ರಂಗಾಯಣ ವಿವಾದ: ಅಡ್ಡಂಡ ಕಾರ್ಯಪ್ಪ ಅವರು ಟಿಪ್ಪು ಸುಲ್ತಾನ್ ಬಗ್ಗೆ ಆಡಿರುವ ಮಾತುಗಳಿಂದ ಆಘಾತವೂ ಆಗಿಲ್ಲ, ಆಶ್ಚರ್ಯವೂ ಆಗಿಲ್ಲ.

ಜಿ.ಪಿ.ಬಸವರಾಜು

ಮೈಸೂರು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರು ಎಡಪಂಥೀಯ ವಿಚಾರಧಾರೆಯ ಬಗ್ಗೆ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಮೊನ್ನೆ ಆಡಿರುವ ಮಾತುಗಳಿಂದ ಆಘಾತವೂ ಆಗಿಲ್ಲ, ಆಶ್ಚರ್ಯವೂ ಆಗಿಲ್ಲ.

ಯಾಕೆಂದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಅದರ ಬೆನ್ನಿಗಿರುವ ಸಂಘ ಪರಿವಾರದ ಚಿಂತನೆ ಸ್ವಾಯತ್ತ ಸಂಸ್ಥೆಗಳನ್ನು ಮತ್ತು ವಿವೇಕಯುತವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ನುಂಗುತ್ತಾ ಬಂದಿವೆ. ಮತಧರ್ಮ ನಿರಪೇಕ್ಷ ತತ್ವದ ಮತ್ತು ಬಹುಮುಖೀ ಸಂಸ್ಕೃತಿಯ ಜೀವಾಳವಾಗಿರುವ ಡಾ.ಅಂಬೇಡ್ಕರ್ ಅವರು ನೀಡಿರುವ ನಮ್ಮ ಸಂವಿಧಾನವನ್ನೇ ನಿರಾಕರಿಸುತ್ತಿರುವ, ಅದನ್ನು ಅಗೌರವದಿಂದ ಕಾಣುತ್ತಿರುವ ಕೇಂದ್ರ ಸರ್ಕಾರ ಈ ಜಾತ್ಯತೀತ ರಾಷ್ಟçವನ್ನು ಹಿಂದೂ ರಾಷ್ಟçವಾಗಿ ಪರಿವರ್ತಿಸಲು ಹವಣಿಸುತ್ತಿದೆ. ಇದಕ್ಕೆ ರಾಷ್ಟçವ್ಯಾಪಿಯಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ, ಪ್ರತಿಭಟನಕಾರರನ್ನು ‘ದೇಶದ್ರೋಹಿಗಳೆಂದು’ ಹತ್ತಿಕ್ಕುತ್ತಿದೆ. ಪಠ್ಯಗಳನ್ನು ಬದಲಾಯಿಸುವುದು, ವೈಚಾರಿಕ ನಿಲುವಿಗೆ ಬದ್ಧವಾದ ಸಂಸ್ಥೆಗಳ ಕತ್ತು ಹಿಚುಕುವುದು, ಸ್ವಾಯತ್ತ ಸಂಸ್ಥೆಗಳನ್ನು ಆಕ್ರಮಿಸಿ ಅವುಗಳಿಗೆ ‘ಹಿಂದೂರಾಷ್ಟç’ದ ವಿಷವನ್ನು ತುಂಬುತ್ತಿರುವುದು ಇವೇ ಮೊದಲಾದ ಕೆಲಸಗಳನ್ನು ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಿಂದ ಮಾಡುತ್ತ ಬಂದಿದೆ. ಕರ್ನಾಟಕ ಸರ್ಕಾರ ಇತ್ತೀಚೆಗೆ ಅಕಾಡೆಮಿಗಳಿಗೆ, ರಂಗಾಯಣದAಥ ಸಂಸ್ಥೆಗಳಿಗೆ ಮಾಡಿರುವ ನೇಮಕ ಕೂಡಾ ಇಂಥ ಒಂದು ತತ್ವ ಸಿದ್ಧಾಂತಗಳಿAದ ಪ್ರೇರಿತವಾದದ್ದೆ.

ಈ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವವರು ಬಲಪಂಥೀಯ ‘ಹಿಂದೂ’ ಅಜೆಂಡಾವನ್ನು ಪ್ರಕಟಿಸಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಂಡ ಹೊತ್ತಲ್ಲಿ ಕಾರ್ಯಪ್ಪ ಆತುರ ಆತುರವಾಗಿ ಅದನ್ನು ಹೊರ ಹಾಕಿದ್ದಾರೆ, ಅಷ್ಟೆ.

ಮೈಸೂರಿನ ರಂಗಾಯಣ ತನ್ನ ಮೂರು ದಶಕಗಳ ಹಿನ್ನೆಲೆಯಲ್ಲಿ ಹಲವು ನಿರ್ದೇಶಕರನ್ನು ಕಂಡಿದೆ. ವಿಭಿನ್ನ ಚಿಂತನೆಯ, ವಿಚಾರ ಧಾರೆಯ, ಸಾಂಸ್ಕೃತಿಕ ಹಿನ್ನೆಲೆಯ ಈ ನಿರ್ದೇಶಕರೆಲ್ಲ ರಂಗಾಯಣದ ಒಟ್ಟು ಆಶಯಕ್ಕೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಮತಧರ್ಮದ ಸೋಂಕು ಈ ರಂಗಾಯಣಕ್ಕೆ ಈವರೆಗೆ ತಗುಲಿರಲಿಲ್ಲ. ಅಡ್ಡಂಡ ಕಾರ್ಯಪ್ಪ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿ ರಂಗಾಯಣದ ಮುಂದಿನ ಚಲನೆಯ ಬಗ್ಗೆ ಸೂಚನೆ ಕೊಟ್ಟಿದ್ದಾರೆ.

ಮೈಸೂರಿನ ರಂಗಾಸಕ್ತರ ಪ್ರೀತಿಯ ನೆರಳಲ್ಲಿ, ಎಲ್ಲ ವಿಚಾರಗಳ ಮಂಥನದಲ್ಲಿ ಬೆಳೆದ ಸಂಸ್ಥೆ ರಂಗಾಯಣ. ಇದು ದಿಕ್ಕುತಪ್ಪದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಹೊಣೆ. ಮತಧರ್ಮ ನಿರಪೇಕ್ಷ, ಸಂವಿಧಾನಬದ್ಧ ಜನತಂತ್ರ ವ್ಯವಸ್ಥೆಯನ್ನು ಪ್ರೀತಿಸುವ ಮತ್ತು ಬೆಂಬಲಿಸುವವರೆಲ್ಲ ‘ರಂಗಾಯಣ’ದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂಬ ವಿಶ್ವಾಸ ನನಗೆ ಮಾತ್ರವಲ್ಲ, ನನ್ನಂಥ ಅನೇಕರಿಗೆ ಇದೆ.

‍ಲೇಖಕರು avadhi

February 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: