ಟೈಂ ಪಾಸ್ ಕಡ್ಲೆಕಾಯ್
ಬೆರಳು ಹಾಕಿ ತಿರುಗಿಸ್ಬೋದು
ಎಚ್ ಎಲ್ ನಾಗೇಗೌಡ ಅಂದ್ರೆ ಹುಲಿ ಇದ್ದಂಗೆ ಅಂತಾನೇ ಸುಮಾರು ಜನ ಅಂದ್ಕೊಂಡಿದಾರೆ. ಆದ್ರೆ ಅವರತ್ರ ಇದ್ದೋರಿಗೆ ಮಾತ್ರ ಗೊತ್ತು, ಸಿಕ್ಕಾಪಟ್ಟೆ ತಮಾಷೆ ಮನುಷ್ಯ ಅಂತಾ.
ಒಂದ್ಸಲ ಗೌಡ್ರು ಫೋನ್ ತಿರುಗಿಸ್ತಾ ಕೂತಿದ್ರು. ಬಟನ್ ಫೋನ್ ಗಳು ಆಗ್ಲೇ ಎಲ್ಲಾ ಕಡೆ ಫೇಮಸ್ ಆಗಿತ್ತು. ಆದ್ರೆ ಗೌಡ್ರು ಮಾತ್ರ ಇನ್ನೂ ಪುರಾತನ ಕಾಲದ ಫೋನೇ ಇಟ್ಕೊಂಡಿದ್ರು. ಡಯಲ್ ಮಾಡ್ಬೇಕು ಅಂದ್ರೆ ಒಂದೊಂದು ನಂಬರನ್ನೂ ಬೆರಳಿಂದ ರವುಂಡಾಗಿ ತಿರುಗಿಸ್ಬೇಕಿತ್ತು. ಕನೆಕ್ಷನ್ ಸಿಗಲಿಲ್ಲಾಂದ್ರೆ ಮತ್ತೆ ಕರ್ರೋ ಅನ್ನಿಸ್ತಾ ತಿರುಗಿಸೋರು. “ಸಾರ್, ಯಾಕೆ ಈ ಫೋನ್ ಇಟ್ಕೊಂಡಿದೀರಾ? ಹೊಸಾದು ಬೇಕಾದಷ್ಟು ಬಂದಿವೆ” ಅಂದ್ರು ಪಾಪ ನೋಡ್ದೋರು. ಗೌಡ್ರ ಮುಖ ನಿಧಾನವಾಗಿ ಅಗಲ ಆಗ್ತಾ ಹೋಯ್ತು. ಕಿರುನಗೆ ಚೆಲ್ಲಾಡ್ತಾ ಹೇಳಿದ್ರು-
“ನಂಗೆ ಹಳೇ ಮಾಡಲ್ ಗಳೇ ಇಷ್ಟ. ಬೆರಳು ಹಾಕಿ ತಿರುಗಿಸ್ಬೋದು.”
* * *
ಪ್ರಿಂಟಾದದ್ದು
“ಸ್ಟ್ರಾಂಗ್ ಇಂಡಿಯಾ” ಅಂತಾ ಪೇಪರ್ ಇತ್ತು. ದೊಡ್ಡಹುಲ್ಲೂರು ರುಕ್ಕೋಜಿ ಅದರ ಎಡಿಟರ್ರು. ಹೊಸಕೋಟೆಯಿಂದ ಬರ್ತಿತ್ತು. ಪಾಪ, ರುಕ್ಕೋಜಿ ತಮ್ಮ ಮೇಷ್ಟ್ರು ಕಿ ರಂ ನಾಗರಾಜ್ ಬಗ್ಗೆ ಅಭಿಮಾನದಿಂದ ಲೇಖನಾನೊ ನ್ಯೂಸೊ ಹಾಕಿದ್ರು. ಖ್ಯಾತ ವಿದ್ವಾಂಸ ಕಿ ರಂ ನಾಗರಾಜ್ ಅಂತಾ ಪ್ರಿಂಟ್ ಆಗ್ಬೇಕಿತ್ತು. ಮೊಳೆ ಜೋಡಿಸೋರಿಗೇನು ಗೊತ್ತು? ಜಾಗ ಇರ್ಲಿಲ್ಲ. ಎರಡು ಲೈನ್ ಮಾಡಿದ್ರು. ಈ ಥರಾ ಪ್ರಿಂಟ್ ಆಯ್ತು-
ಖ್ಯಾತ ವಿದ್ವಾಂಸಕಿ
ರಂ ನಾಗರಾಜ್ ಅವರು…




0 Comments