ನವ ಉದಾರವಾದದ ಪ್ರತ್ಯಕ್ಷ ದರ್ಶನ ಮಾಡಿಸಿರಬೇಕು. ನವ ಉದಾರವಾದ ಪೋಷಿಸುವ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳು ಈ ದೇಶದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುತ್ತಿವೆ, ತಮ್ಮ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಗಾಗಿ ಈ ದೇಶದ ಕಾನೂನುಗಳನ್ನು ಹೇಗೆ ಬಳಸಿಕೊಳ್ಳುತ್ತಿವೆ ಎಂದು ನಿಮಗೆ ಹೇಳಬೇಕಿಲ್ಲ. ಮೆಕಾಲೆ ಶಿಕ್ಷಣ ನೀತಿಯನ್ನು ವಸಾಹತುಶಾಹಿಯ ಕೂಸು ಎಂದು ಹೀಗಳೆಯುವ ಭಾರತದ ಒಂದು ವರ್ಗ 1894ರ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಾಲದ ಭೂಸ್ವಾಧೀನ ಕಾಯ್ದೆಯನ್ನು ಯಥಾವತ್ತಾಗಿ ಸ್ವೀಕರಿಸುವುದನ್ನು ಗಮನಿಸಿದಾಗ ನಮ್ಮ ಆಳುವ ವರ್ಗಗಳ ಲಕ್ಷಣಗಳು ನಿಮಗೆ ಅರಿವಾಗುವುದಿಲ್ಲವೇ ?
ನೀವು ಹೇಳುವುದು ಸತ್ಯ. ಇಡೀ ರಾಜಕೀಯ ವ್ಯವಸ್ಥೆ ಭ್ರಷ್ಟವಾಗಿದೆ. ಆದರೆ ಇದು ಇಂದಿನ ವಿದ್ಯಮಾನವಲ್ಲ. ಭ್ರಷ್ಟಾಚಾರ ಸ್ವಾತಂತ್ರ್ಯಪೂರ್ವದಿಂದಲೂ ಇರುವ ಒಂದು ವೃತ್ತಿಪರ ಪ್ರವೃತ್ತಿ. ಇಂದು ನಾವು ಅಥವಾ ನೀವು ಕಾಣುತ್ತಿರುವ ಭ್ರಷ್ಟಾಚಾರದ ಒಂದು ವಿರಾಟ್ ಸ್ವರೂಪ ಈ ವಿದ್ಯಮಾನದ ವಿಸ್ತೃತ ರೂಪ ಎಂಬ ಸಂಗತಿಯನ್ನು ನೀವು ಗ್ರಹಿಸಿರಲೇಬೇಕು. ಈ ವಿಸ್ತೃತ ಸ್ವರೂಪಕ್ಕೆ ಮೂಲ ಕಾರಣ ಏನಿರಬಹುದು ಎಂದು ಒಮ್ಮೆ ಯೋಚಿಸಿ ನೋಡಿ, ಆಗ ನಿಮ್ಮ ಗಮನ ತಂತಾನೇ ಇತ್ತೀಚಿನ ಅರಬ್ ಕ್ರಾಂತಿಯತ್ತ ಚಲಿಸುತ್ತದೆ. ಇಡೀ ಜಗತ್ತನ್ನೇ ಪುಟ್ಟ ಗ್ರಾಮವನ್ನಾಗಿ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಸಾರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ನವ ಉದಾರವಾದ ಮತ್ತು ತತ್ಸಂಬಂಧಿ ತ್ರಿಕರಣಗಳು, ಜಾಗತೀಕರಣ-ಉದಾರೀಕರಣ-ಖಾಸಗೀಕರಣ, ಎಲ್ಲ ದೇಶಗಳ ಆಳುವ ವರ್ಗಗಳನ್ನು ಹಣಕಾಸು ಬಂಡವಾಳದ ಗುಲಾಮರನ್ನಾಗಿ ಮಾಡಿರುವುದೇ ಅಲ್ಲದೆ, ನೈಸಗರ್ಿಕ ಸಂಪನ್ಮೂಲಗಳು ಇರುವುದೇ ಬಂಡವಾಳದ ಕ್ರೋಢೀಕರಣಕ್ಕಾಗಿ ಎಂಬ ಭ್ರಮೆಯನ್ನೂ ಸೃಷ್ಟಿಸಿದೆ. ಈ ಭ್ರಮಾಲೋಕದಲ್ಲಿ ವಿಹರಿಸುವ ಅರ್ಥಶಾಸ್ತ್ರಜ್ಞರು ತಮ್ಮ ಅಧ್ಯಯನ, ಸಂಶೋಧನೆ, ಸಮೀಕ್ಷೆಗಳ ಮೂಲಕ ಜಗತ್ತಿನ ಮಾನವ ಸಂಪನ್ಮೂಲಗಳನ್ನೂ ಸಹ ಒಂದು ಉತ್ಪಾದಕೀಯ ಸಾಧನವೆಂದೇ ಪರಿಗಣಿಸಿ, ಹಣಕಾಸು ಬಂಡವಾಳದ ಮಾಲಿಕರಿಗೆ ಒಪ್ಪಿಸುತ್ತಿದ್ದಾರೆ.
ಅರಬ್ ರಾಷ್ಟ್ರಗಳಲ್ಲಿ ತೈಲ ದೊರೆಗಳು, ಆಫ್ರಿಕಾದಲ್ಲಿ ಗಣಿ ದೊರೆಗಳು, ಐರೋಪ್ಯ ರಾಷ್ಟ್ರಗಳಲ್ಲಿ ಔದ್ಯಮಿಕ ದೊರೆಗಳು ರಾಜಕೀಯ ಅಧಿಕಾರದ ಮೇಲೆ ತಮ್ಮದೇ ಆದ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗುತ್ತಾರೆ. ಈ ದೊರೆಗಳ ರಕ್ಷಣೆಗೆ ಟೊಂಕಕಟ್ಟಿ ನಿಂತ ಸಾಮ್ರಾಜ್ಯಶಾಹಿಗಳಿಗೆ ತಮ್ಮ ಶಸ್ತ್ರಾಸ್ತ್ರ ರಾಜಕಾರಣವನ್ನು ವಿಸ್ತರಿಸುವ ಮಹತ್ತರ ಯೋಜನೆಯಾಗಿ ನವ ಉದಾರವಾದ ನೆರವಾಗುತ್ತದೆ. ಹಾಗಾಗಿಯೇ ಈ ಸಾಮ್ರಾಜ್ಯಶಾಹಿಗಳನ್ನು ಧಿಕ್ಕರಿಸುವ ಸ್ವಾವಲಂಬಿಗಳು ಜಾಗತಿಕ ಆಳ್ವಿಕರ ದೃಷ್ಟಿಯಲ್ಲಿ ಭಯೋತ್ಪಾದಕರಾಗಿಬಿಡುತ್ತಾರೆ. ಈ ಸಾಮ್ರಾಜ್ಯಶಾಹಿ ವ್ಯವಸ್ಥೆಯ ರಕ್ಷಕರಾಗಿ ವಿಶ್ವದ ಇತರ ದೇಶಗಳಲ್ಲಿ ಆಳುವ ವರ್ಗಗಳನ್ನು ನಿಯಂತ್ರಿಸುವ ಕಾರ್ಪೋರೇಟ್ ಔದ್ಯಮಿಕ ಶಕ್ತಿಗಳು ಇಡೀ ಆಡಳಿತ ವ್ಯವಸ್ಥೆಯನ್ನೇ ತಮ್ಮ ಪ್ರಭಾವಕ್ಕೊಳಪಡಿಸುವ ಮೂಲಕ, ಪರೋಕ್ಷವಾಗಿ ಅಧಿಕಾರ ರಾಜಕಾರಣದ ಸೂತ್ರಧಾರನ ಪಾತ್ರ ವಹಿಸುತ್ತವೆ. ಭಾರತ ಕಳೆದ ಎರಡು ದಶಕಗಳಲ್ಲಿ ಕಂಡಿರುವ ಭ್ರಷ್ಟಾಚಾರದ ಹಗರಣದ ಮೂಲ ಇಲ್ಲಿಯೇ ಇರುವುದನ್ನು ತಾವು ಗಮನಿಸಿರಲೇ ಬೇಕು. ಇಲ್ಲವಾದಲ್ಲಿ ಇನ್ನಾದರೂ ಗಮನಿಸಿ.
ನಿಮ್ಮ ತಂಡದ ಆಗ್ರಹಗಳಿಗೆ ಮಣಿದು ಸಂಸತ್ತಿನಲ್ಲಿ ಮಂಡಿಸಲಾಗಿರುವ ಲೋಕಪಾಲ್ ಎಂಬ ಒಂದು ಭ್ರಷ್ಟಾಚಾರ ನಿಯಂತ್ರಣಾ ಮಸೂದೆ ಈ ದೇಶದ ಆಳುವ ವರ್ಗಗಳಿಗೂ ಒಂದು ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುವ ಕಟು ಸತ್ಯ ನಿಮ್ಮ ಗಣನೆಗೆ ಬಂದಿರುವುದೋ ಇಲ್ಲವೋ ಆದರೆ ಆಳುವ ವರ್ಗಗಳು ತಮ್ಮದೇ ಆದ ರೀತಿಯಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಲೋಕಪಾಲ್ ಮಸೂದೆಯ ಬಗ್ಗೆ ಚಚರ್ೆಯಾಗುತ್ತಿರುವ ಸಂದರ್ಭದಲ್ಲೇ ತಾವು ತಮ್ಮ ಉಪವಾಸ ನಿರಶನ ಆರಂಭಿಸಿ, ಜನಬೆಂಬಲ ದೊರೆಯದೆ ಹಿಮ್ಮೆಟ್ಟಿರುವುದು ಆಳುವ ವರ್ಗಗಳಿಗೆ ಅನುಕೂಲಕರವೇ ಆಗಿದೆ. ತಮ್ಮ ಅನಾರೋಗ್ಯವೇ ಕಾರಣವಾಗಿದ್ದರೂ ತಮ್ಮನ್ನು ಹೊರತು ಪಡಿಸಿ ಟೀಂ ಅಣ್ಣಾ ಹೋರಾಟವನ್ನು ಮುಂದುವರೆಸಬಹುದಿತ್ತು. ಆದರೆ ನಿಮ್ಮ ಸುತ್ತಲಿನ ಕೂಟದ ಅಪ್ರಬುದ್ಧ ಗ್ರಹೀತಗಳ ಪರಿಣಾಮವಾಗಿ ತಾವು ಒಂದು ಸಾರ್ವತ್ರಿಕ ಹೋರಾಟವನ್ನು ಚುನಾವಣಾ ರಾಜಕಾರಣದ ಅಂಗಳಕ್ಕೆ ತಂದು ನಿಲ್ಲಿಸಿದ್ದೀರಿ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವ ನಿಮ್ಮ ನಿರ್ಧಾರ ಎಷ್ಟು ಸಮಂಜಸ ಎಂದು ತಾವೇ ಹೇಳಬೇಕು.
ಇರಲಿ, ನಿಮ್ಮ ಹೋರಾಟ ಎಷ್ಟೇ ಪ್ರಖರವಾಗಿದ್ದರೂ ಜನಾಂದೋಲನಗಳನ್ನು ಹಿಮ್ಮೆಟ್ಟಿಸುವ ನಾನಾ ರೀತಿಯ ತಂತ್ರಗಳನ್ನು ಕರಗತ ಮಾಡಿಕೊಂಡಿರುವ ಆಳುವ ವರ್ಗಗಳು ಈಗ ತಮ್ಮ ಚಾಣಾಕ್ಷತೆಯನ್ನು ಪ್ರದರ್ಶಿಸಲಾರಂಭಿಸಿವೆ. ಒಬ್ಬ ರೋಗಿಯ ರೋಗ ನಿವಾರಣೆಗೆ ಒಂದು ನಿರ್ದಿಷ್ಟವಾದ ಚಿಕಿತ್ಸೆ ನೀಡಿದರೆ ಶೀಘ್ರ ಗುಣಮುಖನಾಗುತ್ತಾನೆ. ಆದರೆ ದೇಹದ ಎಲ್ಲ ಅಂಗಾಂಗಗಳನ್ನೂ ಪರಿಶೀಲಿಸಿ ಎಲ್ಲ ಅಂಗಗಳಿಗೂ ಒಂದು ರೀತಿಯ ಚಿಕಿತ್ಸೆ ನೀಡಲಾರಂಭಿಸಿದರೆ ಆ ದೇಹ ತಡೆದೀತೇ ? ಶೀಘ್ರ ಜವರಾಯನ ಪಾದ ಸೇರುತ್ತದೆ. ಈ ದೃಷ್ಟಾಂತ್ಯವನ್ನು ಹೇಳುವ ಕಾರಣ, ಲೋಕಪಾಲ್ ಮಸೂದೆಗೆ ಬಿಜೆಪಿ ಸೂಚಿಸಿರುವ 187 ತಿದ್ದುಪಡಿಗಳು ಮತ್ತು ಇತರ ಪಕ್ಷಗಳ ಮೀಸಲಾತಿ ರಾಜಕಾರಣ. ಒಮ್ಮೆ ಮಹಿಳಾ ಮೀಸಲಾತಿಯನ್ನು ನೆನಪಿಸಿಕೊಳ್ಳಿ. ಲೋಕಪಾಲ್ ಮಸೂದೆಯನ್ನೂ ಮಹಿಳಾ ಮೀಸಲಾತಿ ಮಸೂದೆಯಂತೆಯೇ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಶಾಶ್ವತವಾಗಿ ಇರಿಸಿ, ಪ್ರತಿಯೊಂದು ಅಧಿವೇಶನದಲ್ಲೂ ಚಿಕಿತ್ಸೆ ನೀಡುವ ಮೂಲಕ ಆಳುವ ವರ್ಗಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸರ್ವ ಪ್ರಯತ್ನ ನಡೆಸಿವೆ.
ಈ ಪ್ರಯತ್ನಗಳ ವಿರುದ್ಧ ಜನಾಂದೋಲನ ರೂಪಿಸಬೇಕಾದಲ್ಲಿ ನಿಮ್ಮ ಉಪವಾಸ ನಿರಶನಗಳ ಸರಣಿಗೆ ತಿಲಾಂಜಲಿ ಹಾಡಬೇಕು. ಅರಬ್ ರಾಷ್ಟ್ರಗಳ ವಿದ್ಯಮಾನಗಳು ಭಾರತದಲ್ಲಿ ಸಂಭವಿಸದಂತೆ ತಡೆಗಟ್ಟಲು ಕೇವಲ ಭಾರತದ ಆಳ್ವಿಕರು ಮಾತ್ರವಲ್ಲ, ಸಾಮ್ರಾಜ್ಯಶಾಹಿಗಳೂ ಸನ್ನದ್ಧರಾಗುತ್ತಿದ್ದಾರೆ. ತಮ್ಮ ಜೀವನಾಧಾರದ ರಕ್ಷಣೆಗಾಗಿ ಹೋರಾಡುವ ಜನಸಾಮಾನ್ಯರ ನಾಡಿ ಮಿಡಿತವನ್ನು ಕಿಂಚಿತ್ತೂ ಅರಿಯಲಾರದ ಈ ದೇಶದ ಆಳುವ ವರ್ಗಗಳು ಸಾರ್ವಭೌಮ ಪ್ರಜೆಗಳ ಹೋರಾಟದ ಕಿಚ್ಚನ್ನು ಅಡಗಿಸಲು ತಮ್ಮೆಲ್ಲಾ ಪ್ರಾಬಲ್ಯ, ಸಾಮಥ್ರ್ಯ ಮತ್ತು ಪ್ರಾತಿನಿಧಿಕ ಅಧಿಕಾರಗಳನ್ನೂ ಉಪಯೋಗಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಟೀಂ ಅಣ್ಣಾ ರೂಪಿಸುವ ಹೋರಾಟದ ಮಾರ್ಗಗಳು ಆಳುವ ವರ್ಗಗಳಿಗೆ ಅಪ್ಯಾಯಮಾನವಾಗಿರುತ್ತವೆ ಎಂಬ ಕಟು ಸತ್ಯವನ್ನು ನೀವು ಗ್ರಹಿಸಲೇ ಬೇಕು. ಪ್ರಸಕ್ತ ಸನ್ನಿವೇಶದಲ್ಲಿ ನವ ಉದಾರವಾದದ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಂದ ಪ್ರೇರಿತವಾಗಿರುವ ಭ್ರಷ್ಟ ವ್ಯವಸ್ಥೆಯನ್ನು ಎದುರಿಸಲು ಹೋರಾಟದ ರೂಪು ರೇಷೆಗಳು ಬದಲಾಗಬೇಕಿದೆ.
ಹೋರಾಟ ಹಿಂಸಾತ್ಮಕವೇ ಆಗಬೇಕೆಂದಿಲ್ಲ. ಪ್ರಭುತ್ವದ ಪರಮಾಧಿಕಾರವನ್ನು ಪ್ರತಿರೋಧಿಸುತ್ತಲೇ ಪ್ರಜೆಗಳ ಸಾರ್ವಭೌಮತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಜನತೆಯನ್ನು ಪ್ರಚೋದಿಸಬೇಕಾದರೆ, ಟೀಂ ಅಣ್ಣಾ ತನ್ನ ಪೊರೆಯನ್ನು ಕಳಚಿಕೊಂಡು ಹೊಸ ರೂಪ ಪಡೆಯಬೇಕಾಗುತ್ತದೆ. ಈ ಸತ್ಯವನ್ನು ನೀವು ಅರಿಯದೆ ಹೋದಲ್ಲಿ ಈ ದೇಶದ ಆಳ್ವಿಕರ ರಾಜಕೀಯ ಪ್ರಾಬಲ್ಯ ಮತ್ತು ನವ ಉದಾರವಾದದ ಬಂಡವಾಳದ ಸಾಮಥ್ರ್ಯ ಎಲ್ಲ ಜನಾಂದೋಲನಗಳನ್ನೂ ನುಂಗಿಹಾಕುತ್ತದೆ. ಈ ಪ್ರಬಲ ರಾಕ್ಷಸೀ ಶಕ್ತಿಗಳಿಂದ ಭಾರತವನ್ನು ರಕ್ಷಿಸಲು ಒಂದು ವ್ಯಾಪಕ, ಸಮಗ್ರ, ಸರ್ವವ್ಯಾಪಿ ಹೋರಾಟದ ಅಗತ್ಯತೆ ಇದೆ. ಈ ಹೋರಾಟಕ್ಕೆ ಪ್ರಜಾರಾಜಕೀಯ ಸ್ವರೂಪದ ಅವಶ್ಯಕತೆಯೂ ಇದೆ ಎಂಬುದನ್ನು ನೀವು ಒಪ್ಪಬೇಕಾಗುತ್ತದೆ. ಈ ದೇಶದ ಪ್ರಭುತ್ವ ಮತ್ತು ಪ್ರಭುತ್ವವನ್ನು ಪ್ರತಿನಿಧಿಸುವ ಆಳ್ವಿಕರ ಆಂತರ್ಯವನ್ನು ಗ್ರಹಿಸಿ ನಿಮ್ಮ ಮುಂದಿನ ಹೆಜ್ಜೆ ಇರಿಸಲು ಸವಿನಯ ಪ್ರಾರ್ಥನೆ.
ನಾ ದಿವಾಕರ
]]>

ನಿಮಗೆ ಇವೂ ಇಷ್ಟವಾಗಬಹುದು…

ಲೇಖನ ಸಕಾಲಿಕ. ಚಿಂತನಯೋಗ್ಯ. ಆದರೆ,’ನಿಮ್ಮ ತಂಡದ ಆಗ್ರಹಗಳಿಗೆ ಮಣಿದು ಸಂಸತ್ತಿನಲ್ಲಿ ಮಂಡಿಸಲಾಗಿರುವ ಲೋಕಪಾಲ್ ಎಂಬ ಒಂದು ಭ್ರಷ್ಟಾಚಾರ ನಿಯಂತ್ರಣಾ ಮಸೂದೆ… ‘ಎಂಬುದು ತಪ್ಪು ಗ್ರಹಿಕೆ. ಅಣ್ಣಾ ಹಜಾರೆಯವರ ಆಗ್ರಹಗಳ ಮೂಲ ಆಶಯಗಳನ್ನು ವಿಫಲಗೊಳಿಸಲೆಂದು ಮಂಡಿಸಲಾದ ಲೋಕಪಾಲ್ ಎಂದರೆ ಸರಿಯಾಗಬಹುದು. ಭ್ರಷ್ಟಾಚಾರ ಮುಖೇನ ವ್ಯವಸ್ಥೆಯ ವಿಷಮತೆಗಳನ್ನು ಬಯಲಿಗೆಳೆದು ಹೋರಾಡಲು ಅಣ್ಣಾ ಹಜಾರೆಯವರ ಹೋರಾಟವನ್ನು ತಮ್ಮದಾಗಿಸಿಕೊಳ್ಳುವ ಜವಾಬ್ದಾರಿ ಎಲ್ಲಾ ಹೋರಾಟಗಾರರ ಹೆಗಲ ಮೇಲಿದೆ. ಅಣ್ಣಾ, ಒಂದು ಪ್ರಾರಂಭ,(ಎಲ್ಲಿಂದಲಾದರೂ ಪ್ರಾರಂಭಿಸಬೇಕಲ್ಲವೆ?)ಬಂಡವಾಳದ ಕೋಟೆಯಲ್ಲಿನ ಒಂದು ಛಿದ್ರಕಾರಕ ಕಿಂಡಿ. ಜನರ ಅತೃಪ್ತಿಯ ಕುದಿ. ಹೀಗೆ ಗ್ರಹಿಸದೆ ಅಣ್ಣಾ ಗುಂಪಿನ ಮಿತಿಗಳನ್ನು ಎಣಿಸುತ್ತಾ ಕೂತರೆ ಸಮುದಾಯವನ್ನು ಸಂಘಟಿಸಲೆಂದೇ ಕಾಯುತ್ತಾ ಕೂತ ಎಲ್ಲಾ ಸಂಘಟನೆಗಳು ಅದರಲ್ಲೂ ಕಮ್ಯೂನಿಸ್ಟ್ ಪಕ್ಷಗಳು ಚಾರಿತ್ರಿಕವಾಗಿ ಒದಗಿ ಬಂದಿರುವ ಅವಕಾಶವನ್ನು ಕುರುಡಾಗಿ ತಿರಸ್ಕರಿಸಿದಂತೇ ಆಗುತ್ತದೆ.ಆಳುವವರ್ಗಗಳಿಗೆ ಬೇಕಾದ್ದೂ ಇದೇ ಅಲ್ಲವೆ? ಪ್ರತಿಯೊಂದು ಅನಾಹುತವನ್ನೂ, ಅದು ನೈಸರ್ಗಿಕವಾದದ್ದಿರಲಿ, ಬಂಡವಾಳ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿರಲಿ,ತನ್ನನ್ನು ವಿಸ್ತರಿಸಿಕೊಳ್ಳಲು ಸಿಕ್ಕಿದ ಅವಕಾಶವೆಂದು ಸಾಮ್ರಾಜ್ಯಶಾಹಿಯು ಪರಿಗಣಿಸುವಂತೆ, ಯಾವುದೇ ಹೋರಾಟವನ್ನು, ಅದು ಎಷ್ಟೇ ಕುರುಡಾಗಿದ್ದರೂ ಜನಪರಹೋರಾಟದ ವಿವಿಧ ಅವಕಾಶಗಳೆಂದು ಪರಿಗಣಿಸುವ inclusive ದೃಷ್ಟಿ, ಕಮ್ಯೂನಿಸ್ಟ್ ಧುರೀಣರಿಗೆ, ಎಡಪಂಥೀಯ ಬುದ್ಧಿಜೀವಿಗಳಿಗೆ ಬಂದರೆ ಒಳ್ಳೆಯದಲ್ಲವೆ? ಬಾಣದ ಎಲ್ಲಾ ಭಾಗವೂ ಚೂಪಾಗಿರುವುದು ಸಾಧ್ಯವಿಲ್ಲ.ಕತ್ತಿಗೆ ಎಲ್ಲಾಕಡೆಯೂ ಅಲಗಿರುವುದು ಅಸಾಧ್ಯ ಆಯುಧ ಮೊಂಡಾಗಿದೆ ಎಂದು ದೂರುವುದಕ್ಕಿಂತ ಅದರ ಚೂಪು, ಹರಿತ ಯಾರಾಗಬೇಕು ಎಂಬುದು ಮುಖ್ಯ. ಸಂಸತ್ತಿಗೂ, ಸಂವಿಧಾನಕ್ಕೂ ಆಧಾರ, ಲಕ್ಷ್ಯ ೆರಡೂ ಆಗಿರುವ ಜನತೆಯ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದು ಅಹಂತೆಯ ಪ್ರಶ್ನೆಯಲ್ಲ. ಸಂಸತ್ತಿನಲ್ಲಿ ಕುಳಿತು ಸಂಸತ್ತಿನ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಅಣ್ಣಾ ಹಜಾರೆ ಮುಖೇನ ಕಾಣಿಸಿಕೊಂಡಿರುವ ಆಗ್ರಹಗಳ ಆಶಯಗಳಿಗೆ ಕುರುಡಾಗುವುದು ಪರಿಣಾಮದಲ್ಲಿ ವ್ಯವಸ್ಥೆಯನ್ನು ಬೆಂಬಲಿಸುವ ದೃಷ್ಟಿಯೇ ಆಗುತ್ತದೆ.
ಎಲ್ಲಾ ಹೋರಾಟಗಳೂ ಅಹಿಂಸಾತ್ಮಕವಾಗೇ ಪ್ರಾರಂಭವಾಗುತ್ತವೆ. ವಾಲ್ ಸ್ಟ್ರೀಟ್ ಮುತ್ತಿಗೆ ಇತ್ತೀಚಿನ ಉದಾಹರಣೆ.ಹೋರಾಟಗಳನ್ನು ಅಡಗಿಸಲು ಆಡಳಿತ ವರ್ಗ ಬಳಸುವ ದಮನಕಾರೀ ಕ್ರಮಗಳಿಂದಾಗಿ ಹಿಂಸೆ ತಲೆದೋರುತ್ತದೆ. ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಆಳುವ ವರ್ಗ ಎಷ್ಟು ಜೀವಗಳನ್ನು ಬೇಕಾದರೂ ಬಲಿಕೊಡಲು ಸಿದ್ಧವಾಗೇ ಇರುತ್ತದೆ.ಇದರಲ್ಲಿ ಜನ-ಪೋಲೀಸರು-ಸೈನ್ಯ ಎಂಬ ತಾರತಮ್ಯವಿಲ್ಲ.ಸಾಮಾನ್ಯ ನ್ಯಾಯಕ್ಕಾಗಿ ಬೀದಿಗೆ ಬರುವ ಜನ ಎಷ್ಟು ಸಂಖ್ಯೆಯಲ್ಲಿ ಸತ್ತರೂ ಹಿಂಸೆ ಎನಿಸಿಕೊಳ್ಳುವುದಿಲ್ಲ.ಜನರನ್ನು ರಕ್ಷಿಸಬೇಕಾದ ಪೋಲೀಸರು ಆಳುವ ಜನರಿಗಾಗಿ ಒಬ್ಬ ಸತ್ತರೂ ಹಿಂಸೆ ಎನಿಸಿಕೊಳ್ಳುತ್ತದೆ.ಹೋರಾಟ ಹಿಂಸಾತ್ಮಕವಾಗಿದೆ ಎಂದು ಪತ್ರಿಕೆಗಳು ಬರೆಯುತ್ತವೆ.
ನಿಮ್ಮ ಮಾತು ನಿಜ ಎಡಪಂಥೀಯರು,ಸಂಸದೀಯ ಮತ್ತು ಸಾರ್ವಜನಿಕ ವಲಯದ ಬುದ್ಧಿಜೀವಿಗಳು ಅಣ್ಣಾ ಹಜಾರೆ ಆಂದೋಲನವನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನ ಮಾಡಿಲ್ಲ. ಕಾರಣ ಸ್ಪಷ್ಟ. ಭಾರತದ ಸಂವಿಧಾನದಡಿ ತಮ್ಮ ರಾಜಕಾರಣವನ್ನೂ ನಡೆಸುವ ಸಂಸದೀಯ ಎಡ ಪಕ್ಷಗಳಿಗೂ ಸಹ ಭ್ರಷ್ಟಾಚಾರದ ವ್ಯಾಖ್ಯಾನದ ಬಗ್ಗೆ ಸ್ಪಷ್ಟ ತಿಳುವಳಿಕೆ ಇದ್ದಂತಿಲ್ಲ. ಸಂವಿಧಾನ, ಸಂಸತ್ತು ಹೀಗೆ ಭಾವಾವೇಶದ ಮಾತುಗಳಲ್ಲೇ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ ಎಂಬ ಸತ್ಯವನ್ನು ಎಡ ಪಕ್ಷಗಳು ಇನ್ನೂ ಗ್ರಹಿಸಿಲ್ಲವೆನಿಸುತ್ತದೆ. ಹೋರಾಟ ರೂಪಿಸುವುದು ಬೇರೆ ಅದನ್ನು ಮುನ್ನಡೆಸುವುದು ಬೇರೆ, ಆ ಹೋರಾಟಕ್ಕೆ ಒಂದು ಸ್ಪಷ್ಟ ಆಯಾಮ ನೀಡುವುದು ಬೇರೆ.ಈ ನಿಟ್ಟಿನಲ್ಲಿ ನೋಡಿದಾಗ ಹಜಾರೆಯವರ ವೈಫಲ್ಯ ಎದ್ದು ಕಾಣುವುದಾದರೂ, ಇತರ ಸಂಘಟನೆಗಳ ವೈಫಲ್ಯವೂ ಅಷ್ಟೇ ಪ್ರಮಾಣದಲ್ಲಿ ಕಾಣುತ್ತದೆ. ಹೋರಾಟದಲ್ಲಿ ಹಿಂಸೆ-ಅಹಿಂಸೆಯ ಪರಿಕಲ್ಪನೆಗಳಿಗಿಂತಲೂ ಹೋರಾಟದ ಧ್ಯೇಯ, ಮಾರ್ಗ ಮತ್ತು ಉದ್ದೇಶಗಳು ಇಲ್ಲಿ ಮಹತ್ವ ಪಡೆಯುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ನಾ ದಿವಾಕರ
Sir, patradalli suggestions bareyodu biitu enu maadokkaagolla nimage.
You have chosen a ‘soft target’ – Anna Hazare.
