ಅಕ್ಷಯ ಕಾವ್ಯದಲ್ಲಿ ರಾತ್ರಿಗಳಲ್ಲೂ ಬೆಳಗು ಕಾಣುತ್ತಿದ್ದೇನೆ

suri rangashankara

ಸುರೇಂದ್ರನಾಥ್ 

ನಾನೆಷ್ಟು ಸರ್ವಾಧಿಕಾರಿಯಾಗಿದ್ದೆನೆಂದರೆ
ನನ್ನ ಮಾತಿಗೆ ಉತ್ತರಗಳೇ ಬರುತ್ತಿರಲಿಲ್ಲ
ಬರೇ ಪ್ರತಿಧ್ವನಿಗಳು ಬರುತ್ತಿದ್ದವು.

k v tirumalesh 3ಆಲದ ಮರದ ತುಂಬಾ ಬೆಂಕಿಹುಳುಗಳು
ಆಷಾಢದ ರಾತ್ರಿ
ತೆರೆಯುತ್ತವೆ ಮುಚ್ಚುತ್ತವೆ ಏಕ ಕಾಲಕ್ಕೆ
ಮೊದಲೇ ತಾಲೀಮು ಮಾಡಿದ ಹಾಗೆ
ಹೇಗೆ ಗೊತ್ತು ಅವಕ್ಕೆ ಒಂದರ ಮನಸ್ಸು ಇನ್ನೊಂದಕ್ಕೆ.

ಮಾಡಿನ ಹನಿಗಳಿಗೆ ಗೊತ್ತಿದೆ ಮಳೆ ನಿಂತಿರುವ ವಿಷಯ
ಏನೂ ಮಾಡುವಂತಿಲ್ಲ
ಪರಿಮಳಕ್ಕೆ ಗೊತ್ತಿದೆ ಹೂ ಬಾಡುತ್ತಿರುವ ವಿಷಯ
ಏನೂ ಮಾಡುವಂತಿಲ್ಲ

ಕಬ್ಬು ಕಲ್ಲಂಗಡಿಹಣ್ಣು ಖರಬೂಜ
ಧವಸ ಧಾನ್ಯ ಲಾರಿಗಳಲ್ಲಿ ಅಥವ ಎತ್ತಿನ ಗಾಡಿಗಳಲ್ಲಿ
ಮಂಡಿಗೆ ಬಂದಾಗ
ಕೇವಲ ಇವೇ ಬಂದಿರೋದಿಲ್ಲ
ಕೆಸರು ಬಂದಿರುತ್ತೆ ಬೆವರು ಬಂದಿರುತ್ತೆ
ಹೊಲದ ಪರಿಮಳ ಬಂದಿರುತ್ತೆ

ಒಂದು ಹೆಣ್ಣಿನ ಲಾವಣ್ಯ ತಿಳಿಯುವುದಕ್ಕೆ
ಅವಳು ಅಂಗಳ ದಾಟಿದರೆ ಸಾಕು
ಬೀಳುವ ನಕ್ಷತ್ರ ಹಿಡಿಯುವುದಕ್ಕೆ.
ಕೆ ವಿ ತಿರುಮಲೇಶರ ಅಕ್ಷಯ ಕಾವ್ಯ ಓದುತ್ತಿದ್ದೇನೆ. ರಾತ್ರಿಗಳಲ್ಲೂ ಬೆಳಗು ಕಾಣುತ್ತಿದ್ದೇನೆ. ಪದಗಳ ಸಡಗರಕ್ಕೆ ರೋಮಾಂಚಿತನಾಗುತ್ತಿದ್ದೇನೆ. ಮೊಗೆದಷ್ಟೂ ಬರುತ್ತಿದೆ. ಒಳ್ಳೆಯದನ್ನು ಆರಿಸಿ ಬರೆದುಕೊಳ್ಳಲು ತೆರೆದಿಟ್ಟ ಪುಸ್ತಕ ಮುಗಿದು ಹೋಗಿದೆ, ಅಕ್ಷಯ ಪಾತ್ರೆ ಕಾಲು ಕೂಡ ಮುಗಿದಿಲ್ಲ. ಈಗ ಜೇಬು ತುಂಬಿಸಿ ಕೊಂಡು ಆರಾಮಾಗಿದ್ದೇನೆ, ಬೇಕೆಂದಾಗೆಲ್ಲಾ ಹೆಕ್ಕಿ ರುಚಿನೋಡುತ್ತಿದ್ದೇನೆ.

‍ಲೇಖಕರು Admin

August 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. kvtirumalesh

    ಪ್ರಿಯ ಸುರೇಂದ್ರನಾಥ್
    ಯಾರೂ ಓದುವುದಿಲ್ಲ ಎಂದುಕೊಂಡಿದ್ದೆ; ನೀವೊಬ್ಬರಾದರೂ ಓದಿದಿರಲ್ಲ, ಬರೆಯುವ ಸೌಜನ್ಯವನ್ನೂ ತೋರಿಸಿದಿರಿ. ಕನ್ನಡ ಸಂಸ್ಕೃತಿ ಇನ್ನೂ ಉಳಿದಿದೆಯೆಂದು ಅರ್ಥ.
    ಥ್ಯಾಂಕ್ಸ್!
    ಕೆ. ವಿ. ತಿರುಮಲೇಶ್
    ಹೈದರಾಬಾದ್

    ಪ್ರತಿಕ್ರಿಯೆ
  2. Anonymous

    ನನಗೆ ಖಂಡಿತಾ ಓದಬೇಕೆನಿಸುತ್ತೆ. ಈ ಮುಂಬಯಿಯಲ್ಲಿ ಕೂತು ಪುಸ್ತಕ ಹೇಗೆ ಪಡೆಯಲಿ? ಇದು ಎಲ್ಲಿ ಸಿಗುತ್ತೆ? ಅಂಕಿತದಲ್ಲಿ ಸಿಗಬಹುದೇ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: