1.ನೀವು ಗುರುಗಳು, ಪರಂತು..!!
ನೀವು
ಆಸ್ತಿಕರು
ಪರಂತು
ಅಂಧಶ್ರದ್ಧೆಯವರಲ್ಲ !
ನೀವು
ಸಂಪ್ರದಾಯಸ್ಥರು
ಪರಂತು
ಜಡವಾದಿಗಳಲ್ಲ!
ನೀವು
ಪಂಡಿತರು
ಪರಂತು
ಅಹಂಕಾರಿಗಳಲ್ಲ!
ನೀವು
ಸಸ್ಯಹಾರಿಗಳು
ಪರಂತು
ಪ್ರತ್ಯೇಕತಾವಾದಿಗಳಲ್ಲ!
ನೀವು
ಹಿಂದೂಗಳು
ಪರಂತು
ಸನಾತನವಾದಿಗಳಲ್ಲ!
ನೀವು
ಗುರುಗಳು
ಪರಂತು
ವಿಜೃಂಭಿಸಿದವರಲ್ಲ!
ನೀವು
ʻಭಿಕ್ಷಾವರ್ತಿಮಠʼ
ಪರಂತು
ಯಾಚಿಸಿದವರಲ್ಲ!
2.ಅಕ್ಷರ ಪ್ರಾಪ್ತಿ !!
ಅಕ್ಷರ
ಅರಿವಾದೊಡೆ
ವಿಚಾರ ಪ್ರಾಪ್ತಿ!
ಅಕ್ಷರ
ಭಾವವಾದೊಡೆ
ಪ್ರೀತಿ ಪ್ರಾಪ್ತಿ!
ಅಕ್ಷರ
ಜೀವವಾದೊಡೆ
ಬದುಕು ಪ್ರಾಪ್ತಿ!
ಅಕ್ಷರ
ದೈವವಾದೊಡೆ
ಭಕ್ತಿ ಪ್ರಾಪ್ತಿ!
ಅಕ್ಷರ
ದೆವ್ವವಾದೊಡೆ
ನರಕ ಪ್ರಾಪ್ತಿ!
ಅಕ್ಷರ
ಕುಸುಮವಾದೊಡೆ
ಪರಿಮಳ ಪ್ರಾಪ್ತಿ!
ಅಕ್ಷರ
ದಾನವಾದೊಡೆ
ಘನತೆ ಪ್ರಾಪ್ತಿ!
ಅಕ್ಷರ
ಕಲ್ಪನೆಯಾದೊಡೆ
ಕಾಮನಬಿಲ್ಲು ಪ್ರಾಪ್ತಿ!
ಅಕ್ಷರ
ಕಲೆಯಾದೊಡೆ
ನವರಸ ಪ್ರಾಪ್ತಿ!
ಅಕ್ಷರ
ಅಲಭ್ಯವಾದೊಡೆ
ಅಂಧಕಾರ ಪ್ರಾಪ್ತಿ!






0 Comments