Just think for a while , would you write such an ‘objective’ article (like you mentioned Anna Hazare) on the land loosers for NICE road project targeting Mr Kheni or Mr Janardhana Reddy for all the illegal mining or Yedyurappa / Kumaraswamy for the political havoc they create in Karnataka ? Iam sure you will not be so objective, because it needs something more than just writing.
ಉತ್ತಮವಾದ ಸಕಾಲಿಕ ಲೇಖನ. ಅಣ್ಣಾ ಹಜಾರೆಯವರು ಕಾಂಗ್ರೆಸ್ಸಿನ ವಿರುದ್ಧ ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡುವುದರಿಂದ ಏನು ಪ್ರಯೋಜನ ಎಂದು ಗೊತ್ತಾಗುವುದಿಲ್ಲ. ಇದೊಂದು ಬಾಲಿಶ ನಡೆಯಂತೆ ಕಾಣುತ್ತದೆ.ಈಗ ಲೋಕಪಾಲ ಮಸೂದೆ ಅಣ್ಣಾ ತಂಡದ ಕರಡಿನಂತೆ ರೂಪುಗೊಳ್ಳುವುದು ಬೇರೆ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಇದು ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಾಗ ಗೊತ್ತಾಗಲಿರುವುದು ಖಚಿತ. ಹೀಗಿರುವಾಗ ಒಂದು ಪಕ್ಷದ ವಿರುದ್ಧ ಮಾತ್ರ ಪ್ರಚಾರ ಮಾಡುವುದು ಒಂದು ರೀತಿಯ ಸೇಡಿನ ವರ್ತನೆಯಂತೆ ಕಾಣುತ್ತದೆ. ಇಂಥ ಸೇಡಿನ ವರ್ತನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದರಿಂದ ಚಳುವಳಿ ರಾಜಕೀಯಕರಣಗೊಂಡಂತೆ ಆಗಿ ಜನ ಬೆಂಬಲ ನಿಧಾನವಾಗಿ ಕಡಿಮೆಯಾಗಲಿರುವುದು ಖಚಿತ. ಅಂತಿಮವಾಗಿ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಬಯಸುತ್ತಿರುವಂತೆ ಚಳುವಳಿ ವಿಫಲವಾಗಬಹುದು. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಂಡದ ಮೇಲೆ ಇದೆ. ಆದರೆ ಅಂತ ವಿವೇಕ ತಂಡದ ಸದಸ್ಯರಲ್ಲಿ ಕಾಣುತ್ತಿಲ್ಲ.
Well said… both article and this comment.
Please appreciate the initiative taken by these people. Entire team is a combination of highly qualified group of people who are specialists in respective areas. As true citizens let us strengthen them by adding useful suggestions. Let us not make stories drag the issue and dilute the content.