ಆಶಾ ದೀಪ
ನಮೂರಿನ ಜಾತ್ರೆಗೆ ಇನ್ನೆರಡು ದಿನ ಬಾಕಿ ಇತ್ತು,ಹಬ್ಬದ ಸಡಗರದಲ್ಲಿ ಇಡೀ ಊರೆಂಬ ಊರೇ ವಿಜೃಂಭಿಸುತ್ತಿತ್ತು.ನನ್ನ.9ನೆ ತರಗತಿಯ ಪರಿಕ್ಷೆಗಳು ಕೂಡ ನಮ್ಮೂರಿನ ಹಬ್ಬದಷ್ಟೆ ಹತ್ತಿರಕ್ಕೆ ಬಂದಿದ್ದವು.
ಪರೀಕ್ಷೆಯ ಭಯ ಜಾತ್ರೆಯ ಖುಷಿ ಎರಡು ಒಟ್ಟೊಟ್ಟಿಗೆ ಮನಸ್ಸಿನಲ್ಲಿ ಕದನವನ್ನೆನಡೆಸಿದವು.ಶುಕ್ರವಾರದ ಬೆಳ್ಳಗೆ ಅಮ್ಮ ಮಾಡಿಟ್ಟ. ದೊಸೆ ತಿಂದು ಶಾಲೆಯ. ಯೂನಿಪಾರ್ಮ ಧರಿಸಿಕೊಂಡು ಗೆಜ್ಜೆಯ ಹೆಜ್ಜೆಗಳನಿಡುತ್ತ. ಗೆಳತಿಯರ ಗುಂಪಿನಲ್ಲಿ ಶಾಲೆಗೆ ನಡೆದೆ.

ತರಗತಿಯ ಮೊದಲ ಅವಧಿಯಲ್ಲಿ ಕುಳಿತವಳಿಗೆ ಇಂದಿರ ಟೀಚರ್ ನ ,ಪಾಠವನ್ನು ಕೇಳಲಾಗದಷ್ಟು ಯಾಕೊ ಹೊಟ್ಟೆಯಲ್ಲಿ ಸಂಕಟವಾಗಲಾರಂಭಿಸಿತು ಟೀಚರ್ ನ ಹಾಸ್ಯ. ಮಾತುಗಳಿಗೆ ಇಡೀ ತರಗತಿಯೆ ಹಂಚು ಹಾರಿಹೋಗುವಷ್ಟು ನಗುತ್ತಿದ್ದರೆ ನನಗೆ ಅತ್ತ. ನಗಲೂ ಆಗದೆ ಇತ್ತ. ಅಳಲೂ ಆಗದ ಧಮ೯ ಸಂಕಟದ ಸ್ಥಿತಿ ನನಗರಿವಿಲ್ಲದೆ ನನ್ನೆರೆಡು ಕೈಗಳು.ಸೊಂಟವನ್ನು ಬಿಗಿ ಹಿಡಿದು ಕುಂತಿದ್ದವು, ಬೆಳಗ್ಗಿನ ಅವಧಿ ಮುಗಿಯುತ್ತದ್ದಂತೆ ಪೆಚ್ಚು ಮುಖ. ಮೊರೆಹೊತ್ತು ನಿಧಾನವಾಗಿ ಮನೆಕಡೆ ಹೆಜ್ಜೆ ಹಾಕಿದೆ ,ಹುಣಸೆ ಮರದ ತೋಪು ದಾಟಿ ಕೆರೆಯಂಗಳದಲ್ಲಿ ನಡೆದು ಬರುತ್ತಿದ್ದ. ನನ್ನ. ದೇಹದಲ್ಲೇಲೊ ನನಗೆ ಗೊತ್ತಿಲ್ಲದೇ ಯಾವುದೋ ಪ್ರಕ್ರಿಯೇ ನಡೆದು ಹೊದುದರ ಸಣ್ಣ. ಗುರುತು ಸರಸರನೆ ಮನೆಗೆ ಹೋಗಿ ಮುಜುಗರ ಸಂಕಟದಿಂದ. ನಡುಮನೆಯಲ್ಲಿ ಕುಳಿತುವಳನ್ನ. ಅಮ್ಮ. ಏನೇನೊ ಕೇಳುತ್ತಿದ್ದರು “ಹೊಟ್ಟೆಯಲ್ಲಿ ಸಂಕಟ ಅಂದವಳನ. ಅಮ್ಮ. ದಿಟ್ಟಿಸಿ ನೋಡಿ ನಮ್ಮೂರ. ಗೌರ್ ಮೆಂಟು ಡಾಕ್ಟರ್ ಗಿಂತ ತುಸು ಜಾಸ್ತಿನೆ ಪರೀಕ್ಷಿಸಿ ಕೈ ಹಿಡಿದು ಮನೆಯ ಮುಂಬಾಗಿಲಿನ ಮುಂದೆ ನಿಲ್ಲಿಸಿ ಅಕ್ಕ. ಪಕ್ಕದ ಮನೆಯ ಹೆಂಗಸರನ್ನೆಲ್ಲ. ಕರೆದು ತಂದುಬಿಟ್ಟಳು ,ಒಂದೆರೆಡು ಕ್ಷಣ. ಇದ್ಯಾಕೆ ಈ ಪರಿ ಜನ
ನಾನೇನು ತಪ್ಪು ಮಾಡಿದೇ ಅಂತ. ಯೋಚನೆ ಮಾಡೋ ಅಷ್ಟೋತ್ತಗಾಗಲೇ ಅಮ್ಮ. ನೆರೆದಿದ್ದ ವರಿಗೆಲ್ಲ. ನನ್ಮಗಳು ದೊಡ್ಡವಳಾಗಿದಾಳೆ” ,ಅಂದುಬಿಟ್ಟರು ಮನದ ಮೂಲೆಯಲ್ಲಿ ಪರುಸೆಗಿಂತ ತುಸು ಜಾಸ್ತಿನೇ ಸಂಭ್ರಮ. ಕೊಂಚ ಮುಜುಗರ, ಸಣ್ಣ,ಅತಂಕ,ಕಿಬ್ಬೊಟ್ಟಯ ಆಳದಲ್ಲಿನ ಕಿವುಚುತ್ತಿರುವ ನೋವು ಎಲ್ಲವೂ ಒಮ್ಮೆಗೆ ಹೇಗೆ ಹೇಳಲಿ ಆ ಕ್ಷಣವ…..
ಐದಾರು ಜನ ಮುತ್ತೈದೆಯರು ಕುಕ್ಕುರುಗಾಲಲ್ಲಿ ಕೂರಿಸಿ ತಲೆ ಮೇಲೆ ಎಲೆ ಅಡಿಕೆ ಇಟ್ಟು ಅರಿಶಿಣ ಬೇರಿಸಿದ ನೀರನ್ನು ಸುರಿಯುತ್ತಿದ್ದರೂ, ಅಲ್ಲಿ ನಿಂತಿದವರು ಏನೇನೋ ಕೋರಸ್ ಹಾಡುತ್ತಿದ್ದರೆ ಮೊದಲ ಬಾರಿಗೆ ಅರಿಶಿಣದ ನೀರು ತಲೆಯ ಮೇಲಿಂದ. ಹಿಡಿದು ಪಾದದ ಕಿರು
ಬೆರಳಿನವರೆಗೂ ಹರಿದು ಹೋಗುತ್ತಿದ್ದರೆ ಮನದಲ್ಲಿ ಭಾವನೆಗಳ ಝರಿ ಹರಿಯುತ್ತಿತ್ತು ಸುರಿಯುವ ನೀರಲ್ಲಿ ಮುಖ ಒರೆಸುತ್ತಿದ್ದರೆ ಆಸೆಗಳ ಹಿಡಿದು ನಿಲ್ಲಿಸುವಂತಿತ್ತು.
ಹರಿದು ಹೋಗುತ್ತಿದ ಅರಿಶಿಣದ ನೀರಿನಲ್ಲಿ ಹೊಸ ಹೊಸ. ಕನಸು ಆಸೆಗಳು ಆಗತಾನೆ ಮೊಳಕೆಯೊಡೆದು ಚಿಗುರುತ್ತಿದವು ಹ್ಯಾಂಗ ಹೇಳಲ್ಲಿ
ಅರಿಶಿಣದ. ನೀರಿಲ್ಲಿ ಆಸೆಗಳು ಚಿಗುರಿದ ಆ ಕ್ಷಣವ ನನ್ನಮ್ಮನ ತಮ್ಮ. ಸೋದರ ಮಾವ ಮನೆ ಮುಂದೆ ಹಾಕಿದ ಹೊಂಗೆಯ ಗುಡಿಸಲಲ್ಲಿ ಕೂರಿಸಿ ಅಮ್ಮ. ಕಡ್ಲೆ ಸಕ್ಕರೆ ಅಂಚುತ್ತಿದ್ದರೆ ಅಪ್ಪ. ಒಮ್ಮೆ ನನ್ನನ್ನು ಇನ್ನೊಮ್ಮೆ ನೆತ್ತಿ ಮೇಲಿನ ಸೂರನ್ನು ನೋಡುತ್ತ. ಯಾವುದೋ ಆಗಾದವಾದ ಆಕಾಶವೇ ತಲೆ ಮೇಲೆ ಬಿದ್ದಂತೆ ಚಿಂತೆಯಲ್ಲಿ ಮಗ್ನನಾಗಿಬಿಟ್ಟ.
ಅಂದು ಎದುರು ಕೂತ ಅಜ್ಜಿ ಇಂದಿಗೂ ತನ್ನ. ಕಾವಲಿನ ಕಣ್ಣಿಟ್ಟು ಕೂತಿದ್ದಾಳೆ…
ಸಂಜೆಯ ಬೆಳದಿಂಗಳು ಚೆಲ್ಲುವ ಮುನ್ನವೆ ಮನೆ ಮುಂದೆ ಹತ್ತಾರು ಹೆಂಗಸರು ಹಾಜರಾಗಿ ಏನೆನೋ ಹಾಡುತ್ತಿದ್ದರು. ಅವರ ರಾಗದ ಇಂಪಿಗೆ ಸುತ್ತಾ ಮುತ್ತಲಿನ ಮನೆಯವರ ನಿದ್ರಾದೇವಿಯು ಕೂಡ ಎದ್ದು ಕೂರುತ್ತಿದ್ದಳು.
ಹೊಂಗೆ ಎಲೆಗಳ ಸಂದುಗಳಲ್ಲಿ ಚಂದಿರ ಇಣುಕಿ ಹಾಕುತಿದ್ದ, ಹೊಂಗೆಯ ಸಂದುಗಳನ್ನು ನೋಡುತ್ತ. ಕುಂತವಳ. ಮನದಲ್ಲಿ ಏನೇನೋ ಯೋಚನೆಗಳು ದೊಡ್ಡವಾಳದೇ ಎನ್ನುವ. ಸಂಭ್ರಮದ ಖುಷಿ ಒಂದೆಡೆಯಾದರೆ,ನಾಚಿಕೆ, ಮುಜುಗರದ ಭಾವ. ಇನೋಂದೆಡೆ,ತಂಪಿನ ನೆರಳಿನಲ್ಲಿ ಅರಶಿಣದ ಕಂಪಲಿ ಕಟ್ಟಿ ಕೊಂಡ ಇಂಪಿನ. ಕನಸುಗಳು ಹೇಳಲು ಅಸಾಧ್ಯ.
ಐದು ದಿನಗಳಾದ ಮೇಲೆ ಮನೆಯೊಳಗೆ ಕರೆದೊಯ್ದರಲ್ಲ. ಆಗ ಗೋಡೆಯಲ್ಲಿ ನೆತ್ತಾಡುತ್ತಿದ ಕನ್ನಡಿಯನೊಮ್ಮೆ ನೋಡಿದೆ ಆದು ನನ್ನನ್ನೆ ದುರುಗುಟ್ಟಿ ನೋಡುತ್ತತ್ತು ನನಗ್ಯಾಕೊ ನಾಚಿಕೆಯಾಗುತ್ತಿತ್ತು.
ಬಿಂದಿಗೆ ಹಿಡಿದು ಬಾವಿಗೆ ಹೋದವಳನ್ನ. ಗುಡಿ ಮುಂದೆ ಕುಳಿತ ಹುಡುಗರು ಎಂದು ನೋಡದ ಹಾಗೆ ನೋಡುತ್ತಿದ್ದರು.
ಅದೇ ಹಳೆಯ. ಬೀದಿಗಳಲ್ಲಿ ಹೆಜ್ಜೆಯಿಟ್ಟು ನಡೆಯುತ್ತಿದ್ದರೆ ಹೊಸತಾದ ಭಾವ ಇಣುಕುತ್ತಿತ್ತು,ತಲೆ ತಗ್ಗಿಸಿ ನಿಧಾನವಾಗಿ ಹೆಜ್ಜೆಯಿಡುವ ಪರಿ ಕಿರುಗಣ್ಣುಗಳ ಓಡಾಟ. ಕೈಗಳ ಚಲನೆ, ಸೊಂಟದ ಹೊಯ್ದಾಟ ಎಲ್ಲವೂ ಬದಲಾಗಿ ಬಿಟ್ಟಿದ್ದವು ನನಗರಿವಿಲ್ಲದೆ ಬದಲಾಗಿ ಬಿಟ್ಟವು.
ಪೌಡರ್,ಕ್ತೀಮ್, ಮೆಹೆಂದಿಗಳ ಬಗ್ಗೆ ಅದ್ಯಾಕೊ ಇಷ್ಟು ದಿನಗಳವರೆಗಿಲ್ಲದ ವ್ಯಾಮೋಹವೀಗ ನಿಧಾನವಾಗಿ ಟಸಿಲೊಡೆಯಿತು. ಇಷ್ಟು ದಿನಗಳ ಕಾಲ ತಲೆಸ್ನಾನ ಮಾಡಿಸುತ್ತಿದ್ದ ಅಮ್ಮನನ್ನು ಕೂಡ ಈಗ ಬಚ್ಚಲಿಗೆ ಕರೆಯಬೇಕೆನಿಸುತ್ತಿಲ್ಲ. ನೀಟಾಗಿ ಬಾಚಿ ನೆತ್ತಿಯ ಮೇಲಿಂದ ಬಿಗಿಯಾಗಿ ಹೆಣೆಯುತ್ತಿದ್ದ ಅಜ್ಜಿಯ ಜಡೆಯು ಹಳೆದಾಯ್ತು ಅನ್ನಿಸಿಬಿಡ್ತು.
ಇಪ್ಪತ್ತು ದಿನಗಳಾದ ಮೇಲೆ ಶಾಲೆಗೆ ಹೊರಟವಳ ಯೂನಿಪಾರ್ಮನ ಅಳತೆಯು ಕೂಡ ತನ್ನನ್ನು ಉದ್ದವಾಗಿಸಿಕೊಂಡಿತ್ತು.ಗೆಳೆತಿಯರ. ಜೊತೆ ನಡೆದು ಹೋಗುತ್ತಿದ್ದರೆ ಎಲ್ಲರಿಂದಲೂ ದೊಡ್ಡವಾಳದ. ನನ್ನನ್ನೆ ಕುರಿತ. ಒಂದೊಂದೇ ಕುತೂಹಲದ ಪ್ರಶ್ನೆಗಳು ಪುಟಿದೇಳುತ್ತಿದ್ದವು ಅವರ ಕುತೂಹಲ ಕಣ್ಣು ಗಳು ನನ್ನ ನ್ನೆ ದಿಟ್ಟಿಸಿರುತಗತ್ತಿದ್ದವು .ಮೊದಲ ಸಾಲಿನಲ್ಲಿ ಕುಳಿತ ಹುಡುಗ ಕಿರುಗಣ್ಣಲ್ಲೇ ನೋಡಿ ತುಟಿಯಂಚಿಲ್ಲಿ ನಕು ಕ್ಷಣದಲ್ಲೇ ಅಮಾಯಕನಂತೆ ಪೋಸ ಕೊಡುತ್ತಿದ್ದ. ಜನ ಬದಲಾದರಾ? ???
ಊರು ಬದಲಾಯಿತಾ? ನಾನೇ ಬದಲಾದೇನಾ? ?? ಎಂಬ ಅನುಮಾನ ನನ್ನನ್ನೆ ಪ್ರಶ್ನಿಸುತ್ತಿತ್ತು.
ಅವತ್ತು ಸಂಜೆ ಅಪ್ಪ. ಅಮ್ಮ. ಅಜ್ಜಿ ನಡುಮನೆಯಲ್ಲಿ ಕೂರಿಸಿಕೊಂಡು ಹಾಗೆ ಹೀಗೆ? ? ಅಂತಾ ಒಂದೊಂದೆ ಮಿತಿಯ ಗೆರೆಗಳನ್ನು, ನಿಬ೯೦ಧದ ಚೌಕಟ್ಟು ಗಳನ್ನು ನನ್ನ. ಸುತ್ತಾ ಎಳೆಯಲಾರಂಭಿಸಿದರಲ್ಲಾ ಆ ಕ್ಷಣಕ್ಕೆ ಇಷ್ಟು ದಿನದ ನನ್ನ. ಬಾಲ್ಯದ ತುಂಟಾಟ, ಚೇಷ್ಟೆ, ಆಟಗಳೆಲ್ಲಾ ಆ ಕತ್ತಲ ರಾತ್ರಿಯ ನಡುವೆ ಅನಾಥವಾಗಿಬಿಟ್ಟವು.






ಸುಪರ್ ಲೈಕ್
ಕೇಶವ sir tnk u
ನೈಸರ್ಗಿಕ ಪ್ರಕ್ರಿಯೆ ಹೇಳಿಕೊಳ್ಳಲೂ ಮುಜುಗರ ಪಡುವ ಕೆಲ ಹುಡುಗಿಯರಿಗೆ ಹೆಣ್ಣಿನ ಜೀವನದಲ್ಲಿ ಜರುಗುವ ‘ಇದು ‘ಸಹಜವಾದದ್ದು ಎನ್ನುವದನ್ನು ಮತ್ತು ನಂತರದಲ್ಲಿ ಜಗತ್ತನ್ನು ಅವರು ನೋಡುವ ರೀತಿ ಹಾಗೂ ಅವರ ಕಣ್ಣಿಗೆ ಕಾಣುವ ಜಗತ್ತು ಬದಲಾಗುವ ಸಂಗತಿಯನ್ನು ಮನನವಾಗುವಂತೆ ಹೇಳಿದ್ದೀರಿ…
“ಐದು ದಿನಗಳಾದ ಮೇಲೆ ಮನೆಯೊಳಗೆ ಕರೆದೊಯ್ದರಲ್ಲ. ಆಗ ಗೋಡೆಯಲ್ಲಿ ನೆತ್ತಾಡುತ್ತಿದ ಕನ್ನಡಿಯನೊಮ್ಮೆ ನೋಡಿದೆ ಆದು ನನ್ನನ್ನೆ ದುರುಗುಟ್ಟಿ ನೋಡುತ್ತತ್ತು ನನಗ್ಯಾಕೊ ನಾಚಿಕೆಯಾಗುತ್ತಿತ್ತು”
ಆಶಾ ದೀಪ ಅವರೇ … ಇಷ್ಟವಾದ ಸಾಲುಗಳಿವು.. ಬೆರೆಯಿರಿ ಹೀಗೆ ಅನ್ನಿಸಿದ್ದನ್ನು. ತನ್ನ ತಾನೇ ದಾರಿಗಳನ್ನು ಹುಡುಕಿಕೊಳ್ಳುತ್ತದೆ. ಅಭಿನಂದನೆ ನಿಮಗೆ
ಸೂಪರ್ ಮೆಡಮ್..